ಸಾವಿನಂಚಿನಲ್ಲಿದ್ದ ವಿದ್ಯಾರ್ಥಿನಿ ಜೀವ ಉಳಿಸಿದ ಸ್ಮಾರ್ಟ್ ವಾಚ್

By Suvarna NewsFirst Published Jan 13, 2024, 4:42 PM IST
Highlights

ತಂತ್ರಜ್ಞಾನ ಅನೇಕ ಬಾರಿ ನಮ್ಮ ನೆರವಿಗೆ ಬರುತ್ತದೆ. ನಮ್ಮ ಜೀವ ಉಳಿಸುವಂತಹ ಕೆಲಸ ಮಾಡುತ್ತದೆ. ಅದಕ್ಕೆ ಅಮೆರಿಕಾದಲ್ಲಿ ನಡೆದ ಘಟನೆ ಸಾಕ್ಷ್ಯ. ವಿದ್ಯಾರ್ಥಿನಿ ಜೀವನದಲ್ಲಿ ಸ್ಮಾರ್ಟ್ ಫೋನ್ ದೇವರಾಗಿದೆ.
 

ತಂತ್ರಜ್ಞಾನ ಎಷ್ಟು ಮುಂದುವರೆದಿದೆಯೋ ಅಷ್ಟೇ ಸಮಸ್ಯೆಗಳನ್ನೂ ತಂದೊಡ್ಡುತ್ತಿದೆ ಎಂದು ಅನೇಕರು ಹೇಳ್ತಾರೆ. ಇದು ನೂರಕ್ಕೆ ನೂರು ಸತ್ಯವಲ್ಲ. ತಂತ್ರಜ್ಞಾನವು ಕೆಲವೊಮ್ಮೆ ಜೀವ ಉಳಿಸುವ ಕೆಲಸ ಮಾಡುತ್ತದೆ. ಕಷ್ಟದ ಸಮಯದಲ್ಲಿ, ಏಕಾಂಗಿಯಾಗಿರುವ ಜನರಿಗೆ ತಂತ್ರಜ್ಞಾನ ಅನೇಕ ರೀತಿಯಲ್ಲಿ ನೆರವಾಗುತ್ತದೆ. ಈಗಿ ಸ್ಮಾರ್ಟ್ ವಾಚ್ ಗಳ ಕ್ರೇಜ್ ಹೆಚ್ಚಾಗಿದೆ. ಈ ಸ್ಮಾರ್ಟ್ ವಾಚ್ ನಲ್ಲಿ ನೀವು ಅನೇಕ ಮಾಹಿತಿ ಪಡೆಯಬಹುದು. ಕರೆ ಮಾಡೋದು, ಕರೆ ಸ್ವೀಕರಿಸೋದು, ಸಂದೇಶ ಓದುವುದರ ಜೊತೆಗೆ ನಿಮ್ಮ ಬಿಪಿ, ಹೃದಯ ಬಡಿತ ಸೇರಿದಂತೆ ನಿಮ್ಮ ಆರೋಗ್ಯದ ಬಗ್ಗೆಯೂ ಮಾಹಿತಿ ಪಡೆಯಬಹುದು. ಕೆಲ ದಿನಗಳ ಹಿಂದೆ ಇದೇ ಸ್ಮಾರ್ಟ್ ವಾಚ್ ವ್ಯಕ್ತಿಯೊಬ್ಬನ ಜೀವ ಉಳಿಸಿತ್ತು. ಈಗ ಅಮೆರಿಕದ ವಿದ್ಯಾರ್ಥಿಯೊಬ್ಬಳ ಜೀವನದಲ್ಲೂ ಸ್ಮಾರ್ಟ್ ವಾಚ್ ಅದ್ಭುತ ಕೆಲಸ ಮಾಡಿದೆ. ಆಕೆ ಜೀವ ಉಳಿಸಿದೆ. 

