Yoga Day: ಗರ್ಭಿಣಿ ಈ ತಿಂಗಳಲ್ಲಿ ಯೋಗಾಭ್ಯಾಸ ಶುರು ಮಾಡಿದ್ರೆ ಆರೋಗ್ಯಕ್ಕೊಳ್ಳೆಯದು

By Suvarna NewsFirst Published Jun 19, 2022, 1:08 PM IST
Highlights

ಗರ್ಭಿಣಿಯರು ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡ್ಬೇಕಾಗುತ್ತದೆ. ಪ್ರತಿಯೊಂದು ಕೆಲಸ ಮಾಡುವಾಗ್ಲೂ ವೈದ್ಯರ ಸಲಹೆ ಪಡೆಯಬೇಕು. ಆರೋಗ್ಯ ಸರಿಯಾಗಿರಲಿ ಎನ್ನುವ ಕಾರಣಕ್ಕೆ ಸಮಯವಲ್ಲದ ಸಮಯದಲ್ಲಿ ಯೋಗ ಮಾಡಿ ಮಗು ಕಳೆದುಕೊಳ್ಳುವ ಅಪಾಯವನ್ನು ಗರ್ಭಿಣಿಯರು ತಂದುಕೊಳ್ಳಬಾರದು. 
 

ಯೋಗ (Yoga) ಕೇವಲ ದೇಹಕ್ಕೆ ವ್ಯಾಯಾಮ (Exercise) ನೀಡುವುದಿಲ್ಲ. ದೇಹ (Body), ಮನಸ್ಸು ಮತ್ತು ಉಸಿರಾಟದ ನಡುವೆ ಸಮತೋಲನವನ್ನು ತರುವ ಕೆಲಸವನ್ನು ಮಾಡುತ್ತದೆ.  ದೈಹಿಕ ವ್ಯಾಯಾಮ ಮತ್ತು ಭಂಗಿ, ಉಸಿರಾಟದ ವ್ಯಾಯಾಮ, ವಿಶ್ರಾಂತಿ ಮತ್ತು ಧ್ಯಾನದ ಸಹಾಯದಿಂದ ನಾವು ದೇಹ,ಮನಸ್ಸು ಹಾಗೂ ಬುದ್ದಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಯೋಗಾಸನವು ರಕ್ತದ ಹರಿವು, ಸ್ನಾಯು  ಮತ್ತು ದೇಹದ ನಮ್ಯತೆಯನ್ನು ಸುಧಾರಿಸುತ್ತದೆ. ವಿಶ್ರಾಂತಿ, ಉಸಿರಾಟ ಮತ್ತು ಧ್ಯಾನವು ಮನಸ್ಸನ್ನು ಶಾಂತವಾಗಿ ಮತ್ತು ಸಮತೋಲನದಲ್ಲಿರಿಸುತ್ತದೆ. ಸ್ನಾಯು ಸೆಳೆತ ನಿವಾರಣೆಯಾಗುತ್ತದೆ ಮತ್ತು ಮನಸ್ಸು ಶಾಂತವಾಗಿರುತ್ತದೆ. ಮೊದಲಿನಿಂದಲೂ ಯೋಗ ಮಾಡುವ ಮಹಿಳೆಯರು ಗರ್ಭಾವಸ್ಥೆಯಲ್ಲಿಯೂ ಯೋಗ  ಮಾಡುತ್ತಾರೆ. ಮತ್ತೆ ಕೆಲವರು ಗರ್ಭಾವಸ್ಥೆಯಲ್ಲಿ ಯೋಗ ಶುರು ಮಾಡಲು ಬಯಸ್ತಾರೆ. ಆದ್ರೆ ಸರಿಯಾದ ಮಾರ್ಗದರ್ಶನವಿಲ್ಲದೆ, ಸೂಕ್ತ ಸಮಯದಲ್ಲಿ ಯೋಗ ಮಾಡದ ಕಾರಣ ಸಮಸ್ಯೆ ಎದುರಿಸುತ್ತಾರೆ.   ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅನೇಕ ಯೋಗಾಸನಗಳನ್ನು ಗರ್ಭಧಾರಣೆಯ ಕೊನೆಯ ವಾರಗಳಲ್ಲಿಯೂ ಮಾಡಬಹುದು. ಅಧ್ಯಯನದ ಪ್ರಕಾರ, ಗರ್ಭಿಣಿಯರು ಸುಖಾಸನ, ಪಶ್ಚಿಮೋತ್ತಾಸನ, ಮಾರ್ಜರಿಯಾಸನ, ವೀರಭದ್ರಾಸನ, ಉತ್ತಾನಾಸನ, ಊರ್ಧ್ವ ಉತ್ತಾನಾಸನ, ವಿರಾಸನ ಮತ್ತು ಉಷ್ಟ್ರಾಸನ ಇತ್ಯಾದಿಗಳನ್ನು ಮಾಡಬಹುದು. 

