ಮಕ್ಕಳಿಗೂ ಮಂಕಿಪಾಕ್ಸ್ ಹರಡುವ ಭೀತಿ, ರೋಗಲಕ್ಷಣಗಳ ಬಗ್ಗೆ ನಿಮಗೆ ಗೊತ್ತಿರಲಿ

By Suvarna News  |  First Published May 27, 2022, 1:17 PM IST

ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್‌ನ (Corona Virus) ಪ್ರಭಾವ ಸ್ಪಲ್ಪ ಮಟ್ಟಿಗೆ ಕಡಿಮೆಯಾಗಿರುವಾಗಲೇ  ಸೋಂಕಿತ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದ ವೈರಸ್ ಮಂಕಿಪಾಕ್ಸ್‌ನ (Monkeypox) ಪ್ರಕರಣಗಳು ಹೆಚ್ಚಾಗ್ತಿದೆ. ಅದರಲ್ಲೂ ಮಕ್ಕಳಿಗೂ (Children) ಸೋಂಕು (Virus) ಹರಡುವ ಭೀತಿ ಹೆಚ್ಚಾಗಿದೆ. ಇದರ ರೋಗ ಲಕ್ಷಣಗಳೇನು ತಿಳಿದುಕೊಳ್ಳೋಣ.


ಬ್ರಿಟನ್‌ ಮತ್ತು ಇತರ ಕೆಲವು ದೇಶಗಳಲ್ಲಿ ಮಂಕಿಪಾಕ್ಸ್ (Monkeypox) ಪ್ರಕರಣಗಳು ಹೆಚ್ಚುತ್ತಿವೆ. ಹೀಗಿರುವಾಗ ವೈರಲ್ (Viral) ಝೂನೋಟಿಕ್ ರೋಗಲಕ್ಷಣಗಳ ಬಗ್ಗೆ ಎಲ್ಲಾ ವಿಚಾರಗಳನ್ನು ತಿಳಿದಿರುವುದು ಮುಖ್ಯ. ಇಲ್ಲಿಯವರೆಗೆ ಹೆಚ್ಚಾಗಿ ಹಿರಿಯರಲ್ಲಿ ಮಾತ್ರ ಮಂಕಿಪಾಕ್ಸ್ ಸೋಂಕು ಕಾಣಿಸಿಕೊಂಡಿದೆ. ಆದರೆ ಇದು ಮಕ್ಕಳಲ್ಲಿ (Children) ಕಾಣಿಸಿಕೊಳ್ಳಬಾರದು ಅಂತೇನಿಲ್ಲ. ಹೀಗಾಗಿ ಮುಂಚಿತವಾಗಿಯೇ ಮಕ್ಕಳಲ್ಲಿ ಮಂಕಿಪಾಕ್ಸ್ ಹರಡದಂತೆ ಕಾಳಜಿ (Care) ವಹಿಸುವುದು ಮುಖ್ಯ. ಅದರಲ್ಲೂ ವಿಶೇಷವಾಗಿ, ಮಕ್ಕಳಲ್ಲಿ ಮಂಕಿಪಾಕ್ಸ್ ರೋಗ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಂಡಿರಬೇಕು.

ಮಂಕಿಪಾಕ್ಸ್‌ ಇತ್ತೀಚಿಗೆ ಏಕಾಏಕಿ ಆತಂಕಕ್ಕೆ ಕಾರಣವಾಗಿದೆ. ಆದರೂ, ಜನರು ಭಯಭೀತರಾಗಬೇಕಾದ ಅವಶ್ಯಕತೆ ಇಲ್ಲ. ಈ ವೈರಸ್ ಕೋವಿಡ್‌ನಂತೆ ಗಂಭೀರವಾಗಿಲ್ಲ.. ಬ್ರಿಟನ್‌ನಲ್ಲಿ ಮೇ ತಿಂಗಳ ಆರಂಭದಲ್ಲಿ ಬಂದ ಮಂಕಿಪಾಕ್ಸ್‌ನ ಲಕ್ಷಣಗಳನ್ನು ಗಮನಿಸಿದರೆ, ದದ್ದುಗಳು, ಜ್ವರ ಮತ್ತು ಶಾರೀರಿಕ ನೋವು ಸಾಮಾನ್ಯ ಗುಣಲಕ್ಷಣಗಳಾಗಿವೆ ಎಂದು ತಜ್ಞರು ಹೇಳುತ್ತಾರೆ.  ಮಂಕಿ ಪಾಕ್ಸ್ ಸೋಂಕಿನ ಅಪಾಯವು ಮಕ್ಕಳಲ್ಲಿ ಅಪರೂಪ. ಇದ್ದರೂ ಸೌಮ್ಯವಾಗಿರುತ್ತದೆ. ಚಿಕನ್ ಪಾಕ್ಸ್ ಗುಣಲಕ್ಷಣಗಳನ್ನೇ ಇದು ಹೋಲಬಹುದು. ಮಕ್ಕಳಲ್ಲಿ ಮಂಕಿಪಾಕ್ಸ್ ಕೆಲವು ದದ್ದುಗಳು, ಜ್ವರ ಮತ್ತು ನೋವು ಇತ್ಯಾದಿ ಲಕ್ಷಣಗಳನ್ನು ತೋರಿಸಬಹುದು. ಮಂಕಿಪಾಕ್ಸ್‌ ಕುರಿತು ಜಾಗೃತಿ ಮೂಡಿಸುವ ಕೆಲಸ ಶುರುವಾಗಬೇಕಾಗಿದೆ ಎಂದು ಫರೀದಾಬಾದ್‌ನ ಅಮೆರಿಕ ಹೆಲ್ತ್‌ ಏಷ್ಯನ್‌ ಹಾಸ್ಪಿಟಲ್‌ನ ಸಾಂಕ್ರಾಮಿಕ ರೋಗಗಳ ತಜ್ಞ ಡಾ.ಚಾರುದತ್‌ ಹೇಳಿದರು.

Tap to resize

Latest Videos

ಮಂಕಿಪಾಕ್ಸ್ ರೋಗದ ಕುರಿತ ನಿಮ್ಮೆಲ್ಲ ಪ್ರಶ್ನೆಗಳಿಗೆ ತಜ್ಞ ವೈದ್ಯರ ಉತ್ತರ..

ಮಂಕಿಪಾಕ್ಸ್ ಕಾಯಿಲೆ ಎಂದರೇನು ?
ಯುನೈಟೆಡ್ ಸ್ಟೇಟ್ಸ್‌ನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಪ್ರಕಾರ, ಮಂಕಿಪಾಕ್ಸ್ ವೈರಸ್ ಸೋಂಕಿನಿಂದ ಉಂಟಾಗುವ ಅಪರೂಪದ ಕಾಯಿಲೆಯಾಗಿದೆ. ಮಂಕಿಪಾಕ್ಸ್ ವೈರಸ್ ಪಾಕ್ಸ್‌ವಿರಿಡೆ ಕುಟುಂಬದಲ್ಲಿ ಆರ್ಥೋಪಾಕ್ಸ್‌ವೈರಸ್ ಕುಲಕ್ಕೆ ಸೇರಿದೆ ಎಂದು ಅದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಝೂನೋಟಿಕ್ ಕಾಯಿಲೆಯು ಪ್ರಾಥಮಿಕವಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಉಷ್ಣವಲಯದ ಮಳೆಕಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ ಮತ್ತು ಸಾಂದರ್ಭಿಕವಾಗಿ ಇತರ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ.

