Lab Grown Babies: ಸಂಭೋಗವೊಂದೇ ಅಲ್ಲ ಮಕ್ಕಳನ್ನು ಪಡೆಯಲು ವೀರ್ಯವೂ ಬೇಕಾಗಿಲ್ಲ!

By Suvarna News  |  First Published Jul 29, 2023, 12:22 PM IST

ಮಕ್ಕಳನ್ನು ಪಡೆಯದ ದಂಪತಿಗೆ ಖುಷಿ ಸುದ್ದಿಯೊಂದಿದೆ. ವೈದ್ಯಲೋಕದಲ್ಲಿ ಅನೇಕ ಪ್ರಯೋಗ ನಡೆಯುತ್ತಿದೆ. ಈಗ ಹೊಸ ಸಂಶೋಧನೆ ನಡೆದಿದೆ. ಇದ್ರಲ್ಲಿ ಸೆಕ್ಸ್, ವೀರ್ಯ, ಅಂಡಾಣು ಯಾವುದೂ ಅಗತ್ಯವಿಲ್ಲದೆ ಮಕ್ಕಳನ್ನು ಪಡೆಯಬಹುದಾಗಿದೆ. 
 


ದಾಂಪತ್ಯ ಜೀವನದಲ್ಲಿ ಮತ್ತಷ್ಟು ಖುಷಿ ನೀಡುವ ಸಂಗತಿ ಅಂದ್ರೆ ಮಕ್ಕಳು. ದಂಪತಿ ಮಧ್ಯೆ ಮಕ್ಕಳು ಬಂದಾಗ ಜವಾಬ್ದಾರಿ ಹೆಚ್ಚಾಗುವ ಜೊತೆಗೆ ದಂಪತಿ ಮಧ್ಯೆ ವಿಶೇಷ ಬಾಂಡಿಂಗ್ ಬೆಳೆಯಲು ಶುರುವಾಗುತ್ತದೆ. ಮದುವೆ ನಂತ್ರ ಬಹುತೇಕ ದಂಪತಿ ಸಂತಾನಪಡೆಯಲು ಪ್ರಯತ್ನ ನಡೆಸುತ್ತಾರೆ. ಆದ್ರೆ ಎಲ್ಲರಿಗೂ ಮಕ್ಕಳನ್ನು ಪಡೆಯೋದು ಸುಲಭವಲ್ಲ. ವಯಸ್ಸು ಮೀರಿದ ಕಾರಣಕ್ಕೆ ಅಥವಾ ಬೇರೆ ಯಾವುದೋ ಅನಾರೋಗ್ಯದಿಂದ ಅನೇಕ ದಂಪತಿಯ ಮಡಿಲು ತುಂಬೋದಿಲ್ಲ. ಈಗಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅದ್ಭುತ ಬೆಳವಣಿಗೆಯಾಗಿದೆ. ನೈಸರ್ಗಿಕ ರೀತಿಯಲ್ಲಿ ಮಕ್ಕಳನ್ನು ಪಡೆಯದ ದಂಪತಿ ಐವಿಎಫ್ ಸೇರಿದಂತೆ ಅನೇಕ ಚಿಕಿತ್ಸೆಗೆ ಒಳಗಾಗ್ತಾರೆ. ಈಗಿನ ಜೀವನಶೈಲಿಯಿಂದಾಗಿ ವೀರ್ಯದ ಗುಣಮಟ್ಟ ಹಾಳಾಗ್ತಿದೆ. ಇದು ಮಕ್ಕಳನ್ನು ಪಡೆಯಲು ದೊಡ್ಡ ಅಡ್ಡಿಯಾಗ್ತಿದೆ. ಅನೇಕರಿಗೆ ಐವಿಎಫ್ ಮಾಡಿದ್ರೂ ಸಂತಾನ ಪ್ರಾಪ್ತಿಯಾಗೋದಿಲ್ಲ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಂತಾನೋತ್ಪತ್ತಿಗೆ ಸಂಬಂಧಿಸಿದಂತೆ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿರುತ್ತವೆ. ಈಗ ಹೊಸ ಮತ್ತೊಂದು ಸಂಶೋಧನೆ ನಡೆದಿದೆ. ಐವಿಎಪ್ ಅಲ್ಲದ ಲ್ಯಾಬ್‌ನಲ್ಲಿ ಸಾಂಪ್ರದಾಯಿಕವಲ್ಲದ ರೀತಿಯಲ್ಲಿ ಶಿಶುಗಳ ಜನನಕ್ಕೆ ಪ್ರಯೋಗ ಮಾಡಲಾಗ್ತಿದೆ. 

ಇದಕ್ಕೆ ವೀರ್ಯ (Sperm) ಹಾಗೂ ಅಂಡಾಣು ಇಲ್ಲದೆ  ಹೊಸ ತಂತ್ರಜ್ಞಾನದ ಮೂಲಕ ಶಿಶುಗಳನ್ನು ಪಡೆಯಬಹುದು. ಮಕ್ಕಳಾಗಿಲ್ಲ ಎಂದು  ಕೊರಗುತ್ತಿರುವ ಅನೇಕರಿಗೆ ಇದ್ರಿಂದ ಲಾಭವಾಗಲಿದೆ. ಈ ತಂತ್ರಜ್ಞಾನವು ಟ್ರಾನ್ಸ್ಜೆಂಡರ್ (Transgender) ದಂಪತಿಗೂ ಮಕ್ಕಳ (Children) ನ್ನು ಪಡೆಯಲು ನೆರವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.  ಈ ಹೊಸ ತಂತ್ರಜ್ಞಾನವನ್ನು IVG ಅಥವಾ ಇನ್-ವಿಟ್ರೋ ಗ್ಯಾಮೆಟೋಜೆನೆಸಿಸ್ ಎಂದು ಕರೆಯಲಾಗುತ್ತದೆ. 

Tap to resize

Latest Videos

Angry Husband : ಟೀಗೆ ಸಕ್ಕರೆ ಹೆಚ್ಚಾದ್ರೂ ಗಂಡಂಗೆ ಕೋಪ, ಮಡದಿಯರಿಗೆ ಬಂತು ಬಿಪಿ!

ಐವಿಜಿ ಅಂದ್ರೇನು? : ಇಲ್ಲಿ ಮಾನವನ ವೀರ್ಯ ಹಾಗೂ ಅಂಡಾಣುವಿನ ಅಗತ್ಯವೇ ಇರೋದಿಲ್ಲ. ವೀರ್ಯ ಹಾಗೂ ಅಂಡಾಣು ಎರಡನ್ನೂ ಪ್ರಯೋಗಾಲದಲ್ಲಿಯೇ ತಯಾರಿಸಲಾಗುತ್ತದೆ. ಈಗಾಗಲೇ ಇಲಿ (Rat) ಗಳ ಮೇಲೆ ಇದ್ರ ಪ್ರಯೋಗ ನಡೆದಿದೆ. ವಯಸ್ಕ ಜೀವಕೋಶದಿಂದ ಮೊಟ್ಟೆ ಮತ್ತು ವೀರ್ಯವನ್ನು ತಯಾರಿಸಲು ಸಂಶೋಧಕರು ಯಶಸ್ವಿಯಾಗಿದ್ದಾರೆ. ಮನುಷ್ಯನ ರಕ್ತ ಅಥವಾ ಚರ್ಮದಿಂದ ಕೋಶಗಳನ್ನು ಪುನರುತ್ಪಾದಿಸುವ ಮೂಲಕ ಭ್ರೂಣಗಳನ್ನು ಪ್ಲುರಿಪೊಟೆಂಟ್ ಸ್ಥಿತಿಗಳಂತೆ ತಯಾರಿಸಲಾಗುತ್ತದೆ. ಇದನ್ನು ಪ್ರೇರಿತ ಪ್ಲುರಿಪೊಟೆಂಟ್ ಕಾಂಡಕೋಶಗಳು ಅಥವ ಐಪಿಎಸ್ ಎಂದು  ಕರೆಯಲಾಗುತ್ತದೆ. ಐಪಿಎ ಕೋಶಗಳನ್ನು, ಐವಿಎಫ್ ಪ್ರಕ್ರಿಯೆಯಲ್ಲಿ ಬಳಸಬಹುದಾದ ಮೊಟ್ಟೆಗಳು ಅಥವಾ ವೀರ್ಯಗಳಾಗಿ ಪರಿವರ್ತಿಸಲಾಗುತ್ತದೆ.  

