ಕೂದಲಿಗೆ ಸಂಬಂಧಪಟ್ಟ ಹಾಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆ ಇರುತ್ತದೆ. ಕೆಲವರು ಡ್ಯಾಂಡ್ರಫ್ ನಿಂದ ಬಳಲಿದರೆ ಇನ್ನೂ ಕೆಲವರಿಗೆ ಕೂದಲುದುರುವ ಚಿಂತೆ. ಕೆಲವರು ಸ್ಲಿಟ್(ಒಡೆದ) ಕೂದಲಿನಿಂದ ಬೇಸತ್ತು ಹೋಗಿರುತ್ತಾರೆ. ಈ ಎಲ್ಲಾ ಕಾರಣಗಳಿಂದ ಕೂದಲಿನ ಬೆಳವಣಿಗೆ ಕುಂಠಿತವಾಗಿ ಇರಬಹುದು. ಆದರೆ ಇದಕ್ಕೂ ಕೂಡ ಎಕ್ಸಸೈಸ್ ನ ಮೂಲಕ ಪರಿಹಾರ ಇದೆ.
ನಾವು ಕೂದಲಿನ (Hair) ಬಗ್ಗೆ ಹೆಚ್ಚು ಕಾಳಜಿ ಮಾಡುತ್ತೇವೆ. ಉದ್ದವಾದ ಸ್ಟ್ರೈಟ್ (Strait) ಹಾಗೂ ಸಿಲ್ಕಿ (Silky) ಕೂದಲು ಇರಬೇಕು ಎಂದು ಕೆಲವು ಹೆಣ್ಣುಮಕ್ಕಳು ಇಷ್ಟಪಟ್ಟರೆ ಇನ್ನೂ ಕೆಲವರಿಗೆ ಬಹಳ ಉದ್ದ ಕೂದಲು ಇಲ್ಲದಿದ್ದರೂ ಪರವಾಗಿಲ್ಲ ದಪ್ಪ ಕೂದಲು ಇರಬೇಕು ಎಂದು ಇಷ್ಟಪಡುತ್ತಾರೆ. ನಾವು ಬಯಸುವಂತೆ ಕೂದಲು ಸಿಕ್ಕಿದರೂ ಕೂಡಾ ಅದನ್ನು ಹಾಗೆಯೇ ಉಳಿಸಿಕೊಳ್ಳುವುದು ಒಂದು ಸವಾಲು. ಡ್ಯಾಂಡ್ರಫ್ ನಿಂದ ತಲೆ ತುರಿಕೆ ಹಾಗು ಕಿರಿಕಿರಿ (Irritation) ಒಂದು ಕಡೆಯಾದರೆ ಕೂದಲು ಬಾಚಿದಾಗಲೆಲ್ಲಾ ಮುಷ್ಟಿಯಷ್ಟು ಉದುರು ಕೂದಲಿನ ಸಮಸ್ಯೆ ಇನ್ನೊಂದು ಕಡೆ. ಇದರಿಂದ ಬೇಸತ್ತು ಹೋಗಿರುವ ನಿಮಗೆ ಎಕ್ಸಸೈಸ್ ನಿಂದ ಪರಿಹಾರ ದೊರೆಯುತ್ತದೆ.
ಸೊಂಪಾದ (Lush) ಕೂದಲಿಗೆ ಎಕ್ಸಸೈಜ್
undefined
ತಲೆಯ ನೆತ್ತಿಗೆ (Scalp) ಮಸಾಜ್ ಮಾಡುವುದು:
ರಕ್ತ ಸಂಚಾರ ಸರಿಯಾದ ಕ್ರಮದಲ್ಲಿ ಆದರೆ ಎಷ್ಟೋ ಸಮಸ್ಯೆಗಳು ಪರಿಹಾರವಾಗಿಬಿಡುತ್ತವೆ. ನೀವು ನಿತ್ಯ ಬಳಸುವ ಯಾವುದೇ ಹೇರ್ ಆಯಿಲ್ ಬಳಸಿ ನಿಧಾನವಾಗಿ ನೆತ್ತಿಯ ಮೇಲೆ ಮಸಾಜ್ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ ಇದರ ಜೊತೆಗೆ ತಲೆನೋವು, ಟೆನ್ಶನ್ ಇಂತಹ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ. ತಿಂಗಳಿಗೆ 2 ಬಾರಿ ಹೀಗೆ ಮಾಡಿ.
ಭಾರತೀಯ ಶೈಲಿಯಲ್ಲಿ ತಲೆಯ ಮಸಾಜ್ (Massage)
ನಮ್ಮ ಭಾರತೀಯ ಶೈಲಿಯಲ್ಲಿ ತಲೆಗೆ ಮಸಾಜ್ ಮಾಡುವುದು ಆಯುರ್ವೇದದಿಂದ ಬಂದಿರುವ ಒಂದು ರೀತಿಯ ಚಿಕಿತ್ಸೆ (Treatment). ನಿಧಾನವಾಗಿ ತಲೆಯಮೇಲೆ ತಟ್ಟುವುದು ಹಾಗೂ ಕೈ ಬೆರಳಿನ ಸಹಾಯದಿಂದ ಕೂದಲಿನ ನಡುವೆ ಆಕ್ಯುಪ್ರೆಶರ್ ಮಾಡುವುದು. ಯೋಚನೆ ಮಾಡಿದರೆ ಏನು ಹಾಯ್ ಅನಿಸುತ್ತಿದೆ ಅಲ್ಲವೇ ಇದನ್ನು ವಾರದಲ್ಲಿ ಒಂದು ಬಾರಿಯಾದರೂ ಮಾಡಿಕೊಂಡರೆ ಕೂದಲು ಸೊಂಪಾಗಿ ಬೆಳೆಯುವುದರಲ್ಲಿ ಅನುಮಾನವಿಲ್ಲ.
