ಆಕ್ಷೀ ಎಂದರೆ ಸಾಕು ಭಯವಾಗೋ ಈ ಟೈಮಲ್ಲಿ ಈ ವೀಡಿಯೋ ನೋಡಿ ನಕ್ಕು ಬಿಡಿ...

By Suvarna NewsFirst Published Mar 12, 2020, 6:29 PM IST
Highlights

ಈಗ ಓಡ್ತಿರೋ, ವೈರಲ್ ಆಗ್ತಿರೋ ವೀಡಿಯೋ ಫೇಸ್‌ ಮಾಸ್ಕ್ನದ್ದು. ಆಟೋಮೊಬೈಲ್ ಉದ್ಯಮಿ ಆನಂದ ಮಹೀಂದ್ರಾ ಎಂಬವರು ಈ ಫೇಸ್ ಮಾಸ್ಕ್‌ಗೆ ಸಂಬಂಧಿಸಿದ ವೀಡಿಯೋ ಒಂದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ನಾವೇ ತಯಾರಿಸಬಹುದಾದ ಮಾಸ್ಕ್‌ಗಳ ಡೀಟೈಲ್ ಇದೆ. ಹಾಗಂತ ಇದೇನು ನಮ್ಮನ್ನು ಕೊರೋನಾದಿಂದ ಪಾರು ಮಾಡುವಷ್ಟು ಪವರ್‌ಫುಲ್ ಮಾಸ್ಕ್ ಏನಲ್ಲ. ಆದರೆ ಸಖತ್ ಫನ್ನಿಯಾಗಂತೂ ಇದೆ. ಕೊರೋನಾ ಬಗ್ಗೆ ಪಾನಿಕ್ ಆಗಿರೋ ಮಂದಿಗೆ ಟಾಂಗ್ ಕೊಡೋ ಹಾಗೂ ಇದೆ.

ಕೊರೋನಾ ಬಗ್ಗೆ ಸಾಕಷ್ಟು ಟ್ರೋಲ್‌ಗಳು ಸೋಷಲ್ ಮೀಡಿಯಾದಲ್ಲಿ ಓಡಾಡ್ತಿವೆ. ರಾಮ್‌ ಗೋಪಾಲ್ ವರ್ಮಾ ಅವರಂಥ ನಿರ್ದೇಶಕರೂ ಈ ವೈರಸ್ ಬಗ್ಗೆ ಲೇವಡಿಯ ಮಾತಾಡಿದ್ದಾರೆ. ನಮ್ ಸಾವೂ ಮೇಡ್‌ ಇನ್ ಚೖನಾ ಆಗುತ್ತಾ ಅಂತೆಲ್ಲ ಸೋಷಲ್ ಮೀಡಿಯಾದಲ್ಲಿ ಬರ್ಕೊಂಡಿದ್ದಾರೆ. ಈ ಟೖಮ್ ನಲ್ಲಿ ಸಖತ್ ಟ್ರೋಲ್ ಆದ ಇನ್ನೊಂದು ವಿಷಯ ಅಂದರೆ. ‘ಅಲ್ಲಾ ಗುರೂ, ಕೊರೋನಾ ವೖರಸ್ ಚೀನಾ ಗಡಿಯನ್ನೆ ದಾಟಿ ಬರುತ್ತಂತೆ, ಇನ್ನು ಮಾಸ್ಕ್ ದಾಟಿ ಬರಕ್ಕಾಗಲ್ವಾ’ ಅನ್ನೋದು.

ಇದೆಲ್ಲ ಈಗ ಹಳೇದಾಯ್ತು. ಈಗ ಓಡ್ತಿರೋ, ವೈರಲ್ ಆಗ್ತಿರೋ ವೀಡಿಯೋ ಫೇಸ್‌ ಮಾಸ್ಕ್ ನದ್ದು. ಆನಂದ ಮಹೀಂದ್ರಾ ಈ ಫೇಸ್ ಮಾಸ್ಕ್ ಗೆ ಸಂಬಂಧಿಸಿದ ವೀಡಿಯೋ ಒಂದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ನಾವೇ ತಯಾರಿಸಬಹುದಾದ ಮಾಸ್ಕ್ ಡೀಟೈಲ್ ಇದೆ.
 

ಹಾಗಂತ ಇದೇನು ನಮ್ಮನ್ನು ಕೊರೋನಾದಿಂದ ಪಾರು ಮಾಡುವಷ್ಟು ಪವರ್‌ಫುಲ್ ಮಾಸ್ಕ್ ಏನಲ್ಲ. ಆದರೆ ಸಖತ್ ಫನ್ನಿಯಾಗಂತೂ ಇದೆ. ಕೊರೋನಾ ಬಗ್ಗೆ ಪಾನಿಕ್ ಆಗಿರೋ ಮಂದಿಗೆ ಟಾಂಗ್ ಕೊಡೋ ಹಾಗೂ ಇದೆ.

