ಓಸ್ಟಿಯೋಪೋರೋಸಿಸ್ ಬಗ್ಗೆ ತಿಳ್ಕೊಳ್ಳೇಬೇಕು; ಹೆಣ್ಮಕ್ಕಳಲ್ಲಿ ಹೆಚ್ಚು ಈ ಕಾಯಿಲೆ!

By Web Desk  |  First Published Oct 21, 2019, 2:55 PM IST

ಮೂಳೆಗಳು ಅದರಲ್ಲೂ ನಿರ್ದಿಷ್ಟವಾಗಿ ಬೆನ್ನುಮೂಳೆ, ಕೈ ಮಣಿಕಟ್ಟು ಮತ್ತು ಸೊಂಟದ ಮೂಳೆಗಳು ದುರ್ಬಲಗೊಳ್ಳುವ ಸ್ಥಿತಿ ಅಸ್ಥಿರಂಧ್ರತೆ ಅರ್ಥಾತ್ ಓಸ್ಟಿಯೋಪೋರೋಸಿಸ್. ಎಷ್ಟೋ ಸಲ ಮೂಳೆ ಮುರಿಯುವವರೆಗೆ ಈ ಸಮಸ್ಯೆಯ ಸುಳಿವೇ ಸಿಕ್ಕಿರೋದಿಲ್ಲ.


ಡಾ. ಹೇಮಂತ್ ಕಲ್ಯಾಣ್, ಆರ್ಥೋಪೆಡಿಕ್ ಸರ್ಜನ್, ಓಸಿಕೇರ್

ಹೆಣ್ಮಕ್ಕಳಲ್ಲೇ ಹೆಚ್ಚು ಯಾಕೆ?

Tap to resize

Latest Videos

undefined

ಹೆಂಗಸರಲ್ಲಿ ಮೆನೋಪಾಸ್‌ನ ಸಮಯದಲ್ಲಿ ಹಾರ್ಮೋನ್ ಬದಲಾವಣೆಗಳಿಂದ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. ಈಸ್ಟ್ರೋಜೆನ್ ಮೂಳೆಯ ಸಾಂಧ್ರತೆಯನ್ನು ಹೆಚ್ಚಿಸಲು ಸಹಕಾರಿ. ಮುಟ್ಟು ನಿಲ್ಲುವಾಗ ಈಸ್ಟ್ರೋಜೆನ್ ಪ್ರಮಾಣ ಗಮನಾರ್ಹವಾಗಿ ಇಳಿದು ಮೂಳೆಗೆ ಹಾನಿಯಾಗುತ್ತದೆ.

ಮೂಳೆಗೆ ಏಟು ಸಣ್ಣದಾದರೂ ಭವಿಷ್ಯದಲ್ಲಿ ಬೇನೆ ಕಟ್ಟಿಟ್ಟ ಬುತ್ತಿ

ಅದರಲ್ಲೂ ಭಾರತೀಯ ಮಹಿಳೆಯರಲ್ಲಿ ಮೂಳೆಯ ಸಾಂಧ್ರತೆಯ ಗರಿಷ್ಠಮಟ್ಟ ಕಡಿಮೆಯಿರುವುದರಿಂದ ಅಸ್ಥಿರಂಧ್ರತೆಯ ಅಪಾಯ ಹೆಚ್ಚು. ಪಾಶ್ಚಿಮಾತ್ಯ ದೇಶಗಳಿಗಿಂತ ಹತ್ತು ವರ್ಷ ಮುಂಚೆಯೇ ನಮ್ಮ ಹೆಣ್ಮಕ್ಕಳಲ್ಲಿ ಸೊಂಟದ ಮೂಳೆಯ ಸಮಸ್ಯೆ ಕಂಡುಬರುತ್ತದೆ. ಪುರುಷರಲ್ಲಿ ೭೦ ವರ್ಷ ವಯಸ್ಸಿನ ನಂತರ ಕ್ಷಿಪ್ರವಾಗಿ
ಹೆಚ್ಚುತ್ತದೆ.

ಉತ್ತಮ ಮೂಳೆಯ ಆರೋಗ್ಯಕ್ಕಾಗಿ ಜೀವನಶೈಲಿ ಮತ್ತು ಆಹಾರಕ್ರಮದ ಶಿಫಾರಸ್ಸುಗಳು

- ಸೂಕ್ತ ಪ್ರಮಾಣದ ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಷಿಯಂ ಇರುವ, ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಮಟ್ಟ ಹೊಂದಿರುವ ಆಹಾರಕ್ರಮ ರೂಢಿಸಿಕೊಳ್ಳಬೇಕು.

- ದೈನಂದಿನ ವ್ಯಾಯಾಮ ಅತ್ಯವಶ್ಯಕ.

ಅಡ್ಡ ಪರಿಣಾಮ ಬೀರೋ ನಿದ್ರೆ ಮಾತ್ರೆಗಳು; ಮರೆವಿನಿಂದ ಚಿರನಿದ್ರೆವರೆಗೆ

- ಡೈರಿ ಉತ್ಪನ್ನಗಳು, ದ್ವಿದಳ ಧಾನ್ಯಗಳು, ಬೀಜಗಳು, ಹಸಿರು ತರಕಾರಿಗಳು, ಸೋಯಾ ಉತ್ಪನ್ನಗಳು ಮತ್ತು ಮೊಟ್ಟೆಗಳು ಹಾಗೂ ಮಾಂಸಾಹಾರಿಗಳಾಗಿದ್ದಲ್ಲಿ ಮೀನು ಸೇವನೆ ಉತ್ತಮ.

- ಮೂಳೆಯ ಆರೋಗ್ಯಕ್ಕೆ ವಿಟಮಿನ್ ಡಿ ಮುಖ್ಯ. ವಿಟಮಿನ್ ಡಿ ಮಟ್ಟವನ್ನು ಪರೀಕ್ಷೆ ಮಾಡಿಸಿಕೊಂಡು ಬದಲಿ ಆಹಾರ ಪದಾರ್ಥ ಅಗತ್ಯವಿದೆಯೇ ತಿಳಿದುಕೊಳ್ಳಿ.

- ನಡಿಗೆ, ಮೆಟ್ಟಲು ಹತ್ತುವುದು, ಸ್ಕಿಪ್ಪಿಂಗ್ , ನೃತ್ಯ ಇತ್ಯಾದಿಗಳು ವ್ಯಾಯಾಮದ ಭಾಗವಾಗಿರಲಿ.

- ಧೂಮಪಾನ ಬಹಳ ಹಾನಿಕರ. ಇದರಿಂದ ದೂರವಿರಿ.

"

 

click me!