
ನಾಗ್ಪುರದಲ್ಲಿ ತನ್ನ ದೊಡ್ಡ ಹೊಟ್ಟೆಯ ಕಾರಣದಿಂದ ವ್ಯಕ್ತಿಯೊಬ್ಬ ಗರ್ಭಿಣಿಯೆಂದು ಕರೆಸಿಕೊಳ್ಳುತ್ತಿದ್ದ. ಎಲ್ಲರೂ ಈತನನ್ನು ನೋಡಿ ಲೇವಡಿ ಮಾಡುತ್ತಿದ್ದರು. ಆದರೆ ಇತ್ತೀಚಿನ ಪರೀಕ್ಷೆಯಲ್ಲಿ ವ್ಯಕ್ತಿಯ ಅವಳಿ ಒಡಹುಟ್ಟಿದವನು 36 ವರ್ಷಗಳಿಂದ ಹೊಟ್ಟೆಯಲ್ಲಿದ್ದನು ಎಂದು ತಿಳಿದುಬಂದಿದೆ. ನಾಗ್ಪುರದ ಸಂಜು ಭಗತ್ ಅವರು ತೀವ್ರ ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದರು ಮತ್ತು ಸ್ಥಳೀಯರಿಂದ ಗರ್ಭಿಣಿ ಎಂದು ಅಡ್ಡಹೆಸರು ಹೊಂದಿದ್ದರು.
ಚಿಕ್ಕಂದಿನಿಂದಲೂ ಸಂಜು ಎಲ್ಲರಂತೆ ಸಣ್ಣ ಹೊಟ್ಟೆ (Stomach)ಯನ್ನು ಹೊಂದಿದ್ದರು. ಆದ್ರೆ ಇಪ್ಪತ್ತು ವರ್ಷ ವಯಸ್ಸಾಗುತ್ತಾ ಹೋದಂತೆ ಹೊಟ್ಟೆಯ ಗಾತ್ರ ಬೆಳೆಯುತ್ತಾ ಹೋಯಿತು. ಆರಂಭದಲ್ಲಿ ಸಂಜು ಇದನ್ನು ದೊಡ್ಡ ಸಮಸ್ಯೆಯಾಗಿ ಪರಿಗಣಿಸಿರಲ್ಲಿಲ್ಲ. ಆದರೆ ನಂತರ ಹೊಟ್ಟೆಯ ಗಾತ್ರ ದೊಡ್ಡದಾಗುತ್ತಾ ಹೋದಂತೆ ಉಸಿರಾಡುವುದು (Breathing) ಸಹ ಕಷ್ಟವಾಗಲು ಶುರುವಾಯಿತು. ಹೀಗಾಗಿ ಕೂಡಲೇ ಅವರು ಮುಂಬೈನ ಆಸ್ಪತ್ರೆಯತ್ತ (Hospital) ಧಾವಿಸಿದರು. ಆಸ್ಪತ್ರೆಯ ವೈದ್ಯರು (Doctors) ಆರಂಭದಲ್ಲಿ ಸಂಜು ಭಗತ್ ಟ್ಯೂಮರ್‌ನಿಂದ ಬಳಲುತ್ತಿದ್ದಾರೆ ಎಂದು ಭಾವಿಸಿದರು. ಆದರೆ ಸರ್ಜರಿ (Operation) ಮಾಡಿದ ವೈದ್ಯರು ಹೊಟ್ಟೆಯೊಳಗೆ ಸಂಜುವಿನ ಟ್ವಿನ್ ಇರುವುದನ್ನು ಪತ್ತೆಹಚ್ಚಿದರು.
ಮಗು ಯಾವಾಗಾಲೂ ನಗುತ್ತಲೇ ಇರುತ್ತದೆ, ಅಪರೂಪದ ಕಾಯಿಲೆಗೆ ಪೋಷಕರು ಕಂಗಾಲು !
36 ವರ್ಷದಿಂದಲೂ ಹೊಟ್ಟೆಯೊಳಗಿದ್ದ ಟ್ವಿನ್!
ಸರ್ಜರಿ ಮಾಡುತ್ತಿರುವಾಗ ಆರಂಭದಲ್ಲಿ ಕಾಲು, ನಂತರ ತಲೆ, ಕೂದಲು ಹೀಗೆ ಒಂದೊಂದೇ ದೇಹದ ಭಾಗಗಳು ಹೊರಬಂದವು ಎಂದು ವೈದ್ಯರು ತಿಳಿಸಿದ್ದಾರೆ. 'ನಾವು ನಿಜವಾಗಿಯೂ ಗಾಬರಿಯಾಗಿದ್ದೆವು. ಮುಂದೇನು ಮಾಡಬೇಕೆಂದು ನಮಗೆ ತಿಳಿಯಲ್ಲಿಲ್ಲ. ನಾವು ಸಂಪೂರ್ಣವಾಗಿ ಗೊಂದಲಕ್ಕೊಳಗಾದೆವು. ಹೊಟ್ಟೆಯೊಳಗೆ ನಿಜವಾಗಿಯೂ ಯಾರೋ ಇದ್ದಾರೆ ಎಂದು ತಿಳಿದು ನಾವು ಮೂರ್ಛೆ ಹೋಗುವುದಷ್ಟೇ ಬಾಕಿಯಿತ್ತು' ಎಂದು ವೈದ್ಯರು ಹೇಳಿದ್ದಾರೆ. ಅಪರೂಪದಲ್ಲಿ ಅಪರೂಪವಾದ ಈ ಪ್ರಕರಣವನ್ನು ವೈದ್ಯರು 'ಫೀಟಸ್ ಇನ್ ಫೀಟು' ಎಂದು ಗುರುತಿಸಿದ್ದಾರೆ. ಇದರಲ್ಲಿ ಒಬ್ಬ ಟ್ವಿನ್ ಹೊಟ್ಟೆಯೊಳಗಡೆ ಇನ್ನೊಬ್ಬ ಟ್ವಿನ್ ಮಗುವಿರುತ್ತದೆ ಎಂದು ತಿಳಿದುಬಂದಿದೆ.
ಅಬ್ಬಬ್ಬಾ..ಆಕೆಗಿತ್ತು ಭರ್ತಿ 11 ಕೆಜಿ ಸ್ತನ, ಯಶಸ್ವೀ Breast reduction ಸರ್ಜರಿ ಮಾಡಿದ ವೈದ್ಯರು
ಒಂದು ವರ್ಷಕ್ಕೂ ಹೆಚ್ಚು ಕಾಲ ಮೂತ್ರ ಮಾಡದೆ ಒದ್ದಾಡಿದ ಮಹಿಳೆ!
ಇಂಥಾ ವಿಚಿತ್ರ ಆರೋಗ್ಯ ಸಮಸ್ಯೆಗಳು ಪತ್ತೆಯಾಗಿರುವುದು ಮೊದಲ ಬಾರಿಯೇನಲ್ಲ. ಇಂಗ್ಲೆಂಡ್‌ನಲ್ಲೊಬ್ಬ ಮಹಿಳೆ ಬರೋಬ್ಬರಿ 14 ತಿಂಗಳುಗಳ ಕಾಲ ಮೂತ್ರಾನೇ ಮಾಡಿಲ್ಲ ಅಂದ್ರೆ ನೀವ್ ನಂಬ್ತೀರಾ? ಕೇಳೋಕೆ ಅಚ್ಚರಿಯೆನಿಸಿದರೂ ಇದು ನಿಜ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವೈದ್ಯರು ಒಂದು ವರ್ಷಕ್ಕೂ ಹೆಚ್ಚು ಕಾಲ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗದ ಮಹಿಳೆಯ ಅಪರೂಪದ ಆರೋಗ್ಯ ಸ್ಥಿತಿಯನ್ನು ಪತ್ತೆಹಚ್ಚಿದ್ದರು.
30 ವರ್ಷ ವಯಸ್ಸಿನ ಎಲ್ಲೆ ಆಡಮ್ಸ್ ರಲ್ಲಿ ಅಕ್ಟೋಬರ್ 2020ಲ್ಲಿ ಈ ಸಮಸ್ಯೆಯನ್ನು ಕಂಡುಹಿಡಿಯಲಾಯಿತು. ಇದು ಫೌಲರ್ಸ್ ಸಿಂಡ್ರೋಮ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕಾಯಿಲೆ ಮೂತ್ರಕೋಶವನ್ನು ಖಾಲಿ ಮಾಡಲಾಗದ ಅಸಮರ್ಥತೆಯಾಗಿದೆ. ಅಪರೂಪದ ಸ್ಥಿತಿಯು ಮುಖ್ಯವಾಗಿ ಯುವತಿಯರಲ್ಲಿ ಕಂಡು ಬರುತ್ತದೆ ಎಂದು ತಿಳಿದುಬಂದಿದೆ. ಆಡಮ್ಸ್ ಎಷ್ಟೇ ನೀರು ಅಥವಾ ಇತರ ದ್ರವವನ್ನು ಕುಡಿದರೂ ಮೂತ್ರ ವಿಸರ್ಜಿಸಲು ಸಾಧ್ಯವಾಗುತ್ತಿರಲ್ಲಿಲ್ಲ.
ಆಡಮ್ಸ್ ಲಂಡನ್‌ನ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ರೋಗಲಕ್ಷಣಗಳನ್ನು ವಿವರಿಸಿ ಚಿಕಿತ್ಸೆ (Treatment) ಪಡೆಯಲು ನಿರ್ಧರಿಸಿದರು. ವೈದ್ಯರು ಆಕೆಯ ದೇಹವನ್ನು ಕೂಲಕುಂಷವಾಗಿ ಪರಿಶೀಲನೆ ನಡೆಸಿ, ಆಕೆಯ ಮೂತ್ರಕೋಶದಲ್ಲಿ ಒಂದು ಲೀಟರ್ ಮೂತ್ರವಿದೆ ಎಂದು ತಿಳಿಸಿದರು. ಸಾಮಾನ್ಯವಾಗಿ ಮೂತ್ರಕೋಶವು ಮಹಿಳೆಯರಲ್ಲಿ 500 ಮಿಲಿ ಮತ್ತು ಪುರುಷರಲ್ಲಿ 700 ಮಿಲಿ ಮೂತ್ರವನ್ನು ಮಾತ್ರ ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ. ಹೀಗಾಗಿ ವೈದ್ಯರ ತಂಡ ತಕ್ಷಣ ಟ್ಯೂಬ್ ಮೂಲಕ ಮೂತ್ರವನ್ನು ಹೊರತೆಗೆಯುವ ಕೆಲಸ ಮಾಡಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.