ಜೊತೆಗೆ ಕೊರೇನಾ ವೈರಸ್ ಭೀತಿ ಕಳೆದ ಕೆಲವು ದಿನಗಳಿಂದ ವಿಪರೀತವಾಗಿ ಹೆಚ್ಚಾಗುತ್ತಿದೆ. ಹಠಾತ್ತನೆ ಸೃಷ್ಟಿಯಾದ ಈ ಸ್ಥಿಗೆ ತಕ್ಕಷ್ಟು ಫೇಸ್ ಮಾಸ್ಕ್ , ಸ್ಯಾನಿಟಟೈಸರ್ ಪೂರೈಕೆ ಮಾಡೋದು ಸಾಧ್ಯವಾಗುತ್ತಿಲ್ಲ. ಹಾಗಾಗಿ ನೀವು ಯಾವುದೇ ಶಾಪ್ ಗೆ ಹೋಗಿ ಫೇಸ್ ಮಾಸ್ಕ್, ಸ್ಯಾನಿಟೈಸರ್ ಕೇಳಿದರೆ ‘ಇಲ್ಲ’ ಅನ್ನುವ ಚಾನ್ಸಸ್ಸೇ ಅಧಿಕ. ಹಾಗಾಗಿ ನೀವೇ ಮನೆಯಲ್ಲಿ ಸಿಂಪಲ್ ಆಗಿ ಫೇಸ್ ಮಾಸ್ಕ್ ಮಾಡಿಕೊಳ್ಳಿ. ಏನೂ ಇಲ್ಲದೇ ಓಡಾಡೋದಕ್ಕಿಂತ ಇದು ಬೆಟರ್ ಅನ್ನೋ ವಿಷಯವೂ ಇದರಲ್ಲಿದೆ.
 

ಆನಂದ ಮಹೇಂದ್ರ ಅವರ ಈ ವೀಡಿಯೋದ ಮೊದಲ ಭಾಗದಲ್ಲಿ ಟಿಶ್ಯೂ ಪೇಪರ್‌ನಿಂದ ಹೇಗೆ ಮಾಸ್ಕ್ ತಯಾರಿಸಬಹುದು ಅನ್ನೋ ಡೀಟೈಲ್ಸ್ ಇದೆ. ಟಿಶ್ಯೂ ಪೇಪರ್ ನ ನೀಟಾಗಿ ಅಡ್ಡಡ್ಡಕ್ಕೆ ಮಡಚಿ ಎರಡೂ ಬದಿಗಳಿಗೆ ರಬ್ಬರ್ ಬ್ಯಾಂಡ್ ಸಿಕ್ಕಿಸಿ ಮುಂಭಾಗವನ್ನು ಸ್ಪ್ರೆಡ್ ಮಾಡಿದ್ರೆ ಸಿಂಪಲ್ ಮಾಸ್ಕ್ ರೆಡಿಯಾಗುತ್ತೆ.
 

ಜುಡಾಡ್ ಅನ್ನುವ ಈ ವೀಡಿಯೋವನ್ನು ಎಂಟು ಸಾವಿರದ ಆರುನೂರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ.
 

ಇದರ ಮುಂದುವರಿದ ಭಾಗವಾಗಿ ಸೂರಜ್ ಎಂಬುವವರು ಕೂದಲನ್ನು ಮುಂಭಾಗಕ್ಕೆ ತಂದು ನೇಯ್ದು ಹೀಗೆ ಕೊರೋನಾದಿಂದ ರಕ್ಷಿಸಿಕೊಳ್ಳಬಹುದು ಅಂತ ಜೋಕ್ ಮಾಡಿದ್ದಾರೆ. ಇನ್ನೊಂದು ವೀಡಿಯೋದಲ್ಲಿ ಮಾಸ್ಕ್ ಸಿಗದ ವ್ಯಾಪಾರಿಯೊಬ್ಬರು ಪಾನಿಪುರಿ ತಿನ್ನೋ ಪ್ಲೇಟ್‌ಅನ್ನೇ ಮಾಸ್ಕ್ ಆಗಿ ಪರಿವರ್ತಿಸಿದ್ದಾರೆ. ಮತ್ತೊಂದು ತುಸು ಹೆಚ್ಚೇ ಹಿಲೇರಿಯಸ್ ಆಗಿದೆ.ಮಾಸ್ಕ್ ಸಿಗದ ಒಬ್ಬಾತ ಅಂಡರ್ ವೇರ್ ಅನ್ನೇ ಮಾಸ್ಕ್ ಥರ ಧರಿಸಿದ ಫೋಟೋ ಅದು!

