Health Tips in Kannada: ಕೈಗೆ ರಂಗು ನೀಡುವುದು ಮದರಂಗಿ. ಖುಷಿಯ ಆಚರಣೆಯಲ್ಲಿ ಸಿಹಿಯಿದ್ದಂತೆ ಗೋರಂಟಿ ಕೂಡ ಇರ್ಲೇಬೇಕು. ಕೈ, ಕಾಲಿನ ಸೌಂದರ್ಯ ಹೆಚ್ಚಿಸುವ ಈ ಮದರಂಗಿಯಲ್ಲಿ ಸಾಕಷ್ಟು ಔಷಧಿ ಗುಣವೂ ಇದೆ.
ಹಬ್ಬದ ಸಂಭ್ರಮದಲ್ಲಿ ಮೆಹಂದಿ ಇಲ್ಲದೆ ಹೋದ್ರೆ ಹೇಗೆ ಹೇಳಿ. ಹಬ್ಬ ಯಾವುದೇ ಇರಲಿ ಕೈ ತುಂಬ ಮೆಹಂದಿ ಹಚ್ಚಿಕೊಂಡು ಮಹಿಳೆಯರು ಸಂಭ್ರಮಿಸ್ತಾರೆ. ನಾಗರ ಪಂಚಮಿ ಹಬ್ಬದಂದು ಮೆಹಂದಿ ಕೈಗೆ ಹಚ್ಚಿಕೊಂಡ್ರೆ ಹಾವು ಕಚ್ಚೋದಿಲ್ಲ ಎನ್ನುವ ನಂಬಿಕೆ ಕೂಡ ಅನೇಕ ಕಡೆ ಇದೆ. ಮದುವೆ ಸಮಾರಂಭದಲ್ಲಿ ವಧು ಜೊತೆ ಮನೆ ಮಂದಿಯೆಲ್ಲ ಮದರಂಗಿ ಹಚ್ಚಿಕೊಳ್ತಾರೆ. ಮದರಂಗಿ ಕೆಂಪಾದಷ್ಟು ಹುಡುಗಿಯರ ಸಂಭ್ರಮ ಹೆಚ್ಚುತ್ತದೆ. ಮಳೆಗಾಲದಲ್ಲಿ ಚರ್ಮದ ಸಮಸ್ಯೆಗೆ ಮೆಹಂದಿ ಪರಿಹಾರ ಎಂಬ ನಂಬಿಕೆಯೂ ಇದೆ. ಮೆಹಂದಿ ಬರೀ ನಿಮ್ಮ ಕೈ, ಕಾಲುಗಳ ಸೌಂದರ್ಯವನ್ನು ಹೆಚ್ಚಿಸುವ ಕೆಲಸ ಮಾತ್ರ ಮಾಡುವುದಿಲ್ಲ, ಆರೋಗ್ಯಕ್ಕೂ ಮದರಂಗಿ ಒಳ್ಳೆಯದು. ಇಂದು ನಾವು ಮದರಂಗಿಯಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಿಮಗೆ ಹೇಳ್ತೇವೆ.
ಆಯುರ್ವೇದ (Ayurveda) ಲ್ಲಿ ಮೆಹಂದಿ (Mehndi) : ಆಯುರ್ವೇದಲ್ಲೂ ಮದರಂಗಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮಳೆಗಾಲ (monsoon) ದಲ್ಲಿ ಮೆಹಂದಿ ಹಚ್ಚಿಕೊಳ್ಳಬೇಕೆಂದು ಆಯುರ್ವೇದದಲ್ಲೂ ಹೇಳಲಾಗಿದೆ. ಆಯುರ್ವೇದದ ಪ್ರಕಾರ, ಮಳೆಗಾಲದಲ್ಲಿ ಕಾಡುವ ಚರ್ಮ (Skin) ದ ಸಮಸ್ಯೆಗೆ ಮದರಂಗಿಯಲ್ಲಿ ಪರಿಹಾರವಿದೆ. ಪ್ರತಿಯೊಬ್ಬರೂ ಮೆಹಂದಿ ಬಳಸಬಹುದು ಎಂದು ಆಯುರ್ವೇದ ಹೇಳುತ್ತದೆ. ಸೌಂದರ್ಯ (beauty) ಕ್ಕಾಗಿ ಮಹಿಳೆಯರು ಮೆಹಂದಿ ಬಳಸ್ತಾರೆ ಆದ್ರೆ ಚರ್ಮದ ಸಮಸ್ಯೆ, ಕೂದಲಿನ ಸಮಸ್ಯೆ ಕಾಡಿದಾಗ ಪುರುಷರು ಕೂಡ ಅದನ್ನು ಆರಾಮವಾಗಿ ಬಳಸಬಹುದು.
ಮಹಂದಿಯ ಪ್ರಯೋಜನಗಳು :
ಚರ್ಮದ ಸಮಸ್ಯೆಗೆ ಮದ್ದು : ಯಾವುದೇ ರಾಸಾಯನ ಬಳಸದ, ಮನೆಯಲ್ಲಿಯೇ ತಯಾರಾಗುವ ಮೆಹಂದಿ ಅಲರ್ಜಿ, ಚರ್ಮದ ತುರಿಕೆ, ಚರ್ಮದ ಮೇಲಾಗುವ ಕೆಂಪು ಗುಳ್ಳೆ ಮತ್ತು ಗಾಯಗಳಂತ ಎಲ್ಲಾ ಚರ್ಮದ ಸಮಸ್ಯೆಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ಮೆಹಂದಿಯಲ್ಲಿ ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತ ನಿವಾರಕ ಗುಣವಿದೆ. ಇದು ಚರ್ಮವನ್ನು ರಕ್ಷಿಸುವ ಕೆಲಸ ಮಾಡುತ್ತದೆ.
ಕೂದಲ ಆರೋಗ್ಯಕ್ಕೆ ಗೋರಂಟಿ : ಚರ್ಮಕ್ಕೆ ಮಾತ್ರವಲ್ಲ ಮದರಂಗಿ ಕೂದಲಿಗೂ ತುಂಬಾ ಪ್ರಯೋಜನಕಾರಿ. ಕೂದಲಿನ ಬೆಳವಣಿಗೆ ಹೆಚ್ಚಿಸುವ ಜೊತೆಗೆ ಕೂದಲಿಗೆ ನೈಸರ್ಗಿಕ ಬಣ್ಣ ನೀಡುವ ಕೆಲಸವನ್ನು ಮದರಂಗಿ ಮಾಡುತ್ತದೆ. ಕೂದಲು ಬೆಳ್ಳಗಾಗಿದ್ರೆ ಮಾರುಕಟ್ಟೆಯಲ್ಲಿ ಸಿಗುವ ಬಣ್ಣ ಬಳಸುವ ಬದಲು ಗೋರಂಟಿಯನ್ನು ರುಬ್ಬಿ, ಅದಕ್ಕೆ ಮೊಸರು ಸೇರಿಸಿ ಹಚ್ಚಿಕೊಳ್ಳಬಹುದು. ರೇಷ್ಮೆಯಂತ ಕೂದಲು ಬೇಕೆನ್ನುವವರು ಮದರಂಗಿಯನ್ನು ಆರಾಮವಾಗಿ ಕೂದಲಿಗೆ ಹಚ್ಚಬಹುದು. ತಲೆ ಹೊಟ್ಟು ಕಾಡ್ತಿದೆ ಎನ್ನುವವರು ಕೂಡ ಕೂದಲಿಗೆ ವಾರಕ್ಕೊಮ್ಮೆ ಮೆಹಂದಿ ಹಚ್ಚಬಹುದು. ಮೆಹಂದಿ ಜೊತೆ ಮೊಸರು ಹಾಗೂ ಮೆಂತೆ ಸೇರಿಸಿದ್ರೆ ಹೊಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ.
ನಿಮ್ಮ ವಯಸ್ಸು ಮುಚ್ಚಿಡುತ್ತೆ ಮೆಹಂದಿ : ವಯಸ್ಸು ಮುಚ್ಚಿಡುವ ಕೆಲಸವನ್ನು ಮೆಹಂದಿ ಮಾಡುತ್ತೆ. ಮೆಹಂದಿಯಲ್ಲಿರುವ ಆ್ಯಂಟಿ-ಆಕ್ಸಿಡೆಂಟ್ ಚರ್ಮದ ಸುಕ್ಕನ್ನು ತಡೆಯುತ್ತದೆ. ಚರ್ಮದ ಮೇಲೆ ಯಾವುದೇ ಸಮಸ್ಯೆಯಿದ್ರೂ ಅದನ್ನು ಹೋಗಲಾಡಿಸುವ ಕೆಲಸವನ್ನು ಗೋರಂಟಿ ಮಾಡುತ್ತದೆ.
