ತುಪ್ಪದ ವಾಸನೆ ಎಲ್ಲರನ್ನೂ ಸೆಳೆಯುತ್ತೆ. ಕೆಲ ಸ್ವೀಟ್ ಗೆ ತುಪ್ಪ ಬೇಕೇಬೇಕು. ಇನ್ನು ಕೆಲವರು ಪ್ರತಿ ದಿನ ಒಂದಲ್ಲ ಒಂದು ರೂಪದಲ್ಲಿ ತುಪ್ಪ ತಿನ್ನುತ್ತಾರೆ. ತುಪ್ಪ ಅನೇಕ ಪ್ರಯೋಜನಗಳನ್ನು ಹೊಂದಿದೆಯಾದ್ರೂ ಕೆಲವರು ಅದ್ರಿಂದ ದೂರವಿದ್ರೆ ಒಳ್ಳೆಯದು.
ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕಿಕೊಂಡು ತಿನ್ನೋರಿದ್ದಾರೆ. ಒಬ್ಬಟ್ಟಿಗೆ ತುಪ್ಪವಿದ್ರೆ ರುಚಿ. ರೊಟ್ಟಿ ಮೇಲೆ ತುಪ್ಪ ಸವರಿ ತಿನ್ನಂದ್ರೆ ಅದ್ರ ಮಜವೇ ಬೇರೆ. ಹೀಗೆ ಜನರು ಬೇರೆ ಬೇರೆ ರೀತಿಯಲ್ಲಿ ದಿನಕ್ಕೆ ಒಂದು ಚಮಚ ತುಪ್ಪವನ್ನಾದ್ರೂ ಸೇವನೆ ಮಾಡ್ತಾರೆ. ತುಪ್ಪ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಸದೃಡ ದೇಹ ಮತ್ತು ಶಕ್ತಿಗಾಗಿ ತುಪ್ಪ ಸೇವನೆ ಮಾಡ್ಬೇಕೆಂದು ಹಿರಿಯರು ಸಲಹೆ ನೀಡುತ್ತಾರೆ. ತುಪ್ಪ ಪ್ರೋಟೀನ್, ಆರೋಗ್ಯಕರ ಕೊಬ್ಬು, ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್ ಕೆ ಯ ಉತ್ತಮ ಮೂಲವಾಗಿದೆ. ಇದರ ಸೇವನೆಯಿಂದ ಚರ್ಮ, ಕೂದಲು, ಜೀರ್ಣಕ್ರಿಯೆ ಮತ್ತು ಹೃದಯದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಆದರೆ ಹಲವಾರು ಗುಣಗಳಿಂದ ಸಮೃದ್ಧವಾಗಿರುವ ತುಪ್ಪವು ಕೆಲವರಿಗೆ ವಿಷವಿದ್ದಂತೆ. ಇಂತಹ ಪರಿಸ್ಥಿತಿಯಲ್ಲಿ ಆ ಜನರು ತುಪ್ಪದ ಸೇವನೆಯಿಂದ ದೂರವಿರಬೇಕು. ಹಾಗಾದರೆ ಯಾರು ತುಪ್ಪವನ್ನು ಸೇವಿಸಬಾರದು ಎಂಬುದನ್ನು ನಾವಿಂದು ಹೇಳ್ತೇವೆ.
ದೇಸಿ ತುಪ್ಪ (Ghee) ವನ್ನು ಇಂಥವರು ಸೇವನೆ ಮಾಡ್ಬೇಡಿ :
ಹೊಟ್ಟೆ (Stomach) ಸಮಸ್ಯೆ ಆದಾಗ ತುಪ್ಪ ತಿನ್ನಬೇಡಿ : ಆಯುರ್ವೇದ (Ayurveda) ದ ಪ್ರಕಾರ ಹೊಟ್ಟೆನೋವು ಅಥವಾ ಅಜೀರ್ಣ (Indigestion) ಸಮಸ್ಯೆ ಇರುವವರು ತುಪ್ಪವನ್ನು ಸೇವಿಸಬಾರದು. ಯಾವುದೇ ರೀತಿಯ ಹೊಟ್ಟೆಯ ಸಮಸ್ಯೆ ಇದ್ದರೆ ತುಪ್ಪವನ್ನು ತಿನ್ನದಿರುವುದು ಒಳ್ಳೆಯದು. ವಾಸ್ತವವಾಗಿ ಅಜೀರ್ಣದ ಸಮಸ್ಯೆಯು ಹೊಟ್ಟೆಯ ಆಂತರಿಕ ಸ್ಥಿತಿ ಅಥವಾ ಹುಣ್ಣು ಅಥವಾ ಗ್ಯಾಸ್ಟ್ರೊದಂತಹ ಕಾಯಿಲೆಯ ಸಮಸ್ಯೆಯನ್ನು ಸೂಚಿಸುತ್ತದೆ. ಈ ಸಮಸ್ಯೆ ಇರುವಾಗ ನೀವು ತುಪ್ಪ ಸೇವನೆ ಮಾಡಿದ್ರೆ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಯಾವುದೇ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡ್ತಿದ್ದರೆ ತುಪ್ಪ ಸೇವನೆ ಸಹವಾಸಕ್ಕೆ ಹೋಗ್ಬೇಡಿ.
undefined
ಲಿವರ್ ಸಿರೋಸಿಸ್ ಗೆ ತುಪ್ಪ ಹಾನಿಕಾರಕ : ಲಿವರ್ ಸಿರೋಸಿಸ್ ಇರುವವರಿಗೆ ತುಪ್ಪ ವಿಷವಿದ್ದಂತೆ ಅಂದ್ರೆ ತಪ್ಪಾಗಲಾರದು. ಈ ಸಮಯದಲ್ಲಿ ರೋಗಿಗಳು ತುಪ್ಪವನ್ನು ತಿನ್ನಬಾರದು. ವಾಸ್ತವವಾಗಿ, ಈ ರೋಗದಲ್ಲಿ ಆರೋಗ್ಯಕರ ಯಕೃತ್ತಿನ ಅಂಗಾಂಶವನ್ನು ಹಾನಿಗೊಳಗಾದ ಅಂಗಾಂಶದಿಂದ ಬದಲಾಯಿಸಲಾಗುತ್ತದೆ. ಪರಿಣಾಮವಾಗಿ, ಯಕೃತ್ತು ಶಾಶ್ವತವಾಗಿ ಕ್ಷೀಣಿಸಲು ಪ್ರಾರಂಭಿಸುತ್ತದೆ. ಈ ಸಂದರ್ಭದಲ್ಲಿ ತುಪ್ಪವನ್ನು ಸೇವಿಸಬಾರದು.
ಮಹಿಳೆಯರು ಭಾರ ಎತ್ತೋದ್ರಿಂದ ತೂಕ ಹೆಚ್ಚಳವಾಗುತ್ತಾ ?
ಹೃದಯ ರೋಗಿ: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಲು ನಮ್ಮ ಆಹಾರಕ್ರಮ ಕಾರಣವಾಗಿದೆ. ಸರಿಯಾದ ಆಹಾರ ಸೇವನೆ ಮಾಡದ ಕಾರಣ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಂತೆ ಒಂದೊಂದೇ ಸಮಸ್ಯೆ ಕಾಡಲು ಶುರುವಾಗುತ್ತದೆ. ಅಂತಹ ವ್ಯಕ್ತಿಗೆ ಹೃದಯಾಘಾತದ ಅಪಾಯವು ಹೆಚ್ಚಿರುತ್ತದೆ. ತುಪ್ಪದಲ್ಲಿರುವ ಕೊಬ್ಬು ಈ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು. ತಜ್ಞರ ಪ್ರಕಾರ ಅಂತಹ ಜನರು ತುಪ್ಪವನ್ನು ಸೇವಿಸುವ ಮೊದಲು ಯೋಚಿಸಬೇಕು. ತುಪ್ಪವನ್ನು ಬಹಳ ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು.
ಕೆಮ್ಮು: ನೆಗಡಿ ಮತ್ತು ಕೆಮ್ಮಿನಿಂದ ತೊಂದರೆ ಇರುವವರು ತುಪ್ಪದಿಂದ ದೂರವಿರಬೇಕು. ತಜ್ಞರ ಪ್ರಕಾರ, ಈ ಸಮಸ್ಯೆಯ ಸಮಯದಲ್ಲಿ ತುಪ್ಪವನ್ನು ತಿನ್ನುವುದರಿಂದ ಗಂಟಲಿನ ಜಿಡ್ಡು ಹೆಚ್ಚಾಗುತ್ತದೆ ಮತ್ತು ನೀವು ತೀವ್ರ ಕೆಮ್ಮಿಗೆ ಒಳಗಾಗುವ ಸಾಧ್ಯತೆಯಿದೆ. ವೈದ್ಯರು ಅಥವಾ ತಜ್ಞರ ಸಲಹೆಯ ಮೇರೆಗೆ ಮಾತ್ರ ತುಪ್ಪವನ್ನು ಸೇವನೆ ಮಾಡುವುದು ಒಳ್ಳೆಯದು.
ನೋವಿಗೆ ಪರಿಹಾರ ನೀಡುತ್ತೆ ಈ Cupping Therapy!
ಋತುವಿನ ಜ್ವರದಲ್ಲೂ ತುಪ್ಪ ಸೇವಿಸಬೇಡಿ : ಆಯುರ್ವೇದದಲ್ಲಿ, ತುಪ್ಪದ ಸೇವನೆಯು ಋತುಮಾನದ ಜ್ವರದಲ್ಲಿಯೂ ಸಹ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಆಯುರ್ವೇದದ ಪ್ರಕಾರ, ಜ್ವರದಿಂದ ಬಳಲುತ್ತಿರುವ ವ್ಯಕ್ತಿಯು ತುಪ್ಪವನ್ನು ಸೇವಿಸಿದರೆ, ಅವನಿಗೆ ಕೆಮ್ಮಿನ ಸಮಸ್ಯೆ ಕಾಡುತ್ತದೆ. ಆದ್ದರಿಂದ ಋತುಮಾನದ ಜ್ವರದಿಂದ ಬಳಲುತ್ತಿರುವ ಜನರು ತುಪ್ಪವನ್ನು ಸೇವನೆ ಮಾಡಬಾರದು.