
ಮನೆಯಲ್ಲೇ ಜಿಮ್ ಇಟ್ಟುಕೊಳ್ಳುವುದು ಇತ್ತೀಚಿನ ಫ್ಯಾಷನ್. ಹೊರಗೆ ಹೋಗಬಯಸದ ಬ್ಯುಸಿ ವ್ಯಕ್ತಿಗಳಿಂದ ಹಿಡಿದು, ಹಣವಿರುವ ಬಹಳಷ್ಟು ಜನ ಮನೆಯಲ್ಲೇ ಕೆಲವು ಪರಿಕರಗಳನ್ನು ಇಟ್ಟುಕೊಳ್ಳಲು ಬಯಸುತ್ತಾರೆ. ಮನೆಯಲ್ಲೇ ಜಿಮ್ ಇಟ್ಟುಕೊಳ್ಳುವವರ ಮೊದಲ ಆದ್ಯತೆ ಟ್ರೆಡ್ ಮಿಲ್ ಗೆ ಎನ್ನುವುದು ನಿಸ್ಸಂಶಯ. ಅದೆಷ್ಟೇ ದುಬಾರಿಯಾದರೂ ಟ್ರೆಡ್ ಮಿಲ್ ಅತ್ಯಂತ ಆಕರ್ಷಕ ಸಲಕರಣೆಗಳಲ್ಲಿ ಒಂದು. ಹೃದಯ ತಜ್ಞರ ಪ್ರಕಾರ, ಟ್ರೆಡ್ ಮಿಲ್ ನ ಸರಿಯಾದ ಬಳಕೆಯಿಂದ ಸೂಕ್ತ ಪ್ರಮಾಣದಲ್ಲಿ ತೂಕ ಕಳೆದುಕೊಳ್ಳಬಹುದು ಹಾಗೂ ಹೃದಯದ ಕಾರ್ಯಶೈಲಿ ಬಲಿಷ್ಠವಾಗುತ್ತದೆ. ಟ್ರೆಡ್ ಮಿಲ್ ವರ್ಕೌಟ್ ಮಾಡುವವರ ಫೇವರಿಟ್ ಆಗಿದೆ. ಇದು ಅನುಕೂಲಕರ ಜಿಮ್ ಸಾಧನ ಎಂಬುದಾಗಿ ಸಾಕಷ್ಟು ಜನ ಅಭಿಪ್ರಾಯಪಡುತ್ತಾರೆ. ಅದು ನಿಜವೂ ಹೌದು, ವಾಕಿಂಗ್ ಮತ್ತು ರನ್ನಿಂಗ್ ಮಾಡುವವರಿಗೆ ಟ್ರೆಡ್ ಮಿಲ್ ಅತ್ಯುತ್ತಮ. ಆದರೆ, ಟ್ರೆಡ್ ಮಿಲ್ ಏರುವ ಮುನ್ನ ನೀವು ಕೆಲವು ಸಂಗತಿಗಳನ್ನು ತಿಳಿದುಕೊಳ್ಳಬೇಕು. ಏಕೆಂದರೆ, ಟ್ರೆಡ್ ಮಿಲ್ ಬಳಕೆ ಮಾಡುವ ಬಹಳಷ್ಟು ಮಂದಿಯಲ್ಲಿ ಮಂಡಿಗಳ ನೋವು ಸರ್ವೇಸಾಮಾನ್ಯವಾಗಿ ಕಂಡುಬರುತ್ತದೆ. ಯುವಕರಲ್ಲಿ ಅಲ್ಲದಿದ್ದರೂ 55ರ ವಯೋಮಾನ ಮೇಲ್ಪಟ್ಟವರಲ್ಲಿ ಮಂಡಿಗಳ ನೋವು ಹೆಚ್ಚು.
ಬೊಜ್ಜು (Obesity) ಕರಗಿಸಬೇಕಾ?