ನೆತ್ತಿಯಲ್ಲಿ ಕಾಡವು ಚರ್ಮದ ಸಮಸ್ಯೆಗೆ ಪರಿಹಾರ : ಅನೇಕರು ನೆತ್ತಿ ಒಣಗುವ ಸಮಸ್ಯೆ ಎದುರಿಸುತ್ತಾರೆ. ನೆತ್ತಿಯಲ್ಲಿನ ಚರ್ಮ ಒಣಗಿ ಬಿಳಿ ಹೊಟ್ಟು ಹೊರಗೆ ಬರ್ತಿರುತ್ತದೆ. ಅಂಥವರು ಮೆಹಂದಿಯನ್ನು ನೆತ್ತಿಗೆ ಹಚ್ಚಿಕೊಳ್ಳಬೇಕು. ಗೋರಂಟಿ ತಂಪು ಗುಣ ಆಕ್ಸೆಸ್ ಆಯಿಲ್ ತೆಗೆದುಹಾಕುತ್ತದೆ. ಇದ್ರಿಂದ ನೆತ್ತಯ ಅಲರ್ಜಿ ಹಾಗೂ ಸೋಂಕು ಕಡಿಮೆಯಾಗುತ್ತದೆ.
ಇದನ್ನೂ ಓದಿ: ಹಬ್ಬದೂಟದ ನಂತರ ಹೊಟ್ಟೆ ಭಾರ ಅನಿಸ್ತಿದ್ಯಾ ? ತಕ್ಷಣ ಪರಿಹಾರಕ್ಕಾಗಿ ಇದನ್ನು ತಿನ್ನಿ
ಗಾಯಕ್ಕೆ ಔಷಧಿ ಗೋರಂಟಿ : ಚರ್ಮದ ಸಮಸ್ಯೆಗೆ ಮಾತ್ರವಲ್ಲ ಗಾಯಕ್ಕೂ ಮದರಂಗಿ ಔಷಧಿಯಾಗಿ ಕೆಲಸ ಮಾಡುತ್ತದೆ. ಗಾಯದ ಮೇಲೆ ಮದರಂಗಿಯನ್ನು ಹಚ್ಚಬಹುದು. ಇದು ತಂಪಾಗಿರುವ ಕಾರಣ ಗಾಯದ ಉರಿಯನ್ನು ಕಡಿಮೆ ಮಾಡುತ್ತದೆ. ಚರ್ಮ ಸುಡುವುದನ್ನು ತಡೆಯುತ್ತದೆ. ಚರ್ಮದ ಕಿರಿಕಿರಿ ತಪ್ಪಿಸಲು ನೀವು ಗೋರಂಟಿಯನ್ನು ಬಳಕೆ ಮಾಡ್ಬಹುದು ಎನ್ನುತ್ತದೆ ಆಯುರ್ವೇದ.
ಇದನ್ನೂ ಓದಿ: ಹಬ್ಬದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಭಯವೇ? ಇಲ್ಲಿದೆ ಮನೆಯಲ್ಲೇ ಮಾಡಬಹುದಾದ ಸ್ವಿಟ್ಸ್!
ಇಷ್ಟೆಲ್ಲ ಪ್ರಯೋಜನ ಮನೆಯಲ್ಲಿರುವ ಮಹಂದಿ ಗಿಡದ ಎಲೆ ಮಾತ್ರ ನೀಡಬಲ್ಲದು. ಮಾರುಕಟ್ಟೆಯಲ್ಲಿ ಸಿಗುವ ಮೆಹಂದಿ ಪುಡಿಗೆ ಕೆಲ ಕೆಮಿಕಲ್ಸ್ ಬಳಸಿರುವ ಸಾಧ್ಯತೆಗಳಿರುತ್ತವೆ.