
ಬಂಜೆತನ ಅನ್ನೋದು ಮಾಡರ್ನ್ ಲೈಫ್‌ಸ್ಟೈಲ್ ಉದಾರವಾಗಿ ನೀಡಿರೋ ಆರೋಗ್ಯ ಸಮಸ್ಯೆ. ಇಪ್ಪತ್ತ ನಾಲ್ಕು ಗಂಟೆಯೂ ನಮ್ಮ ಜೊತೆಗಿರುವ ಮೊಬೈಲ್ ಹಲವು ಅನಾರೋಗ್ಯಕಾರಿ ಅಂಶಗಳನ್ನು ನಮಗೆ ದಾಟಿಸಬಲ್ಲದು. ಇದು ಬಾಯಿ ಮಾತಿಗೆ ಹೇಳೋ ವಿಷಯ ಖಂಡಿತಾ ಅಲ್ಲ. ಇತ್ತೀಚಿನ ಅಧ್ಯಯನದಲ್ಲಿ ಸಾಬೀತಾದ ಸಂಗತಿ. ಮೊಬೈಲ್‌ನಿಂದ ನಪುಂಸಕತ್ವ ಬರುತ್ತೆ ಅನ್ನೋದು ಹಳೇ ಜೋಕ್. ಆದರೆ ಅದೇ ಈಗ ರಿಯಾಲಿಟಿಯೂ ಆಗಿದೆ. ಪುರುಷರ ವೀರ್ಯಾಣುಗಳ ಕೌಂಟ್ ಕಡಿಮೆ ಆಗೋದು, ದುರ್ಬಲ ವೀರ್ಯಾಣು ಇತ್ಯಾದಿ ಸಮಸ್ಯೆಗಳು ಅವರು ಮಕ್ಕಳನ್ನು ಹೊಂದದಂತೆ ಮಾಡುತ್ತದೆ. ಇದರಿಂದ ಬಹಳ ಮಂದಿ ಚಿಂತಿತರಾಗಿದ್ದಾರೆ. ಇದರಿಂದ ಎಷ್ಟೋ ಮಂದಿಯ ದಾಂಪತ್ಯ ಹಾಳಾಗಿ ಹೋಗಿದೆ. ಎಷ್ಟೋ ಸೆಲೆಬ್ರಿಟಿಗಳು ಕೂಡ ಈ ಕಾರಣಕ್ಕೆ ದೂರವಾಗಿದ್ದು ನಮ್ಮ ಕಣ್ಣ ಮುಂದೆಯೇ ಇದೆ.
ಈಗ ಇಲ್ಲಿರೋದು ಸೆಲೆಬ್ರಿಟಿಗಳ ಪ್ರಶ್ನೆ ಅಲ್ಲ. ಕಾಮನ್ ಮ್ಯಾನ್ ಲೈಫಿನ ಪ್ರಶ್ನೆ. ಎಸ್, ಆತನ ಪುರುಷತ್ವ ಡೇಂಜರಲ್ಲಿದೆ. ಇದಕ್ಕೆ ಕಾರಣ ಆತನ ಫೋನಿಟ್ಟುಕೊಳ್ಳೋ ಜಾಗ. ಪ್ಯಾಂಟ್ ನ ಮುಂದಿನ ಜೇಬಿನಲ್ಲಿ ಫೋನ್ ಇಟ್ಟುಕೊಂಡರೆ ಎಲ್ಲಕ್ಕೂ ಅನುಕೂಲ ಅಂತ ಹಲವು ಪುರುಷರು ಪ್ಯಾಂಟ್ ಮುಂದಿನ ಜೇಬಿನಲ್ಲೇ ಫೋನ್ ಇಟ್ಕೊಂಡಿರ್ತಾರೆ. ಆದರೆ ತಾವು ಈ ಮೂಲಕ ತಮ್ಮ ಪುರುಷತ್ವಕ್ಕೆ ಚಾಲೆಂಜ್ ಮಾಡ್ತಿದ್ದೇವೆ ಅನ್ನೋದು ಅವರಿಗೇ ಗೊತ್ತಿಲ್ಲ.
