ಇಂದು ನಿಮ್ಮ ನಮ್ಮ ಕಚೇರಿ ಕೆಲಸ, ಮಕ್ಕಳ ಆನ್‌ಲೈನ್ ಕ್ಲಾಸು- ಎಲ್ಲವೂ ಕಣ್ಣಿನ ಬಹಳ ಬಳಕೆಯನ್ನು ಬೇಡುವಂಥವು. ನಿಮ್ಮ ಮತ್ತು ನಿಮ್ಮ ಮಕ್ಕಳ ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುವಂತಹ ಕೆಲವು ಕಣ್ಣಿನ ವ್ಯಾಯಾಮಗಳ ಬಗ್ಗೆ ಇಲ್ಲಿ ತಿಳಿಯಿರಿ.
ಕಣ್ಣುಗಳ ಆರೋಗ್ಯ ಬಹಳ ಇಂಪಾರ್ಟೆಂಟ್. ಆದರೆ ಇಂದು ನಿಮ್ಮ ನಮ್ಮ ಕಚೇರಿ ಕೆಲಸ, ಮಕ್ಕಳ ಆನ್‌ಲೈನ್ ಕ್ಲಾಸು- ಎಲ್ಲವೂ ಕಣ್ಣಿನ ಬಹಳ ಬಳಕೆಯನ್ನು ಬೇಡುವಂಥವು. ಪ್ರತಿದಿನ ಎರಡು ಅಥವಾ ಮೂರು ಗಂಟೆ ಕಂಪ್ಯೂಟರ್ ನೋಡಿದರೆ ಓಕೆ. ಅದಕ್ಕಿಂತ ಹೆಚ್ಚಿಗೆ ನೋಡಿದರೆ ಎಂಥ ಆರೋಗ್ಯವಂತ ಕಣ್ಣೇ ಆದರೂ ಸುಸ್ತಾಗುತ್ತದೆ; ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.
ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ನಮ್ಮ ದೃಷ್ಟಿ ದುರ್ಬಲಗೊಳ್ಳುವುದರಲ್ಲಿ ಸಂದೇಹವಿಲ್ಲ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಕನ್ನಡಕ ಧರಿಸುವಂತಾಗಬಹುದು. ನಿಮ್ಮ ಮತ್ತು ನಿಮ್ಮ ಮಕ್ಕಳ ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುವಂತಹ ಕೆಲವು ಕಣ್ಣಿನ ವ್ಯಾಯಾಮಗಳ ಬಗ್ಗೆ ಇಲ್ಲಿ ತಿಳಿಯಿರಿ.
ಆಗಾಗ ಕಣ್ಣು ಮಿಟುಕಿಸುವುದು
ನೀವು ಲ್ಯಾಪ್‌ಟಾಪ್ ಅಥವಾ ಮೊಬೈಲ್ ಅನ್ನು ಗಂಟೆಗಳವರೆಗೆ ಬಳಸಿದರೆ ಈ ತಂತ್ರ ಬಳಸಿ. ಕೆಲಸದ ಕಾರಣದಿಂದಾಗಿ, ನೀವು ದೀರ್ಘಕಾಲದವರೆಗೆ ಕಣ್ಣು ಮಿಟುಕಿಸದೇ ಲ್ಯಾಪ್‌ಟಾಪ್ ಅಥವಾ ಮೊಬೈಲ್ ಅನ್ನು ನೋಡಿದರೆ ಕಣ್ಣೀರಿನ ಮೂಲವೇ ಒಣಗುತ್ತದೆ ಮತ್ತು ಕಣ್ಣುಗಳು ಮಸುಕಾಗುವ ಸಮಸ್ಯೆ ಎದುರಾಗಬಹುದು. ಇದನ್ನು ತಪ್ಪಿಸಲು, ಕನಿಷ್ಠ ಎರಡು ನಿಮಿಷಗಳ ಬಳಿಕ ಕಾಲ ನಾಲ್ಕು ಸೆಕೆಂಡ್ ನಿಮ್ಮ ಕಣ್ಣುರೆಪ್ಪೆಗಳನ್ನು ಮಿಟುಕಿಸಿ ನಂತರ ಕಣ್ಣುಗಳನ್ನು ವೇಗವಾಗಿ ಮುಚ್ಚಿ ತೆಗೆಯಿರಿ. ಈ ರೀತಿಯಾಗಿ ಕೆಲವು ಸೆಕೆಂಡುಗಳ ಕಾಲ ಕಣ್ಣುಗಳನ್ನು ಮಿಟುಕಿಸಿ. ಈ ಪ್ರಕ್ರಿಯೆಯನ್ನು ದಿನಕ್ಕೆ 4ರಿಂದ 5 ಬಾರಿ ಪುನರಾವರ್ತಿಸಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕಣ್ಣಿನ ಆಯಾಸವನ್ನು ನಿವಾರಿಸುತ್ತದೆ ಮತ್ತು ಕಣ್ಣುಗಳನ್ನು ಮತ್ತೆ ನಯಗೊಳಿಸುತ್ತದೆ.
