Moment Before Death: ಸಾಯೋ ಮುನ್ನ ವ್ಯಕ್ತಿಗೆ ಏನಾಗುತ್ತದೆ? ಸಾವು ಮುನ್ನೆಚ್ಚರಿಕೆ ಸಿಗುತ್ತಾ?

Published : Jun 20, 2022, 05:38 PM IST
Moment Before Death: ಸಾಯೋ ಮುನ್ನ ವ್ಯಕ್ತಿಗೆ ಏನಾಗುತ್ತದೆ? ಸಾವು ಮುನ್ನೆಚ್ಚರಿಕೆ ಸಿಗುತ್ತಾ?

ಸಾರಾಂಶ

ಸಾವು ಎದುರಾದಾಗ ಮನುಷ್ಯನಿಗೆ ಯಾವ ಅನುಭವ ಆಗಬಹುದು? ದೇಹದಲ್ಲಿ ಏನೆಲ್ಲ ಬದಲಾವಣೆ ಆಗಬಹುದು? ಎಂಡಾರ್ಫಿನ್‌ ಬಿಡುಗಡೆಯಾಗುವ ಮೂಲಕ ಅವರು ಹಿತಾನುಭವ ಪಡೆಯುತ್ತಾರೆಯೇ? ಇವೆಲ್ಲ ಸ್ಪಷ್ಟ ಉತ್ತರ ಸಿಗದ ಪ್ರಶ್ನೆಗಳು. ವೈದ್ಯರೊಬ್ಬರ ಪ್ರಕಾರ, ಎರಡು ವಾರಗಳ ಮೊದಲೇ ಸಾವಿನ ಪ್ರಕ್ರಿಯೆ ಆರಂಭವಾಗುತ್ತದೆ. 

ಮನುಷ್ಯನಿಗೆ (Human) ಇನ್ನೂ ಭೇದಿಸಲಾಗದ ವಿಚಾರವೆಂದರೆ ಹುಟ್ಟು (Born) ಮತ್ತು ಸಾವು (Death). ನಮ್ಮ ಸತಾತನ ಧರ್ಮದಲ್ಲಿ ಮರಣವೆಂದರೆ ಅದೊಂದು ಮುಕ್ತಿಯ ಕಡೆಗೆ ಸಾಗುವ ಪ್ರಕ್ರಿಯೆ. ಅದಕ್ಕೆ ಮಹೋನ್ನತ ಅರ್ಥವಿದೆ. ಹೀಗಾಗಿಯೇ ಮರಣವನ್ನು ಅಪ್ಪುವುದು ಎಂದು ಪರಿಗಣಿಸಲಾಗುತ್ತದೆ. ಅದರಿಲಿ, ಸಾಯುವ ಮುನ್ನ ಯಾರಿಗಾದರೂ ಅದರ ಅನುಭವ ಆಗದೇ ಇರದು. ಎಷ್ಟೋ ಜನರು ಈ ಬಗ್ಗೆ ತಿಳಿವಳಿಕೆ (Knowledge) ಉಳ್ಳವರಂತೆ ವರ್ತಿಸುವುದು ಕಂಡುಬರುತ್ತದೆ. ಸಾವಿಗೆ ತುತ್ತಾಗುವ ಮುನ್ನ ನಮ್ಮ ದೇಹದಲ್ಲಿ ಏನಾಗುತ್ತದೆ? ಯಾವ ರೀತಿಯ ಅನುಭವವಾಗುತ್ತದೆ (Experience)? ಈ ಕುರಿತು ನಮಗೆ ಸಾಕಷ್ಟು ಅರಿವಿಲ್ಲ. ಇದೀಗ ವೈದ್ಯರೊಬ್ಬರು ಸಾವಿಗೆ ಮುನ್ನ ಏನಾಗುತ್ತದೆ ಎಂದು ಹೇಳಿದ್ದಾರೆ. ಸಾವಿಗೆ ಎದುರಾದಾಗ ಏನಾಗುತ್ತದೆ ಎನ್ನುವುದು ಸಾವಿನ ಅನುಭವ ಆದವರಿಗೆ ಮಾತ್ರ ತಿಳಿಯುತ್ತದೆ. “ದ ಎಕ್ಸ್‌ ಪ್ರೆಸ್‌ʼ ವರದಿ ಪ್ರಕಾರ, ಅನೇಕ ಸಾವುಗಳನ್ನು ಹತ್ತಿರದಿಂದ ಕಂಡಿರುವ ವೈದ್ಯರೊಬ್ಬರು ಸಾವಿಗೆ ಮುನ್ನ ದೇಹದಲ್ಲಿ (Body) ಅಪಾರ ಬದಲಾವಣೆಯಾಗುತ್ತದೆ ಎಂದು ಹೇಳಿದ್ದಾರೆ.

