ಅಹಮದಾಬಾದ್[ಜ.04]: ಹೆಣ್ಮಕ್ಕಳು, ಗಂಡ್ಮಕ್ಕಳಿಗಿಂತ ಕಮ್ಮಿ ಇಲ್ಲ. ಒಂದು ವೇಳೆ ನೀವು ಹೆಣ್ಮಕ್ಕಳು ಬಲಹೀನರು ಎನ್ನುವ ಅನಿಸಿಕೆ ಇಟ್ಟುಕೊಂಡಿದ್ದರೆ ಅಹಮದಾಬಾದ್ ನ 35 ವರ್ಷದ ಅಂಕಿತಾ ಶಾ ಜೀವನಗಾಥೆ ಓದಲೇಬೇಕು. 

ಅಂಕಿತಾ ಓರ್ವ ವಿಕಲಚೇತನ ಯುವತಿ. ಬಾಲ್ಯದಲ್ಲಿ ಕಾಡಿದ ಪೊಲೀಯೋ ಸಮಸ್ಯೆಯಿಂದ ಬಲ ಕಾಲು ಕತ್ತರಿಸಲಾಯ್ತು. ಹೀಗಿದ್ದರೂ ಈಕೆ ಕಳೆದ 6 ತಿಂಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿರುವ ತಂದೆಯ ಚಿಕಿತ್ಸೆಗೆ ಹಣ ಹೊಂದಿಸಲು ಆಟೋ ಚಲಾಯಿಸುತ್ತಿದ್ದಾರೆ. ಇವರು ಅಹಮದಾಬಾದ್ನ ಪ್ರಥಮ ವಿಕಲಚೇತನ ಆಟೋ ಚಾಲಕಿಯಾಗಿದ್ದಾರೆ.

ಸ್ತನ ಕ್ಯಾನ್ಸರ್ ಹೆಸರಲ್ಲಿ ಲೈಂಗಿಕ ಶೋಷಣೆ ನಡೆಸುತ್ತಿದ್ದ ವೈದ್ಯ!

ಕಾಲ್ ಸೆಂಟರ್ ಜಾಬ್ ಗೆ ಗುಡ್ ಬೈ

ಆರ್ಥಶಾಸ್ತ್ರ ಪದವೀಧರೆಯಾಗಿರುವ ಅಂಕಿತಾ ಐವರು ಮಕ್ಕಳಲ್ಲಿ ಹಿರಿಯಳು. 2012ರಲ್ಲಿ ಅಹಮದಾಬಾದ್ ಗೆ ಬಂದ ಅಂಕಿತಾ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡಲಾರಂಭಿಸಿದರು. ಆದರೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ತಂದೆಗಾಗಿ ಅವರು ಆ ಕೆಲಸವನ್ನು ಬಿಟ್ಟು, ಆಟೋ ಚಲಾಯಿಸುವ ಕೆಲಸ ಮಾಡಲು ನಿರ್ಧರಿಸಿದರು.

ಆಟೋ ಚಲಾಯಿಸುವ ಕೆಲಸವೇ ಏಕೆ?

ಈ ಕುರಿತು ಪ್ರತಿಕ್ರಿಯಿಸಿರುವ ಅಂಕಿತಾ '12 ಗಂಟೆ ಪಾಳಿಯಲ್ಲಿ ನನಗೆ ಕೇವಲ 12 ಸಾವಿರ ರೂಪಾಯಿ ಸಿಗುತ್ತಿತ್ತು. ಆದರೆ ತಂದೆಗೆ ಕ್ಯಾನ್ಸರ್ ಇದೆ ಎಂಬ ವಿಚಾರ ತಿಳಿದಾಗ ನಾನು ಪದೇ ಪದೇ ಅಹಮದಾಬಾದ್ ನಿಂದ ಸೂರತ್ ಗೆ ತೆರಳಬೇಕಾದ ಅನಿವಾರ್ಯತೆ ಬಂದೊದಗಿತ್ತು. ರಜೆ ಕೂಡಾ ಸಿಗುತ್ತಿರಲಿಲ್ಲ. ಸಂಬಳ ಕೂಡಾ ಹೆಚ್ಚು ಇರಲಿಲ್ಲ. ಹೀಗಾಗಿ ಕೆಲಸ ಬಿಡುವ ನಿರ್ಧಾರಕ್ಕೆ ಬಂದೆ' ಎಂದಿದ್ದಾರೆ.