Lab Grown Babies: ಸಂಭೋಗವೊಂದೇ ಅಲ್ಲ ಮಕ್ಕಳನ್ನು ಪಡೆಯಲು ವೀರ್ಯವೂ ಬೇಕಾಗಿಲ್ಲ!
ಅಫ್‌ಕೋರ್ಸ್, ಸ್ಮಾರ್ಟ್ ಫೋನ್ ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದೆ. ಅದನ್ನು ನಮ್ಮಿಂದ ಪ್ರತ್ಯೇಕವಾಗಿಡಲು ಸಾಧ್ಯವಾಗುವುದಿಲ್ಲ. ಸಾಮಾಜಿಕ ಸಂಪರ್ಕ ಸಾಧಿಸಲು, ಮನರಂಜನೆಯ ಉದ್ದೇಶದಿಂದ ಜನರು ಹೆಚ್ಚಾಗಿ ಸ್ಮಾರ್ಟ್ ಫೋನ್ ಗಳ ಬಳಕೆ ಮಾಡುತ್ತಾರೆ. ಇದರಿಂದ ಆರೋಗ್ಯಕ್ಕೆ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿದಿದ್ದರೂ ಹೆಚ್ಚಿನವರು ಮೊಬೈಲ್ ಬಿಟ್ಟು ಇರುವುದಿಲ್ಲ. ಅನೇಕರು ದಿನದ 24 ಗಂಟೆಯೂ ಮೊಬೈಲ್ಗಳನ್ನು ತಮ್ಮ ಬಳಿಯೇ ಇಟ್ಟಕೊಂಡು ಓಡಾಡುತ್ತಾರೆ. ಮಹಿಳೆಯರು ಫೋನ್ಗಳನ್ನು ಪರ್ಸ್ ಅಥವಾ ಬ್ಯಾಗ್ನಲ್ಲಿ ಇಟ್ಟುಕೊಂಡು ಓಡಾಡಿದರೆ ಪುರುಷರು ಪ್ಯಾಂಟ್ ಜೇಬಿನಲ್ಲಿ ಫೋನ್ಗಳನ್ನು ಇಟ್ಟುಕೊಳ್ಳುತ್ತಾರೆ. ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳುವುದರಿಂದ ಅದರಿಂದ ಸೂಸುವ ವಿಕಿರಣಗಳಿಂದಾಗಿ ಆರೋಗ್ಯಕ್ಕೆ ಹಲವು ರೀತಿಯ ಹಾನಿಯಿದೆ ಎಂದು ತಿಳಿದಿದ್ದರೂ ಅನೇಕ ಪುರುಷರು ಅನಿವಾರ್ಯವಾಗಿ ಮೊಬೈಲ್ ಫೋನ್ ಜೇಬಿನಲ್ಲಿ ಇಟ್ಟುಕೊಂಡು ಓಡಾಡುತ್ತಾರೆ. ಹೀಗಿರುವಾಗ ಈ ಅಭ್ಯಾಸದ ದುಷ್ಪರಿಣಾಮವನ್ನು ತಪ್ಪಿಸಲು ಸಾಧ್ಯವಿಲ್ಲ.
ಜೇಬಿನಲ್ಲಿ ವೈರ್ ಲೆಸ್ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿದ ಫೋನ್ ಅನ್ನು ಇರಿಸಿದಾಗ ದೇಹವು 2 ರಿಂದ 7 ಪಟ್ಟು ವಿಕಿರಣಗಳನ್ನು ಹೊರಬೇಕಾಗುತ್ತದೆ. ಈ ವಿಕಿರಣಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಫೋನ್ ವಿಕಿರಣಗಳು ಕೂಡಾ ಕ್ಯಾನ್ಸರಿಗೆ ಕಾರಣವೆಂದು ಪರಿಗಣಿಸಲಾಗಿದೆ. ಈ ವಿಕಿರಣಗಳು ನಿಮ್ಮ ಡಿಎನ್ಎ ರಚನೆಯನ್ನು ಸಹ ಬದಲಾಯಿಸಬಹುದು. ಈ ಕಾರಣದಿಂದ ಆರೋಗ್ಯಕ್ಕೆ ಹಲವು ಅಪಾಯಗಳು ಉಂಟಾಗಬಹುದು. ಮತ್ತೊಂದೆಡೆ ಶರ್ಟ್ ಜೇಬಿನಲ್ಲಿ ಸ್ಮಾರ್ಟ್ ಫೋನ್ ಇಟ್ಟರೆ ಅದು ಹೃದಯ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ ಫೋನ್ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಅದರಿಂದ ಸೂಸುವ ವಿಕಿರಣವು ನಮ್ಮ ಮೂಳೆ ವಿಶೇಷವಾಗಿ ಸೊಂಟದ ಮೂಳೆಯನ್ನು ದುರ್ಬಲಗೊಳಿಸಬಹುದು. ಪುರುಷರು ಒಂದು ವೇಳೆ ಪ್ಯಾಂಟ್ನ ಮುಂಭಾಗದ ಜೇಬಿನಲ್ಲಿ ಮೊಬೈಲ್ ಇರಿಸಿದರೆ ಅದು ವೀರ್ಯದ ಆರೋಗ್ಯಕ್ಕೆ ಖಂಡಿತಾ ಹಾನಿಕಾರಕ. ಇದು ಸಾಬೀತೂ ಆಗಿದೆ.
ಮನಸ್ಸಿನ ವಿಚಿತ್ರ ಲವ್ ಕೋರಿಕೆ ಹೇಳಿದ ಕಂಗನಾ: ಯಾರಪ್ಪಾ ಬಲಿಪಶು ಅಂತಿದ್ದಾರೆ ಫ್ಯಾನ್ಸ್!
ಹಾಗಿದ್ದರೆ ಫೋನನ್ನು ಎಲ್ಲಿ ಇಟ್ಟುಕೊಂಡರೆ ಸೇಫ್ ಅನ್ನೋ ಪ್ರಶ್ನೆ ಬರಬಹುದು. ಅದಕ್ಕೆ ಉತ್ತರ ಪರ್ಸ್ ಅಥವಾ ಬ್ಯಾಗ್. ಅನೇಕರಿಗೆ ಇದು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಸ್ಮಾರ್ಟ್ ಫೋನ್ಗಳನ್ನು ಪ್ಯಾಂಟ್ನ ಮುಂದಿನ ಜೇಬಿನಲ್ಲಿ ಇಡುವ ಬದಲು ಅದನ್ನು ಹಿಂದಿನ ಜೇಬಿನಲ್ಲಿ ಇಟ್ಟುಕೊಳ್ಳೋದು ಸೇಫ್. ಮತ್ತೊಂದು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ಮೊಬೈಲ್ ಪೋನ್ ಹಿಂಭಾಗವು ಮೇಲ್ಮುಖವಾಗಿರಬೇಕು. ನಿಮ್ಮ ಚರ್ಮಕ್ಕೆ ತಾಕುವಂತಿರಬಾರದು. ಇದರಿಂದ ದೇಹಕ್ಕೆ ಅಷ್ಟಾಗಿ ವಿಕಿರಣವು ಸೋಸುವುದಿಲ್ಲ. ಸೋ ಫೋನನ್ನು ಮುಂದಿನ ಜೇಬಲ್ಲಿ ಇಟ್ಟುಕೊಳ್ಳೋ ಮೊದಲು ಒಮ್ಮೆ ಯೋಚನೆ ಮಾಡಿ. ಅದನ್ನು ಹಿಂಭಾಗದ ಜೇಬಿಗೆ ವರ್ಗಾಯಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.