ಕ್ಯಾನ್ಸರ್ ಪ್ರಕರಣಗಳಲ್ಲಿ, ಗರ್ಭಕಂಠದ ಕ್ಯಾನ್ಸರ್ (Cervical Cancer) ನಾಲ್ಕನೇ ಸ್ಥಾನದಲ್ಲಿದೆ. ಮಹಿಳೆ (Woman)ಯರಲ್ಲಿ ಉಂಟಾಗುವ ಸಾವಿನ (Death) ಪ್ರಮಾಣದಲ್ಲಿ ಸಹ ಗರ್ಭಕಂಠದ ಕ್ಯಾನ್ಸರ್ ನಾಲ್ಕನೇ ಸ್ಥಾನದಲ್ಲಿದೆ. ಮಹಿಳೆಯರ ಪಾಲಿಗೆ ಗರ್ಭಕಂಠದ ಕ್ಯಾನ್ಸರ್ ಅಷ್ಟರಮಟ್ಟಿಗೆ ಅಪಾಯಕಾರಿಯಾಗಿದೆ. ಸದ್ಯ ಗರ್ಭಕಂಠ ಕ್ಯಾನ್ಸರ್‌ಗೆ ಮೊದಲ ದೇಸೀ ಲಸಿಕೆ ಸಿದ್ಧವಾಗಿದೆ ಆ ಬಗ್ಗೆ ತಿಳಿಯೋಣ.
ದೇಹದ ಕೆಲವು ಅಂಗಾಂಶಗಳು ಅನಿಯಂತ್ರಿತವಾಗಿ ಬೆಳವಣಿಗೆ ಹೊಂದಿ ಇತರ ಅಂಗಗಳಿಗೂ ವ್ಯಾಪಿಸುವುದನ್ನು ಕ್ಯಾನ್ಸರ್ ಕಾಯಿಲೆ (Cancer Disease) ಎನ್ನಲಾಗುತ್ತದೆ. ಪುರುಷರು (Men) ಮತ್ತು ಮಹಿಳೆ (Woman)ಯರನ್ನು ಬಾಧಿಸುವ ನೂರಾರು ವಿಧದ ಕ್ಯಾನ್ಸರ್‌ಗಳಿವೆ. ಗರ್ಭಕಂಠದ ಕ್ಯಾನ್ಸರ್ (Cervical Cancer) ಅವುಗಳಲ್ಲಿ ಒಂದು. ಗ್ಲೊಬೊಕ್ಯಾನ್ 2020ರ ಪ್ರಕಾರ, ಪತ್ತೆಯಾಗುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ, ಗರ್ಭಕಂಠದ ಕ್ಯಾನ್ಸರ್ ನಾಲ್ಕನೇ ಸ್ಥಾನದಲ್ಲಿದೆ. ಮಹಿಳೆಯರಲ್ಲಿ ಉಂಟಾಗುವ ಸಾವಿನ (Death) ಪ್ರಮಾಣದಲ್ಲಿ ಸಹ ಗರ್ಭಕಂಠದ ಕ್ಯಾನ್ಸರ್ ನಾಲ್ಕನೇ ಸ್ಥಾನದಲ್ಲಿದೆ. ಮಹಿಳೆಯರ ಪಾಲಿಗೆ ಗರ್ಭಕಂಠದ ಕ್ಯಾನ್ಸರ್ ಅಷ್ಟರಮಟ್ಟಿಗೆ ಅಪಾಯಕಾರಿಯಾಗಿದೆ.
ಗರ್ಭಕಂಠ ಕ್ಯಾನ್ಸರ್‌ಗೆ ದೇಶದ ಮೊದಲ ಲಸಿಕೆಯ (Vaccine) ಮಾರಾಟಕ್ಕೆ ಅನುಮತಿ ಕೋರಿ ಸೀರಂ ಇನ್ಸಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಭಾರತೀಯ ಪ್ರಧಾನ ಔಷಧ ನಿಯಂತ್ರಕ ಸಂಸ್ಥೆಗೆ ಮನವಿ ಮಾಡಿದೆ. ಸೀರಂ ಸಂಸ್ಥೆ ದೇಸೀಯವಾಗಿ ಅಭಿವೃದ್ಧಿಪಡಿಸಿರುವ ಮೊದಲ ಕ್ಯಾಂಡ್ರಿವಾಲೆಂಟ್ ಹ್ಯೂಮನ್ ಪ್ಯಾಪಿಲೋಮಾ ವೈರಸ್ ವಾಕ್ಸಿನ್ ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅನೇಕ ಮಹಿಳೆಯರಿಗೆ ವರದಾನವಾಗಲಿದೆ.