2 ನೇ ಚಾನ್ಸ್ ಕೊಟ್ಟ ಬದುಕಿಗೆ ನಾನು ಗ್ರೇಟ್‌ಫುಲ್‌; ಮನಿಶಾ ಕೊಯಿರಾಲಾ ಪೋಸ್ಟ್ ವೈರಲ್!

ಬೇರೆ ಕೆಲಸ ಸಿಗದಾಗ

ಇದೇ ವಿಚಾರವಾಗಿ ಮುಂದೆ ಮಾತನಾಡಿದ ಅಂಕಿತಾ 'ಈ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ. ಮನೆಯಲ್ಲಿ ಜೀವನ ಸಾಗಿಸುವುದು ಬಹಳ ಕಷ್ಟವಾಗಿತ್ತು. ತಂದೆಯ ಚಿಕಿತ್ಸೆಗೆ ನನ್ನಿಂದ ಏನೂ ಮಾಡಲಾಗುತ್ತಿಲ್ಲ ಎಂಬ ನೋವು ಕಾಡುತ್ತಿತ್ತು. ಹೀಗಾಗಿ ನಾನೇ ಏನಾದರೂ ಮಾಡಬೇಕೆಂಬ ನಿರ್ಧಾರಕ್ಕೆ ಬಂದೆ. ಹಲವಾರು ಕಂಪೆನಿಗಳಿಗೆ ಸಂದರ್ಶನ ನೀಡಿದೆ. ಆದರೆ ನಾನು ವಿಕಲಚೇತನಳು ಎಂಬುವುದೇ ಕಂಪೆನಿಗಳಿಗೆ ಸಮಸ್ಯೆಯಾಗಿತ್ತು. ಹೀಗಾಗಿ ನಾನು ಆಟೋ ಚಲಾಯಿಸಲು ಆರಂಭಿಸಿದೆ' ಎಂದಿದ್ದಾರೆ.

ಆಟೋ ಓಡಿಸಲು ಕಲಿಸಿದ್ದು ನನ್ನ ಸ್ನೇಹಿತರು

ತಾನು ಹೇಗೇ ಆಟೋ ಓಡಿಸಲು ಕಲಿತೆ ಎಂಬ ವಿಚಾರ ಬಹಿರಂಗಪಡಿಸಿದ ಅಂಕಿತಾ 'ನನ್ನ ಗೆಳೆಯ ಲಾಲಾಜೀ ಬರೋಟ್ ಕೂಡಾ ಓರ್ವ ದಿವ್ಯಾಂಗ. ಆತ ಆಟೋ ಚಲಾಯಿಸುತ್ತಾನೆ. ಅವನ ಸಹಾಯದಿಂದ ಆಟೋ ಓಡಿಸಲು ಕಲಿತೆ' ಎಂದಿದ್ದಾರೆ.

ಅದೇನಿದ್ದರೂ ತಂದೆ ತಾಯಿಗೆ ವಯಸ್ಸಾಗುತ್ತಿದೆ ಎಂದು ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸುವವರ ನಡುವೆ, ತಂದೆಗಾಗಿ, ಮನೆಯನ್ನು ನಡೆಸುವ ಸಲುವಾಗಿ ತಾನೇ ದುಡಿಯಲು ಮುಂದಾದ ಈ ಗಟ್ಟಿಗಿತ್ತಿಗೊಂದು ಸಲಾಂ. 

ಕ್ಯಾನ್ಸರ್ ಮಣಿಸಿದ ಪುಟ್ಟ ಕಂದ: ಅಪ್ಪ, ಮಗನ ಖುಷಿಗೆ ಮಿತಿಯೇ ಇಲ್ಲ!