ಕ್ಲಾಪಿಂಗ್‌ ಥೆರಪಿ ಮೂಲಕ ಈಝಿಯಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡ್ಕೊಳ್ಳಿ

Published : Jun 02, 2022, 12:35 PM IST
ಕ್ಲಾಪಿಂಗ್‌ ಥೆರಪಿ ಮೂಲಕ ಈಝಿಯಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡ್ಕೊಳ್ಳಿ

ಸಾರಾಂಶ

ಆರೋಗ್ಯ (Health)ವಾಗಿರ್ಬೇಕು ಅಂತ ಯಾರಿಗೆ ತಾನೇ ಆಸೆ ಇರಲ್ಲ ಹೇಳಿ. ಆದ್ರೆ ಇತ್ತೀಚಿಗೆ ಎಲ್ಲರಲ್ಲೂ ಅನಾರೋಗ್ಯದ ಸಮಸ್ಯೆ ಹೆಚ್ಚಾಗ್ತಾನೇ ಹೋಗ್ತಿದೆ.  ಎಲ್ಲಾ ರೀತಿಯ ಚಿಕಿತ್ಸೆ (Treatment) ಮಾಡಿ ಟ್ರೈ ಮಾಡ್ತಾನೆ ಇರ್ತಾರೆ. ನೀವು ಹೀಗೇ ಬೇಸತ್ತಿದ್ದೀರಾ. ಹಾಗಿದ್ರೆ ನಮ್ಮಲ್ಲಿದೆ ಎಲ್ಲಾ ಆರೋಗ್ಯ ಸಮಸ್ಯೆಯನ್ನೂ ಗುಣಪಡಿಸೋ ಛೂಮಂತ್ರ. ಅದೇನು ? ಆ ಬಗ್ಗೆ ಇಲ್ಲಿದೆ ಕಂಪ್ಲೀಂಟ್ ಮಾಹಿತಿ. 

ಆರೋಗ್ಯ (Health) ಕಾಪಾಡಿಕೊಳ್ಳಲು ನಾವೆಲ್ಲರೂ ಏನೆಲ್ಲಾ ಕಸರತ್ತು ಮಾಡ್ತೇವೆ. ವ್ಯಾಯಾಮ, ವಾಕಿಂಗ್ (Walking), ಜಾಗಿಂಗ್ ಹೀಗೆ ನಾನಾ ವಿಧಾನಗಳನ್ನು ಅನುಸರಿಸುತ್ತೇವೆ. ಆದ್ರೆ ಒಂದೇ ಒಂದು ಸಿಂಪಲ್‌ ಥೆರಪಿ (Simple therapy) ಅನೇಕ ರೋಗಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಅದುವೇ ಕ್ಲಾಪಿಂಗ್ ಥೆರಪಿ (Clappin therapy). ಕೇಳೋಕೆ ಸಿಂಪಲ್ ಎನಿಸಿದರೂ ಇದರಿಂದ ಸಿಗೋ ಆರೋಗ್ಯ ಪ್ರಯೋಜನಗಳು ಹಲವಾರು. ಸಾಮಾನ್ಯವಾಗಿ ಪ್ರೋತ್ಸಾಹ ನೀಡಲು ಅಥವಾ ಖುಷಿಗೊಳಿಸಲು ನಾವು ಚಪ್ಪಾಳೆ ತಟ್ಟುತ್ತೇವೆ. ಆದ್ರೆ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವ ವಿಷಯ ಅನೇಕರಿಗೆ ತಿಳಿದಿಲ್ಲ. 

