ಕೋವಿಡ್ ಹೊಸ ವೈರಸ್‌ಗೆ 2 ಬಲಿ: ಶತಕದ ಗಡಿ ತಲುಪಿದ ಸೋಂಕಿತರ ಸಂಖ್ಯೆ!

By Sathish Kumar KHFirst Published Dec 20, 2023, 7:20 PM IST
Highlights

ಕೋವಿಡ್ 19 ಹೊಸ ಪ್ರಭೇದದ ಸೋಂಕಿಗೆ ಬೆಂಗಳೂರಿನಲ್ಲಿ ಇಬ್ಬರು ಬಲಿಯಾಗಿದ್ದಾರೆ. ಇನ್ನು ಸಕ್ರಿಯ ಸೋಂಕಿತ ಸಂಖ್ಯೆ 92ಕ್ಕೆ ಎರಿಕೆಯಾಗಿದೆ.

ಬೆಂಗಳೂರು (ಡಿ.20): ರಾಜ್ಯದಲ್ಲಿ ಕರೊನಾ ರೂಪಾಂತರಿ ಸೋಂಕಿನ ಸಂಖ್ಯೆ ಮತ್ತೆ ಹೆಚ್ಚಳವಾಗುತ್ತಿದೆ. ಇನ್ನು ಕೊರೊನಾ ರೂಪಾಂತರಿ ಹೊಸ ಪ್ರಭೇದದ ಸೋಂಕಿಗೆ ಬೆಂಗಳೂರಿನಲ್ಲಿ ಇಬ್ಬರು ಬಲಿಯಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಕ್ರಿಯ ಕರೊನಾ ಸೋಂಕಿತರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಅದರಲ್ಲಿಯೂ ಬೆಂಗಳೂರು ಮತ್ತು ಬಳ್ಳಾರಿ ಕೋವಿಡ್‌ ವೈರಸ್‌ನ ಹಾಟ್‌ಸ್ಪಾಟ್‌ ತಾಣವಾಗಿದೆ ಎಂಬುದು ಆತಂಕಕಾರಿ ವಿಚಾರವಾಗಿದೆ.

ರಾಜ್ಯದಲ್ಲಿ ಇಂದು 22 ಜನರಲ್ಲಿ ಹೊಸದಾಗಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 19 ಮಂದಿ, ಬಳ್ಳಾರಿಯಲ್ಲಿ ಇಬ್ಬರು ಹಾಗೂ ಮಂಗಳೂರಿನಲ್ಲಿ ಒಬ್ಬ ವ್ಯಕ್ತಿ ಸೇರಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟಾರೆ ಕೋವಿಡ್ ಸೋಂಕಿತ ಸಂಖ್ಯೆಯಲ್ಲಿ ಕೇರಳ ಮತ್ತು ಕರ್ನಾಟಕ ಅತಿಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಕೇಂದ್ರ ಸರ್ಕಾರ ಕೋವಿಡ್ ಸೋಂಕು ಹರಡುವಿಕೆ ತಡೆಗಟ್ಟಲು ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಎರಡೂ ರಾಜ್ಯಗಳಿಗೆ ಸೂಚನೆ ನೀಡಿದೆ.

ಭಾರತದಲ್ಲಿ 21 ಹೊಸ ಕೋವಿಡ್ ತಳಿ JN.1 ಪ್ರಕರಣ ದೃಢ, 4ನೇ ಅಲೆ ಭೀತಿ!

ಇನ್ನು ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 2.47% ಪಾಸಿಟಿವ್ ರೇಟ್ ಹೆಚ್ಚಳವಾಗಿದೆ. ರಾಜ್ಯದಲ್ಲಿ ಕಳೆದೊಂದು ದಿನದಲ್ಲಿ ಕೋವಿಡ್ ಸೋಂಕಿಗೆ ಇಬ್ಬರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ  407 ಆರ್‌ಟಿಪಿಸಿಆರ್ (RTCPR) ಹಾಗೂ 401 ರ್ಯಾಪಿಡ್ ಆಂಟಿಜೆನ್ ಟೆಸ್ಟ್ (RAT) ಟೆಸ್ಟ್‌ಗಳನ್ನ ಮಾಡಲಾಗಿದೆ. ಈ ಪೈಕಿ 22 ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟು 92 ಸಕ್ರಿಯ ಪ್ರಕರಣಗಳಲ್ಲಿ 72  ಕೇಸ್‌ಗಳು ಹೋಮ್ಐಸೋಲೇಷನ್‌ನಲ್ಲಿ ಇರಲು ಸೂಚನೆ ನೀಡಲಾಗಿದೆ. ಬಾಕಿ 20 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ 7 ಜನ ಸೋಂಕಿತರು ಐಸಿಯುನಲ್ಲಿ  ಹಾಗೂ 13 ಮಂದಿ ಜನರಲ್ ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ಏರ್‌ಪೋರ್ಟ್: ತಮಿಳು ಅಯಾನ್ ಸಿನಿಮಾ ರೀತಿ ಕೊಕೇನ್ ಮಾತ್ರೆಗಳನ್ನು ನುಂಗಿಬಂದ ಡ್ರಗ್ಸ್‌ ಪೆಡ್ಲರ್!

ಕಾಫಿನಾಡಿನಲ್ಲೂ ನಾಲ್ಕು ಮಂದಿಗೆ ಕೋವಿಡ್ ಪಾಸಿಟಿವ್: ರಾಜ್ಯದಲ್ಲಿ ಪ್ರವಾಸಿಗರ ಸ್ವರ್ಗವೆಂದೇ ಹೇಳಲಾಗುವ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಯನ್ನು ಆರಂಭಿಸಿದ ಮೊದಲ ದಿನವೇ ಕೊರೊನಾ ಮಹಾಸ್ಫೋಟ ಇರುವುದು ಕಂಡುಬಂದಿದೆ. ಒಂದೇ ದಿನ 4 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 51 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ ನಾಲ್ಕು ಜನರಿಗೆ ಸೋಂಕಿರುವುದು ದೃಢಪಟ್ಟಿದೆ. ಈಗ ಜಿಲ್ಲೆಯ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿದೆ.

click me!