ಒಂದೊಮ್ಮೆ ನೀವು ಅಧಿಕ ತೂಕ (Over Weight) ಹೊಂದಿದ್ದು, ಬೊಜ್ಜು ಕರಗಿಸುವ ಉದ್ದೇಶ ಹೊಂದಿದ್ದರೆ ಏಕಾಏಕಿ ಟ್ರೆಡ್ ಮಿಲ್ (Treadmill) ಬಳಕೆ ಮಾಡಬಾರದು ಎನ್ನುತ್ತಾರೆ ತಜ್ಞರು. ಏಕೆಂದರೆ, ಬೊಜ್ಜು ದೇಹ ಹೊಂದಿದವರಲ್ಲಿ ಟ್ರೆಡ್ ಮಿಲ್ ಬಳಸಿದಾಗ ಹಲವು ರೀತಿಯ ಸಮಸ್ಯೆಗಳು ಕಂಡುಬರುತ್ತದೆ. ಜತೆಗೆ, ಮೂಳೆಗಳು (Bones) ದುರ್ಬಲವಾಗುವ ಸಮಸ್ಯೆಯಾದ ಆಸ್ಟಿಯೋಪೊರೊಸಿಸ್ (Osteoporosis) ಇರುವವರು ಸಹ ಟ್ರೆಡ್ ಮಿಲ್ ಬಳಸಿದರೆ ಹೆಚ್ಚಿನ ತೊಂದರೆಗೆ ತುತ್ತಾಗುತ್ತಾರೆ.
Cholesterol Problem: ಎಷ್ಟು ಯತ್ನಿಸಿದ್ರೂ ಕೊಬ್ಬು ಕಡಿಮೆಯಾಗ್ತಿಲ್ವಾ? ಇದಿರಬಹುದು ಕಾರಣ
ಸಾಮಾನ್ಯ ನಡಿಗೆಗೂ (Walk) ಟ್ರೆಡ್ ಮಿಲ್ ಮೇಲಿನ ಒತ್ತಡಕ್ಕೂ (Stress) ವ್ಯತ್ಯಾಸವಿದೆ. ಸಾಮಾನ್ಯ ನಡಿಗೆಯಲ್ಲಿ ನಾವು ಹಾಕುವ ಹೆಜ್ಜೆಗಳ ಮೇಲೆ ವೇಗ (Speed) ನಿರ್ಧಾರವಾಗುತ್ತದೆ. ಆದರೆ, ಟ್ರೆಡ್ ಮಿಲ್ ನಲ್ಲಿ ಹಾಗಲ್ಲ. ಅಲ್ಲದೆ, ಇದರ ಮೇಲೆ ವಾಕ್ ಮಾಡುವಾಗ ದೇಹದ ಶಕ್ತಿಯ ಹರಿಯುವಿಕೆ (Energy Flow) ವಿರುದ್ಧ ದಿಕ್ಕಿನಲ್ಲಿ ಇರುತ್ತದೆ. ನೆಲದ ಮೇಲೆ ಓಡುವಾಗ (Running) ಅಥವಾ ನಡೆಯುವಾಗ ನಮ್ಮ ಶಕ್ತಿ ನೆಲದ ಮೇಲೆ ಬೀಳುತ್ತದೆ. ಆದರೆ, ಟ್ರೆಡ್ ಮಿಲ್ ಮೇಳೆ ಮಷಿನ್ ನಿಂದ ಕಾಲುಗಳಿಗೆ ಶಕ್ತಿ ಹರಿಯುತ್ತದೆ. ಕೆಲವರಿಗೆ ಮಂಡಿಗಳಲ್ಲಿರುವ ಕಾರ್ಟಿಲೇಜ್ ಸ್ವಲ್ಪ ನಾಜೂಕಾಗಿರುತ್ತದೆ. ಟ್ರೆಡ್ ಮಿಲ್ ವಾಕಿಂಗ್ ನಿಂದ ಅದಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ಮಂಡಿಗಳ (Knee) ಬಗ್ಗೆ ಕಾಳಜಿ ಅಗತ್ಯ. 55ರ ಮೇಲ್ಪಟ್ಟ ಹಿರಿಯರು ಟ್ರೆಡ್ ಮಿಲ್ ಮೇಲೆ ವಾಕಿಂಗ್ ಮಾಡುವುದರಿಂದ ದೂರವಿರುವುದು ಕ್ಷೇಮ ಎನ್ನುತ್ತಾರೆ ತಜ್ಞರು.
