ಯುವಜನರು ಪೋಷಕರ ಜೊತೆ ಹೇಗಿರಬೇಕು, ಉದ್ಯಮಿ ಆನಂದ್ ಮಹೀಂದ್ರಾ ಟಿಪ್ಸ್‌

By Suvarna News  |  First Published Jun 5, 2022, 3:19 PM IST

ಪೋಷಕರು (Parents) ಮಕ್ಕಳನ್ನು (Children) ಜೋಪಾನವಾಗಿ ನೋಡಿಕೊಳ್ಳುವುದು ಹೇಗೆ ಮುಖ್ಯವೋ ಹಾಗೆಯೇ ಮಕ್ಕಳು ಸಹ ತಮ್ಮ ಪೋಷಕರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಯುವಜನರು ಪೋಷಕರ ಜೊತೆ ಹೇಗಿರಬೇಕು ಎಂಬುದನ್ನು ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಟಿಪ್ಸ್‌


ಪೋಷಕರು (Parents) ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳುವುದು ಹೇಗೆ ಮುಖ್ಯವೋ ಹಾಗೆಯೇ ಮಕ್ಕಳು (Children) ಸಹ ತಮ್ಮ ಪೋಷಕರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಆದರೆ ಇವತ್ತಿನ ಮಕ್ಕಳು ಪೋಷಕರನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆಂಬುದು ಹೆಚ್ಚುತ್ತಿರುವ ವೃದ್ಧಾಶ್ರಮಗಳನ್ನು ನೋಡುವಾಗ್ಲೇ ಗೊತ್ತಾಗುತ್ತದೆ. ಮಕ್ಕಳಿಗೆ ಪೋಷಕರ ಮೇಲಿರುವ ಪ್ರೀತಿ, ವಾತ್ಸಲ್ಯ, ಬಂಧವೇ ಸಂಪೂರ್ಣ ಕಡಿಮೆಯಾಗಿದೆ. ಹೆಚ್ಚಿನ ಮಕ್ಕಳು ಪೋಷಕರನ್ನು ಕೇವಲ ಸೋರ್ಸ್‌ ಆಫ್‌ ಮನಿಯಂತೆ ನೋಡುತ್ತಾರೆ. ತಮಗೆ ಬೇಕಾಗದಲ್ಲೆಲ್ಲಾ ಅಪ್ಪ-ಅಮ್ಮನಿಂದ ಬೇಕಾದ್ದನ್ನೆಲ್ಲಾ ಕೊಡಿಸಿಕೊಳ್ಳುತ್ತಾರೆ. ಕೇಳಿದ್ದನ್ನೆಲ್ಲಾ ಕೊಡಿಸದಿದ್ದರೆ ರೇಗಾಡುತ್ತಾರೆ, ಕಿರುಚಾಡುತ್ತಾರೆ. ಹೀಗಿರುವಾಗ್ಲೇ ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಯುವಜನತೆ (Youth) ಪೋಷಕರ ಜೊತೆ ಹೇಗಿರಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. 

ಪೋಷಕರು ತಮ್ಮ ಮಕ್ಕಳ ಬಗ್ಗೆ ಅರ್ಥ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ ಹಾಗೆಯೇ ಮಕ್ಕಳು ಸಹ ಪೋಷಕರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಪುಟ್ಟ ಮಕ್ಕಳೇನೋ ಪೋಷಕರ ಜೊತೆ ಪ್ರೀತಿಯಿಂದ ವರ್ತಿಸುತ್ತಾರೆ. ಆದರೆ, ಯುವಜನತೆಯಂತೂ ತಮ್ಮ ಪೋಷಕರ ಮೇಲೆ ಸಣ್ಣಪುಟ್ಟ ವಿಚಾರಕ್ಕೆ ರೇಗಾಡೋದೆ ಜಾಸ್ತಿ. ಹೀಗೆ ಮಾಡೋದ್ರಿಂದ ಮಕ್ಕಳು ಮತ್ತು ಪೊಷಕರ ನಡುವಿನ ಅನುಬಂಧವೇ ಕಡಿಮೆಯಾಗುತ್ತದೆ.

Tap to resize

Latest Videos

ಮಹೀಂದ್ರಾದ ಸ್ವರಾಜ್‌ ಟ್ರಾಕ್ಟರ್‌ ಓಡಿಸಿದ ವಧು: ಫುಲ್ ಖುಷಿಯಾದ ಆನಂದ್ ಮಹೀಂದ್ರಾ

ಅದೆಷ್ಟೋ ಬಾರಿ ಯುವಜನರಿಗೆ ಪೋಷಕರ ಮನಸ್ಥಿತಿ ಇಷ್ಟವಾಗುವುದಿಲ್ಲ. ಅವರು ಮಾಡಿದ್ದೆಲ್ಲಾ ತಪ್ಪೆಂದು ಅನಿಸಲು ಶುರುವಾಗುತ್ತದೆ. ಹೀಗಾಗಿ ರೇಗಾಡಿ ಬಿಡುತ್ತಾರೆ. ಇದರಿಂದ ಸಂಬಂಧ ಹದಗೆಡುತ್ತಾ ಹೋಗುತ್ತದೆ. ಆದ್ರೆ ಅಸಲಿಗೆ ಹೀಗೆಲ್ಲಾ ವರ್ತಿಸುವ ಅಗತ್ಯವಿಲ್ಲ. ಯುವಜನರು ಮಕ್ಕಳ ಜೊತೆ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಆನಂದ್ ಮಹೀಂದ್ರಾ ಏನ್ ಹೇಳಿದ್ದಾರೆ ತಿಳಿಯೋಣ. 

ಆನಂದ್ ಮಹೀಂದ್ರಾ ಅವರ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಅವರ ತಂದೆ ಹರೀಶ್ ಮಹೀಂದ್ರಾ ಅವರಿಗೆ ಅರ್ಪಿಸಲಾಗಿದೆ. ವ್ಯಾಪಾರ ಉದ್ಯಮಿಯು ತನ್ನ ತಂದೆ ಫ್ಲೆಚರ್ ಸ್ಕೂಲ್ ಆಫ್ ಲಾ ಅಂಡ್ ಡಿಪ್ಲೋಮಸಿ, ಯುಎಸ್‌ನ ಟಫ್ಟ್ಸ್ ವಿಶ್ವವಿದ್ಯಾಲಯಕ್ಕೆ ಕಳುಹಿಸಿದ ಅರ್ಜಿಯ ಪೋಟೋಗಳನ್ನು ಹಂಚಿಕೊಂಡಿದ್ದಾರೆ.  ಕಳೆದ ತಿಂಗಳು ವಿಶೇಷ ಭಾಷಣ ನೀಡಲು ಫ್ಲೆಚರ್ ಶಾಲೆಗೆ ಭೇಟಿ ನೀಡಿದಾಗ ಅರ್ಜಿಯ ಪ್ರತಿಗಳನ್ನು ಮಹೀಂದ್ರಾ ಅವರಿಗೆ ನೀಡಲಾಯಿತು.

When I was at the to deliver the Class Day Address, they very graciously gave me copies of my father’s application to Fletcher in 1945. These documents are mandatorily confidential for 75 years & by a wonderful coincidence, were declassified just last year! (1/2) pic.twitter.com/oOfYfR43ZV

— anand mahindra (@anandmahindra)

ತಂದೆಯವರು ಬರೆದಿರುವ ಅರ್ಜಿಗಳನ್ನು ಪೋಸ್ಟ್ ಮಾಡಿದ ಆನಂದ್ ಮಹೀಂದ್ರಾ, 'ನಾನು ವಿಶೇಷ ಭಾಷಣ ನೀಡಲು ಫ್ಲೆಚರ್ ಶಾಲೆಗೆ ತೆರಳಿದ್ದೆ. ಶಾಲೆಯವರು 1945 ರಲ್ಲಿ ಫ್ಲೆಚರ್‌ಗೆ ನನ್ನ ತಂದೆಯ ಅರ್ಜಿಯ ನಕಲು ಪ್ರತಿಗಳನ್ನು ನನಗೆ ನೀಡಿದರು. ಈ ದಾಖಲೆಗಳು 75 ವರ್ಷಗಳವರೆಗೆ ಕಡ್ಡಾಯವಾಗಿ ಗೌಪ್ಯವಾಗಿತ್ತು. ಈಗ ನನಗೆ ದೊರಕಿರುವುದು ಖುಷಿಯನ್ನುಂಟು ಮಾಡಿದೆ' ಎಂದಿದ್ದಾರೆ. ಭಾರತ ಇನ್ನೂ ಬ್ರಿಟಿಷ್ ವಸಾಹತು ಆಗಿರುವಾಗ ನನ್ನ ತಂದೆಯ ದಿಟ್ಟ ಆಕಾಂಕ್ಷೆ ಮತ್ತು ದಿಟ್ಟ ಹೇಳಿಕೆಯನ್ನು ಓದಲು ತುಂಬಾ ಹೆಮ್ಮೆಪಡುತ್ತೇನೆ. ಆ ಆಕಾಂಕ್ಷೆಗಳ ಬಗ್ಗೆ ನಾನು ಅವನೊಂದಿಗೆ ಎಂದಿಗೂ ಮಾತನಾಡಲಿಲ್ಲ ಎಂದು ಆನಂದ್ ಮಹೀಂದ್ರಾ ತಿಳಿಸಿದ್ದಾರೆ. 