ಪೆನ್ಸಿಲ್ ವ್ಯಾಯಾಮ
ಕಣ್ಣಿನ ಉತ್ತಮ ಆರೋಗ್ಯಕ್ಕಾಗಿ ಪೆನ್ಸಿಲ್ ಪುಷ್‌ಅಪ್‌ಗಳನ್ನು ಉತ್ತಮ ವ್ಯಾಯಾಮವೆಂದು ಪರಿಗಣಿಸಲಾಗುತ್ತದೆ. ಇದು ಕಣ್ಣಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಈ ಮೂಲಕ ಪ್ರೆಸ್ಬಿಯೋಪಿಯಾವನ್ನು ತಡೆಯಬಹುದು. ಇದಕ್ಕಾಗಿ, ನಿಮ್ಮ ಕಣ್ಣುಗಳ ಮುಂದೆ ತೋಳಿನ ದೂರದಲ್ಲಿ ಪೆನ್ ಅಥವಾ ಪೆನ್ಸಿಲ್ ಅನ್ನು ಹಿಡಿದುಕೊಳ್ಳಿ ಮತ್ತು ಅದರ ತುದಿಗೆ ಗಮನ ಕೊಡಿ. ನಿಧಾನವಾಗಿ ಅದನ್ನು ನಿಮ್ಮ ಕಣ್ಣುಗಳ ಕಡೆಗೆ ತನ್ನಿ. ಪೆನ್ ಅಥವಾ ಪೆನ್ಸಿಲ್ ನಿಬ್ ಎರಡೆರಡು ಕಾಣುವ ತನಕ ನೀವು ಅದರ ತುದಿಯ ಮೇಲೆ ಗಮನ ಕೇಂದ್ರೀಕರಿಸಿ. ತುದಿ ವಿಭಜನೆಯಾದ ತಕ್ಷಣ, ಅದನ್ನು ಮತ್ತೆ ಹಿಂದಕ್ಕೆ ತೆಗೆದುಕೊಂಡು ಹೋಗಿ. ಈ ರೀತಿಯ ಅನುಕ್ರಮವನ್ನು ಪುನರಾವರ್ತಿಸಿ. ದಿನದಲ್ಲಿ 10ರಿಂದ 15 ಬಾರಿ ಪುನರಾವರ್ತಿಸಿ.