ಸಾವಿಗೂ ಮುನ್ನ ಏನಾಗುತ್ತದೆ?
ಲಿವರ್‌ ಪೂಲ್‌ (Liverpool) ವಿಶ್ವವಿದ್ಯಾಲಯದ ಮಾನವ ಸಂಶೋಧನಾ ಫೆಲೋ ಆಗಿರುವ ಸೀಮಸ್‌ ಕೋಯ್ಲ್‌ (Seamus Koyle) ಅವರ ಪ್ರಕಾರ, ಪ್ರಾಕೃತಿಕವಾಗಿ ಸಾವಿಗೀಡಾಗುವುದು ಅಂದರೆ, ವಯೋಸಹಜವಾಗಿ ಸಾಯುವಾಗ ಒಂದು-ಎರಡು ವಾರಗಳ ಮುನ್ನವೇ ಸಾವಿನ ಪ್ರಕ್ರಿಯೆ (Death Process) ಆರಂಭವಾಗುತ್ತದೆ. ಆರೋಗ್ಯ ಬಿಗಡಾಯಿಸಬಹುದು, ನಡೆಯಲು, ನಿದ್ರಿಸಲು ಕಷ್ಟವಾಗಬಹುದು. ಅಂತಿಮ ದಿನಗಳಲ್ಲಿ ಮಾತ್ರೆ ತೆಗೆದುಕೊಳ್ಳಲು, ಊಟ ಮಾಡಲು, ನೀರು ಕುಡಿಯಲು ಸಹ ಕಷ್ಟವಾಗುತ್ತದೆ. ಕೆಲವರಲ್ಲಿ ಈ ಎಲ್ಲ ಪ್ರಕ್ರಿಯೆ ಒಂದೇ ದಿನದಲ್ಲೂ ಸಂಭವಿಸಬಹುದು.  

ಮೃತ್ಯು ಸಂಭವಿಸುವ ಸಮಯದಲ್ಲಿ ದೇಹದಲ್ಲಿ ಏನಾಗುತ್ತದೆ ಎನ್ನುವ ಬಗ್ಗೆಯೂ ಅಂತಹ ತಿಳಿವಳಿಕೆ ವೈದ್ಯಲೋಕಕ್ಕೂ ಇಲ್ಲ. ಏಕೆಂದರೆ, ಅದನ್ನು ದಾಖಲಿಸಬೇಕಾದವರೇ ಇರುವುದಿಲ್ಲ. ಈ ವೈದ್ಯರ ಪ್ರಕಾರ, ಸಾವಿನ ಸಮಯದಲ್ಲಿ ಮಿದುಳಿನಿಂದ ವಿವಿಧ ರೀತಿಯ ರಾಸಾಯನಿಕಗಳು (Different Chemicals) ಬಿಡುಗಡೆಯಾಗುತ್ತವೆ. ಅಚ್ಚರಿಯೆಂದರೆ, ಇವುಗಳಲ್ಲಿ ಎಂಡಾರ್ಫಿನ್‌ (Endorphin) ಕೂಡ ಇರುತ್ತದೆ. ಇದು ಯಾವುದೇ ವ್ಯಕ್ತಿಯ ಭಾವನೆಗಳನ್ನು ಉತ್ತೇಜಿಸುತ್ತದೆ ಹಾಗೂ ಬೇಸರ ಹೋಗಲಾಡಿಸಿ, ದೇಹದ ನೋವು ನಿವಾರಿಸುತ್ತದೆ. ಮರಣದ ಸಮಯದಲ್ಲಿ ಏನೋ ವಿಚಿತ್ರ ಸುಖದ ಅನುಭವವಾಗುತ್ತದೆ ಎಂದು ಅನೇಕ ಮಹಾಮಹಿಮರು ಹೇಳಿರುವುದು ಇದಕ್ಕೇ ಇರಬಹುದು. 