ಅಮೆರಿಕಾ (America) ದ ಡೆಲವೇರ್‌ನಲ್ಲಿರುವ ವಿಲ್ಮಿಂಗ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸಾವಿನ ಅಂಚಿಗೆ ತಲುಪಿದ್ದಳು.  ವಿದ್ಯಾರ್ಥಿನಿ ಹೆಸರು ನಟಾಲಿ ನಸಾಟ್ಕಾ. ಆದ್ರೀಗ ಆಕೆ ಜೀವಂತವಾಗಿದ್ದಾಳೆಂದ್ರೆ ಅದಕ್ಕೆ ತಂತ್ರಜ್ಞಾನ (Technology) ಕಾರಣ. ಆಕೆ ಧರಿಸಿದ್ದ ಸ್ಮಾರ್ಟ್ ವಾಚ್ (Smart Watch) ಕಾರಣ. ನಟಾಲಿಯನ್ನು, ಕಾರ್ಬನ್ ಮಾನಾಕ್ಸೈಡ್ನ ಬಹುತೇಕ ಅಪಾಯಕಾರಿ ಮಟ್ಟಕ್ಕೆ ತಲುಪಿಸಿತ್ತು. ಆಕೆ ಇನ್ನೇನು ಸತ್ತೇ ಹೋಗ್ತಾಳೆ ಎನ್ನುವ ಸ್ಥಿತಿ ಇತ್ತು. ನೆರವಿಗೆ ಮನೆಯಲ್ಲಿ ಯಾರೂ ಇರಲಿಲ್ಲ. ಆದ್ರೆ ಆಕೆ ಆಪಲ್ ವಾಚ್ ಆಕೆ ಸಹಾಯಕ್ಕೆ ಬಂತು.

ಜೆಎನ್‌.1 ವೈರಸ್ ಹಾವಳಿ ಹೆಚ್ಚಳ, 1000 ಗಡಿ ದಾಟಿದ ಸೋಂಕಿತರ ಸಂಖ್ಯೆ; ದೇಶದಲ್ಲೇ ಕರ್ನಾಟಕ ನಂ.1

ನಟಾಲಿ ಜೀವನದಲ್ಲಿ ನಡೆದಿದ್ದು ಏನು? : ಒಂದು ದಿನ ಬೆಳಿಗ್ಗೆ ನಟಾಲಿ ಹಾಸಿಗೆಯಿಂದ ಏಳುವಾಗ್ಲೇ ಸಮಸ್ಯೆ ಎದುರಿಸಿದ್ದಾಳೆ. ಆಕೆಗೆ ತುಂಬಾ ಸುಸ್ತಾದಂತಾಗಿದೆ. ಆದ್ರೂ ಕೆಳಗೆ ಬಂದು ಆಹಾರ ಸೇವನೆ ಮಾಡಿದ್ದಾಳೆ. ಯಾಕೂ ಸುಸ್ತು ಹೆಚ್ಚಾಗಿದ್ದರಿಂದ ಪರ್ಸನಲ್ ಟ್ರೈನಿಂಗ್ ಕ್ಯಾನ್ಸಲ್ ಮಾಡಿ ಮಲಗುವ ನಿರ್ಧಾರಕ್ಕೆ ಬಂದಿದ್ದಾಳೆ. ಹಾಗಾಗಿ ಮೆಟ್ಟಿಲು ಹತ್ತಿ ಮಹಡಿಗೆ ಹೋಗಲು ಮುಂದಾಗಿದ್ದಾಳೆ. ಆದ್ರೆ ಮೆಟ್ಟಿಲು ಹತ್ತಲು ಆಕೆಗೆ ಆಗ್ಲಿಲ್ಲ. ದೇಹದಲ್ಲಿ ಶಕ್ತಿಯೇ ಇಲ್ಲದಂತಾಗಿದೆ. ಹೇಗೋ ಬೆಡ್ ತಲುಪಿದವಳು ಅದ್ರ ಮೇಲೆ ಬಿದ್ದಿದ್ದಾಳೆ. ದೇಹದಲ್ಲಿ ಜೀವವೇ ಇಲ್ಲ ಎನ್ನುವ ಅನುಭವ ಆಕೆಗೆ ಆಗಿದೆ. ತಕ್ಷಣ ಎಚ್ಚೆತ್ತ ಆಕೆ ಫೋನ್ ಹುಡುಕಿದ್ದಾಳೆ. ಆದ್ರೆ ಅಲ್ಲೆಲ್ಲೂ ಫೋನ್ ಇರಲಿಲ್ಲ. ಆಗ ಆಕೆ ಸಹಾಯಕ್ಕೆ ಬಂದಿದ್ದು ಸ್ಮಾರ್ಟ್ ವಾಚ್. 

