ಮಧ್ಯವಯಸ್ಸಿನಲ್ಲಿ ಅದೇನೋ ಒಂದು ಬಗೆಯ ದುಗುಡ ಆವರಿಸಲು ಆರಂಭವಾಗುತ್ತದೆ. ಅದು ಜೀವನದ ಬಗ್ಗೆ ಭಯ ಮೂಡಿಸಬಹುದು. ಆತಂಕ, ಚಿಂತೆಯನ್ನೂ ಹೆಚ್ಚಿಸಬಲ್ಲದು. ಮಧ್ಯವಯಸ್ಸಿನ ತಲ್ಲಣವನ್ನು ಮೀರಲು ಕೆಲವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.
40-45ರ ವಯೋಮಾನದಲ್ಲಿ ಜೀವನದ ಕುರಿತ ನೋಟ ಸ್ವಲ್ಪ ಬದಲಾಗುತ್ತದೆ. ಅದು ವಯಸ್ಸಿನ ಮಹಿಮೆಯೋ ಅಥವಾ ಅದುವರೆಗಿನ ಹೋರಾಟದ ಫಲವೋ ಗೊತ್ತಿಲ್ಲ. ಅಂತೂ ಬಹುತೇಕ ಎಲ್ಲರೂ ಒಮ್ಮೆ ತಮ್ಮ ಜೀವನದ ಹಿನ್ನೋಟ ಮಾಡುತ್ತಾರೆ. ಈ ವಯಸ್ಸಿಗೆ ಬರುವಷ್ಟರಲ್ಲಿ ಉದ್ಯೋಗ ಗಟ್ಟಿಯಾಗಿರುತ್ತದೆ. ಮನೆ, ಮಕ್ಕಳು ಒಂದು ಹಂತಕ್ಕೆ ಬಂದಿರುತ್ತಾರೆ. ನಿವೃತ್ತಿ ಜೀವನದ ಬಗ್ಗೆ ಸ್ಪಷ್ಟತೆ ಬಂದಿರುತ್ತದೆ. ಅದುವರೆಗಿನ ಹೋರಾಟಗಳಿಂದಾಗಿ ಒಂದು ವ್ಯಕ್ತಿತ್ವ ರೂಪುಗೊಂಡಿರುತ್ತದೆ. ಆದರೂ ಅದೇನೋ ಒಂದು ಭಾವ ಕಾಡಲು ಆರಂಭವಾಗುತ್ತದೆ. ಬದುಕು ನಿಧಾನವಾದಂತೆ ಭಾಸವಾಗುತ್ತದೆ. ಬಾಲ್ಯದ ನೆನಪುಗಳು, ಹರೆಯದ ಸ್ನೇಹಗಳು ಕಾಡುತ್ತವೆ. ಇಷ್ಟು ವರ್ಷಗಳ ಕಾಲ ದೂರವಿದ್ದರ ಬಳಿ ಹೋಗಬೇಕು ಎನಿಸುತ್ತದೆ. ಈ ಹಂತದಲ್ಲೇ ಬದುಕಿನ ವಿಮರ್ಶೆಯೂ ಆರಂಭವಾಗುತ್ತದೆ. ಆಗ ಏಕಾಏಕಿ ಬದುಕು ಸೀಮಿತವಾಗಿದೆ ಹಾಗೂ ಸಮಯ ವೇಗವಾಗಿದೆ ಎಂದು ಅನಿಸುತ್ತದೆ. ಆಗಲೇ ಮಧ್ಯ ವಯಸ್ಸಿನ ದುಗುಡವೂ ಶುರುವಾಗುತ್ತದೆ. ಬದುಕಿನಲ್ಲಿ ಏನೂ ಇಲ್ಲ ಎನ್ನುವ ನಿರಾಸೆ ಕಾಡಬಹುದು. ಉದ್ವೇಗ, ಆತಂಕವೂ ಕಾಡಲು ಶುರುವಾಗಬಹುದು. ಈ ಹಂತದ ದುಗುಡವನ್ನು ಮೀರಿದರೆ ಮುಂದೆ ಬದುಕು ಸರಾಗ. ಮುಂದಿನ ಜವಾಬ್ದಾರಿಗಳನ್ನು ಹೊರುವ ಸಾಮರ್ಥ್ಯ ದೊರೆಯುತ್ತದೆ. ಸಂಗಾತಿಗೆ ಸಮಸ್ಯೆ ತಂದೊಡ್ಡದೆ ಕುಟುಂಬದಲ್ಲಿ ಶಾಂತಿಯಿಂದ ಇರಲು ಸಾಧ್ಯವಾಗುತ್ತದೆ. ಅದಕ್ಕೆ ಕೆಲವು ಸಿಂಪಲ್ ಹೆಜ್ಜೆಗಳನ್ನು ಇರಿಸಿದರೆ ಸಾಕು.