ಗರ್ಭಿಣಿಯರು ಯಾವ ತಿಂಗಳಿನಲ್ಲಿ ಯೋಗಾಭ್ಯಾಸ ಮಾಡ್ಬಹುದು ? : ಯೋಗವನ್ನು ಹಿಂದೆಂದೂ ಮಾಡಿಲ್ಲ, ಗರ್ಭಾವಸ್ಥೆಯಲ್ಲಿಯೇ ಶುರು ಮಾಡ್ತೇವೆ ಎನ್ನುವವರು ಗರ್ಭಧಾರಣೆಯ 14 ನೇ ವಾರದಲ್ಲಿ ನೀವು ಯೋಗವನ್ನು ಪ್ರಾರಂಭಿಸಬಹುದು. ನೀವು ಮೊದಲ ಬಾರಿಗೆ ಯೋಗ ಮಾಡುತ್ತಿದ್ದರೆ  ಮೊದಲ ತ್ರೈಮಾಸಿಕದಲ್ಲಿ ಯೋಗ ಮಾಡಬೇಡಿ. ಮೊದಲ ಮೂರು ತಿಂಗಳು ಯೋಗ ಮಾಡುವುದು ಒಳ್ಳೆಯದಲ್ಲ. ಇದ್ರಿಂದ ಗರ್ಭಪಾತವಾಗುವ ಸಾಧ್ಯತೆಯಿರುತ್ತದೆ. ಯೋಗ ಅಥವಾ ಇತರ ಯಾವುದೇ ವ್ಯಾಯಾಮ ಮಾಡುವುದರಿಂದ ಭ್ರೂಣಕ್ಕೆ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಬಹಳ ಮುಖ್ಯ.

INTERNATIONAL YOGA DAY: ಇತಿಹಾಸ, ಬೆಳವಣಿಗೆ, ಪ್ರಯೋಜನದ ಬಗ್ಗೆ ತಿಳಿಯಿರಿ

ಐವಿಎಫ್ ನಲ್ಲಿ ಯೋಗ :  ನೀವು ಐವಿಎಫ್ ಸಹಾಯದಿಂದ ಗರ್ಭಿಣಿಯಾಗಿದ್ದರೆ ನೀವು 20 ನೇ ವಾರಕ್ಕಿಂತ ಮೊದಲು ಯೋಗವನ್ನು ಪ್ರಾರಂಭಿಸಬಾರದು. ಐವಿಎಫ್ (IVF) ಚಿಕಿತ್ಸೆಯಲ್ಲಿ, ಅವಳಿ ಅಥವಾ ಬಹು ಮಕ್ಕಳು ಜನಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದಾಗಿ ಗರ್ಭಪಾತದ ಅಪಾಯವೂ ಹೆಚ್ಚು. ಆದ್ದರಿಂದ ನೀವು ಈ ಸಮಯದಲ್ಲಿ ಜಾಗರೂಕರಾಗಿರುವುದು ಉತ್ತಮ.

ಮೊದಲ ಮೂರು ತಿಂಗಳಲ್ಲಿ ಏನು ಮಾಡಬೇಕು ? :  ಗರ್ಭ ಧರಿಸಿದ ಮೊದಲ  ಮೂರು ತಿಂಗಳಲ್ಲಿ ಯೋಗ ಮಾಡಲು ಬಯಸಿದ್ದರೆ  ಕೇವಲ ಸಣ್ಣಪುಟ್ಟ ಯೋಗ ಮಾಡಬೇಕು. ಉಸಿರಾಟದ ವ್ಯಾಯಾಮ ಮಾಡುವುದು ಯೋಗ್ಯ.