ಚಪ್ಪಾಳೆ ತಟ್ಟುವುದು ಆರೋಗ್ಯಕ್ಕೆ ಹೇಗೆ ಸಹಾಯ ಮಾಡುತ್ತದೆ ?
ಹಲವಾರು ಪ್ರಯೋಜನಗಳನ್ನು ಪಡೆಯಲು ನಿಮ್ಮ ಕೈಗಳನ್ನು ಚಪ್ಪಾಳೆ ಮಾಡುವ ಚಟುವಟಿಕೆಯನ್ನು ಬೆಳಗ್ಗೆದ್ದು ಬೇಗನೆ ಮಾಡಬಹುದು. ಇದು ಶಕ್ತಿಯುತ ಮಾನಸಿಕ ಮತ್ತು ದೈಹಿಕ ಉತ್ತೇಜಕವಾಗಿದೆ. ಏಕೆಂದರೆ ಇದು ನಿಮ್ಮ ಶಕ್ತಿಯ ಚಕ್ರಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದಲ್ಲದೆ, ಇದು ಸಕಾರಾತ್ಮಕ ದೃಢೀಕರಣವಾಗಿ ಕಾರ್ಯನಿರ್ವಹಿಸುತ್ತದೆ.

ಮಧುಮೇಹಿಗಳು ಈ ಕೆಲವು ಸಿಹಿತಿಂಡಿಗಳನ್ನು ಭಯಪಡದೆ ತಿನ್ಬೋದು

ದೇಹದಲ್ಲಿ  ರಕ್ತದ ಪರಿಚಲನೆ ಸುಧಾರಿಸುತ್ತದೆ: ವಜ್ರಾಸನ ಅಥವಾ ಸುಖಾಸನದಂತಹ ಕುಳಿತುಕೊಳ್ಳುವ ಸ್ಥಾನಗಳಲ್ಲಿ ನಿಮ್ಮ ಕೈಗಳನ್ನು ಚಪ್ಪಾಳೆ ತಟ್ಟುವುದನ್ನು ನೀವು ಅಭ್ಯಾಸ ಮಾಡಬಹುದು. ಮುಂಜಾನೆ ಈ ಚಟುವಟಿಕೆಯನ್ನು ನಿರ್ವಹಿಸಲು ಸಲಹೆ ನೀಡಲಾಗುತ್ತದೆ. ಅಧಿಕ ತೂಕ (Weight) ಹೊಂದಿರುವವರು ಅಥವಾ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಸಹ ಇದನ್ನು ಮಾಡಬಹುದು. ಏಕೆಂದರೆ ಅವರು ಯಾವುದೇ ರೀತಿಯ ದೈಹಿಕ ವ್ಯಾಯಾಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಮ್ಮ ಕೈಗಳನ್ನು ಚಪ್ಪಾಳೆ ತಟ್ಟುವ ಮೂಲಕ, ಅವರು ರಕ್ತ ಪರಿಚಲನೆ ಸುಧಾರಿಸಬಹುದು. ಹೀಗಾಗಿ ಅಧಿಕ ರಕ್ತದೊತ್ತಡ ಅಥವಾ ಹೈಪೊಟೆನ್ಷನ್‌ನಂತಹ ಸಮಸ್ಯೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

ಹೆಚ್ಚು ಸಕ್ರಿಯವಾಗಿರಲು ಸಾಧ್ಯವಾಗುತ್ತದೆ: ಮಾನವ ದೇಹವು ಹಲವಾರು ಶಕ್ತಿ ಬಿಂದುಗಳು ಅಥವಾ ಕೇಂದ್ರಗಳನ್ನು ಹೊಂದಿರುತ್ತದೆ, ಮತ್ತು ಚಪ್ಪಾಳೆ ತಟ್ಟುವುದು ಅವುಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ನೀವು 10 ರಿಂದ 15 ನಿಮಿಷಗಳ ಕಾಲ ನಿಮ್ಮ ಕೈಗಳನ್ನು ಚಪ್ಪಾಳೆ ತಟ್ಟಿದರೆ, ಏಳು ಚಕ್ರಗಳ ಮೂಲಕ ಹಾದುಹೋಗುವ ಶಕ್ತಿಯನ್ನು ನೀವು ಅನುಭವಿಸಲು ಸಾಧ್ಯವಾಗುತ್ತದೆ. ಇದು ಈ ಕೇಂದ್ರಗಳನ್ನು ಸಕ್ರಿಯಗೊಳಿಸುತ್ತದೆ.

