
ಬೀಜಿಂಗ್(ಮೇ 10) ಲೈಂಗಿಕ ಕ್ರಿಯೆಯಿಂದ ಕೊರೋನಾ ಹರಡುತ್ತದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವವಾಗಿತ್ತು. ಇಲ್ಲ ಇದು ಸಾಧ್ಯವಿಲ್ಲ ಎಂದು ಅಧ್ಯಯನ ಹೇಳಿತ್ತು. ಆದರೆ ಅದೆಲ್ಲವನ್ನು ಮೀರಿಸುವ ಸುದ್ದಿಯೊಂದು ಬಂದಿದೆ.
ಚೀನಾದ ವಿಜ್ಞಾನಿಗಳು ಅಧ್ಯಯನ ವರದಿಯೊಂದನ್ನು ಮುಂದಿಟ್ಟಿದ್ದಾರೆ. ಕೊರೋನಾ ಸೋಂಕಿಗೆ ಗುರಿಯಾಗಿ ಚೇತರಿಸಿಕೊಂಡಿರುವ ಪುರುಷನ ವೀರ್ಯಾಣುವಿನಲ್ಲಿ ವೈರಸ್ ಕಂಡುಬಂದಿದೆ ಎಂದು ಹೇಳಿದ್ದಾರೆ.
ಚೀನಾದಲ್ಲಿ ಜನವರಿ ಎಂಡರ್ ಮತ್ತು ಫೆಬ್ರವರಿ ಆರಂಭದಲ್ಲಿ ಕೊರೋನಾ ಅವತಾರ ತೋರಿಸುತ್ತಿತ್ತು. ಈ ವೇಳೆ ಕೊರೋನಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದ 38 ಜನ ಪುರುಷರ ವೀರ್ಯವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಚೀನಾದ ಶಾಂಛ್ಯೂದ ಆಸ್ಪತ್ರೆಯಲ್ಲಿದ್ದ ಪುರುಷರ ವೀರ್ಯ ಪಡೆದುಕೊಳ್ಳಲಾಗಿತ್ತು.
ಬಾಯ್ ಫ್ರೆಂಡ್ ವೀರ್ಯವೇ ಕೊರೋನಾಕ್ಕೆ ಔಷಧ, ವಾರಕ್ಕೆ ಮೂರು ಸಾರಿ
ಶೇ. 16 ರೋಗಿಗಳ ವೀರ್ಯದಲ್ಲಿ ಕೊರೋನಾ ಅಂಶ ಕಂಡುಬಂದಿದೆ. ಅಂದರೆ 38 ಜನರಲ್ಲಿ ಆರು ಜನರ ವೀರ್ಯ ಕೊರೋನಾಕ್ಕೆ ತುತ್ತಾಗಿದೆ. ಇವರೆಲ್ಲರೂ ಕೊರೋಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತ ಇದ್ದವರು ಎಂಬುದು ಗಮನಾರ್ಹ ಸಂಗತಿ.
ಪುರುಷರು 15 ರಿಂದ 59 ವರ್ಷ್ ಒಳಗಿನವರು. ಹಾಗಾಗಿ ಲೈಂಗಿಕ ಕ್ರಿಯೆ ಮೂಲಕ ಹರಡುತ್ತದೆಯೋ? ಇಲ್ಲವೋ? ಎಂಬುದರ ಕುರಿತು ಸ್ಷಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.
ಇದು ಅಲ್ಲದೇ ಪುರುಷನ ವೀರ್ಯದಲ್ಲಿ 25 ವಿಭಿನ್ನ ವೈರಸ್ ಗಳು ಇರುವುದನ್ನು ಪತ್ತೆ ಮಾಡಲಾಗಿದೆ. ಹಾಗಾಗಿ ಲೈಂಗಿಕ ಕ್ರಿಯೆಯಿಂದ ಹರಡುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಇನ್ನು ಹೆಚ್ಚಿನ ಅಧ್ಯಯನ ಅಗತ್ಯ .
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.