* ಕೊರೋನಾ ಕಣ್ಣೀರ ಕತೆಗಳಿಗೆ ಕೊನೆ ಇಲ್ಲ
* ಗರ್ಭಿಣಿ ವೈದ್ಯೆಯ ಜೀವನ ಕೊಂಡೊಯ್ದ ಕೊರೋನಾ
* ಕೊರೋನಾದಿಂದ ಜಾಗೃತವಾಗಿರುವ ಸಂದೇಶ ಸಾರಿದ್ದರು
* ಹತ್ತು ದಿನಗಳ ನಂತರ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು
ನವದೆಹಲಿ(ಮೇ 12) ಡಾ. ಡಿಂಪಲ್ ಅರೋರಾ ವೃತ್ತಿಯಲ್ಲಿ ದಂತವೈದ್ಯೆ. ಏಪ್ರಿಲ್ ಆರಂಭದಲ್ಲಿ ಕೊರೋನಾ ಟೆಸ್ಟ್ ಮಾಡಿಸಿದಾಗ ಅವರಿಗೆ ಕೊರೋನಾ ಇರುವುದು ದೃಢವಾಗಿತ್ತು. ದಂತವೈದ್ಯೆ ಕೊರೋನಾ ಪಾಸಿಟಿವ್ ಆಗಬೇಕಿದ್ದರೆ ಏಳು ತಿಂಗಳ ಗರ್ಭಿಣಿ. ವೈರಸ್ ನೊಂದಿಗೆ ಕೆಲ ದಿನ ಹೋರಾಟ ಮಾಡಿ ಕೊನೆಗೆ ಶರಣಾದರು.
ಮೂರು ವರ್ಷದ ಮೊದಲನೇ ಮಗು ಮತ್ತು ಪತಿಯಿಂದ ಡಿಂಪಲ್ ಅವರನ್ನು ಕೊರೋನಾ ದೂರಮಾಡಿತು. ಸಾವಿಗೂ ಮುನ್ನ ಕೊರೋನಾ ಜಾಗೃತಿ ಸಾರುವ ವಿಡಿಯೋ ಒಂದನ್ನು ಮಾಡಿ ಹಂಚಿದ್ದರು. ಯಾವ ಕಾರಣಕ್ಕೂ ಈ ವೈರಸ್ ಲಘುವಾಗಿ ತೆಗೆದುಕೊಳ್ಳಬೇಡಿ ಎಂದು 34 ವರ್ಷದ ವೈದ್ಯೆ ಪರಪರಿಯಾಗಿ ತಿಳಿಸಿದ್ದರು.
undefined
ಗರ್ಭಿಣಿಯರು, ಬಾಣಂತಿಯರು ಲಸಿಕೆ ಪಡೆಯುವ ಹಾಗೆ ಇಲ್ಲ
ಏಪ್ರಿಲ್ 17 ರಂದು ವೈದ್ಯೆ ತಿಳಿಸಿದ್ದ ಸಂದೇಶವನ್ನು ಅವರ ಪತಿ ಇದೀಗ ಬಿಡುಗಡೆ ಮಾಡಿದ್ದಾರೆ. ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಆರೋಗ್ಯ ಕಾಪಾಡುವ ಸಲಹೆ ನೀಡುತ್ತಲೇ ನನ್ನಿಂದ ಆಕೆ ದೂರವಾಗಿದ್ದಾಳೆ ಎಂದು ಪತಿ ನೋವು ತೋಡಿಕೊಂಡಿದ್ದಾರೆ.
ಕೊರೋನಾ ಕಾಣಿಸಿಕೊಂಡ ಹತ್ತು ದಿನದ ನಂತರ ಆಕೆಗೆ ಉಸಿರಾಟದ ಸಮಸ್ಯೆ ಏಕಾಏಕಿ ಕಾಣಿಸಿಕೊಂಡಿತು. ಆಸ್ಪತ್ರೆಗೆ ದಾಖಲಿಸಿ ರೆಮಿಡಿಸಿವಿರ್ ನೀಡಲಾಯಿತು. ಪ್ಲಾಸ್ಮಾ ಚಿಕಿತ್ಸೆಯನ್ನು ಪ್ರಯತ್ನಿಸಲಾಯಿತು. ಆದರೆ ಅವಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪತಿ ನೋವಿನಿಂದ ತಿಳಿಸುತ್ತಾರೆ.
ದಯವಿಟ್ಟು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಸಾನಿಟೈಸ್ ಮಾಡಿಕೊಳ್ಳಿ ಎಂಬ ಸಂದೇಶವನ್ನು ನೀಡುತ್ತಲೇ ವೈದ್ಯೆ ದೂರವಾಗಿದ್ದಾರೆ. ಇನ್ನೊಂದು ಮಹತ್ವದ ವಿಚಾರವೂ ಇಲ್ಲಿದೆ. ಗರ್ಭಿಣಿ ಮತ್ತು ಬಾಣಂತಿಯರ ಮೇಲೆ ಲಸಿಕೆಯ ಕ್ಲಿನಿಕಲ್ ಟ್ರಾಯಲ್ ನಡೆದಿಲ್ಲ. ಇವೆರಡು ಗುಂಪುಗಳಿಗೆ ಲಸಿಕೆ ನೀಡುವುದು ಸದ್ಯದ ಒಂದು ಸವಾಲು .
Her official name was Dr. Dimple Arora (Chawla). Fondly known to her family and friends by the name Dipika.
IAPHD - Indian Association of Public Health Dentists
died with covid19 with her unborn child
🇮🇳😢😥🇮🇳 pic.twitter.com/JxbXfYHfvS