ಬೆಳಗ್ಗೆ ಹಾಲಿನ ಪುಡಿ ಟೀ ಕುಡೀತೀರಾ? ಒಳ್ಳೇದಲ್ಲ ಬಿಟ್ಟು ಬಿಡಿ

ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಾಯ ಮಾಡುತ್ತದೆ: ಮನಸ್ಸು ಮತ್ತು ದೇಹವು ಸದೃಢವಾಗಿರುವುದು ಮುಖ್ಯ, ಮತ್ತು ಚಪ್ಪಾಳೆ ತಟ್ಟುವುದು ಮನಸ್ಸು ಮತ್ತು ದೇಹವನ್ನು ಬಲಪಡಿಸಲು ತುಂಬಾ ಉಪಯುಕ್ತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಮುಂಜಾನೆ ಚಪ್ಪಾಳೆ ತಟ್ಟುವ ಚಟುವಟಿಕೆಯ ಮೂಲಕ ನೀವು ದೈಹಿಕ ಮತ್ತು ಮಾನಸಿಕ ಅಂಶಗಳನ್ನು ಉತ್ತೇಜಿಸಿದಾಗ, ಅದು ನಿಮ್ಮನ್ನು ದಿನವಿಡೀ ಧನಾತ್ಮಕ ಮತ್ತು ಲವಲವಿಕೆ ಮನಸ್ಥಿತಿಯಲ್ಲಿರಿಸುತ್ತದೆ.

ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ: ಚಪ್ಪಾಳೆ ತಟ್ಟುವಾಗ ಕೈಗಳ ಎಲ್ಲ ಬಿಂದುಗಳು ಸ್ಪರ್ಶಿಸುವುದರಿಂದ ಅನೇಕ ರೋಗಗಳು ಕಡಿಮೆಯಾಗುತ್ತವೆ. ಚಪ್ಪಾಳೆ ತಟ್ಟುವುದರಿಂದ ರಕ್ತ ಸಂಚಾರ ಸುಗಮವಾಗಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಮಕ್ಕಳ ಬರವಣಿಗೆಯಲ್ಲಿ ಸಾಕಷ್ಟು ಸುಧಾರಣೆಯಾಗುತ್ತದೆ. ಡಯಾಬಿಟಿಸ್, ಅಸ್ತಮಾ, ಹೃದಯ ಸಂಬಂಧಿ ಖಾಯಿಲೆ, ಸಂಧಿವಾತದಂತಹ ಖಾಯಿಲೆಯಿಂದ ಮುಕ್ತಿ ಸಿಗುತ್ತದೆ. ಚಪ್ಪಾಳೆ ತಟ್ಟುವುದರಿಂದ ದೇಹಕ್ಕೆ ಆರಾಮ ಸಿಗುತ್ತದೆ.

ಕೂದಲು ಉದುರುವ ಸಮಸ್ಯೆ ಇರೋದಿಲ್ಲ: ಚಪ್ಪಾಳೆಯಿಂದ ಬಿಳಿ ರಕ್ತ ಕಣಗಳು ಹೆಚ್ಚಾಗಿ ರೋಗದಿಂದ ನಮ್ಮ ದೇಹವನ್ನು ರಕ್ಷಣೆ ಮಾಡುತ್ತವೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಸಿಗುವ ಜೊತೆಗೆ ದೇಹ (Body) ಆರೋಗ್ಯವಾಗಿರುತ್ತದೆ. ಪ್ರತಿದಿನ ಚಪ್ಪಾಳೆ ತಟ್ಟುವುದರಿಂದ ಶೀತ, ನೆಗಡಿ, ಕೂದಲು ಉದುರುವ ಸಮಸ್ಯೆ, ಶರೀರದಲ್ಲಿ ಕಾಣಿಸಿಕೊಳ್ಳುವ ನೋವು ಕಡಿಮೆಯಾಗುತ್ತದೆ. ಇದ್ರ ಜೊತೆಗೆ ಎಲ್ಲ ಅಂಗಗಳೂ ಆರೋಗ್ಯಕರವಾಗಿರುತ್ತವೆ. ಕ್ಲಾಪಿಂಗ್‌ ಥೆರಪಿಯಿಂದ ಬೇರೇನಲ್ಲಾ ಪ್ರಯೋಜನವಿದೆ ತಿಳಿದುಕೊಳ್ಳೋಣ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?