
ಮಗು ಜನಿಸಿದ ನಂತರ ಸಾಮಾನ್ಯವಾಗಿ ಅಮ್ಮನ ಕೂದಲು ಉದರಲು ಆರಂಭವಾಗುತ್ತದೆ. ಕೆಲವರಿಗೆ ಸ್ವಲ್ಪ ಕೂದಲು ಉದುರಿದರೆ, ಇನ್ನು ಕೆಲವರಿಗೆ ಹೆಚ್ಚಿನ ಪ್ರಮಾಣದ ಕೂದಲು ಉದುರುತ್ತದೆ. ಈ ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಹಾರ...
ಮೊಟ್ಟೆ ಬಿಳಿ ಭಾಗ: ಆಲಿವ್ ಎಣ್ಣೆಗೆ ಮೊಟ್ಟೆ ಬಿಳಿ ಭಾಗವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಕೂದಲಿಗೆ ಹಚ್ಚಿ. ಇದರಿಂದ ಕೂದಲು ಸಾಫ್ಟ್ ಆಗುತ್ತದೆ. ಜೊತೆಗೆ ಕೂದಲು ಉದರುವುದೂ ಕಡಿಮೆಯಾಗುತ್ತದೆ.
ಮೆಂತೆ: ಮೆಂತೆ ಹಲವು ವಿಧಗಳಲ್ಲಿ ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ. ಅದಕ್ಕಾಗಿ ಮೆಂತೆಯನ್ನು ರಾತ್ರಿ ನೀರಲ್ಲಿ ನೆನೆಸಿಡಿ. ಈ ನೀರನ್ನು ಬೆಳಗ್ಗೆ ಎದ್ದು ಕೂದಲಿಗೆ ಹಚ್ಚಿ, ಎರಡು ಗಂಟೆ ನಂತರ ತಲೆ ಸ್ನಾನ ಮಾಡಿ. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಜೊತೆಗೆ ಕೂದಲಿಗೆ ಯಾವುದೇ ಸಮಸ್ಯೆಯೂ ಕಾಡುವುದಿಲ್ಲ.
ಮೊಸರು : ಮೊಸರನ್ನು ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ತಲೆಹೊಟ್ಟೂ ನಿವಾರಣೆಯಾಗುತ್ತದೆ. ಕೂದಲು ಉದುರುವುದು ನಿಲ್ಲುತ್ತದೆ.
ಕಾಯಿ ಹಾಲು : ತೆಂಗಿನ ಕಾಯಿಯನ್ನು ಮಿಕ್ಸಿ ಮಾಡಿ ಅದರ ಹಾಲು ತೆಗೆದು ಕೂದಲಿನ ಬುಡಕ್ಕೆ ಹಚ್ಚಿ, ಮಸಾಜ್ ಮಾಡಿ. ಇದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.