ಅಂಗೈ ಬೆಚ್ಚಗೆ ಮಾಡಿ
ಆರಾಮದಾಯಕ ಸ್ಥಾನದಲ್ಲಿ ಕುಳಿತು ಕೆಲವು ಕ್ಷಣಗಳು ನಿಮ್ಮ ಕಣ್ಣುಗಳನ್ನು ಮುಚ್ಚಿ. ಅಂಗೈಗಳನ್ನು ಉಜ್ಜುವ ಮೂಲಕ ಬಿಸಿ ಮಾಡಿಕೊಳ್ಳಿ. ಅದನ್ನು ಮುಚ್ಚಿದ ಕಣ್ಣುಗಳ ಮೇಲೆ ಇರಿಸಿ. ರೆಪ್ಪೆಗೂದಲು ಮತ್ತು ಹುಬ್ಬುಗಳನ್ನು ಬೆರಳುಗಳಿಂದ 10-20 ಸೆಕೆಂಡುಗಳ ಕಾಲ ಮಸಾಜ್ ಮಾಡಿ. ಇದನ್ನು ಮಾಡುವುದರಿಂದ ಕಣ್ಣಿನ ಆಯಾಸ ಹೋಗುತ್ತದೆ. ರಕ್ತ ಪರಿಚಲನೆ ಉತ್ತಮವಾಗುತ್ತದೆ ಮತ್ತು ಕಣ್ಣುಗಳ ಸ್ನಾಯುಗಳು ಸಹ ಸಡಿಲಗೊಳ್ಳುತ್ತವೆ. ಇದು ಶುಷ್ಕತೆಯ ಸಮಸ್ಯೆಯನ್ನು ನಿವಾರಿಸುತ್ತದೆ.
ಕಣ್ಣುಗಳನ್ನು ತಿರುಗಿಸಿ
6 ಅಡಿ ದೂರದಲ್ಲಿ ದೊಡ್ಡ 8 ಅನ್ನು ಬರೆದು ಗೋಡೆಯ ಮೇಲೆ ಇರಿಸಿ. ಈಗ ನಿಮ್ಮ ಕಣ್ಣುಗಳ ಗುಡ್ಡೆಗಳನ್ನು 8ರ ಆಕೃತಿಯ ಪ್ರಕಾರ ಸರಿಸಿ, ಮೊದಲು ಪ್ರದಕ್ಷಿಣಾಕಾರವಾಗಿ ತಿರುಗಿಸಿ. ನಂತರ ಅಪ್ರದಕ್ಷಿಣಾಕಾರವಾಗಿ ತಿರುಗಿಸಿ. ಇದು ಕೆಲವೇ ದಿನಗಳಲ್ಲಿ ನಿಮ್ಮ ಕಣ್ಣುಗಳಿಗೆ ತುಂಬಾ ಹಿತಕರವಾದ ಅನುಭವವನ್ನು ನೀಡುತ್ತದೆ. ಈ ವಿಧಾನವನ್ನು ದಿನಕ್ಕೆ 10ರಿಂದ 15 ಬಾರಿ ಪ್ರಯತ್ನಿಸಿ. ಇದನ್ನು ಮಾಡುವುದರಿಂದ ನಿಮ್ಮ ಕಣ್ಣುಗಳು ಆರೋಗ್ಯಕರವಾಗಿರುತ್ತವೆ ಮತ್ತು ಅವುಗಳ ಕಾಂತಿ ಕೂಡ ಹೆಚ್ಚಾಗುತ್ತದೆ.
ನೀರಿನಿಂದ ಕಣ್ಣುಗಳನ್ನು ತೊಳೆಯಿರಿ
ನೀರಿನಿಂದ ಆಗಾಗ ತೊಳೆಯುವುದು ಕಣ್ಣುಗಳಿಗೆ ಆರಾಮ, ಆರೋಗ್ಯಕರ. ದೃಷ್ಟಿ ಹೆಚ್ಚಿಸಲು, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕಣ್ಣುಗಳಿಗೆ ತಣ್ಣೀರನ್ನು ಎರಚಬೇಕು. ಇದನ್ನು ಮಾಡುವುದರಿಂದ ಕಣ್ಣುಗಳು ಆರೋಗ್ಯವಾಗಿರುತ್ತವೆ ಮತ್ತು ಅವುಗಳ ಶಕ್ತಿ ಕೂಡ ಹೆಚ್ಚಾಗುತ್ತದೆ.