ಅಧ್ಯಾತ್ಮದಿಂದ ಕ್ಯಾನ್ಸರ್‌ ಗೆಲ್ಲಬಹುದಾ!

By Suvarna News  |  First Published Feb 10, 2020, 12:23 PM IST

ಕ್ಯಾನ್ಸರ್‌ ಅಂದರೆ ಬೆಚ್ಚಿಬೀಳ್ತೀವಿ. ಆ ರೋಗ ಎಲ್ಲೋ ದೂರದಲ್ಲಿದೆ, ನಮಗೆಲ್ಲ ಬರಲ್ಲ ಅನ್ನುವ ಭ್ರಮೆ ನಮ್ಮದು. ಆದರೆ ಬಹಳ ಹತ್ತಿರದವರಲ್ಲಿ ಅಥವಾ ದುರಾದೃಷ್ಟವಶಾತ್ ನಮ್ಮೆಲ್ಲೇ ಅರ್ಬುದ ರೋಗದ ಚಿಹ್ನೆಗಳು ಕಾಣಿಸಿಕೊಂಡಾಗ ಅಗುವ ಆಘಾತ, ನೋವು ಸಾವಿನ ವಾಸನೆ..ಇದನ್ನೇಲ್ಲ ಪದಗಳಲ್ಲಿ ಹಿಡಿದಿಡೋದು ಕಷ್ಟ,ಆಧ್ಯಾತ್ಮಕ್ಕೆ ಕ್ಯಾನ್ಸರ್‌ ಹತೋಟೆಗೆ ಶಕ್ತಿ ಇದೆ ಅಂತ ಇದೀಗ ಹೆಲ್ತ್‌ ಜರ್ನಲ್‌ ಹೇಳ್ತಿದೆ. ಅದು ಹೀಗೆ


ಪ್ರಿಯಾ ಕೆರ್ವಾಶೆ

ವಿದೇಶಿ ಹುಡುಗಿಗಾದ ಅನುಭವ ಒಬ್ಬ ಹಿರಿಯ ಆಧ್ಯಾತ್ಮ ಸಾಧಕರು ಕ್ಯಾನ್ಸರ್ ಸಮಸ್ಯೆಯಿದ್ದ ಹುಡುಗಿಯೊಬ್ಬಳನ್ನು ತಮ್ಮ ಗುರುಗಳು ಹೇಗೆ ಗುಣಪಡಿಸಿದರು ಅನ್ನುವ ವಿವರವನ್ನು ತಮ್ಮ ಅನುಭವದ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇವರು ಹಿಮಾಲಯದ ಗುರುವೊಬ್ಬರ ಬಳಿ ಆಧ್ಯಾತ್ಮ ಸಾಧನೆ ಮಾಡುತ್ತಿದ್ದಾಗ ಅಲ್ಲಿಗೊಬ್ಬ ವಿದೇಶಿ ಹೆಣ್ಣುಮಗಳು ಬರುತ್ತಾಳೆ. ಗಂಗಾನದಿಯ ತೀರದಲ್ಲಿ ನಿಸ್ತೇಜವಾಗಿ ಕುಳಿತಿದ್ದ ಆ ಹುಡುಗಿಯನ್ನು ಕಂಡು ಇವರು ಕುತೂಹಲದಿಂದ ಅವಳನ್ನು ವಿಚಾರಿಸುತ್ತಾರೆ. ಕೊಂಚ ಸುಧಾರಿಸಿಕೊಂಡ ಆಕೆಗೆ ಚಿಕ್ಕ ವಯಸ್ಸಿನಿಂದಲೂ ಆಧ್ಯಾತ್ಮದ ಸೆಳೆತ, ತಾನು ಭಾರತಕ್ಕೆ ಹೋಗಬೇಕು ಅನ್ನುವ ಹಂಬಲ.

