ಬೇಸಿಗೆ ಶುರುವಾಗುತ್ತಲೇ, ಮಕ್ಕಳಲ್ಲಿ ನಿರ್ಜಲೀಕರಣ ಸಾಮಾನ್ಯವಾಗಿ ಬಿಡುತ್ತಿದೆ. ನಿರ್ಜಲೀಕರಣದಿಂದ ಮಕ್ಕಳ ದೇಹದಲ್ಲಾಗುವ ಪರಿಣಾಮ ಹಾಗೂ ನಿರ್ಜಲೀಕರಣ ನಿವಾರಣೆಗೆ ಫೋರ್ಟಿಸ್ ಆಸ್ಪತ್ರೆ ಮಕ್ಕಳ ತಜ್ಞ ಡಾ ಯೋಗೇಶ್ ಕುಮಾರ್ ಗುಪ್ತಾ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಬೇಸಿಗೆ ಶುರುವಾಗುತ್ತಲೇ, ಮಕ್ಕಳಲ್ಲಿ ನಿರ್ಜಲೀಕರಣ ಸಾಮಾನ್ಯವಾಗಿ ಬಿಡುತ್ತಿದೆ. ಈ ಬಾರಿ ಸಹ ಬೇಸಿಗೆ ತನ್ನ ಪ್ರಹಾರ ನಡೆಸುತ್ತಿದ್ದು, ಮಕ್ಕಳು ನಿರ್ಜಲೀಕರಣಕ್ಕೆ ಒಳಗಾಗುತ್ತಿದ್ದಾರೆ. ಈ ನಿರ್ಜಲೀಕರಣದಿಂದ ಮಕ್ಕಳ ದೇಹದಲ್ಲಾಗುವ ಪರಿಣಾಮ ಹಾಗೂ ನಿರ್ಜಲೀಕರಣ ನಿವಾರಣೆಗೆ ಮಾಡಬೇಕಾದ ಕ್ರಮಗಳ ಕುರಿತು ಫೋರ್ಟಿಸ್ ಆಸ್ಪತ್ರೆ ಮಕ್ಕಳ ತಜ್ಞ ಡಾ ಯೋಗೇಶ್ ಕುಮಾರ್ ಗುಪ್ತಾ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
1. ನಿರ್ಜಲೀಕರಣಕ್ಕೆ ಕಾರಣಗಳೇನು?
ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ಉಂಟಾಗುವ ಸಮಸ್ಯೆಯೇ ನಿರ್ಜಲೀಕರಣ (dehydration). ಈಗಂತೂ ಬೇಸಿಯಾಗಿರುವ ಕಾರಣ, ನಿರ್ಜಲೀಕರಣ ಸಾಮಾನ್ಯವಾಗಿದೆ. ಅದರಲ್ಲೂ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಏಕೆಂದರೆ, ಮಕ್ಕಳು ಹೆಚ್ಚು ನೀರು ಕುಡಿಯುವುದಿಲ್ಲ.. ಲಿಕ್ವಿಡ್‌ಯುಕ್ತ ಆಹಾರ ಸೇವನೆ ಕಡಿಮೆ ಮಾಡುವುದರಿಂದ ನಿರ್ಜಲೀಕರಣ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಬಿಸಿಲಿನ ತಾಪಕ್ಕೆ ದೇಹದಲ್ಲಿರುವ ನೀರಿನಾಂಶ ಖಾಲಿಯಾಗಿ, ದೇಹದ ಉಷ್ಣತೆ (Body Heat) ಹೆಚ್ಚಾಗಲಿದೆ. ನಮ್ಮ ದೇಹ ಶೇ.75ರಷ್ಟು ನೀರಿನಿಂದಲೇ ಕೂಡಿರುವುದರಿಂದ, ದೇಹ ಸದಾ ಹೈಡ್ರೇಟ್ ಆಗಿರುವುದು ಮುಖ್ಯ. ಹೆಚ್ಚು ಉಷ್ಣಾಂಶವಿರುವ ಆಹಾರ ಸೇವನೆಯಿಂದಲೂ ದೇಹ ನಿರ್ಜಲೀಕರಣಕ್ಕೆ ಒಳಗಾಗಬಹುದು. ಹೀಗಾಗಿ ಮಕ್ಕಳ ಮೇಲೆ ಬೇಸಿಗೆ ಕಾಲದಲ್ಲಿ ಸಾಕಷ್ಟು ಗಮನ ವಹಿಸುವುದು ಮುಖ್ಯ.
