ಮಲಗುವಾಗ ಗಂಡಸರು ಅಂಡರ್‌ವೇರ್‌ ಒಳಗೆ ಕೈ ಹಾಕೋದ್ಯಾಕೆ? ಶ್ರೀ ಸೋಹಂ ಹೀಗಂತಾರೆ

By Suvarna News  |  First Published Apr 5, 2023, 2:39 PM IST

ಎಷ್ಟೋ ಜನ ಈ ಬಗ್ಗೆ ಹೇಳ್ಕೊಳ್ಳೋದಕ್ಕೆ ನಾಚ್ಕೊಳ್ತಾರೆ, ಮುಜುಗರ ಪಡ್ತಾರೆ. ಆದರೆ ಇದು ವಾಸ್ತವ. ಏನಂದರೆ ಎಷ್ಟೋ ಜನ ಗಂಡಸರು ಮಲಗುವಾಗ ತಮ್ಮ ಅಂಡರ್‌ವೇರ್‌ ಒಳಗೆ ಕೈ ಇಟ್ಟುಕೊಂಡು ಮಲಗುತ್ತಾರೆ. ಇದಕ್ಕೆ ಇಂಟರೆಸ್ಟಿಂಗ್ ಕಾರಣಗಳನ್ನು ಶ್ರೀ ಸೋಹಂ ಅಂತಲೇ ಫೇಮಸ್ ಆಗಿರೋ ವೀಡಿಯೋ ಕ್ರಿಯೇಟರ್‌, ಯೋಗಿ ಶ್ರೀ ಸೋಹಂ ಹೀಗಂತಾರೆ.


ಇನ್‌ಸ್ಟಾದಲ್ಲಿ ಶ್ರೀ ಸೋಹಂ ಅನ್ನೋರ ರೀಲ್ಸ್ ಸಖತ್ ಫೇಮಸ್. ಇನ್‌ಸ್ಟಾದಲ್ಲಿ ಆಕ್ಟಿವ್‌ ಇರೋರೆಲ್ಲ ಆಗಾಗ ಇವರ ವಾಲಲ್ಲಿ ಇಣುಕಿ ನೋಡ್ತನೇ ಇರ್ತಾರೆ. ವಂಡರಿಂಗ್‌ ಯೋಗಿ ಅಂತಲೇ ಇವ್ರು ಫೇಮಸ್. ಇವರು ಅನೇಕ ಪ್ರಶ್ನೆಗಳಿಗೆ ಮನ ಮುಟ್ಟೋ ಉತ್ತರ ಕೊಡ್ತಾರೆ. ಇವರ ರೀಲ್ಸ್ ಅನ್ನು ಜನ ಇಷ್ಟಪಟ್ಟು ನೋಡ್ತಾರೆ. ಇಲ್ಲಿ ಬರೋ ಪ್ರಶ್ನೆಗಳೆಲ್ಲ ನಾವು ನೀವು ರಿಯಲ್‌ ಲೈಫ್‌ನಲ್ಲಿ ಫೇಸ್ ಮಾಡಿರೋದು ನಮ್ಮನ್ನು ನಾವು ಕೇಳ್ಕೊಂಡಿರೋದೇ. ಆದರೆ ಅವಕ್ಕೆ ಸರಿಯಾದ ಉತ್ತರ ಸಿಗದೆ ಒದ್ದಾಟ ಮಾಡುತ್ತಿರುತ್ತೇವೆ. ಇಂಥಾ ಪ್ರಶ್ನೆಗಳಿಗೆ ಸೋಹಂ ಕೊಡೋ ಉತ್ತರ ಸಖತ್ತಾಗಿರುತ್ತೆ. ಕೆಲವೊಂದು ನಾವು ಮುಟ್ಟಿ ನೋಡ್ಕೊಳ್ಳೋ ಥರ ಇರುತ್ತೆ. ಆದರೆ ಅದರಲ್ಲೊಂದು ಪ್ರಾಮಾಣಿಕತೆ, ನೇರತನ ಇರೋ ಕಾರಣಕ್ಕೆ ಹಲವರಿಗೆ ಇಷ್ಟವಾಗುತ್ತೆ.

ಇಲ್ಲೊಬ್ಬ ಈ ಸೋಹಂ ಅವರಿಗೆ ಒಂದು ಪ್ರಶ್ನೆ ಕೇಳ್ತಾನೆ. ಅದು ಕೊಂಚ ವಿಯರ್ಡ್ ಅನಿಸೋ, ಮುಜುಗರ ತರಿಸೋ ಸಂಗತಿಯೇ. ಆದರೆ ಹಲವರು ತಮ್ಮ ಲೈಫಲ್ಲಿ ಅನುಭವಿಸ್ತಿರೋದು. ಆದರೆ ಅದ್ಯಾಕೆ ಹಾಗೆ ಅಂತ ಗೊತ್ತಿಲ್ಲದೇ ತಲೆ ಕೆರ್ಕೊಳ್ಳೋದು. 'ಗಂಡಸರು ಮಲಗುವಾಗ ತಮ್ಮ ಅಂಡರ್‌ವೇರ್‌ ಒಳಗೆ ಕೈ ಇಟ್ಕೊಂಡು ಮಲಗೋದ್ಯಾಕೆ?' ಅನ್ನೋದು ಪ್ರಶ್ನೆ. ಅದಕ್ಕೆ ಸೋಹಂ ಅವರು ನೀಡಿರೋ ಉತ್ತರ ವೈಜ್ಞಾನಿಕವಾಗಿದೆ.

Latest Videos

undefined

'ಎಲ್ಲ ಗಂಡಸರೂ ಮಲಗೋವಾಗ ತಮ್ಮ ಕೈಗಳನ್ನು ಅಂಡರ್‌ವೇರ್ ಒಳಗೆ ಇಟ್ಕೊಳ್ಳೋದಿಲ್ಲ. ಆದರೆ ಒಂದಿಷ್ಟು ಜನಕ್ಕೆ ಆ ಅಭ್ಯಾಸ ಇರುತ್ತೆ. ಅದಕ್ಕೆ ಮುಖ್ಯ ಕಾರಣ ಆ ಜಾಗದಲ್ಲಿ ಸಿಗೋ ಕಂಫರ್ಟ್ ಫೀಲ್. ನಮ್ಮ ಅಂಗೈ, ಪಾದ, ಕಿವಿಯ ಭಾಗಗಳಲ್ಲಿ ಅನೇಕ ನರಗಳಿರುತ್ತವೆ. ಅನೇಕ ನರಗಳ ಎಂಡಿಂಗ್‌ ಪಾಯಿಂಟ್ ಈ ಭಾಗಗಳಿರುತ್ತೆ. ಹೀಗಾಗಿ ಈ ಭಾಗಗಳಿಗೆ ಒಂದು ಬಗೆಯ ಕಂಫರ್ಟ್ ಆಗ, ಬೆಚ್ಚಗಿನ ಫೀಲ್ ಬೇಕಾಗಿರುತ್ತೆ. ಹೀಗಾಗಿ ಕೈಗಳನ್ನು ಮರ್ಮಾಂಗಗಳಲ್ಲಿ ಇಟ್ಟಾಗ ಒಂದು ಬಗೆಯ ಕಂಫರ್ಟ್ ಫೀಲ್ ಸಿಗುತ್ತದೆ. ಎರಡನೇ ರೀಸನ್‌ ಗಂಡಸರ ಜನನಾಂಗ, ಅಂದರೆ ವೃಷಣಗಳು ದೇಹದ ತಾಪಮಾನಕ್ಕೆ ತಕ್ಕ ಹಾಗೆ ತಮ್ಮ ಟೆಂಪರೇಚರ್‌ ಅನ್ನು ಮಾರ್ಪಾಡು ಮಾಡಿಕೊಳ್ಳುತ್ತ ಇರುತ್ತವೆ.

 

ಹೀಗಾಗಿ ವೃಷಣಗಳ ಗಾತ್ರ ಬದಲಾಗುತ್ತಲೇ ಇರುತ್ತದೆ. ಕೆಲವೊಮ್ಮೆ ಚಿಕ್ಕದಾಗಿದ್ದರೆ ಕೆಲವೊಮ್ಮೆ ಊದಿಕೊಂಡಂತೆ ಇರುತ್ತವೆ. ಕೆಲವೊಮ್ಮೆ ಬಿಗಿಯಾಗಿದ್ದರೆ ಕೆಲವೊಮ್ಮೆ ಜೋತು ಬಿದ್ದ ಹಾಗೆ ಇರುತ್ತವೆ. ಇದಕ್ಕೆ ದೇಹದ ಟೆಂಪರೇಚರ್ ಕಾರಣ, ನಿದ್ದೆ ಮಾಡುವಾಗ ದೇಹ ಕೂಲ್‌ ಆಗುತ್ತೆ. ಆದರೆ ಈ ನರ್ವ್ ಎಂಡ್‌ಗಳಿಗೆ ಕೊಂಚ ಬೆಚ್ಚನೆಯ ಟೆಂಪರೇಚರ್‌ ಬೇಕಾಗುತ್ತೆ. ಆಗ ಮತ್ತೆ ಕೈಗಳು ಆ ಭಾಗದತ್ತ ಹೋಗುತ್ತವೆ.

ಸಮಾಧಿಯಿಂದ ಹೊರತೆಗೆದ ಹೆಣವನ್ನೇ ಪ್ರೀತಿಸಿದ ವೈದ್ಯ, ಮೃತದೇಹದ ಜೊತೆ 7 ವರ್ಷದೈಹಿಕ ಸಂಬಂಧ ಹೊಂದಿದ್ದ!

ಇದರಲ್ಲಿ ದೊಡ್ಡ ಕಾರಣ ಇಲ್ಲ. ಇದು ಸಹಜ. ಇದರಲ್ಲಿ ಅಶ್ಲೀಲ ಅನಿಸುವಂಥದ್ದು ಏನೂ ಇಲ್ಲ. ಪ್ರಕೃತಿ ಸಹಜ (Normal). ಹೀಗಾಗಿ ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಇದನ್ನು ಸಹಜವಾಗಿ ತೆಗೆದುಕೊಳ್ಳಬಹುದು' ಎಂದು ಸೋಹಂ ಅವರು ಹೇಳ್ತಾರೆ.

ಹಾಗೆ ನೋಡಿದರೆ ಹಲವು ಮಂದಿ ಈ ಸಮಸ್ಯೆ ಫೇಸ್ ಮಾಡ್ತಿದ್ದರೂ ಈ ಬಗ್ಗೆ ಓಪನ್‌(Open) ಆಗಿ ಹೇಳಿಕೊಳ್ಳಲು ಮುಜುಗರ ಪಡ್ತಾರೆ. ಎಲ್ಲೋ ಸಾರ್ವಜನಿಕ ಜಾಗಗಳಲ್ಲಿ ಮಲಗಬೇಕಾದಾಗ ಎಲ್ಲಿ ಇನ್ನೊಬ್ಬರ ಕಣ್ಣಲ್ಲಿ ಕೆಟ್ಟವರಾಗುತ್ತೇವೋ ಅಂತ ಆತಂಕ ಪಡುತ್ತಾರೆ. ಜೊತೆಗೆ ಇದೊಂದು ಮಾನಸಿಕ ಸಮಸ್ಯೆ ಏನೋ ಅಂತ ಕಂಗಾಲಾಗೋದೋ ಇದೆ. ಆದರೆ ಸೋಹಂ ಅವರು ನ್ಯಾಚ್ಯುರೋಪಥಿಕ್‌ ಡಾಕ್ಟರೂ (Naturopathy doctor) ಆಗಿರೋ ಕಾರಣ ಅವರ ಮಾತುಗಳು ನಿಜವೇ ಆಗಿರುತ್ತವೆ. ಸೋ ಈ ಸಮಸ್ಯೆ ಇರುವವರು ಇನ್ನು ಮೇಲೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಆರಾಮವಾಗಿ ನಿದ್ರಿಸಬಹುದು.

Viral Video : ಓಡ್ತಿದ್ದ ಟ್ರೈನಿನಲ್ಲಿ ಡಾನ್ಸ್, ಯುವತಿಯ ಹುಚ್ಚಾಟ ಟ್ರೋಲ್

click me!