ಎಚ್ಚರಿಕೆ ವಹಿಸಿ
ಟ್ರೆಡ್ ಮಿಲ್ ಬಳಕೆ ಮಾಡುವಾಗ ಕೆಲವು ಎಚ್ಚರಿಕೆ (Care) ವಹಿಸಬೇಕಾಗುತ್ತದೆ. ಮೊದಲು ನಿಧಾನವಾದ ವಾಕಿಂಗ್ ನಿಂದ ಆರಂಭಿಸಿ ಆ ಬಳಿಕ ಬೇಕಾದರೆ ಓಡಬಹುದು. ಆದರೆ, ಟ್ರೆಡ್ ಮಿಲ್ ಸಿಕ್ಕಿತೆಂದು ಮೊದಲೇ ಓಡಲು ಆರಂಭಿಸಬಾರದು. ಅಸಲಿಗೆ, ಟ್ರೆಡ್ ಮಿಲ್ ಇರುವುದು ತೀವ್ರಗತಿಯ ವಾಕಿಂಗ್ (Brisk Walking) ಗಾಗಿ. ಅದು ಓಡುವುದಕ್ಕಲ್ಲ. ಓಡುವಾಗ ನಾವು ಸಹಜವಾಗಿ ಕಾಲುಗಳ ಬೆರಳು (Toes) ಹಾಗೂ ಹಿಮ್ಮಡಿಗಳ (Heel) ಮೇಲೆ ಹೆಚ್ಚು ಒತ್ತಡ ಹಾಕುತ್ತೇವೆ. ಆಂತರಿಕವಾಗಿ ಗಾಯವಾಗುವ (Injury) ಸಾಧ್ಯತೆ ಹೆಚ್ಚು. ಹೀಗಾಗಿ, ಟ್ರೆಡ್ ಮಿಲ್ ಮೇಲೆ ಓಡುವ ವಿಚಾರಕ್ಕಿಂತ ವಾಕಿಂಗ್ ಉತ್ತಮ.
10 ದಿನದಲ್ಲಿ ತೂಕ ಇಳಿಸ್ಕೊಳ್ಬೋದು, ಮಲಗೋ ಮುನ್ನ ಇಷ್ಟ್ ಮಾಡಿ ಸಾಕು
ವೇಗದ ಮೇಲೆ ಮಿತಿ ಇರಲಿ
ಅಮೆರಿಕದ ಉತ್ಪಾದನಾ ಸುರಕ್ಷತೆ ಆಯೋಗದ ಪ್ರಕಾರ, ಟ್ರೆಡ್ ಮಿಲ್ ಗಳಿಂದಾಗಿ ವ್ಯಾಯಾಮ (Exercise) ಸಂಬಂಧಿತ ಗಾಯವಾಗುವ ಪ್ರಮಾಣ ಅತಿ ಹೆಚ್ಚು. ಗರಿಷ್ಠ ವೇಗ ಇಟ್ಟುಕೊಂಡು ಓಡುವುದು ಮೊದಲು ಥ್ರಿಲ್ (Thrill) ನೀಡಬಹುದು, ಆದರೆ, ಸುರಕ್ಷಿತವಾಗಿರಲು ವೇಗದ ಮಿತಿಯನ್ನು ಕಡಿಮೆ ಮಾಡಿಕೊಳ್ಳಬೇಕು. ಇದರಲ್ಲಿ ಸಂಭವಿಸುವ ಇಲೆಕ್ಟ್ರಿಕ್ (Electric) ಎಳೆತದಿಂದಾಗಿಯೂ ಬೀಳುವ (Fall) ಸಾಧ್ಯತೆ ಹೆಚ್ಚು. ಹೀಗಾಗಿ, ನಿಧಾನ (Slow) ಗತಿಯಲ್ಲೇ ವಾಕ್ ಮಾಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.