
ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಹಲವರು ಪ್ರತಿ ದಿನವೂ ಪ್ರಯತ್ನಿಸುತ್ತಾರೆ. ಇದರಲ್ಲಿ ಕೆಲವರು ಸಾಕಷ್ಟು ಶ್ರಮ ಹಾಕಿದ ಬಳಿಕವೂ ತೂಕ ಇಳಿಸುವುದು ಸವಾಲಿನ ಕೆಲಸ ಆಗಲಿದೆ. ಇದರಿಂದ ಕೆಲವರು ಇಂಜೆಕ್ಷನ್ ಮತ್ತು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ, ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಭಾರತದಲ್ಲಿ ಸುಮಾರು ಶೇಕಡಾ 30 ರಷ್ಟು ಮಂದಿ ಮಹಿಳೆಯರು, 27.3 ರಷ್ಟು ಪುರುಷರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಬೊಜ್ಜು ಅನೇಕ ರೋಗಗಳಿಗೆ ಮೂಲಕ ಕಾರಣವಾಗುತ್ತದೆ. ಆದರೆ ಇಲ್ಲಿ ತೂಕ ಇಳಿಸಿಕೊಳ್ಳಲು ಮ್ಯಾಜಿಕ್ ಮಾಡಲು ಆಗೋದಿಲ್ಲ. ಇದಕ್ಕೆ ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ನೈಸರ್ಗಿಕವಾಗಿಯೇ ತೂಕ ಇಳಿಸಿಕೊಳ್ಳಲು ಸಾಧ್ಯವಿದೆ. ಇಂತಹದ್ದೇ ಒಂದು ಸರಳ ತಂತ್ರವನ್ನು ಅಳವಡಿಸಿಕೊಂಡು 54 ಕೆಜಿ ತೂಕ ಕಳೆದುಕೊಂಡಿದ್ದಾರೆ. ಆಕೆ ಅನುಸರಿದ ಐದು ಸರಳ ನಿಯಮಗಳೇನು ಅಂತ ತಿಳಿದುಕೊಳ್ಳಲು ಈ ಸ್ಟೋರಿ ಓದಿ.
ಬ್ರಿಟನ್ ಮೂಲದ ಮಹಿಳೆಯಾಗಿರುವ ಜೆನ್ನಿ ಲೀ, ತಮ್ಮ 14ನೇ ವಯಸ್ಸಿನಿಂದಲೇ ದೇಹಕ ತೂಕದಿಂದ ಸಮಸ್ಯೆ ಎದುರಿಸಿದ್ದರು. ಇದರೊಂದಿಗೆ ಆಕೆಯ ಸ್ನೇಹಿತರು ಕೂಡ ಗೇಲಿ ಮಾಡಲು ಶುರು ಮಾಡಿದ್ದರು. 22 ವಯಸ್ಸಿಗೆ ಆಕೆಯ ಆರೋಗ್ಯ ಸ್ಥಿತಿ ಬದಲಾಗಿತ್ತು. ಇದರೊಂದಿಗೆ ಜೆನ್ನಿ ಲೀ ದೇಹದ ತೂಕ ಇಳಿಸಿಕೊಳ್ಳಲು ನಿರ್ಧರಿಸಿದ್ದರು. ಇದಕ್ಕೂ ಮುನ್ನ ಆಕೆ ತಿನ್ನೋಕೆ ಮಾತ್ರ ಬದುಕಿದ್ದಾಳೆ ಅನ್ನೋ ರೀತಿ ಜೀವನ ಶೈಲಿ ಹೊಂದಿದ್ದಳು. ಅತಿಯಾದ ಫಾಸ್ಟ್ ಫುಡ್, ಸಿಹಿ ತಿಂಡಿ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳ ಮೇಲೆ ವ್ಯಾಮೋಹ ಹೊಂದಿದ್ದಳು.