ಆಪಲ್ ಸ್ಮಾರ್ಟ್ ವಾಚ್ ನಲ್ಲಿ 911  ಗೆ ಕರೆ ಮಾಡಲು ಮುಂದಾಗಿದ್ದಾಳೆ. ವಾಚ್ ನ ಸೈಟ್ ಬಟನ್ ಒತ್ತಿ ಹಿಡಿದಿದ್ದಾಳೆ. 911 ಕರೆ ಸ್ವೀಕರಿಸುತ್ತಿದ್ದಂತೆ ವಿದ್ಯಾರ್ಥಿನಿ ತನ್ನ ಸ್ಥಿತಿ ಬಗ್ಗೆ ಹೇಳಿದ್ದಾಳೆ. ನಾನು ತೊಂದರೆಯಲ್ಲಿದ್ದೇನೆ, ಇದು ಬಹುಶಃ ಕಾರ್ಬನ್ ಮಾನಾಕ್ಸೈಡ್ ನಿಂದ ಆಗಿರಬೇಕು ಎಂದಿದ್ದಾಳೆ. ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ತುರ್ತು ಸೇವೆಗಳು ಮತ್ತು ಅಗ್ನಿಶಾಮಕ ದಳದವರು ಸ್ಪಂದಿಸಿದ್ದಾರೆ. ಆಕೆಯನ್ನು ಬೇಹೆಲ್ತ್ ಕೆಂಟ್ ಕ್ಯಾಂಪಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. 

ಪುರುಷರು ಹಾಗೂ ಮಹಿಳೆಯರಲ್ಲಿ ಫಲವತ್ತತೆ ಹೆಚ್ಚಿಸುತ್ತೆ ಈ ಕೆಂಪು ಹಣ್ಣು

ಹೀಟರ್ ನಿಂದ ಅನಿಲ ಸೋರಿಕೆ ಸಾಧ್ಯತೆ  : ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ ನಂತ್ರ ವಿದ್ಯಾರ್ಥಿನಿ ಚೇತರಿಸಿಕೊಂಡಿದ್ದಾಳೆ. ಇಪ್ಪನ್ನಾಲ್ಕು ಗಂಟೆ ಪರೀಕ್ಷೆ ನಡೆಸಿ ನಂತ್ರ ಡಿಸ್ಚಾರ್ಜ್ ಮಾಡಿದ್ದಾರೆ. ಹೀಟರ್‌ನಿಂದ ಅನಿಲ ಸೋರಿಕೆಯಾಗಿದೆ ಎಂದು ನಾಟೆಲ್ಲಿ ನಂಬಿದ್ದಾಳೆ. ಘಟನೆಯ ಸಮಯದಲ್ಲಿ ನಾಟೆಲ್ಲಿ ಅಪಾರ್ಟ್ಮೆಂಟ್ ನಲ್ಲಿ ಕಾರ್ಬನ್ ಮಾನಾಕ್ಸೈಡ್ ಡಿಟೆಕ್ಟರ್ ಇರಲಿಲ್ಲ. ಇದ್ರಿಂದಾಗಿ ಈ ಸಮಸ್ಯೆ ಕಾಡಿದೆ. ನಟಾಲಿ ತನ್ನ ವಿಷ್ಯವನ್ನು ಮಾಧ್ಯಮದ ಜೊತೆ ಹಂಚಿಕೊಂಡಿದ್ದಾಳೆ. ಇದನ್ನು ಕೇಳಿದ ನೆಟ್ಟಿಗರು ಸಾಕಷ್ಟು ಪ್ರತಿಕ್ರಿಯೆ ನೀಡಿದ್ದಾರೆ. 

click me!