undefined
Summer Tips: ಬಿಸಿಲ ಬೇಗೆಯಿಂದ ಬಳಲದೇ ಇರಲಿ ಜೀವ, ಈ ಟಿಪ್ಸ್ ಫಾಲೋ ಮಾಡಿ
2 ನಿರ್ಜಲೀಕರಣ ತಡೆ ಹೇಗೆ?
ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ನೀರು ಸೇವನೆಯ ಮಹತ್ವ ತಿಳಿಸಬೇಕು ಹಾಗೂ ಅಭ್ಯಾಸ ಬೆಳೆಸಿರಬೇಕು. ಹೆಚ್ಚು ನೀರು, ಹಣ್ಣು, ತರಕಾರಿ ತಿನ್ನುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಾಪಾಡಿಕೊಳ್ಳಲು ಸಾಧ್ಯ. 7 ವರ್ಷ ಒಳಗಿನ ಮಕ್ಕಳು ಕನಿಷ್ಠ 1.5 ಲೀಟರ್ ನೀರನ್ನು ದಿನಕ್ಕೆ ಕುಡಿಯಬೇಕು. 7 ವರ್ಷ ಮೀರಿದ ಮಕ್ಕಳು ದಿನಕ್ಕೆ 2 ಲೀಟರ್ ನೀರು ಸೇವನೆ ಉತ್ತಮ. ಇನ್ನು, ಬೇಸಿಗೆಯಲ್ಲಿ ಮಕ್ಕಳನ್ನು ಮಧ್ಯಾಹ್ನದ ವೇಳೆ ಆಟವಾಡಲು ಹೊರಾಂಗಣಕ್ಕೆ ಹೋಗುವುದನ್ನು ತಪ್ಪಿಸಿ, ಬದಲಿಗೆ, ಬೆಳಗ್ಗೆ ಅಥವಾ ಸಂಜೆ ಸೂರ್ಯನ ಶಾಖ ಕಡಿಮೆ ಇದ್ದಾಗ ಕಳುಹಿಸುವುದು ಉತ್ತಮ. ಎಣ್ಣೆಯುಕ್ತ, ಮಸಾಲೆಯುಕ್ತ ಆಹಾರಗಳ ಸೇವನೆ ನಿಯಂತ್ರಿಸಿ, ಆದಷ್ಟು ಲಿಕ್ವಿಡ್ ಆಹಾರ ಸೇವಿಸಿ.
3. ನಿರ್ಜಲೀಕರಣದಿಂದ ಮಕ್ಕಳಲ್ಲಾಗುವ ಆರೋಗ್ಯದ ಸಮಸ್ಯೆಗಳೇನು?
ನಿರ್ಜಲೀಕರಣ ಅತ್ಯಂತ ಅಪಾಯಕಾರಿ. ಮಕ್ಕಳ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತಿದ್ದರೆ, ಬಿಪಿ ಲೋ, ಹಳದಿ ಮೂತ್ರ ವಿಸರ್ಜನೆ, ತಲೆ ಸುತ್ತು, ವಾಂತಿ, ಬೇಧಿ, ಹೊಟ್ಟೆ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ, ಹೆಚ್ಚು ನಿದ್ರೆ ಮಾಡುವುದು, ಮೂರ್ಛೆ ರೋಗ (Epilepsy) ಸಹ ಬರುವ ಸಾಧ್ಯತೆ ಇದೆ. ಇನ್ನೂ ಕೆಲವು ಮಕ್ಕಳಲ್ಲಿ ಕಿಡ್ನಿ ಸ್ಟೋನ್ (Kidney stone) ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದಲ್ಲದೆ, ಒಣಚರ್ಮ (Dry skin), ಒಣಕೂದಲು ಆಗಬಹುದು.
4. ಮನೆಮದ್ದು ಪ್ರಯೋಜನಕಾರಿಯೇ?
ನಿರ್ಜಲೀಕರಣ ಹೋಗಲಾಡಿಸಲು ಮನೆ ಮದ್ದು ಅತ್ಯಂತ ಅವಶ್ಯಕ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಟ್ಟುಕೊಳ್ಳುವುದು ಅವಶ್ಯಕ. ಹೆಚ್ಚಾಗಿ ಎಳನೀರು, ಕಲ್ಲಂಗಡಿ, ನಿಂಬೆಹಣ್ಣಿನ ರಸ, ಆರೆಂಜ್ ಸೇರಿದಂತೆ ಇತರೆ ಹಣ್ಣಿನ ರಸ ಅಥವಾ ಹಣ್ಣನ್ನು ಹೆಚ್ಚಾಗಿ ಸೇವಿಸಿ. ಇದಷ್ಟೇ ಅಲ್ಲದೆ, ನೀವು ಸೇವಿಸುವ ಆಹಾರವು ಉಷ್ಣಾಂಶಯುಕ್ತವಾಗಿದೆಯೇ ಎಂದು ಒಮ್ಮೆ ಪರೀಕ್ಷಿಸಿಕೊಳ್ಳಿ, ಸಾಧ್ಯವಾದಷ್ಟು ನಿಮ್ಮ ಆಹಾರ, ಋತುಮಾನಕ್ಕೆ ತಕ್ಕದಾಗಿರಲಿ.
Dizziness Causes: ಬೆಳಿಗ್ಗೆ ಏಳುವಾಗ ಬವಳಿ ಬೀಳುವಂತಾಗುತ್ತಾ? ಇದ್ಯಾಕೆ ಗೊತ್ತಾ?
5. ನಿರ್ಜಲೀಕರಣ ಯಾವ ಮಟ್ಟಕ್ಕೆ ಹೋದರೆ ಅಪಾಯಕಾರಿ? ಚಿಕಿತ್ಸೆಗಳೇನು?
ಕೆಲ ಮಕ್ಕಳು, ನೀರು ಕುಡಿಯುವ ಹವ್ಯಾಸವನ್ನೇ ಹೊಂದಿರುವುದಿಲ್ಲ. ಇದು ಕಾಲಕ್ರಮೇಣ, ಮಕ್ಕಳ ಆರೋಗ್ಯದ ಮೇಲೆ ಅತ್ಯಂತ ಅಪಾಯಕಾರಿ ಪರಿಣಾಮ ಬೀರಬಹುದು. ಉದಾಹರಣೆಗೆ, ತಲೆ ಸುತ್ತುವುದು, ಮೂರ್ಛೆ, ಕಿಡ್ನಿಸ್ಟೋನ್ ಆಗುವ ಸಾಧ್ಯತೆ ಇದೆ. ಕೆಲ ಮಕ್ಕಳು ತಲೆ ತಿರುಗಿ ಬಿದ್ದ ಮೇಲೂ ನಿರ್ಜಲೀಕರಣದ ಸಮಸ್ಯೆ ಅರಿತುಕೊಳ್ಳದೇ ಇದ್ದರೆ, ಮಕ್ಕಳ ಜೀರ್ಣಕ್ರಿಯೆ ಹದಗೆಡಲಿದ್ದು, ಇತರೆ ಆರೋಗ್ಯ ಸಮಸ್ಯೆ ಕಾಡಬಹುದು. ಅತಿಯಾದ ನಿರ್ಜಲೀಕರಣಕ್ಕೆ ಒಳಗಾಗಿದ್ದರೆ, ಮೊದಲು ಮಗುವನ್ನು ವೈದ್ಯರಿಗೆ ತೋರಿಸುವುದು ಒಳಿತು. ಓಆರ್‌ಎಸ್ ಅಥವಾ ಇತರೆ ಔಷಧಿಗಳಿಂದ ನಿರ್ಜಲೀಕರಣದ ಸಮಸ್ಯೆ ಆ ಸಮಯಕ್ಕೆ ಹೋಗಲಾಡಿಸಬಹುದು. ಆದರೆ, ಭವಿಷ್ಯದಲ್ಲಿ ಮಗುವು ನೀರು ಕುಡಿಯುವ ಹವ್ಯಾಸವನ್ನು ಬೆಳೆಸುವುದು ಅತ್ಯಂತ ಅವಶ್ಯಕ.