• ಶಾಂತವಾಗಿ ಕುಳಿತು ಧ್ಯಾನ (Meditation) ಮಾಡಿ
ನಿಮ್ಮೊಳಗನ್ನು ಸ್ಪರ್ಶಿಸುವ ಅತ್ಯದ್ಭುತ ವಿಧಾನವೆಂದರೆ ಧ್ಯಾನ ಮಾಡುವುದು. ಇಲ್ಲಿವರೆಗಿನ ಧಾವಂತಗಳೆಲ್ಲ ಸಾಕು ಎನ್ನುವಂತೆ ದಿನದಲ್ಲಿ ಸ್ವಲ್ಪ ಸಮಯವಾದರೂ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ದೈನಂದಿನ (Daily) ಕೆಲಸಕಾರ್ಯ, ಜವಾಬ್ದಾರಿ (Responsibility), ಕಚೇರಿಯ ಒತ್ತಡ (Stress) ಎಲ್ಲವೂ ಇರುವಂಥದ್ದೇ. ಇವುಗಳ ನಡುವೆಯೂ ನಿಮ್ಮೊಳಗನ್ನು ಶಾಂತ (Quit) ಮಾಡಿಕೊಳ್ಳಬೇಕೆಂದರೆ ಧ್ಯಾನದ ಮೊರೆ ಹೋಗಬೇಕು. ಇದರಿಂದ ದುಃಖ (Sadness) ಶಮನವಾಗುತ್ತದೆ. ಆತಂಕ (Anxiety) ಕಡಿಮೆ ಆಗುತ್ತದೆ. ನಿಮ್ಮ ಬಗ್ಗೆ ನಿಮಗೆ ಹೆಚ್ಚಿನ ಅರಿವು ಬರುತ್ತದೆ. ದೈಹಿಕ ಶಕ್ತಿಯೂ (Physical Strength) ಹೆಚ್ಚುತ್ತದೆ. ನಿಮ್ಮ ವಿಚಾರಗಳ ಬಗ್ಗೆ ಸ್ಪಷ್ಟತೆ (Clarity) ಬರುತ್ತದೆ. ಆತಂಕ, ಉದ್ವೇಗ, ಕಿರಿಕಿರಿ ಆದಾಗಲೆಲ್ಲ ಸುಮ್ಮನೆ ಕುಳಿತು ಮನಸ್ಸನ್ನು ಬೇರೆಡೆ ಹೊರಳಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಎಷ್ಟೋ ಹಗುರವೆನಿಸುತ್ತದೆ.
undefined
World Mental Health Day: ಆತಂಕವೇ ಬೇರೆ, ಒತ್ತಡವೇ ಬೇರೆ, ನಿಭಾಯಿಸೋದು ಹೇಗೆ?