Yoga and Health: ಲೈಂಗಿಕ ಜೀವನ ಚೆನ್ನಾಗಿ ಇರ್ಬೇಕಂದ್ರೆ ಪ್ರತಿ ದಿನ ಮಾಡಿ ಈ ಯೋಗ

ಯೋಗ ಪ್ರಾರಂಭಿಸಲು ಇದು ಸರಿಯಾದ ಸಮಯ : ಯೋಗವನ್ನು ಪ್ರಾರಂಭಿಸಲು ಗರ್ಭಧಾರಣೆಯು ಉತ್ತಮ ಸಮಯ. ಪ್ರಾರಂಭದಲ್ಲಿ ಸುಲಭವಾದ ಯೋಗಾಸನಗಳನ್ನು ಮಾತ್ರ ಮಾಡಬೇಕು. ನಂತ್ರ ನೀವು ಹೊಸ ಹೊಸ ಭಂಗಿಗಳನ್ನು ಸೇರಿಸಬಹುದು. ಗರ್ಭಧಾರಣೆಯ ಹಂತಕ್ಕೆ ಅನುಗುಣವಾಗಿ ಅದನ್ನು ಬದಲಾಯಿಸಬೇಕು. ಯೋಗಾಸನ, ದೇಹದ ಮೇಲೆ ಒತ್ತಡ ಹೇರುವ ಬದಲು ಹಿಗ್ಗಿಸುವ ಕೆಲಸ ಮಾಡುತ್ತದೆ. ಯೋಗ ಒಳ್ಳೆಯದು ನಿಜ. ಆದ್ರೆ ಸಾಧ್ಯವಾಗದ ಭಂಗಿಗಳನ್ನು ಗರ್ಭಾವಸ್ಥೆಯಲ್ಲಿ ಮಾಡಲು ಹೋಗ್ಬಾರದು. ಯಾವುದೇ ನೋವು ಅಥವಾ ಅಸ್ವಸ್ಥತೆಯನ್ನು ಅನುಭವಿಸಿದರೆ ಯೋಗಾಭ್ಯಾಸವನ್ನು ನಿಲ್ಲಿಸುವುದು ಒಳ್ಳೆಯದು. ವೈದ್ಯರೇ ಯೋಗಾಭ್ಯಾಸಕ್ಕೆ ಸಂಬಂಧಿಸಿದಂತೆ ಸಲಹೆ ನೀಡ್ತಾರೆ. ಅದನ್ನು ಸರಿಯಾಗಿ ಪಾಲನೆ ಮಾಡ್ಬೇಕಾಗುತ್ತದೆ.

ಗರ್ಭಿಣಿಯರು ಇದನ್ನು ನೆನಪಿಡಿ : ಯೋಗ ಮಾಡುವ ಭರದಲ್ಲಿ ದೇಹಕ್ಕೆ ಒತ್ತಡ ಹಾಕಬೇಡಿ. ಯೋಗವನ್ನು ತರಾತುರಿಯಲ್ಲಿ ಮಾಡ್ಬೇಡಿ. ನಿಧಾನವಾಗಿ, ಸಾಧ್ಯವಾದಷ್ಟೇ ಯೋಗವನ್ನು ಮಾಡಿ. ನಿಮಗೆ ದಣಿವಾದಾಗ ಯೋಗ ಅಭ್ಯಾಸವನ್ನು ನಿಲ್ಲಿಸಿ ಮತ್ತು ಒಂದು ಗುಟುಕು ನೀರು ಕುಡಿಯಿರಿ. ಯೋಗಾಭ್ಯಾಸ ಸಾಧ್ಯವೇ ಇಲ್ಲ ಎನ್ನುವವರು ಅದನ್ನು ಒತ್ತಾಯ ಪೂರ್ವಕವಾಗಿ ಪ್ರಯತ್ನಿಸುವ ಅಗತ್ಯವಿಲ್ಲ. 

 


 

click me!