ಬೆಂಗಳೂರು-ಉಡುಪಿ ರಸ್ತೆಯ ಜಂಗಲ್‌ ಡ್ರೈವ್‌ನ ಸುಂದರ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಹರೀಶ್ ಮಹೀಂದ್ರಾ, ಫ್ಲೆಚರ್ ಶಾಲೆಯಿಂದ ಪದವಿ ಪಡೆದ ಮೊದಲ ಭಾರತೀಯ. ಅವರ ಅರ್ಜಿ ಪತ್ರದಲ್ಲಿ, 'ನನ್ನ ವೃತ್ತಿಪರ ಗುರಿಗಳಿಗೆ ಸಂಬಂಧಿಸಿದಂತೆ, ನಾನು ವಿದೇಶಾಂಗ ಸೇವೆಯನ್ನು ಆರಿಸಿಕೊಂಡಿದ್ದೇನೆ. ಏಕೆಂದರೆ ನನ್ನ ದೇಶಕ್ಕೆ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ತರಬೇತಿ ಪಡೆದ ವಿದ್ಯಾವಂತರ ಅಗತ್ಯವಿದೆ. ಭಾರತಕ್ಕೆ ಇನ್ನೂ ತನ್ನದೇ ಆದ ವಿದೇಶಾಂಗ ನೀತಿ ಇಲ್ಲ. ಈ ಯುದ್ಧದ ನಂತರ, ಭಾರತವು ಡೊಮಿನಿಯನ್ ಸ್ಥಾನಮಾನ ಅಥವಾ ಸಂಪೂರ್ಣ ಸ್ವಾತಂತ್ರ್ಯದ ಸ್ಥಿತಿಯನ್ನು ಸಾಧಿಸಿದರೆ, ಅವಳು ಪ್ರಪಂಚದ ಇತರ ರಾಷ್ಟ್ರಗಳೊಂದಿಗೆ ಸ್ನೇಹ ಮತ್ತು ಆರ್ಥಿಕ ಸಂಬಂಧಗಳನ್ನು ಸ್ಥಾಪಿಸುವುದನ್ನು ನೋಡಲು ವಿದೇಶಾಂಗ ವ್ಯವಹಾರಗಳಲ್ಲಿ ತರಬೇತಿ ಪಡೆದ ಪುರುಷರ ಸಹಾಯದ ಅಗತ್ಯವಿದೆ.

ಬ್ರಿಟಿಷರು ತಮ್ಮ ವಿದೇಶಾಂಗ ನೀತಿಯನ್ನು ನಡೆಸುತ್ತಿದ್ದಾರೆ ಮತ್ತು ಭಾರತದಲ್ಲಿ ತಮ್ಮದೇ ಆದ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುವ ಸುಳ್ಳು ಮತ್ತು ಪ್ರಚಾರದ ಪ್ರಕಾರವನ್ನು ಹರಡುವ ಬದಲು, ಭಾರತದಲ್ಲಿ ಭಾರತೀಯ ವಿದೇಶಾಂಗ ಸೇವೆಯನ್ನು ಸ್ಥಾಪಿಸಲು ಮತ್ತು ವಿಶ್ವದಾದ್ಯಂತ ಭಾರತೀಯ ದೂತಾವಾಸಗಳಿಗೆ ಸಹಾಯ ಮಾಡಲು ನಾನು ಬಯಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಒಂದು ರೂಪಾಯಿಗೆ ಇಡ್ಲಿ ವಿತರಿಸುತ್ತಿದ್ದ ಇಡ್ಲಿ ಅಮ್ಮನಿಗೆ ಹೊಸ ಮನೆ ಹಸ್ತಾಂತರಿಸಿದ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾ ಎಲ್ಲಾ ಯುವಕರಿಗೆ ಒಂದು ಸಲಹೆಯನ್ನು ನೀಡಿದ್ದಾರೆ. ನಿಮ್ಮ ಹೆತ್ತವರು ಸುತ್ತಮುತ್ತ ಇರುವಾಗ ಅವರೊಂದಿಗೆ ಹೆಚ್ಚು ಮಾತನಾಡಿ ಮತ್ತು ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ ಎಂದು ಆನಂದ್ ಮಹೀಂದ್ರಾ ಇದೇ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ. ಆನಂದ್ ಮಹೀಂದ್ರಾ ಫ್ಲೆಚರ್ ಶಾಲೆಯಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, 'ಭಾರತದ ಸ್ವಾತಂತ್ರ್ಯದ 75ನೇ ವರ್ಷದಲ್ಲಿ, ಶಾಲೆಯ ತರಗತಿ ದಿನವನ್ನು ಉದ್ದೇಶಿಸಿ ಮತ್ತು ಡೀನ್ ಪದಕವನ್ನು ಸ್ವೀಕರಿಸಿದ 1ನೇ ಭಾರತೀಯ ಎಂಬ ಗೌರವ ನನಗೆ ಸಿಕ್ಕಿತು. ನಾನು ಅದನ್ನು ನನ್ನ ತಂದೆಗೆ ಪ್ರಾಕ್ಸಿಯಾಗಿ ಸ್ವೀಕರಿಸಿದ್ದೇನೆ ಎಂದು ನಾನು ಭಾವಿಸಿದ್ದೇನೆ' ಎಂದು ತಿಳಿಸಿದ್ದಾರೆ. 

click me!