ಗುಟ್ಟಾಗಿ ತರಿಸಿದ್ರೂ ಈಗ ರಟ್ಟಾಗಿಬಿಡ್ತು! ಕಳೆದ ಸೆಪ್ಟೆಂಬರ್‌ನಲ್ಲಿತ್ತು ಕಾಂಡೋಮ್ ಟ್ರೆಂಡ್!‌

By Suvarna NewsFirst Published Dec 20, 2023, 5:53 PM IST
Highlights

ದೇಶದ ನಗರಗಳಲ್ಲಿ ಮನೆಮನೆಗೆ ಆಹಾರ ತಲುಪಿಸುವ ಇ-ಕಾಮರ್ಸ್‌ ಸಂಸ್ಥೆ ಸ್ವಿಗ್ಗಿಯ ಮೂಲಕ, ಗ್ರಾಹಕರು ಸೆಪ್ಟೆಂಬರ್‌ ತಿಂಗಳಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಪಡೆದ ವಸ್ತು ಎಂದರೆ ಕಾಂಡೋಮ್.‌ ಸಂಸ್ಥೆ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ಇದು ತಿಳಿದುಬಂದಿದೆ.

ಆಹಾರವನ್ನು ಮನೆಮನೆಗೆ ತಲುಪಿಸುವ ಇ-ಕಾರ್ಮಸ್‌ ವೇದಿಕೆ ಸ್ವಿಗ್ಗಿಯ ಪ್ರಕಾರ, ನಮ್ಮ ದೇಶದ ಅತ್ಯಂತ ರೋಮ್ಯಾಂಟಿಕ್‌ ತಿಂಗಳೆಂದರೆ ಕಳೆದ ಸೆಪ್ಟೆಂಬರ್‌! ಪ್ರೇಮಿಗಳ ದಿನಾಚರಣೆ ಮಾಡುವ ಫೆಬ್ರವರಿಗೂ ಮಿಗಿಲಾಗಿ ಅದೇನು ಸೆಪ್ಟೆಂಬರ್‌ ತಿಂಗಳು ರೋಮ್ಯಾಂಟಿಕ್‌ ತಿಂಗಳೆಂದು ಹೇಳಲು ಸಾಧ್ಯ ಎಂದು ಅಚ್ಚರಿ ಪಡಬೇಡಿ. ಸೆಪ್ಟೆಂಬರ್‌ ನಲ್ಲಿ ಗ್ರಾಹಕರು ಸ್ವಿಗ್ಗಿ ಮೂಲಕ ಗರಿಷ್ಠ ಪ್ರಮಾಣದಲ್ಲಿ ಕಾಂಡೋಮ್‌ ತರಿಸಿಕೊಂಡಿದ್ದಾರೆ! ಸ್ವಿಗ್ಗಿ ಸಂಸ್ಥೆ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ಇದನ್ನು ಹೇಳಲಾಗಿದೆ. ಭಾರತದಾದ್ಯಂತ ಸಂಚರಿಸುವ ಸ್ವಿಗ್ಗಿ ಡೆಲಿವರಿ ಬಾಯ್ಸ್‌ ಬೇಕಾದ ದಿನಸಿ ಹಾಗೂ ತರಕಾರಿಗಳನ್ನೂ ಈಗ ತಲುಪಿಸುತ್ತಾರೆ. ತರಕಾರಿ ವಿಭಾಗದಲ್ಲಿ ಅತಿ ಹೆಚ್ಚು ಜನಮನ್ನಣೆ ಗಳಿಸಿರುವುದು ಈರುಳ್ಳಿ, ನಂತರದ ಸ್ಥಾನದಲ್ಲಿ ಟೋಮ್ಯಾಟೋ ಹಾಗೂ ಕೊತ್ತಂಬರಿ ಸೊಪ್ಪುಗಳಿವೆ! ಮನೆಯೊಂದರ ಜನರು ಆನ್‌ ಲೈನ್‌ ಮೂಲಕ ತರಿಸುವ ತಿಂಡಿ-ತಿನಿಸು, ದಿನಸಿ, ತರಕಾರಿಗಳು ವರ್ಷಾಂತ್ಯ ಇಡೀ ದೇಶದ ಮಟ್ಟದಲ್ಲಿ ನೋಡಿದಾಗ, ಯಾವ ಸೀಸನ್ನಿನಲ್ಲಿ ಯಾವ ಟ್ರೆಂಡ್‌ ಇದೆಯೆನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತವೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್‌ ತಿಂಗಳು ಕಾಂಡೋಮ್‌ ಟ್ರೆಂಡ್‌ ಇತ್ತು!  