ಇದರೊಂದಿಗೆ ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಮುಂದಾದ ಜೆನ್ನಿ, ಪ್ರತಿದಿನ ಸ್ವಲ್ಪ ವ್ಯಾಯಾಮ ಮಾಡಲು ಆರಂಭಿಸಿದ್ದಳು. ಇದಕ್ಕಾಗಿ ಜಿಮ್ ಕೂಡ ಸೇರಿದ್ದಳು, ಪ್ರತಿದಿನ 20-30 ನಿಮಿಷಗಳನ್ನು ಟ್ರೆಡ್‌ಮಿಲ್ ಮೇಲೆ ಕಳೆಯುತ್ತಿದ್ದಳು. ಮೊದಲು ಕೇವಲ 30 ದಿನಗಳ ಗಟ್ಟಿ ನಿರ್ಧಾರದೊಂದಿಗೆ ತೂಕ ಇಳಿಸಲು ಮುಂದಾದ ಜನ್ನಿ, ಒಂದು ವರ್ಷದ ಕಾಲ ಶಿಸ್ತು ಬದ್ಧ ಜೀವನ ಮುಂದುವರಿಸಿ 54 ಕೆಜಿ ತೂಕ ಕಳೆದುಕೊಂಡಿದ್ದಾಳೆ.
ಆರಂಭದಲ್ಲಿ 30 ದಿನಗಳ ಕಾಲ ಕಷ್ಟಪಟ್ಟು ತೂಕ ಇಳಿಸಲು ಆರಂಭ ಮಾಡಿದ್ದ ಜೆನ್ನಿ, ಆ ನಂತರ ಫಿಟ್ನೆಸ್ ಉಳಿಸಿಕೊಳ್ಳುವ ವ್ಯಸನಿಯಾಗಿ ಬದಲಾವಣೆಯಾಗಿದ್ದಳು. ಆಕೆಯ ಜೀವನ ಶೈಲಿ ಬದಲಾವಣೆ ಆಗಿತ್ತು. ಆಹಾರ ಪದ್ಧತಿ ಬದಲಿಸಿಕೊಂಡಿದ್ದಳು. ಆಹಾರದಲ್ಲಿ ಧಾನ್ಯ ಮತ್ತು ಹಣ್ಣುಗಳು ಹಾಗೂ ತರಕಾರಿಗೆ ಹೆಚ್ಚು ಒತ್ತು ನೀಡಿದ್ದಳು. ದಿನನಿತ್ಯದ ಆಹಾರದಿಂದ ಸಕ್ಕರೆ, ಡೈರಿ ವಸ್ತುಗಳು, ಸೋಯಾ, ಗ್ಲುಟನ್ ಹಾಗೂ ಸಂಸ್ಕರಿಸಿದ ವಸ್ತುಗಳನ್ನು ದೂರ ಇಟ್ಟಿದ್ದರು. ಜೊತೆ ನಿತ್ಯ 10 ಸಾವಿರ ಹೆಜ್ಜೆ ಹಾಕುವುದು ಅಭ್ಯಾಸ ಮಾಡಿಕೊಂಡಿದ್ದಳು.
ವಿಶೇಷ ಎಂದರೆ, ಇಲ್ಲಿ ಜೆನ್ನಿ ತೂಕ ಇಳಿಸುವ ಸಂದರ್ಭದಲ್ಲಿ ಎಂದು ಕ್ಯಾಲೊರಿ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಐಸ್ ಕ್ರೀಮ್ ಬದಲಿದೆ, ಖರ್ಜೂರ ಸೇವಿಸುತ್ತಿದ್ದರು. ಅಲ್ಲದೇ, ನೈಸರ್ಗಿಕ ಮತ್ತು ಆರೋಗ್ಯಕರ ಆಹಾರದ ಮೇಲೆ ಕೇಂದ್ರೀಕರಿಸಿ, ತನ್ನ ಆರೋಗ್ಯವನ್ನು ಉತ್ತಮವಾಗಿಸಿಕೊಂಡಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.