ಹೆಂಡತಿಗೆ ವಂಚಿಸೋರು ಮುಂದಿನ ಜನ್ಮದಲ್ಲಿ ಏನಾಗುತ್ತಾರೆ?

ಸೀಮಸ್‌ ಕೋಯ್ಲ್‌ ಅವರ ಪ್ರಕಾರ, ಸಾವಿನ ಸಮಯವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಇದುವರೆಗಿನ ಸಂಶೋಧನೆಗಳ ಪ್ರಕಾರ, ಯಾವೆಲ್ಲ ಜನರು ಸಾವಿಗೆ ಸಮೀಪಿಸಿರುತ್ತಾರೋ ಅವರ ದೇಹದಲ್ಲಿ ಒತ್ತಡ ಹೆಚ್ಚಿಸುವ ರಾಸಾಯನಿಕದ ಪ್ರಮಾಣ ಹೆಚ್ಚಿರುವುದು ದೃಢಪಟ್ಟಿದೆ. ಆದರೆ, ಮರಣದ ಸಮಯದಲ್ಲಿ ಈ ಒತ್ತಡವೆಲ್ಲ (Stress) ಇಲ್ಲವಾಗುತ್ತದೆ. ವಿವಿಧ ರೋಗಗಳಿಂದ ಮೃತಪಡುವವರಿಗೆ ದೇಹದಲ್ಲಿ ಸೆಳೆತವೂ ಶುರುವಾಗಬಹುದು. ವೈರಸ್‌ (Virus) ಸೋಂಕಿಗೆ ಒಳಗಾದಾಗ ಆದಂತೆ ದೇಹದಲ್ಲಿ ನೋವಾಗುತ್ತದೆ. 

ಸಾಮಾನ್ಯವಾಗಿ ಸಾವಿಗೀಡಾಗುವವರಲ್ಲಿ ದೇಹದ ನೋವು (Pain) ಕಡಿಮೆಯಾಗಿದೆ ಎಂದೆನಿಸುತ್ತದೆ. ನೆನಪಿಸಿಕೊಳ್ಳಿ, ಈ ಸ್ಥಿತಿಯಲ್ಲಿರುವ ಹಲವಾರು ಜನರನ್ನು ನಾವು ನೋಡಿರುತ್ತೇವೆ. ಅವರು ರೋಗದಿಂದ ಚೇತರಿಸಿಕೊಂಡಂತೆ ತೋರುತ್ತಾರೆ. ದೇಹದಲ್ಲಿ ಸ್ವಲ್ಪ ಲವಲವಿಕೆ ತುಂಬಿದಂತೆ ಕಾಣುತ್ತದೆ. ಹೀಗಾದ ಒಂದೆರಡು ದಿನ ಅಥವಾ ವಾರದಲ್ಲೇ ಅವರು ಸಾವಿಗೆ ತುತ್ತಾಗುತ್ತಾರೆ. ಇದಕ್ಕೆ ದೇಹದಲ್ಲಿ ಬಿಡುಗಡೆ ಮಾಡುವ ಎಂಡಾರ್ಫಿನ್‌ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ. 

ಮದುವೆಗೆ ಅಡ್ಡಿಯಾದ ಕುಜ ದೋಷ

ಸಾಯುವ ಪ್ರತಿ ವ್ಯಕ್ತಿಗೂ ಬೇರೆ ಬೇರೆ ರೀತಿಯ ಅನುಭವವಾಗಬಹುದು. ಶಾಂತಿಪೂರ್ಣ ವಿಧಾನದಲ್ಲಿಯೇ ಎಲ್ಲರೂ ಸಾವಿಗೀಡಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅಪಘಾತ, ಹೃದಯಾಘಾತ ಇತ್ಯಾದಿ ಪ್ರಕರಣಗಳಲ್ಲಿ ತಾವು ಸಾವಿಗೀಡಾಗಬಹುದು ಎನ್ನುವ ಕಲ್ಪನೆಯೇ ಇಲ್ಲದೆ ಈ ಲೋಕವನ್ನು ತ್ಯಜಿಸುವವರಿದ್ದಾರೆ. ವಯಸ್ಸಾಗಿ ಮೃತರಾಗುವಾಗ ಮಾತ್ರ ಇಂತಹ ಸಾವಿನ ಪ್ರಕ್ರಿಯೆ ಹಾಗೂ ಅನುಭವ ಕಾಣಲು ಸಾಧ್ಯ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!