• ಕೆಟ್ಟ ಅಭ್ಯಾಸಗಳನ್ನು (Bad Habits) ಬದಿಗಿಡಿ
ನಿಮ್ಮ ಆರೋಗ್ಯಕ್ಕೆ, ಬದುಕಿಗೆ ಬೇಕಾಗಿರುವುದು ಏನು ಎಂದು ಅರಿತುಕೊಳ್ಳಿ. ಮಧ್ಯ ವಯಸ್ಸೆಂದರೆ (Middle Age) ಬದಲಾವಣೆಯನ್ನು ಸ್ವೀಕರಿಸಬೇಕಾದ, ಮಾಡಿಕೊಳ್ಳಬೇಕಾದ ಹಾಗೂ ಬದಲಾವಣೆಗೆ ಒಡ್ಡಿಕೊಳ್ಳಬೇಕಾದ ವಯಸ್ಸು. ಕೆರಿಯರ್ ನಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಹಿಡಿದು, ಕೆಟ್ಟ ಸಂಬಂಧಕ್ಕೆ (Bad Relationship) ಮುಕ್ತಿ ಹೇಳುವವರೆಗೆ ನಿರ್ಧಾರಗಳನ್ನು ಈಗಲೇ ಕೈಗೊಳ್ಳಬೇಕು. ಒಟ್ಟಿನಲ್ಲಿ ಬದುಕು (Life) ಒಂದು ಹಳಿಗೆ ಬರಬೇಕು. ನಿಮ್ಮ ಬಗ್ಗೆ ಆದ್ಯತೆ ನೀಡುವುದು ಈಗ ಅಭ್ಯಾಸವಾಗಬೇಕು. ಇನ್ನೊಬ್ಬರ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಳ್ಳುವುದನ್ನು ಬಿಡಬೇಕು. ಇನ್ನೊಬ್ಬರ ಜತೆ ಹೋಲಿಕೆ ಮಾಡಿಕೊಳ್ಳುವುದು, ಅತಿಯಾದ ವೈಭೋಗ, ಆಡಂಬರ, ನಕಾರಾತ್ಮಕ ಚಿಂತನೆ (Negative) ಕೈಬಿಡಬೇಕು.
• ಸಾಮಾಜಿಕ ಜಾಲತಾಣ, ಮನೋರಂಜನಾ ತಾಣಗಳ ಬಳಕೆ
ನೀವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರದಿದ್ದರೆ ಉತ್ತಮ. ಆದರೆ, ಅವುಗಳಿಂದ ಸಂಪೂರ್ಣ ದೂರ ಹೋಗುವುದಕ್ಕಿಂತ ಅವುಗಳಿಂದ ಮನಸ್ಸಿಗೆ ಮುದ ನೀಡುವ ಚಟುವಟಿಕೆಗಳನ್ನು ಪಡೆದುಕೊಳ್ಳಬೇಕು.
Feeling Anxiety: ಆತಂಕವೇ? ಸಿಂಪಲ್ಲಾಗಿ ನಿವಾರಿಸ್ಕೊಳಿ
• ಹಳೆಯ ಸ್ನೇಹಿತರಿಗೆ ಕಾಲ್ ಮಾಡಿ (Contact Old Friends)
ಬದುಕಿನಲ್ಲಿ ಎಲ್ಲರಿಗೂ ಹೋರಾಟ ಇರುವುದೇ. ಆದರೆ, ಜೀವನದಲ್ಲಿ ಒಂದು ಹಂತಕ್ಕೆ ಬರುವ ಹೊತ್ತಿಗೆ ಹಳೆಯ ಸ್ನೇಹಿತರ ನೆನಪಾಗುವುದು ಸಹಜ. ಅವರನ್ನು ಸಂಪರ್ಕಿಸಿ. ನಿಮಗೆ ಇಷ್ಟವಾಗುವ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿ. ಇದರಿಂದ ನಿಮಗೆ ಎಷ್ಟೋ ಹಗುರವೆನಿಸುತ್ತದೆ. ಬಾಲ್ಯದ (Childhood) ಸ್ನೇಹಿತರು ಜತೆಯಾದರಂತೂ ಮತ್ತೆ ಉತ್ಸಾಹ ಬರುತ್ತದೆ. ಇದರಿಂದ ಭಾವನಾತ್ಮಕ ಆರೋಗ್ಯ (Emotional Health) ಸುಧಾರಿಸುತ್ತದೆ.