ಅನೇಕ ಕುತೂಹಲಕಾರಿ ಸಂಗತಿಗಳನ್ನು ಸ್ವಿಗ್ಗಿಯ (Swiggy) ವಾರ್ಷಿಕ ವರದಿ (Annual Report) ಉಲ್ಲೇಖಿಸಿದೆ. ಚೆನ್ನೈನ ವ್ಯಕ್ತಿಯೊಬ್ಬರು ಅತಿ ಹೆಚ್ಚು ಅಂದರೆ ಸುಮಾರು 31 ಸಾವಿರಕ್ಕೂ ಅಧಿಕ ಮೌಲ್ಯದ (Value) ಆಹಾರ ವಸ್ತುಗಳನ್ನು (Food Items) ತರಿಸಿಕೊಂಡಿದ್ದಾರೆ. ಕಾಫಿ, ನ್ಯಾಚೊ, ಕುಕ್ಕೀಸ್‌, ಜ್ಯೂಸ್‌, ಚಿಪ್ಸ್‌ ಸೇರಿದಂತೆ ಇಷ್ಟು ಹಣವಾಗಿದೆ! ಹಾಗೆಯೇ, ಜೈಪುರದ ವ್ಯಕ್ತಿಯೊಬ್ಬರು ಒಂದೇ ದಿನ 67 ಆರ್ಡರ್‌ (Order) ಮಾಡಿ ದಾಖಲೆ ನಿರ್ಮಿಸಿದ್ದಾರೆ.

2023ರಲ್ಲಿ ಸ್ವಿಗ್ಗಿಯಲ್ಲಿ ಅತೀ ಹೆಚ್ಚು ಆರ್ಡರ್ ಮಾಡಿದ ಫುಡ್‌, ಸತತ ಎಂಟನೇ ವರ್ಷ ನಂ.1 ಸ್ಥಾನದಲ್ಲಿ ಬಿರಿಯಾನಿ

ದೆಹಲಿಯಲ್ಲಿ ಒಬ್ಬ ಅಂಗಡಿಯಾತ ಸ್ವಿಗ್ಗಿಯಲ್ಲಿ ಸುಮಾರು 1 ಲಕ್ಷದ 70 ಸಾವಿರ ರೂಪಾಯಿ ಮೌಲ್ಯದ ದಿನಸಿ ಆರ್ಡರ್‌ ಮಾಡಿ ಬರೋಬ್ಬರಿ 12 ಸಾವಿರ ಉಳಿತಾಯ ಮಾಡಿರುವುದು ಸಹ ತಿಳಿದುಬಂದಿದೆ. 

ಸೆಪ್ಟೆಂಬರ್‌ ತಿಂಗಳಲ್ಲಿ ರೋಮ್ಯಾನ್ಸ್‌ (Romance)
2023ನೇ ಸಾಲಿನ ಸ್ವಿಗ್ಗಿ ವರದಿ ಪ್ರಕಾರ, ದೇಶದ ಎಲ್ಲ ನಗರಗಳಲ್ಲಿ ಸೆಪ್ಟೆಂಬರ್‌ (September) ತಿಂಗಳಲ್ಲಿ ಕಾಂಡೋಮ್‌ (Condom) ಮಾರಾಟ ಜೋರಾಗಿತ್ತು. ಒಟ್ಟಾರೆ ತಿಂಗಳ ಪೂರ್ತಿ ಕಾಂಡೋಮ್‌ ಆರ್ಡರ್‌ ಗಳು ಅತಿ ಹೆಚ್ಚಾಗಿತ್ತು. ಆದರೆ, ದಿನದ ಲೆಕ್ಕದಲ್ಲಿ ನೋಡಿದಾಗ ಆಗಸ್ಟ್‌ 12ರಂದು ಕಾಂಡೋಮ್‌ ಮಾರಾಟ ಹೆಚ್ಚಾಗಿತ್ತು. ಅದೊಂದೇ ದಿನ ಬರೋಬ್ಬರಿ 5893 ಕಾಂಡೋಮ್‌ ಯೂನಿಟ್‌ ಗಳನ್ನು ಡೆಲಿವರಿ ನೀಡಲಾಗಿದೆ. ಕಾಂಡೋಮ್‌ ಹೊರತುಪಡಿಸಿದರೆ, ಅತಿ ಸಾಮಾನ್ಯವಾಗಿ ಆರ್ಡರ್‌ ಆಗಿದ್ದ ಇನ್ನೊಂದು ವಸ್ತುವೆಂದರೆ ಈರುಳ್ಳಿ (Onion). ಹಾಗೆಯೇ, ಬಾಳೆಹಣ್ಣು ಮತ್ತು ಚಿಪ್ಸ್‌ ಗಳು ಸಹ ಈ ಸಾಲಿನಲ್ಲಿವೆ.

ಸ್ವಿಗ್ಗಿ ಫುಡ್ ಆರ್ಡರ್ ಮಾಡಿದ್ದನ್ನು 6 ಡೆಲಿವರಿ ಹುಡುಗ್ರು ತರೋದಾ?

ಆರೋಗ್ಯಕರ ಸ್ನ್ಯಾಕ್ಸ್‌
ಆರೋಗ್ಯಕರ ಸ್ನ್ಯಾಕ್ಸ್‌ (Snacks)ಗಳಿಗೆ ಬೇಡಿಕೆ ಹೆಚ್ಚಾಗಿರುವುದನ್ನು ಸ್ವಿಗ್ಗಿ ಗುರುತಿಸಿದೆ. ಮಖಾನಕ್ಕೆ ಗರಿಷ್ಠ ಬೇಡಿಕೆ ಇದ್ದು, 1.3 ಮಿಲಿಯನ್‌ ಆರ್ಡರ್‌ ಬಂದಿರುವುದು ಇದಕ್ಕೆ ಸಾಕ್ಷಿ. ಹಣ್ಣುಗಳ (Fruits) ಪೈಕಿ ಮಾವಿನ ಹಣ್ಣು ಹೆಚ್ಚು ಬೇಡಿಕೆ ಹೊಂದಿದ್ದು, ಇದನ್ನು ಅತಿ ಹೆಚ್ಚು ಆರ್ಡರ್‌ ಮಾಡಿರುವ ನಗರಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನ. ಈ ವಿಚಾರದಲ್ಲಿ ಬೆಂಗಳೂರು (Bengaluru) ನಗರವು, ಮುಂಬೈ, ಹೈದರಾಬಾದ್‌ ಗಳನ್ನೂ ಮೀರಿಸಿದೆ. ದೇಶದ ಎಲ್ಲ ಪ್ರದೇಶಗಳನ್ನು ಒಳಗೊಂಡು, ಕಳೆದ ಮೇ 21ರಂದು ಒಂದೇ ದಿನ ಬರೋಬ್ಬರಿ 36 ಟನ್‌ ಮಾವಿನ ಹಣ್ಣುಗಳನ್ನು ರವಾನಿಸಲಾಗಿದೆ.

click me!