Inspirational Story: ಐಎಎಸ್‌ ಅಧಿಕಾರಿ ಆಗ್ಬೇಕು ಅಂತ ಸಮೋಸಾ ಮಾರ್ತಾರೆ!

By Suvarna News  |  First Published Apr 21, 2023, 6:57 PM IST

ಸಿವಿಲ್‌ ಸರ್ವೀಸ್‌ ಪರೀಕ್ಷೆ ಎದುರಿಸಿ ನಾಗರಿಕ ಸೇವಾ ಅಧಿಕಾರಿಯಾಗಬೇಕು ಎಂದು ಸಾಕಷ್ಟು ಜನ ಕನಸು ಕಾಣುತ್ತಾರೆ. ಅದನ್ನು ಸಾಧಿಸಲು ಎಲ್ಲರೂ ತಮ್ಮದೇ ವಿಧಾನದಲ್ಲಿ ಯತ್ನಿಸುತ್ತಾರೆ. ಇಲ್ಲೊಬ್ಬ ಅಂಗವಿಕಲರು ಸಮೋಸಾ ಮಾರುವ ಮೂಲಕ ಸಿವಿಲ್‌ ಸರ್ವೀಸ್‌ ಪರೀಕ್ಷೆ ತರಬೇತಿಗೆ ಬೇಕಾದ ಹಣ ಸಂಗ್ರಹ ಮಾಡುತ್ತಿರುವುದು ವಿಶೇಷ.


ಆಕಾಂಕ್ಷೆ, ಮಹತ್ವಾಕಾಂಕ್ಷೆಗಳು ನಮ್ಮ ಜೀವನದಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತವೆ. ಅವೇ ನಮ್ಮ ಬದುಕಿನ ರೀತಿ-ನೀತಿಗಳನ್ನು ರೂಪಿಸುತ್ತವೆ ಎಂದೂ ಹೇಳಬಹುದು. ಗುರಿ ಸಾಧನೆಗಾಗಿಯೇ ಹೊಸ ಸವಾಲುಗಳನ್ನು ಎದುರಿಸುವ ಛಲ ಸೃಷ್ಟಿಯಾಗುತ್ತದೆ. ನಾವು ಬಯಸುವುದನ್ನು ಹೇಗಾದರೂ ಹೊಂದಬೇಕು ಎನ್ನುವ ಹಂಬಲದೊಂದಿಗೆ ನಾವೇ ಹಲವು ದಾರಿಗಳನ್ನು ಹುಡುಕಿಕೊಳ್ಳುತ್ತೇವೆ. ಹೀಗಾಗಿಯೇ, ಮಹತ್ವಾಕಾಂಕ್ಷೆ ಹೊಂದಿರುವ ಮನುಷ್ಯನನ್ನು ಯಾವುದೇ ಅಡೆತಡೆಗಳು ನಿಲ್ಲಿಸಲು ಸಾಧ್ಯವಿಲ್ಲ. ಇವರೂ ಅಂಥದ್ದೇ ಒಬ್ಬ ಮಹತ್ವಾಕಾಂಕ್ಷಿ. ಗುರಿ ಸಾಧನೆಗೆ ಹಲವು ದಾರಿಗಳಿವೆ ಎನ್ನುವುದನ್ನು ಕಂಡುಕೊಂಡು ಮುಂದೆ ಸಾಗುತ್ತಿದ್ದಾರೆ. ಇವರು ನಾಗಪುರದ ಸೂರಜ್.‌ ಸಮೋಸಾ ಮಾರಾಟ ಮಾಡುತ್ತಾರೆ. ಇದರಲ್ಲೇನು ವಿಶೇಷ ಅಂತೀರಾ? ಅಸಲಿಗೆ ಇವರು ದೈಹಿಕ ನ್ಯೂನತೆ ಹೊಂದಿದ್ದಾರೆ. ಭಾರತೀಯ ಆಡಳಿತ ಸೇವೆಯ ಅಧಿಕಾರಿ ಅಂದರೆ ಐಎಎಸ್‌ ಅಧಿಕಾರಿ ಆಗಬೇಕು ಎನ್ನುವುದು ಇವರ ಆಸೆ. ಹೀಗಾಗಿ, ಸೂಕ್ತ ತರಬೇತಿ ಪಡೆದುಕೊಳ್ಳಲು ಸಮೋಸಾ ಮಾರಾಟ ಮಾಡುತ್ತಾರೆ. ತಮ್ಮ ಬೈಕ್‌ ನಲ್ಲಿ ಇವರು ಹೊರಟರೆಂದರೆ, ಪ್ರತಿದಿನ ನೂರಾರು ಸಮೋಸಾಗಳನ್ನು ಮಾರುತ್ತಾರೆ. 

ಗೌರವ್‌ ವಾಸನ್‌ ಎನ್ನುವ ಫುಡ್‌ ಬ್ಲಾಗರ್‌ ಒಬ್ಬರು ಸೂರಜ್‌ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದು, ಸಾಕಷ್ಟು ಜನರ ಗಮನ ಸೆಳೆದಿದೆ. ಸೂರಜ್‌ ಅವರು ನಾಗಪುರ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿದ್ದಾರೆ. ಆದರೆ, ಉದ್ಯೋಗ ದೊರಕಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ಸಮೋಸಾ ಮಾರುವ ಉದ್ಯೋಗಕ್ಕೆ ಸೇರಿಕೊಂಡರು. ಒಂದು ಪ್ಲೇಟ್‌ ಗೆ ರೂ.15ರಂತೆ ಮಾರಾಟ ಮಾಡುತ್ತಾರೆ. ನಾಗಪುರದಲ್ಲಿ ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ಸಮೋಸಾ ಮಾರುತ್ತಾರೆ. ಇವರ ಕುರಿತಾಗಿ ವಿಡಿಯೋ ಶೇರ್‌ ಮಾಡಿರುವ ವಾಸನ್‌, ಸೂರಜ್‌ ಅವರ ಮುಂದಿನ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. “ಸಿವಿಲ್‌ ಸರ್ವೀಸ್‌ ಪರೀಕ್ಷೆಗೆ ಸಿದ್ಧತೆ ನಡೆಸಲೆಂದು ಅವರು ಸಮೋಸಾ ಮಾರುವ ಉದ್ಯೋಗ ಮಾಡುತ್ತಿದ್ದಾರೆ. ಅವರಿಗೆ ಸಹಾಯ ಮಾಡಿʼ ಎಂದು ರಿಕ್ವೆಸ್ಟ್‌ ಮಾಡಿದ್ದಾರೆ.

Latest Videos

undefined


ಒಂದೇ ಕಾಲಿದ್ದರೂ ಚಿತ್ರರಂಗವನ್ನೇ ಗೆದ್ದ ತಾರೆ Sudha Chandran ಲವ್ ಸ್ಟೋರಿ ಇದು!

ಸೂರಜ್‌ ಅವರ ಕುರಿತು ವಿಡಿಯೋ ಶೇರ್‌ ಮಾಡಿರುವ ಗೌರವ ವಾಸನ್‌ ಅವರು “ಸ್ವಾದ್‌ ಆಫಿಷಿಯಲ್‌ʼ (Swad Official) ಎನ್ನುವ ಇನ್‌ ಸ್ಟಾಗ್ರಾಮ್‌ (Instagram) ಮತ್ತು ಯೂಟ್ಯೂಬ್‌ (You Tube) ಖಾತೆ ಹೊಂದಿದ್ದಾರೆ. 

ಸ್ಫೂರ್ತಿಯ ಸೆಲೆ
ಸೂರಜ್‌ (Suraj) ಅವರ ಕತೆ ಅಂತರ್ಜಾಲದಲ್ಲಿ (Internet) ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಹಲವರು ಭಾವನಾತ್ಮಕವಾಗಿ (Emotional) ಕಾಮೆಂಟ್‌ (Comment) ಮಾಡಿದ್ದಾರೆ. ಉನ್ನತ ಶಿಕ್ಷಣದ (Higher Education) ಹಂಬಲ ಹೊತ್ತಿರುವ ಸೂರಜ್‌ ಅವರು ಎಲ್ಲ ಯುವಜನತೆಗೆ (Youth) ಮಾದರಿಯಾಗಿದ್ದಾರೆ ಎಂದು ಹಲವರು ಹೇಳಿದ್ದಾರೆ. “ದೈಹಿಕ ನ್ಯೂನತೆ (Specialy Abled) ಸಾಧನೆಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತಿರುವ ಸೂರಜ್‌ ಸ್ಫೂರ್ತಿಯ ಸೆಲೆಯಾಗಿದ್ದಾರೆʼ ಎಂದೂ ಕೆಲವರು ಹೇಳುತ್ತಿದ್ದಾರೆ.

ಐಷಾರಾಮಿ ಒಬೆರಾಯ್ ಹೋಟೆಲ್ ಹಿಂದಿದೆ ಹೋರಾಟದ ಕಥೆ; ಸೋಲನ್ನೇ ಮೆಟ್ಟಿಲಾಗಿಸಿಕೊಂಡ ಮೋಹನ್ ಸಿಂಗ್ ರಾಯ್

ದುಬೈನಿಂದಲೂ ಶುಭಾಶಯ (Congrats) ಕೋರಿರುವವರು ಇದ್ದಾರೆ. ದೇವರು (God) ನಿಮಗೆ ಒಳ್ಳೆಯದನ್ನು ಮಾಡಲಿ. ಹೆಚ್ಚು ಹೆಚ್ಚು ಯಶಸ್ಸು ನಿಮ್ಮದಾಗಲಿ. ಆರೋಗ್ಯಕರ (Healthier) ಮತ್ತು ಆರ್ಥಿಕವಾಗಿ (Financial) ನೆಮ್ಮದಿಯ ಜೀವನ ಲೀಡ್‌ ಮಾಡಿʼ ಎಂದೆಲ್ಲ ಹಾರೈಸಿದ್ದಾರೆ. 

click me!