ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡಬಾರದು. ಸರಿಯಾದ ಸಮಯಕ್ಕೆ ಮಾತ್ರೆ ತೆಗೆದುಕೊಳ್ಬೇಕು. ಒಂದು ದಿನ ಮಾತ್ರೆ ಮಿಸ್ ಆದ್ರೂ ಸಮಸ್ಯೆಯಾಗುತ್ತೆ. ಮಿಸ್ ಮಾಡ್ದೆ ಮಾತ್ರೆ ತೆಗೆದುಕೊಳ್ಳಬೇಕೆಂದ್ರೆ ಕೆಲ ಟಿಪ್ಸ್ ಅನುಸರಿಸಿ.
ಅನಾರೋಗ್ಯಕ್ಕೊಳಗಾಗುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಆರೋಗ್ಯದಲ್ಲಿ ಸಣ್ಣ ಏರುಪೇರಾದ್ರೂ ಜನರು ಆಸ್ಪತ್ರೆಗೆ ಹೋಗ್ತಾರೆ. ಔಷಧಿ, ಮಾತ್ರೆಗಳನ್ನು ಮನೆಗೆ ತರ್ತಾರೆ. ಮತ್ತೆ ಕೆಲವರು ಆರೋಗ್ಯವಾಗಿದ್ದರೂ ಪೂರಕ ಮಾತ್ರೆಗಳನ್ನು ಸೇವನೆ ಮಾಡ್ತಾರೆ. ಮಾತ್ರೆಯೇನೋ ಮನೆಗೆ ಬರುತ್ತದೆ. ಆದ್ರೆ ಸರಿಯಾದ ಸಮಯಕ್ಕೆ ಮಾತ್ರೆ ತೆಗೆದುಕೊಳ್ಳಲು ಅನೇಕರಿಗೆ ನೆನಪಿರೋದಿಲ್ಲ. ತೀರಾ ಹುಷಾರಿಲ್ಲ ಎನ್ನುವಾಗ ಔಷಧಿ ತೆಗೆದುಕೊಳ್ಳುವ ಜನರು ಸ್ವಲ್ಪ ಹುಷಾರಾಗ್ತಿದ್ದಂತೆ ಮಾತ್ರೆ ತೆಗೆದುಕೊಳ್ಳಲು ಮರೆಯುತ್ತಾರೆ. ಮಾತ್ರೆಯನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದು ಹಾಗೂ ಕೋರ್ಸ್ ಮುಗಿಸುವುದು ಬಹಳ ಮುಖ್ಯ. ಕೆಲ ಮಾತ್ರೆಗಳನ್ನು ಪ್ರತಿ ದಿನ ತೆಗೆದುಕೊಳ್ಳಬೇಕು. ಹೆಚ್ಚು ಕಮ್ಮಿಯಾದ್ರೆ ಸಮಸ್ಯೆ ಎದುರಾಗುತ್ತದೆ. ಉದಾಹರಣೆಗೆ ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುವ ಮಹಿಳೆ ಅದನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಹಾಗೆ ಥೈರಾಯ್ಡ್ ನಿಂದ ಬಳಲುತ್ತಿರುವ ವ್ಯಕ್ತಿ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಔಷಧಿ ಸೇವನೆ ಮಾಡ್ಬೇಕು. ಆದ್ರೆ ಕೆಲವೊಮ್ಮೆ ಜನರು ಸಮಯಕ್ಕೆ ಔಷಧಿಗಳನ್ನು ತೆಗೆದುಕೊಳ್ಳಲು ಮರೆಯುತ್ತಾರೆ. ಇದ್ರಿಂದ ಸಮಸ್ಯೆ ಎದುರಾಗುತ್ತಾರೆ. ನೀವೂ ಮಾತ್ರೆ ತೆಗೆದುಕೊಳ್ಳಲು ಮರೆಯುತ್ತಿದ್ದರೆ ಕೆಲ ಟಿಪ್ಸ್ ಅನುಸರಿಸಿ.
ಔಷಧಿ (Medicine) ಬಾಕ್ಸ್ ಇಟ್ಟುಕೊಳ್ಳಿ : ಪ್ರತಿ ದಿನ ಔಷಧಿ ತೆಗೆದುಕೊಳ್ಳುತ್ತೀರಿ ಎಂದಾದ್ರೆ ಅಥವಾ ವಾರಕ್ಕೆ ಬೇರೆ ಬೇರೆ ಔಷಧಿ ತೆಗೆದುಕೊಳ್ಳುವವರು ನೀವಾಗಿದ್ದರೆ ಅದನ್ನು ತೆಗೆದುಕೊಳ್ಳಲು ಮರೆತು ಹೋಗೋದು ಸಹಜ. ಹಾಗಾಗಿ ಔಷಧಿ ಡಬ್ಬವನ್ನು ಬಳಸಿ. ಡಬ್ಬದಲ್ಲಿ ಎಲ್ಲ ಮಾತ್ರೆಯನ್ನು ಹಾಕಿಟ್ಟುಕೊಳ್ಳಿ. ಬಾಕ್ಸ್ ಮೇಲೆ ಯಾವಾಗ ತೆಗೆದುಕೊಳ್ಳಬೇಕೆಂಬುದನ್ನು ನಮೂದಿಸಿದ್ರೆ ಒಳ್ಳೆಯದು. ಇದ್ರಿಂದ ಮಾತ್ರೆ ತೆಗೆದುಕೊಳ್ಳಲು ನೀವು ಮರೆಯುವುದಿಲ್ಲ. ಮನೆಯವರ ಮಾತ್ರೆಗಳನ್ನು ಕೂಡ ನೀವು ಇದೇ ರೀತಿ ಬಾಕ್ಸ್ ನಲ್ಲಿ ಇಡಬಹುದು.
ರಿಮ್ಯಾಂಡರ್ (Remander) ಸೆಟ್ ಮಾಡಿ : ಇದು ಸರಳವಾದ ವಿಧಾನವಾಗಿದೆ. ಸರಿಯಾದ ಸಮಯದಲ್ಲಿ ಔಷಧಿಯನ್ನು ಪಡೆಯಲು ಇದು ನಿಮಗೆ ನೆರವಾಗುತ್ತದೆ. ನೀವು ಯಾವ ಟೈಂನಲ್ಲಿ ಮಾತ್ರೆ ಸೇವನೆ ಮಾಡ್ಬೇಕೆಂದು ರಿಮ್ಯಾಂಡರ್ ಸೆಟ್ ಮಾಡಿ. ನೀವು ಮರೆತ್ರೂ ಮೊಬೈಲ್ ರಿಮ್ಯಾಂಡರ್ ಮರೆಯೋದಿಲ್ಲ. ಅದು ಪ್ರತಿ ದಿನ ನಿಮ್ಮನ್ನು ಎಚ್ಚರಿಸುತ್ತದೆ. ಆಗ ನೀವು ಮಾತ್ರೆ ಸೇವನೆ ಮಾಡೋದು ಸುಲಭವಾಗುತ್ತದೆ.
ಅಪ್ಲಿಕೇಷನ್ (Application) ಬಳಕೆ ಮಾಡಬಹುದು : ಅನೇಕ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗಳು ಈಗ ಲಭ್ಯವಿದೆ. ಅವು ನಿಮಗೆ ಮಾತ್ರೆ ಸೇವನೆ ಮಾಡಲು ನೆರವಾಗುತ್ತವೆ. ಅಪ್ಲಿಕೇಷನ್ ಡೌನ್ಲೋಡ್ ಮಾಡಿ ನೀವು ಅದ್ರಲ್ಲಿ ಮಾಹಿತಿ ಸೆಟ್ ಮಾಡಬಹುದು. ನಿಮ್ಮ ಮಾತ್ರೆ ಅವಧಿ ಮುಗಿದ್ರೆ ಅದು ನಿಮಗೆ ಸಂದೇಶ (Message) ರವಾನೆ ಮಾಡುತ್ತದೆ. ಹಾಗೆಯೇ ಪ್ರತಿ ದಿನ ಮಾತ್ರೆ ತೆಗೆದುಕೊಳ್ಳುವ ಸಮಯಕ್ಕೆ ನಿಮಗೆ ಸಂದೇಶ ರವಾನೆ ಮಾಡುತ್ತದೆ.
ಫಸ್ಟ್ ನೈಟ್ ದಿನ ಹುಡುಗರು ಈ ವಿಷ್ಯಗಳ ಬಗ್ಗೆ ಅಲರ್ಟ್ ಆಗಿರಬೇಕು…
ನೋಟಿಸ್ (Notice) ಅಂಟಿಸಿಕೊಳ್ಳಿ : ಮಾತ್ರೆ (Pill) ತೆಗೆದುಕೊಳ್ಳಲು ನಿಮಗೆ ಮರೆತು ಹೋಗುತ್ತದೆ ಎನ್ನುವವರು ನೀವಾಗಿದ್ದರೆ ನಿಮ್ಮ ಲ್ಯಾಪ್ ಟಾಪ್ (Laptop) ಅಥವಾ ನಿಮ್ಮ ವರ್ಕ್ ಪ್ಲೇಸ್ ಹತ್ತಿರ ನೋಟಿಸ್ ಅಂಟಿಸಿಟ್ಟುಕೊಳ್ಳಿ. ಮನೆಯಲ್ಲಿ ಇರುವವರು ನೀವಾಗಿದ್ದರೆ ನೀವು ಹೆಚ್ಚಿನ ಸಮಯವನ್ನು ಕಳೆಯುವ ಪ್ರದೇಶದಲ್ಲಿ ನೋಟಿಸ್ ಅಂಟಿಸಿ. ಅದು ನಿಮ್ಮ ಕಣ್ಣಿಗೆ ಬೀಳ್ತಿದ್ದರೆ ನಿಮಗೆ ಮಾತ್ರೆ ತೆಗೆದುಕೊಳ್ಳುವುದು ನೆನಪಾಗುತ್ತದೆ.
HEALTH TIPS: ಹೆಚ್ಚಿನ ಜನರನ್ನು ಕಾಡುತ್ತಿದೆ ಕೊಲೈಟಿಸ್ ರೋಗ… ಏನಿದು ಸಮಸ್ಯೆ ತಿಳಿಯಿರಿ
ಮಾತ್ರೆ ತೆಗೆದುಕೊಳ್ಳುವ ಸಮಯ : ಬೆಳಿಗ್ಗೆ ಔಷಧಿ ತೆಗೆದುಕೊಂಡ್ರೆ ರಾತ್ರಿ(Night) ಮರೆಯುತ್ತೆ, ರಾತ್ರಿ ತೆಗೆದುಕೊಂಡ್ರೆ ಬೆಳಿಗ್ಗೆ ಮರೆಯುತ್ತೆ ಎನ್ನುವವರು ನೀವಾಗಿದ್ದರೆ ಮಾತ್ರೆ ತೆಗೆದುಕೊಳ್ಳುವ ಸಮಯವನ್ನು ನಿಗದಿಪಡಿಸಿಕೊಳ್ಳಿ. ಪ್ರತಿ ದಿನ ಒಂದೇ ಸಮಯಕ್ಕೆ ನೀವು ಮಾತ್ರೆ ತೆಗೆದುಕೊಳ್ಳುವ ರೂಢಿ ಮಾಡಿಕೊಳ್ಳಿ. ಮಾತ್ರೆ ತೆಗೆದುಕೊಳ್ಳುವುದು ಅಭ್ಯಾಸವಾದ್ರೆ ನೀವದನ್ನು ಮರೆಯೋದಿಲ್ಲ.