ಸಾಕಷ್ಟು ಪ್ರಯತ್ನಗಳ ನಂತರವೂ ಮಗುವನ್ನು ಹೊಂದಲು ಸಾಧ್ಯವಾಗದ ದಂಪತಿಗೆ ಇಲ್ಲವೆ ಐವಿಎಫ್ ಅಥವಾ ಇತರ ಯಾವುದೇ ಫಲವತ್ತತೆ ಚಿಕಿತ್ಸೆಯಿಂದಲೂ ಮಕ್ಕಳನ್ನು ಪಡೆಯಲಾಗದ ದಂಪತಿಗೆ ಇದು ಸಾಕಷ್ಟು ಪ್ರಯೋಜನವಾಗಲಿದೆ. ಆದ್ರೆ ಸಂಶೋಧಕರು ಇನ್ನೂ ಈ ತಂತ್ರಜ್ಞಾನವನ್ನು ಬಳಸಲು ಒಪ್ಪಿಗೆ ನೀಡಿಲ್ಲ. ಯಾಕೆಂದ್ರೆ ಇದಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅದೆಲ್ಲದರ ಮೇಲೆ ಪ್ರಯೋಗಗಳು ನಡೆದು ಯಶಸ್ವಿಯಾದ್ಮೇಲೆ ಅದನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆಯಿದೆ.  

ಕೊಲೆಸ್ಟ್ರಾಲ್ ಕಡಿಮೆ ಮಾಡ್ಕೊಳ್ಳೋಕೆ ಲೈಫ್‌ಸ್ಟೈಲ್‌ನಲ್ಲಿ ಈ ಚೇಂಜಸ್ ಮಾಡ್ಕೊಳ್ಳಿ ಸಾಕು

ಒಂದ್ವೇಳೆ ಈ ಪ್ರಯೋಗ ಸಂಪೂರ್ಣವಾಗಿ ಯಶಸ್ವಿಯಾದ್ರೆ ಟ್ರಾನ್ಸ್ಜೆಂಡರ್ ದಂಪತಿ ಕೂಡ ಯಾವುದೇ ಸಮಸ್ಯೆಯಿಲ್ಲದೆ ಮಕ್ಕಳನ್ನು ಪಡೆಯಬಹುದಾಗಿದೆ. ಕ್ಯಾಲಿಫೋರ್ನಿಯಾದ ಸ್ಟಾರ್ಟ್‌ಅಪ್‌ಗಳು, ಕಾನ್ಸೆಪ್ಶನ್ ಮತ್ತು ಇತರ ಹಲವು ಪ್ರಯೋಗಾಲಯಗಳಲ್ಲಿ ಸಂಶೋಧನೆ ನಡೆಯುತ್ತಿದ್ದು, ಶೀಘ್ರವೇ ದಂಪತಿಗೆ ಖುಷಿ ಸುದ್ದಿ ಸಿಗುವ ಸಾಧ್ಯತೆಯಿದೆ. ನಿಮ್ಮ ವಯಸ್ಸು 35 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಅಥವಾ ನೈಸರ್ಗಿಕವಾಗಿ ಗರ್ಭಿಣಿಯಾಗಲು ಸಾಧ್ಯವಾಗದಿದ್ದರೆ ಅಥವಾ ಯಾವುದೇ ಆರೋಗ್ಯ ಸಮಸ್ಯೆಯಿಂದ ನೀವು ಗರ್ಭಿಣಿಯಾಗಲು ಕಷ್ಟಪಡುತ್ತಿದ್ದರೆ  ವೈದ್ಯರ ಸಲಹೆಯ ಮೇರೆಗೆ ನೀವು ಈ ಹೊಸ ತಂತ್ರದ ಬಗ್ಗೆ ತಿಳಿದುಕೊಳ್ಳಬೇಕು. ಪ್ರಸ್ತುತ ನಿಮಗೆ ಇದ್ರ ಲಾಭ ಸಿಗೋದಿಲ್ಲ. ಮುಂದಿನ ದಿನಗಳಲ್ಲಿ ಇದು ಜಾರಿಗೆ ಬರುವ ಸಾಧ್ಯತೆ ದಟ್ಟವಾಗಿದೆ. 

click me!