ಮಕ್ಕಳಲ್ಲಿ ಮಂಕಿಪಾಕ್ಸ್ ರೋಗ ಲಕ್ಷಣಗಳೇನು ?
ಮಂಕಿಪಾಕ್ಸ್ ಸೋಂಕು ಊತ ಮತ್ತು ತೀವ್ರ ನಿಶ್ಶಕ್ತಿಗಳನ್ನು ಸಹ ಹೊಂದಿದೆ. ದದ್ದು ಉಳಿದ ಪಾಕ್ಸ್‌ ರೋಗಗಳ ದದ್ದಿಗಿಂತ ಭಿನ್ನ. ಇದು ಮುಖದಿಂದಲೇ ಆರಂಭವಾಗುತ್ತದೆ. ನಂತರ ಅಂಗೈಗಳು ಮತ್ತು ಪಾದಗಳಿಗೆ ಹರಡುತ್ತದೆ ಮತ್ತು ದ್ರವದಿಂದ ತುಂಬಿದ ಗುಳ್ಳೆಗಳಲ್ಲಿ ಇವು ಇರುತ್ತವೆ. ಅಂತಿಮವಾಗಿ ಉದುರಿಹೋಗುತ್ತದೆ. ರೋಗಲಕ್ಷಣಗಳು 2-4 ವಾರಗಳವರೆಗೆ ಇರುತ್ತದೆ ಎಂದು ಡಾ. ಅರೋರಾ ಹೇಳುತ್ತಾರೆ.

ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ, ಜ್ವರವು ಸಾಮಾನ್ಯವಾಗಿ 2-3 ನೇ ದಿನ (102 ಡಿಗ್ರಿ ತಲುಪುತ್ತದೆ) ಹೆಚ್ಚಾಗುತ್ತದೆ. ದದ್ದುಗಳು ಸಾಮಾನ್ಯವಾಗಿ 3 ಅಥವಾ 4ನೇ ದಿನದಿಂದ ಪ್ರಾರಂಭವಾಗಿ, ಉಲ್ಬಣವಾಗಿ ನಂತರ ಕ್ಷೀಣಿಸುತ್ತದೆ. ಮಕ್ಕಳಲ್ಲಿ, ಇದರಿಂದಾಗಿ ಬಳಲಿಕೆ ಮತ್ತು ಸುಸ್ತುಗಳಿಂದ ಕೂಡಿದ ಆರೋಗ್ಯ ಸಮಸ್ಯೆ ಕಾಣಿಸುತ್ತದೆ. ಜ್ವರನಿವಾರಕಗಳೊಂದಿಗೆ ಜಲಸಂಚಯನ ಮತ್ತು ದ್ರವದ ನಿರ್ವಹಣೆ ಮಕ್ಕಳಿಗೆ ಅವಶ್ಯಕ ಎಂದು ಡಾ. ಅರೋರಾ ವಿವರಿಸಿದರು.

ಲೈಂಗಿಕ ಸಂಪರ್ಕದ ಮೂಲಕವೂ ಹರಡುತ್ತಂತೆ ಮಂಕಿಪಾಕ್ಸ್ ವೈರಸ್ !

ಮಂಕಿಪಾಕ್ಸ್ ಸೋಂಕು ಹರಡುವುದನ್ನು ತಡೆಗಟ್ಟಲು ಏನು ಮಾಡಬೇಕು ?

* ಯಾವಾಗಲೂ  ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವುದು. ಸಾಬೂನು ಮತ್ತು ನೀರು ಅಥವಾ ಅಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್‌ನಿಂದ ಕೈಗಳನ್ನು ತೊಳೆಯುತ್ತಿರುವುದು

* ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದನ್ನು ತಡೆಗಟ್ಟಬೇಕು.

* ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು

* ರಾಶಸ್‌ ಹೊಂದಿರುವವರೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳಬಾರದು

* ಅನಾರೋಗ್ಯದ ರೋಗಿಯ ಯಾವುದೇ ದ್ರವ ಅಥವಾ ವಸ್ತುವಿನ ಸಂಪರ್ಕ ಮಾಡಬಾರದು.

click me!