Tap to resize

Latest Videos

ಆದರೆ ಅವಳಿರುವ ಪರಿಸ್ಥಿತಿಯಲ್ಲಿ ಅದು ಕಷ್ಟ. ಬೆಳೆದು ಉದ್ಯೋಗಿಯಾದ ಮೇಲೂ ಅವಳ ಆಧ್ಯಾತ್ಮದ ಆಸಕ್ತಿ ಹೆಚ್ಚಾಗುತ್ತಲೇ ಹೋಗುತ್ತದೆ. ಇಂಥಾ ಸಮಯದಲ್ಲೇ ತೀವ್ರ ಅನಾರೋಗ್ಯ ಉಂಟಾಗುತ್ತದೆ. ಮತ್ತೆ ನೋಡಿದರೆ ಅದು ಕ್ಯಾನ್ಸರ್. ಡಾಕ್ಟರ್ ಅಂತೂ ಆಸ್ಪತ್ರೆ ಬಿಟ್ಟು ಹೋಗಲೇ ಬಾರದು ಅಂತ ಕಟ್ಟಪ್ಪಣೆ ಹೊರಡಿಸಿದ್ದಾರೆ. ಆದರೆ ಈ ಹುಡುಗಿಯ ಆಧ್ಯಾತ್ಮ ಸೆಳೆತ ಎಷ್ಟು ತೀವ್ರವಾಗಿತ್ತು ಅಂದರೆ ಅವಳು ಆ ಹಂತದಲ್ಲೇ ನೇರ ಭಾರತಕ್ಕೆ ಬರುತ್ತಾಳೆ. ಹಿಮಾಲಯದ ತಪ್ಪಲಿನಲ್ಲಿ ಹರಿಯುವ ಗಂಗೆಯನ್ನೇ ನೋಡುತ್ತಾ ಕೆಮ್ಮುತ್ತಾ, ರಕ್ತ ವಾಂತಿ ಮಾಡಿಕೊಳ್ಳುತ್ತಾ ತೀವ್ರ ಅಸ್ವಸ್ಥಳಾಗಿದ್ದಾಗ ಇವರ ಕಣ್ಣಿಗೆ ಬೀಳುತ್ತಾಳೆ. ಆಕೆಯನ್ನು ಉಪಚರಿಸಿ ಮಾತನಾಡಿದ ಮೇಲೆ ಇವರಿಗೆ ಆಕೆಯ ಬಗ್ಗೆ ವಿಶ್ವಾಸ ಮೂಡುತ್ತದೆ.

ಜೊತೆಗೆ ಅವಳ ಸ್ಥಿತಿಯ ಬಗ್ಗೆ ಕರುಣೆಯೂ. ತಾಯಿಯಂತೆ ಪ್ರೀತಿ ತೋರಿಸುತ್ತಿದ್ದ  ಗುರುಗಳ ಬಳಿ ಹೋಗಿ ಅವಳ ಸ್ಥಿತಿ ವಿವರಿಸುತ್ತಾರೆ. ಆರಂಭದಲ್ಲಿ ಅಷ್ಟೇನೂ ಆಸಕ್ತಿ ತೋರಿಸದ ಗುರುಗಳು ಆ ಬಳಿಕ ಅವಳಿಗೆ ಕೆಲವು ಉಸಿರಿನ ಮೇಲೆ ಗಮನ ಕೇಂದ್ರೀಕರಿಸಿ ಮಾಡುವ ಯಾವುದೋ ಒಂದು ತಂತ್ರ ಹೇಳುತ್ತಾರೆ. ಇದನ್ನು ಪ್ರಾಕ್ಟೀಸ್ ಮಾಡುತ್ತಾ ಆಕೆ ಕ್ಷಿಪ್ರವಾಗಿ ಚೇತರಿಸಿಕೊಳ್ಳುತ್ತಾಳೆ. ತನ್ನೂರಿಗೆ ಮರಳಿ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಂಡರೆ ವೈದ್ಯರೇ ತಬ್ಬಿಬ್ಬು! ಇದೆಂಥಾ ಪವಾಡ ಅನ್ನುವುದು ಅವರಿಗೂ ತಿಳಿಯೋದಿಲ್ಲ. ಏಕೆಂದರೆ ಆ ಹಂತದ ಕ್ಯಾನ್ಸರ್ನಲ್ಲಿ ವೈದ್ಯಕೀಯದಲ್ಲಿ ಅವಳನ್ನು ಉಳಿಸೋದೇ ಕಷ್ಟ. ಅಂತಹದ್ದರಲ್ಲಿ ಅವಳು ಸಂಪೂರ್ಣ ಕ್ಯಾನ್ಸರ್‌ನಿಂದ ಹೊರ ಬಂದಿದ್ದಾಳೆ ಅಂದರೆ ಹೇಗೆ ನಂಬುವುದು. ಅವಳ ದೇಹ ಕ್ಯಾನ್ಸರ್ ಮುಕ್ತವಾಗಿರುತ್ತದೆ. ಇದನ್ನವಳು ಪತ್ರದ ಮೂಲಕ ಆ ಸಾಧಕರಿಗೆ ತಿಳಿಸುತ್ತಾಳೆ. ಇದಾಗಿ ಮತ್ತೊಮ್ಮೆ ಭಾರತಕ್ಕೆ ಬಂದು ಗುರುಗಳನ್ನು ಭೇಟಿಯಾಗುತ್ತಾಳೆ. ಇದಾಗಿ ಕೆಲವು ವರ್ಷಗಳಲ್ಲಿ ಅವಳು ಬೇರೇ ಕಾರಣಕ್ಕೆ ಸಾವನ್ನಪ್ಪುತ್ತಾಳೆ.

ಮಾರಕ ಕ್ಯಾನ್ಸರ್‌ಗೆ ಅರಿಶಿಣ ಔ

ಇದು ನಿಜವಾ? 

ಹೀಗೆಲ್ಲ ಕತೆ ಕೇಳಿದ ಮೇಲೆ ಒಂದು ಅನುಮಾನ ಮನಸ್ಸಿಗೆ ಬಂದೇ ಬರುತ್ತದೆ. ನಿಜಕ್ಕೂ ಹಾಗಾಗಿತ್ತಾ.. ಅಂತ. ಆದರೆ ಇಂಥಾ ಘಟನೆಗಳು ಘಟಿಸುತ್ತಲೇ ಇರುತ್ತವೆ. ಇದನ್ನು ಪವಾಡ, ಗಿಮಿಕ್ ಅನ್ನೋದಕ್ಕಿಂತಲೂ ನಮ್ಮ ಕೈ ತಪ್ಪಿದ ಯಾವುದೋ ತಂತ್ರ ಪ್ರಯೋಗ ಆ ಕ್ಷಣದಲ್ಲಿ ಆ ಹುಡುಗಿಗೆ ಸಿಕ್ಕಿತು ಅನ್ನಬಹುದೇನೋ. ಏಕೆಂದರೆ ಉಸಿರಾಟದ ಮೇಲೆ ಅನೇಕ ಪ್ರಯೋಗಗಳನ್ನು ಮಾಡಿ ಸಾವನ್ನು ಮುಂದೂಡಿದ, ಸಾವನ್ನು ಮೊದಲೇ ತಂದುಕೊಂಡ ಯೋಗಿಗಳು ಬಹಳ ಜನ ಸಿಗುತ್ತಾರೆ. ಈ ತಂತ್ರ ಸಾಮಾನ್ಯರಿಗೆ ತಿಳಿಯದೇ ಇರಬಹುದು. ಆದರೆ ಇದನ್ನು ತಿಳಿದವರು ಹೇಳುವ ಪ್ರಕಾರ ಈ ತಂತ್ರದ ಮೂಲಕ ನಮ್ಮ ಪ್ರಾಣ, ದೇಹದ ಮೇಲೆ ಖಂಡಿತಾ ನಿಯಂತ್ರಣ ಸಾಧಿಸಬಹುದು.


ಕ್ಯಾನ್ಸರ್ ಕಡಿಮೆಯಾಗೋದು ಹೇಗೆ?

ಮೊದಲನೆಯದಾಗಿ ನಿಮ್ಮ ಒತ್ತಡ, ಉದ್ವೇಗ ಹೆಚ್ಚಿದ್ದಷ್ಟು ರೋಗ ಉಲ್ಬಣವಾಗುತ್ತದೆಯೇ ಹೊರತು ಶಮನವಾಗೋದಿಲ್ಲ. ರೋಗ ಹತೋಟಿಗೆ ಬರಬೇಕಾದರೆ ಮಾನಸಿಕ ಹತೋಟಿ ಬಹು ಮುಖ್ಯ. ಆಧ್ಯಾತ್ಮದ ಆರಂಭದ ಪಾಠವೇ ನಮ್ಮ ಮನಸ್ಸನ್ನು ನಿಯಂತ್ರಿಸೋದು ಹೇಗೆ, ಧ್ಯಾನಸ್ಥ ಸ್ಥಿತಿಗೆ ಮನಸ್ಸನ್ನು ಕೊಂಡೊಯ್ಯೋದು ಹೇಗೆ ಅಂತ. ಇಂಥಾ ಪ್ರಶಾಂತ ಸ್ಥಿತಿ ರೋಗಿಯ ಚೇತರಿಕೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತೆ.

ತಂದೆಗೆ ಕ್ಯಾನ್ಸರ್, ಚಿಕಿತ್ಸೆಗಾಗಿ ಆಟೋ ಓಡಿಸ್ತಿದ್ದಾಳೆ ದಿವ್ಯಾಂಗ ಮಗಳು!

* ಇತ್ತೀಚೆಗೆ ಸುಮಾರು ೪೪ ಸಾವಿರ ಕ್ಯಾನ್ಸರ್ ರೋಗಿಗಳಿಗೆ ಬೇಸಿಕ್ ಲೆವೆಲ್‌ನ ಆಧ್ಯಾತ್ಮಿಕ ಟ್ರೈನಿಂಗ್ ನೀಡಿ ಅಧ್ಯಯನ ನಡೆಸಲಾಯಿತು. ಸಾಮಾನ್ಯವಾಗಿ ಕ್ಯಾನ್ಸರ್ ಪೇಶೆಂಟ್‌ಗಳು ಆರಂಭದಲ್ಲಿ ಅತಿಯಾದ ಉದ್ವೇಗ, ಒತ್ತಡದಿಂದ
 ಬಳಲಿದರೆ ಕ್ರಮೇಣ ಡಿಪ್ರೆಶನ್‌ಗೆ ತುತ್ತಾಗುತ್ತಾರೆ. ಇದು ಕಾಯಿಲೆಯ ವಿರುದ್ಧದ ಅವರ ಹೋರಾಟ ಶಕ್ತಿಯನ್ನು ತಗ್ಗಿಸುತ್ತದೆ. ಆದರೆ ಆಧ್ಯಾತ್ಮ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸೋದನ್ನು ಕಲಿಸುತ್ತದೆ. ದೈಹಿಕ ನೋವನ್ನು ಮೀರಿ ನಡೆಯುವ ದಾರಿ ತೋರಿಸುತ್ತದೆ. ಇದು ಈ ಅಧ್ಯಯನದಲ್ಲಿ ಮತ್ತೊಮ್ಮೆ ಪ್ರೂವ್ ಆಯ್ತು. ಆಧ್ಯಾತ್ಮದಲ್ಲಿ ತೊಡಗಿಸಿಕೊಂಡವರು ಇತರರಿಗಿಂತ ಬಹಳ ಬೇಗ ಕ್ಯಾನ್ಸರ್‌ನಿಂದ ಚೇತರಿಸಿಕೊಂಡರು.

* ಉಸಿರು ನಮ್ಮ ಚೈತನ್ಯದ ಮೂಲ. ಅದರಲ್ಲಿ ನಿಯಂತ್ರಣ ಸಾಧಿಸುವ ಮೂಲಕ ಭಾವನೆಗಳಲ್ಲಿ ಹತೋಟಿ ಸಾಧಿಸಬಹುದು. ನಿತ್ಯ ಪ್ರಾಣಾಯಾಮ ಮಾಡೋದರಿಂದ ಶುರು ಮಾಡಿ ಅದರಲ್ಲಿ ಇನ್ನಷ್ಟು ಆಳವಾಗಿ ತೊಡಗಿಸಿಕೊಳ್ಳುತ್ತಾ ಹೋಗುವುದರಿಂದ ಕ್ಯಾನ್ಸರ್‌ನಂಥ ಪ್ರಾಣಾಂತಿಕ ರೋಗವನ್ನೂ ನಿಯಂತ್ರಿಸಬಹುದು

click me!