Yoga For Concentration: ಏಕಾಗ್ರತೆ ಹೆಚ್ಚಲು ಇಂದಿನಿಂದಲೇ ಶುರು ಮಾಡಿ ಈ ಆಸನ
ಕುತ್ತಿಗೆಯ ಎಕ್ಸಸೈಸ್ ಗಳು (Exercises)
ಕುತ್ತಿಗೆಯ (Neck) ಎಕ್ಸೈಸ್ ಮಾಡುವುದು ಬಹಳ ಕಷ್ಟದ ಕೆಲಸವೇನಲ್ಲ. ಇದರಿಂದ ಆರೋಗ್ಯಯುತವಾದ ಕೂದಲಿನ ಬೆಳವಣಿಗೆ ಆಗುತ್ತದೆ. ಇದಕ್ಕಾಗಿ ನೀವು ಕುತ್ತಿಗೆಯನ್ನು ಹಿಂದೆ-ಮುಂದೆ ಮಾಡುವುದು ಆಚೆ-ಈಚೆ ಮಾಡುವುದು ಸುತ್ತ ತಿರುಗಿಸುವುದು ಮತ್ತು ತಲೆಯನ್ನು ಎಡಕ್ಕೊಮ್ಮೆ ಹಾಗೂ ಬಲಕ್ಕೊಮ್ಮೆ ಸ್ಟ್ರೆಚ್ ಮಾಡುವುದು ಹೀಗೆ ಆಗಾಗ ಈ ಕುತ್ತಿಗೆಯ ಎಕ್ಸಸೈಸ್ ಮಾಡುವುದರಿಂದ ಒಳ್ಳೆಯ ಪರಿಣಾಮ ಕಾಣುತ್ತೀರಿ.
ಯೋಗದ ಭಂಗಿಗಳು (Poses)
ಪ್ರತಿನಿತ್ಯ ಯೋಗ ಮಾಡುವುದರಿಂದ ಕೂದಲು ಹೆಚ್ಚು ಸೊಂಪಾಗಿ ಬೆಳೆಯುತ್ತದೆ ಜೊತೆಗೆ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಇದಕ್ಕಾಗಿ ನೀವು ಉತ್ತನಾಸನ ಮಾಡಬೇಕು ಇದರಿಂದಾಗಿ ನೆತ್ತಿಯಲ್ಲಿ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ ಹೆಚ್ಚು ಸ್ಟ್ರೆಸ್ ನಿಂದ ಕೂದಲು ಉದುರುತ್ತಿದ್ದರೆ ಯೋಗ ಮಾಡುವುದರಿಂದ ಈ ಸಮಸ್ಯೆಯು ಪರಿಹಾರವಾಗುತ್ತದೆ.
ಉಸಿರಾಟದ (Breathing) ಎಕ್ಸಸೈಜ್
ಕೆಲವೊಂದು ಉಸಿರಾಟಕ್ಕೆ ಸಂಬಂಧಪಟ್ಟ ಎಕ್ಸಸೈಜ್ ಮಾಡುವುದರಿಂದ ಕೂಡ ಕೂದಲು ಉದುರುವಿಕೆ ಯಿಂದ ಬಿಡುಗಡೆ ಪಡೆಯಬಹುದು. ಕಪಾಲ ಭಟಿ, ಹಾಗೂ ಪ್ರಾಣಾಯಾಮ ಇಂತಹ ಎಕ್ಸಸೈಜ್ ಗಳನ್ನು ಮಾಡುವುದರಿಂದ ಕೂದಲು ಹೆಚ್ಚು ಸೊಂಪಾಗಿ ಬೆಳೆಯುತ್ತದೆ. ಕಪಾಲಭಾಟಿ ಎಂದರೆ ಹೊಳೆಯುವ ಹಣೆ ಎಂದರ್ಥ.
Beauty Tips: ಪಾದದ ಸಮಸ್ಯೆಗಳಿಗೆ ಇಲ್ಲಿವೆ ಸುಲಭ ಉಪಾಯ!
ತಲೆಕೆಳಗಾಗಿ ನಿಲ್ಲುವ ಭಂಗಿ
ಮೊದಲು ನೆತ್ತಿಯಲ್ಲಿ ಕೂದಲಿನ ಬುಡಕ್ಕೆ ಚೆನ್ನಾಗಿ ಮಸಾಜ್ ಮಾಡಿ ಆ ಬಳಿಕ ತಲೆಕೆಳಗೆ ಮಾಡಿ ನಿಂತುಕೊಳ್ಳುವುದರಿಂದ ನೆತ್ತಿಯಲ್ಲಿ ರಕ್ತಸಂಚಾರ ಸುಗಮವಾಗಿ ಆಗುತ್ತದೆ ಈ ಕಾರಣದಿಂದಾಗಿ ಹೊಸ ಕೂದಲು ಹುಟ್ಟುವ ಜೊತೆಗೆ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.
ಕಾರ್ಡಿಯೋ ಎಕ್ಸಸೈಜ್
ಕಾರ್ಡಿಯೋ ಎಕ್ಸಸೈಸ್ ನಲ್ಲಿ ಅಕ್ಕ-ಪಕ್ಕ ಜಿಗಿಯುವ ಎಕ್ಸೈಸ್ ಮಾಡುವುದರಿಂದ ಕೂದಲು ಬೆಳವಣಿಗೆ ಹೆಚ್ಚುತ್ತದೆ ಕಾರ್ಡಿಯೋ ಎಕ್ಸಸೈಸ್ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತವೆ.