ಬದನೆಗೂ ಗೊತ್ತು ಆರೋಗ್ಯದ ಗುಟ್ಟು!

Published : Mar 02, 2019, 03:46 PM IST
ಬದನೆಗೂ ಗೊತ್ತು ಆರೋಗ್ಯದ ಗುಟ್ಟು!

ಸಾರಾಂಶ

ವಾಂಗೀಬಾತ್, ಗುಳ್ಳ....ಹೀಗೆ ಕೆಲವು ಪದಾರ್ಥಗಳಿಗೆ ಬದನೆಯೇ ಬೆಸ್ಟ್. ಆದರೆ, ಇದನ್ನು ಪ್ರತಿಯೊಬ್ಬರೂ ಇಷ್ಟಪಡುವುದಿಲ್ಲ. ಅಲ್ಲದೇ ನಂಜು ಹೆಚ್ಚಿಸುವ ತರಕಾರಿ ಎಂಬ ಅಪಕೀರ್ತಿಗೂ ಪಾತ್ರವಾಗಿದೆ.  ಆದರೆ, ಈ ಬದನೆಯಲ್ಲಿಯೂ ಔಷಧೀಯ ಗುಣಗಳಿವೆ!

ರೊಟ್ಟಿ ಜೊತೆ ಬದನೆಕಾಯಿ ಪಲ್ಯ, ಎಣ್ಣೆಗಾಯಿ ಇದ್ದರೆ ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ. ಈ ರುಚಿಯಾದ ಬದನೆಕಾಯಿ ಕೇವಲ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ. ಆರೋಗ್ಯಕ್ಕೂ ಉತ್ತಮ. ಅದು ಹೇಗೆ?

  • ಬದನೆಯಲ್ಲಿ ಹೆಚ್ಚಿನ ನಾರಿನಂಶವಿದೆ. ಇದು ದೇಹದಲ್ಲಿನ ಸಕ್ಕರೆಯಂಶ ಕಡಿಮೆ ಮಾಡಿ, ಮಧುಮೇಹ ಸಮಸ್ಯೆ ಕಂಟ್ರೋಲ್‌ನಲ್ಲಿಡುತ್ತೆ.
  • ಈ ತರಕಾರಿಯಲ್ಲಿರುವ ಆ್ಯಂಟಿ ಆ್ಯಕ್ಸಿಡೆಂಟ್‌ಗಳು ಹೃದಯಕ್ಕೆ ಉತ್ತಮ ಕೊಲೆಸ್ಟ್ರಾಲ್ ನೀಡುತ್ತದೆ. ಇದು ಹೃದ್ರೋಗವನ್ನು ದೂರ ಮಾಡುತ್ತದೆ. 
  • ದೇಹದ ತೂಕ ಕಡಿಮೆ ಮಾಡಲು ಉಪಯುಕ್ತ. ಬದನೆಯನ್ನು ಬೇಯಿಸಿ ತಿಂದರೆ ಹೆಚ್ಚಿನ ಲಾಭ. 
  • ಕ್ಯಾನ್ಸರ್ ವಿರುದ್ಧ ಹೊರಾಡುವ ಶಕ್ತಿಯೂ ಬದನೆಯಲ್ಲಿರುವ ಪೆನೋಲಿಕ್‌ಗಿದೆ. 
  • ಬದನೆಯನ್ನು ಚೆನ್ನಾಗಿ ರುಬ್ಬಿ, ಸೋಸಿ ನೀರು ಮಾತ್ರ ಸೇವಿಸಿದರೆ, ರಕ್ತದೊತ್ತಡ ಕಂಟ್ರೋಲ್‌ಗೆ ಬರುತ್ತೆ.
  • ಬದನೆಯಲ್ಲಿರುವ ಆಟೋ ಸಯಾನಿಕ್ ಪದಾರ್ಥ ದೇಹದ ನಿಶ್ಯಕ್ತಿಯನ್ನು ದೂರ ಮಾಡಿ, ದೇಹಕ್ಕೆ ಶಕ್ತಿ ನೀಡುತ್ತದೆ. 
  • ನಿಕೋಟಿನ್ ಅಂಶ ಧೂಮಪಾನ ಚಟವನ್ನು ನಿಯಂತ್ರಿಸುತ್ತದೆ. ಅಲ್ಲದೇ ಹೃದಯ, ರಕ್ತನಾಳದ ಸಮಸ್ಯೆಗೂ ಮದ್ದು. 
  • ಬದನೆಯಲ್ಲಿ ವಿಟಮಿನ್ ಸಿ ಅಂಶವಿದ್ದು, ಸೋಂಕಿನ ವಿರುದ್ಧ ಹೊರಾಡಬಲ್ಲದು.
  • ಬದನೆಯನ್ನು ಬೇಯಿಸಿ ಸ್ವಲ್ಪ ಬೆಲ್ಲ ಸೇರಿಸಿ ಬೆಳಗ್ಗೆ ಸೇವಿಸಿದರೆ ಮೂಲವ್ಯಾಧಿಗೆ ಮದ್ದು.

ಹೆಂಗೆಂಗೋ ಹಣ್ಣು ತಿಂದರೆ ಕೆಡುತ್ತೆ ಆರೋಗ್ಯ...

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!