ವ್ಯಾಸೆಕ್ಟಮಿ ಮಾಡಿಸಿಕೊಳ್ಳುತ್ತಿರುವ ಆಸೀಸ್ ಪುರುಷರು.. ಎಲ್ಲಾ ಕೊರೋನಾ ಲೀಲೆ!

By Suvarna NewsFirst Published Dec 29, 2020, 7:58 PM IST
Highlights

ಆಸ್ಟ್ರೇಲಿಯಾದಲ್ಲಿ ಹೆಚ್ಚಾದ ವ್ಯಾಸೆಕ್ಟಮಿ/ ನೋವು ರಹಿತ ಚಿಕಿತ್ಸೆಗೆ ಪುರುಷರ ಒಲವು/ ಹೆಣ್ಣಿಗೆ ನೋವು ಕಡಿಮೆ ಮಾಡೋ ಉದ್ದೇಶ/ ತಪ್ಪು ಕಲ್ಪನೆಗಳ ನಡುವೆಯೂ ಈ ನಡೆ

ಬ್ರಿಸ್ಬೇನ್(ಡಿ.29)  ಈ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಬಗ್ಗೆ ಸಾಕಷ್ಟು ತಪ್ಪು ಅಭಿಪ್ರಾಯಗಳಿವೆ. ಅದರಲ್ಲಿಯೂ ಪುರುಷರು ಈ ಚಿಕಿತ್ಸೆಗೆ ಒಳಗಾಗುವುದು ಭಾರತದಲ್ಲಿ ಮಾತ್ರವಲ್ಲ, ಇತರೆ ರಾಷ್ಟ್ರಗಳಲ್ಲಿಯೂ ಕಡಿಮೆಯೇ.  ಆದರೆ ಇದಕ್ಕೆ ಅಪವಾದವೆಂಬಂತೆ ಹೆಚ್ಚೆಚ್ಚು ಪುರುಷರು ಆಸ್ಚ್ರೇಲಿಯಾದಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರಂತೆ. 

ಆ ಮೂಲಕ ಹೆಣ್ಣಿಗೆ ಮತ್ತಷ್ಟು ನೋವು ನೀಡುವುದನ್ನು ಕಡಿಮೆ ಮಾಡುತ್ತಿದ್ದೇವೆ ಎಂದು ಪುರುಷರು ಹೆಮ್ಮೆ ಪಡುತ್ತಿದ್ದಾರೆ.  ಮಹಿಳೆಯರು ಮಾಡಿಸಿಕೊಳ್ಳುವ ಆಪರೇಷನ್ ಹೆಚ್ಚು ನೋವು ಕೊಡುತ್ತದೆ. ಆದರೆ, ವ್ಯಾಸೆಕ್ಟಮಿ ನೋವು ರಹಿತ ಚಿಕಿತ್ಸೆ. ಅದನ್ನು ಮಾಡಿಸಿಕೊಳ್ಳಲು ಪುರುಷರು ಹಿಂದೇಟು ಹಾಕಬಾರದು ಎಂಬುವುದು ಆಸ್ಟ್ರೇಲಿಯಾ ಪುರುಷರ ಅಂಬೋಣ.

sex ಪ್ರಾಮುಖ್ಯತೆ ಬಗ್ಗೆ ವಿಜ್ಞಾನ ಏನು ಹೇಳುತ್ತದೆ?

ಕೊರೋನಾ  ಕಾಲದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಂಖ್ಯೆ ಹೆಚ್ಚಾಗಿದೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.  ಎಲ್ಲರಿಗೂ ಗೊತ್ತಿರುವಂತೆ  ಈ ಚಿಕಿತ್ಸೆಯಿಂದ ಲೈಂಗಿಕ ಅಂಗದ ಮೇಲೆ ಯಾವುದೆ ಪರಿಣಾಮ ಆಗುವುದಿಲ್ಲ

ವ್ಯಾಸೆಕ್ಟಮಿ  ಎಂದರೇನು?
ವ್ಯಾಸೆಕ್ಟಮಿ ಎಂದರೆ ಸರಳವಾಗಿ  ಪುರುಷರ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ ಎನ್ನಬಹುದು.  ಸಂತಾನೋತ್ಪತ್ತಿಯನ್ನು ಶಾಶ್ವತವಾಗಿ ತಡೆಗಟ್ಟಲು ಇದೊಂದು ತೀರ ಚಿಕ್ಕ ಶಸ್ತ್ರಚಿಕಿತ್ಸೆ. ವ್ಯಾಸೆಕ್ಟಮಿ ಮಾಡಲು ಕಡಿಮೆ ಸಮಯ ಸಾಕು. ಪುರುಷರಿಗೆ ಇದರಿಂದ ಹೆಚ್ಚು ತೊಂದರೆಯೂ ಆಗುವುದಿಲ್ಲ. ಆಸ್ಪತ್ರೆಯಲ್ಲಿಯೂ ಇರಬೇಕಾಗಿಲ್ಲ.

 ವ್ಯಾಸೆಕ್ಟಮಿ ಮಾಡಿಸಿಕೊಂಡ ವ್ಯಕ್ತಿಯು ಒಂದು ಗಂಟೆಯಲ್ಲಿ ಮನೆಗೆ ಹೋಗಬಹುದು. ಅನುಭವಸ್ಥರಾದ ವೈದ್ಯರು ಚಾಕುವನ್ನು ಬಳಸಿ ವೃಷಣ ಕೋಶದಲ್ಲಿ ಒಂದು ಚಿಕ್ಕ ಗೀರನ್ನು ಕೊರೆಯುತ್ತಾರೆ ಮತ್ತು ಎರಡೂ ಪಕ್ಕದ ನಾಳಗಳನ್ನು ಹುಡುಕುತ್ತಾರೆ. ನಾಳಕ್ಕೆ ಗಂಟು ಹಾಕಿ, ವೀರ್ಯಾಣುಗಳು ವೀರ್ಯ ಚೀಲವನ್ನು ತಲಪದಂತೆ ತಡೆ  ಒಡ್ಡುವ ಕೆಲಸ ಮಾಡಲಾಗುತ್ತದೆ. ಇನ್ನೊಂದು ವಿಧಾನದಲ್ಲಿ ಒಂದು ಸೂಜಿಯಿಂದ ಚುಚ್ಚಲಾಗುತ್ತದೆ. ಇದಕ್ಕೆ 10-15 ನಿಮಿಷಗಳು ಮಾತ್ರ ಸಾಕು.

click me!