ಕ್ಯಾನ್ಸರ್ ಬಗ್ಗೆ ಇನ್ನು ಭಯ ಬೇಕಿಲ್ಲ,ಔಷಧಿಯಿಂದ ಸಂಪೂರ್ಣ ಗುಣವಾಗುತ್ತೆ ಈ ಕಾಯಿಲೆ
ಪುಣೆ ಮೂಲದ ಈ ಸಂಸ್ಥೆಯು ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಈ ಲಸಿಕೆಯು ೨ ೩ ಕ್ಲಿನಿಕಲ್ ಪ್ರಯೋಗವನ್ನು ನಡೆಸಿ ಯಶಸ್ವಿಯಾಗಿದೆ. ಈ ಲಸಿಕೆಯು ಎಲ್ಲಾ ಬಗೆಯ ಎಚ್‌ಪಿವಿ ಮಾದರಿಗಳು ಮತ್ತು ಎಲ್ಲಾ ಡೋಸ್‌ಗಳಿಗಿಂತ ಇತರ ಔಷಧಿಗಳಿಗಿಂತ 1000 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಸೀರಂ ಸಂಸ್ಥೆಯ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ಮಹಿಳೆಯರು ಗರ್ಭಕಂಠ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ಇವರಲ್ಲಿ ಸಾವಿನ ಪ್ರಮಾಣವು ಅಧಿಕವಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಭಾರತದಲ್ಲಿ ಮಹಿಳೆಯರಲ್ಲಿ ಕಂಡು ಬರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಗರ್ಭಕಂಠ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಇದು 14 ರಿಂದ 44 ವರ್ಷ ವಯೋಮಾನದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ಮಹಿಳೆಯರನ್ನು ಈ ರೋಗದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಸಂಸ್ಥೆಯು ಇತರ ಜೀವ ಉಳಿಸುವ ಲಸಿಕೆಗಳ ರೀತಿಯಲ್ಲಿ ಕ್ಯುಹೆಚ್‌ಪಿವಿ ದೇಸೀಯ ಲಸಿಕೆಯನ್ನು ಅಭಿವೃದ್ಧಿ ಪಡಿಸುವ ಮೂಲಕ ದೇಶವನ್ನು ಆತ್ಮ ನಿರ್ಭರವಾಗಿಸುವುದಕ್ಕೆ ಬದ್ಧವಾಗಿದ್ದೇವೆ ಎಂದು ಸಿಂಗ್ ಡಿಸಿಜಿಐಗೆ ಅನುಮತಿ ಕೋರಿ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಸ್ತನ ಕ್ಯಾನ್ಸರಿಂದ ಚೇತರಿಸಿಕೊಂಡ ಪರದೇಸ್ ನಟಿ ಮಹಿಮಾ; 2 ತಿಂಗಳು ಮಗಳು ಸ್ಕೂಲ್‌ಗೆ ಹೋಗಿಲ್ಲ
ಹ್ಯೂಮನ್ ಪ್ಯಾಪಿಲೋಮವೈರಸ್ (ಟೈಪ್ 6,11,16 ಮತ್ತು 18) ಲಸಿಕೆ ಮರು ಸಂಯೋಜನಕದಿಂದ ಉಂಟಾಗುವ ಕ್ಯಾನ್ಸರ್‌ನ್ನು ತಡೆಗಟ್ಟುವುದನ್ನು ಖಚಿತಪಡಿಸುತ್ತದೆ ಎಂದು ಸಿಂಗ್ ಭರವಸೆ ನೀಡಿದ್ದಾರೆ.
ಇನ್ನು, ಕ್ಯಾನ್ಸರ್ (Cancer) ಇತಿಹಾಸದಲ್ಲಿ ಮೊದಲ ಬಾರಿಗೆ ಔಷಧಿ ಅಧ್ಯಯನದಲ್ಲಿ ತೊಡಗಿರುವ ಪ್ರತಿ ರೋಗಿಯಿಂದ ಗೆಡ್ಡೆಗಳು (Tumors) ಕಣ್ಮರೆಯಾಗಿವೆ. ಪ್ರಯೋಗವು 18 ಗುದನಾಳದ ಕ್ಯಾನ್ಸರ್ (Rectal Cancer) ರೋಗಿಗಳನ್ನು ಒಳಗೊಂಡಿತ್ತು, ಅವರೆಲ್ಲರೂ ಒಂದೇ ಔಷಧವನ್ನು ನೀಡಲಾಗಿತ್ತು. ಆಶ್ಚರ್ಯಕರವಾಗಿ, ಪ್ರತಿಯೊಬ್ಬ ರೋಗಿಯಲ್ಲಿ ಕ್ಯಾನ್ಸರ್ ಕಣ್ಮರೆಯಾಯಿತು ಮತ್ತು ದೈಹಿಕ ಪರೀಕ್ಷೆ, ಎಂಡೋಸ್ಕೋಪಿ ಅಥವಾ MRI ಸ್ಕ್ಯಾನ್‌ಗಳಿಂದ ಅದು ಪತ್ತೆಯಾಗಿಲ್ಲ. ಅಧ್ಯಯನದ ಫಲಿತಾಂಶಗಳನ್ನು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ (New England Journal of Medicine) ನಲ್ಲಿ ಪ್ರಕಟಿಸಲಾಗಿದೆ.
ನ್ಯೂಯಾರ್ಕ್ ಟೈಮ್ಸ್ (New York Times) ಸುದ್ದಿಯ ಪ್ರಕಾರ, ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಮಾಲಿಗ್ನೆನ್ಸಿ ಸೆಂಟರ್‌ನ ಡಾ. ಲೂಯಿಸ್ ಎ. ಡಯಾಜ್ ಜೂನಿಯರ್ (Dr. Luis A. Diaz Jr) ಅವರು ಹಿಂದಿನ ಯಾವುದೇ ಸಂಶೋಧನೆಯ ಬಗ್ಗೆ ತಿಳಿದಿರಲಿಲ್ಲ, ಇದರಲ್ಲಿ ಚಿಕಿತ್ಸೆಯು ಪ್ರತಿ ರೋಗಿಯಲ್ಲಿ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿತು. "ಕ್ಯಾನ್ಸರ್ ಇತಿಹಾಸದಲ್ಲಿ ಇದು ಮೊದಲ ಬಾರಿಗೆ ಸಂಭವಿಸಿದೆ ಎಂದು ನಾನು ನಂಬುತ್ತೇನೆ" ಎಂದು ಡಾ ಡಯಾಜ್ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದಾರೆ.