
ಮನುಷ್ಯನ ದೈಹಿಕ(Physical) ಹಾಗೂ ಮಾನಸಿಕ(Mentally) ಆರೋಗ್ಯದ ಮೇಲೆ ಸಂಗೀತ(Music) ಎಂಬುದು ಬಹಳ ಪರಿಣಾಮ ಬೀರುತ್ತದೆ. ಮೂಡ್ ಔಟ್ ಆದಾಗ, ಕೆಲಸ ಮಾಡುವಾಗ, ಖುಷಿಯಲ್ಲಿದ್ದಾಗ, ಡ್ರೆöÊವ್(Drive) ಮಾಡುವಾಗ ಸಾಮಾನ್ಯವಾಗಿ ಸಂಗೀತ ಕೇಳುತ್ತೇವೆ. ಈ ಸಮಯದಲ್ಲೆಲ್ಲಾ ಮತ್ತುಷ್ಟು ಆನಂದ ಮೂಡುತ್ತದೆ. ಕಾರ್ ಓಡಿಸುವಾಗ ಸಂಗೀತ ಕೇಳುತ್ತೇವೆ, ಕೆಲವರು ಆಯವ್ರೇಜ್ ಸ್ಪೀಡ್‌ನಲ್ಲಿ(Average Speed) ಇದ್ದವರು ಒಂದೇ ಸಮನೆ ಸ್ಪೀಡ್ ಹೆಚ್ಚಿಸುತ್ತಾರೆ. ಕಾರಣ ಹಾಡು ಕೇಳುತ್ತಿದ್ದರೆ ಜೋಶ್(Josh) ಮತ್ತಷ್ಟು ಹೆಚ್ಚಿಸುವಂತೆ ಮಾಡುತ್ತದೆ.
ಸಂಗೀತವನ್ನು ಮಾನವೀಯತೆಯ(Humanity) ಸಾರ್ವತ್ರಿಕ ಭಾಷೆ(Language) ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ ಜನರ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಪರಿಸರ(Environment) ಹಾಗೂ ಮನಸ್ಥಿತಿಯ(Mentally) ಮೇಲೆ ಧನಾತ್ಮಕ ಪರಿಣಾಮ(Positive) ಬೀರುತ್ತದೆ. ಹಲವು ಆಯಾಮಗಳಿಂದ ಜನರನ್ನು ಹಿಡಿದಿಡುವ(Control) ಶಕ್ತಿ ಸಂಗೀತಕ್ಕಿದೆ. ಯೋಗದಂತೆಯೇ ಸಂಗೀತವೂ ನಮ್ಮ ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಒತ್ತಡ(Stress), ನೋವು(Pain), ಪರಿಶ್ರಮ, ವ್ಯಾಕುಲತೆ ಮತ್ತು ನಮ್ಮ ದೈನಂದಿನ ಜೀವನದಲ್ಲಿ ಸಕಾರಾತ್ಮಕತೆ ಮತ್ತು ಶಾಂತತೆಯನ್ನು(Calm) ತರುತ್ತದೆ. ಹಾಗಾದರೆ ಯೋಗ ಮತ್ತು ಸಂಗೀತ ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮಬೀರುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
Health Tips : ಯೋಗ ಮಾಡುವ ಮೊದಲು ಸಮಯದ ಬಗ್ಗೆ ತಿಳಿಯಿರಿ
ಯೋಗ ಮತ್ತು ಸಂಗೀತ
ಯೋಗ ಎಂಬುದು ಯುನಿವರ್ಸಲ್(Universal) ಆಗಿದ್ದು, ಅದಕ್ಕೆ ತನ್ನದೇ ಆದ ಒಂದು ರಿದಮ್(Rhythm) ಮತ್ತು ವೇಗವಿದೆ. ಕ್ಲಾಸ್ ರೂಮ್ ಅಥವಾ ಸ್ವತಃ ನೀವೇ ಯೋಗಾಭ್ಯಾಸ ಮಾಡುತ್ತಿದ್ದು, ಹಿಂಬದಿಯಲ್ಲಿ(Background) ಒಂದು ಮ್ಯೂಸಿಕ್ ಪ್ಲೇ(Music Play) ಆಗುತ್ತಿದ್ದರೆ ರೂಮ್‌ನ ವಾತಾವರಣ ಸುಂದರವಾಗಿರುತ್ತದೆ. 4/4 ಟೆಂಪೋದಲ್ಲಿ ಮೆಲೋಡಿ ಮ್ಯೂಸಿಕ್‌ನೊಂದಿಗೆ(Melody Music) ಯೋಗ ಮಾಡುತ್ತಿದ್ದರೆ ಇದು ಜೀರ್ಣಕ್ರಿಯೆಗೆ(Digestion) ಸುಲಭವಾಗುವಂತೆ ಮಾಡುತ್ತದೆ. ಅದೇ ಯೋಗ ಮಾಡುವಾಗ ಜೋರಾದ ಶಬ್ಧ(Loud Voice) ಇರುವ ಮ್ಯೂಸಿಕ್ ಇದ್ದರೆ ಅದು ತದ್ವಿರುದ್ಧದ ಪರಿಣಾಮ ದೇಹದ ಮೇಲಾಗುತ್ತದೆ.
ಏಕಾಗ್ರತೆ ಸುಧಾರಿಸುತ್ತದೆ
ಸಂಗೀತವು ನಮ್ಮ ಏಕಾಗ್ರತೆಯನ್ನು(Concentration) ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಯಾವುದೇ ಕೆಲಸ ಮಾಡುವಾಗ ಸಂಗೀತದೊAದಿಗೆ ಮಾಡಿದರೆ ನಿಮ್ಮ ಏಕಾಗ್ರತೆ ತಾನಾಗಿಯೇ ಹೆಚ್ಚಾಗುತ್ತದೆ. ಮ್ಯೂಸಿಕ್ ಇಲ್ಲದೆ ಯೋಗ ಮಾಡಿದರೆ ಹಲವು ಅಡೆತಡೆಗಳು(Disturbance) ಬರಬಹುದು. ಆದರೆ ಮ್ಯೂಸಿಕ್‌ನೊಂದಿಗೆ ಯೋಗ ಮಾಡಿದರೆ ಅಡೆತಡೆಗಳನ್ನು ದೂರ ಮಾಡುತ್ತದಲ್ಲದೆ ಏಕಾಗ್ರತೆಯನ್ನೂ ಹೆಚ್ಚಿಸುತ್ತದೆ.
ಮೂಡ್ ಬೂಸ್ಟ್
ಯೋಗದೊಂದಿಗೆ ಸಂಗೀತ ಸೇರಿದರೆ ನಮ್ಮಲ್ಲಿನ ಮನಸ್ಥಿತಿಯನ್ನು(Mental Ability) ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಸಂತೋಷವನ್ನು ನೀಡುತ್ತದೆ ಮತ್ತು ಯೋಗದ ಹೆಚ್ಚಿನ ಪ್ರಯೋಜನಗಳನ್ನು ಆನಂದಿಸುವAತೆ(Enjoy) ಮಾಡುತ್ತದೆ.
ಸಂಗೀತ ಮತ್ತು ಉಸಿರಾಟ
ಉಸಿರಾಟದ ಲಯವನ್ನು ಗತಿಗಳ(Rhythm) ಆಧಾರದ ಮೇಲೆ ಲಾಕ್(Lock) ಮಾಡಬಹುದು. ಅಂದರೆ ಸಾಮಾನ್ಯಾವಗಿ ಯೋಗ ಮಾಡುವಾಗ ಉಸಿರನ್ನು(Breath) ಬಿಗಿಯಾಗಿ ಇಟ್ಟುಕೊಳ್ಳಲಾಗುತ್ತದೆ. ಹೀಗೆ ಮಾಡುವುದು ತಪ್ಪು. 4/4 ಟೆಂಪೋದಲ್ಲಿ ಯೋಗವನ್ನು ಸುಲಭವಾಗಿ ಮಾಡಬಹುದು ಮತ್ತು ನಿಮ್ಮ ಉಸಿರನ್ನು ಬೀಟ್‌ಗೆ ಸಿಂಕ್ರೊನೈಸ್ ಮಾಡಬಹುದು. ಆರೋಗ್ಯಕರ ಡಯಾಫ್ರಾಮ್ ಉಸಿರಾಟದ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಶಬ್ದಗಳು ಸಕಾರಾತ್ಮಕ ಭಾವನೆಗಳನ್ನು(Emotional) ಉಂಟುಮಾಡಿದರೆ, ನೀವು ಆಳವಾದ, ಹೆಚ್ಚು ಅರ್ಥಪೂರ್ಣವಾದ ಯೋಗ ನಿಮ್ಮದಾಗಬಹುದು. ಸಂಗೀತದೊAದಿಗೆ ಯೋಗ ಮಾಡಿದರೆ ಆರಾಮದಾಯಕ ನೀಡುವುದಲ್ಲದೆ, ಉಸಿರು ಬಿಗಿಯಾಗಿಡುವ ಅವಶ್ಯಕತೆ ಇರುವುದಿಲ್ಲ.
ಧ್ಯಾನ ಮಾಡಿ ಖಿನ್ನತೆ ದೂರ ಮಾಡಿ
ಮ್ಯೂಸಿಕ್ ಜೊತೆ ಯೋಗ ಮಾಡುವುದರಿಂದ ಪ್ರಯೋಜನಗಳು
1. ಸಂಗೀತದೊAದಿಗೆ ಯೋಗ ಮಾಡುವುದರಿಂದ ಹೆಚ್ಚು ಪ್ರಯತ್ನಕ್ಕೆ(Effort) ತಳ್ಳುತ್ತದೆ. ಇದರಿಂದ ನಿದ್ರೆ(Sleep) ಚೆನ್ನಾಗಿ ಬರುತ್ತಲ್ಲದೆ ಕುಣಿಯುವಂತೆಯೂ ಮಾಡುತ್ತದೆ.
2. ಸಂಗೀತದೊAದಿಗೆ ಯೋಗ ಮಾಡುವುದನ್ನು ಏರೋಬಿಕ್ಸ್(Aerobics) ಎನ್ನುತ್ತಾರೆ. ಅಂದರೆ ಹಾಡಿನೊಂದಿಗೆ ಯೋಗ ಮಾಡುವುದು ಎಂದು. ಹೀಗೆ ಮಾಡುವುದರಿಂದ ಗುರಿಗಳನ್ನು ತಲುಪಲು ಮತ್ತು ಹೆಚ್ಚು ಪ್ರಯತ್ನಿಸಲು ನಮ್ಮನ್ನು ತಳ್ಳುವ ಮೂಲಕ ನಮ್ಮ ಅಥ್ಲೆಟಿಕ್(Athletic) ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.
3. ಕೆಲ ಸಂಗೀತವನ್ನು ಕೇಳಿದರೆ ತಕ್ಷಣ, ರಾಸಾಯನಿಕಗಳು(Chemicals) ದೇಹದಾದ್ಯಂತ ಮೆದುಳಿನಿಂದ(Brain) ಬಿಡುಗಡೆಯಾಗುತ್ತವೆ. ನಮ್ಮ ಭಾವನೆಗಳು(Emotions) ಮತ್ತು ಮನಸ್ಥಿತಿಯನ್ನು ಏಕಕಾಲದಲ್ಲಿ ಬದಲಾಯಿಸುತ್ತವೆ. ಇದಕ್ಕಾಗಿಯೇ ಜನರು ತಮ್ಮ ನೆಚ್ಚಿನ ಹಾಡು ಕ್ಲಬ್‌ನಲ್ಲಿ ಅಥವಾ ಮದುವೆಯಲ್ಲಿ ಬಂದಾಗ ಹುಚ್ಚರಾಗುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.