ಕೊರೋನಾದಿಂದ ಭಯದ ಜೊತೆಗೆ ಇಂಥಾ ಕ್ರಿಯೇಟಿವಿಯೂ ಸೃಷ್ಟಿಯಾಗುತ್ತೆ ನೋಡಿ. ಈ ಮೂಲಕ ಭಯಗ್ರಸ್ಥ ಸಮಾಜವನ್ನು ತುಸು ನಗಿಸುವ ಪ್ರಯತ್ನವೂ ಆಗಿದೆ ಅನ್ನಿ.

 

ಚಿತ್ರರಂಗಕ್ಕೂ ಕೊರೋನಾ ಭೀತಿ; ತಾರಾ ದಂಪತಿಗೂ ವೈರಸ್ ಕಾಟ!...
 

ಸದ್ಯಕ್ಕಂತೂ ಬಾಂಬ್ ಗಿಂತ ಹೆಚ್ಚಾಗಿ ಜನರನ್ನು ಹೆದರಿಸ್ತಿರೋದು ಕೊರೋನಾ ವೖರಸ್. ಪಕ್ಕದಲ್ಲಿದ್ದವರು ಅಕ್ಷೀ ಅಂದರೆ ಸಾಕು ಜನ ಗಾಬರಿಯಿಂದ ಆಚೆ ಸರಿಯುತ್ತಾರೆ. ಜನರ ಆರೋಗ್ಯ ಕಾಳಜಿಯಂತೂ ವಿಪರೀತ ಹೆಚ್ಚಾಗುತ್ತಿದೆ. ವ್ರತ ಹಿಡಿದವರ ಹಾಗೆ ಮಾಂಸಾಹಾರ ಸೇವನೆ ನಿಲ್ಲಿಸಿರೋದೂ ಜನ ಯಾವ ಮಟ್ಟಿಗೆ ಕೊರೋನಾದಿಂದ ಭೀತರಾಗಿದ್ದಾರೆ ಅನ್ನೋದಕ್ಕೆ ದೊಡ್ಡ ಉದಾಹರಣೆ. ಆದರೆ ಈ ಪರಿಯ ಭಯ ಬೇಡ ಅನ್ನೋದು ಈ ಬಗ್ಗೆ ಹೆಚ್ಚೆಚ್ಚು ತಿಳಿದವರ ಮಾತು. ಕೊರೋನಾ ಬಂದವರೆಲ್ಲ ಸಾಯಲ್ಲ. ನೂರು ಜನಕ್ಕೆ ಬಂದರೆ ಕರೆಕ್ಟ್ ಆದ ಟೖಮ್ ಗೆ ಚಿಕಿತ್ಸೆ ಸಿಗದ ಇಪ್ಪತ್ತು ಜನರಷ್ಟೇ ಸಾಯುತ್ತಾರೆ ಅಂತ ಎಲ್ಲ ವೖದ್ಯರೂ ಹೇಳುತ್ತಾರೆ.

 

ಮಾಂಸಾಹಾರ ಪ್ರಿಯರಿಗೊಂದು ಸಂತಸದ ಸುದ್ದಿ: ಚಿಕನ್ ತಿಂದ್ರೆ ಕರೋನಾ ಬರೋಲ್ಲ!...

ಇಷ್ಟಾದ ಮೇಲೂ ನಿಮ್ಮ ಭಯ ಹೋಗಿಲ್ಲ ಅಂದರೆ ಮಾಸ್ಕ್ ಸಿಗಲಿಲ್ಲ ಅಂತ ಮತ್ತಷ್ಟು ಹೆದರಿಗೊಳ್ಳಬೇಡಿ. ಟಿಶ್ಯೂ ಸಿಗದಿದ್ದರೆ ಟಾಯ್ಲೆಟ್ ಪೇಪರ್ ಆದ್ರೂ ಸಿಗುತ್ತೆ. ಅದರಲ್ಲೇ ಒಂದು ಮಾಸ್ಕ್ ಮಾಡಿಕೊಂಡು ಧರಿಸಿಕೊಳ್ಳಿ. ಮಾಸ್ಕ್ ಗೆ ಅಂತ ತೆಗೆದಿಟ್ಟ ಹಣದಲ್ಲಿ ಮತ್ತೇನಾದರೂ ತೆಗೆದುಕೊಳ್ಳಿ. ರೋಗ ಭಯ ಮರೆತು ನಗುತ್ತಿರಿ.

 

Voila. No more shortage of masks?? And I thought Indians were the masters of jugaad! 😊 pic.twitter.com/67mLgSo0Od

— anand mahindra (@anandmahindra)
click me!