ಲೈಫ್‌ಲ್ಲಿ ಯಾವ್ದೂ ಸರಿಯಾಗಿಲ್ಲ ಅಂತ ಕೊರಗ್ಬೇಡಿ, ಸರಿಯಾಗಿ ಪ್ಲಾನ್ ಮಾಡ್ಕೊಳ್ಳಿ

By Suvarna NewsFirst Published Oct 4, 2022, 4:19 PM IST
Highlights

ಲೈಫ್‌ನಲ್ಲಿ ಯಾವ್ದೂ ಸರಿಯಾಗಿಲ್ಲಪ್ಪ ಅಂತ ಕೆಲವೊಬ್ಬರು ಒದ್ದಾಡುವುದನ್ನು ನಾವು ನೋಡಿರಬಹುದು. ಬರೀ ಪ್ರಾಬ್ಲೆಮ್ಸ್‌, ಖುಷಿನೇ ಇಲ್ಲ ಅಂತ ಕೊರಗ್ತಾರೆ, ಆದ್ರೆ ಜೀವನದಲ್ಲಿ ಸರಿಯಾದ ಪ್ಲಾನಿಂಗ್ ಇದ್ರೆ ಯಾವ್ದೇ ತೊಂದ್ರೆ ಇರಲ್ಲ. ಯಾವಾಗ್ಲೂ ಹ್ಯಾಪಿಯಾಗಿರ್ಬೋದು.

ಜೀವನದಲ್ಲಿ ಖುಷಿ ಖುಷಿಯಾಗಿರಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಬದುಕು ನಾವಂದದುಕೊಂಡಂತೆ ಇರಲ್ಲ ಅಲ್ವಾ ? ಹ್ಯಾಪಿಯಾಗಿರೋಣ ಅಂದುಕೊಂಡ್ರೂ ಸಮಸ್ಯೆಗಳು ಧುತ್ತೆಂದು ಪ್ರತ್ಯಕ್ಷವಾಗಿ ಬಿಡ್ತವೆ. ಸಮಸ್ಯೆಗಳನ್ನೇ ನಿಭಾಯಿಸೋದೆ ಜೀವನವಾಗಿಬಿಡ್ತದೆ. ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ, ಒತ್ತಡ, ಖಿನ್ನತೆ ಎಲ್ಲವೂ ಒಟ್ಟಾಗಿ ಕಾಡಲು ಶುರು ಮಾಡುತ್ತವೆ. ಹೀಗಾಗದಿರಲು ಏನು ಮಾಡ್ಬೋದು ? ಲೈಫ್‌ನಲ್ಲಿ ಯಾವ್ದೂ ಸರಿಯಾಗಿಲ್ಲ ಅಂತ ಕೊರಗೋ ಬದ್ಲು ಅದನ್ನು ಸರಿಪಡಿಸೋದು ಬುದ್ಧಿವಂತಿಕೆ ಅಲ್ವಾ ? ಅದಕ್ಕಾಗಿ ಏನೆಲ್ಲಾ ಟಿಪ್ಸ್ ಫಾಲೋ ಮಾಡ್ಬೇಕು ನಾವ್ ಹೇಳ್ತೀವಿ. 

ಬೇಕಾಬಿಟ್ಟಿ ಖರ್ಚು ಮಾಡದಿರಿ: ಆರ್ಥಿಕ ಯೋಜನೆಯಿರಲಿ: ಕಾರ್ಪೊರೇಟ್ ಜಗತ್ತಿಗೆ ಕಾಲಿಡುತ್ತಿರುವ ಬಹುತೇಕ ಯುವಕರಿಗೆ ಸರಿಯಾದ ಹಣಕಾಸು ಯೋಜನೆ ಇರುವುದಿಲ್ಲ. ಸ್ಯಾಲರಿ ಕ್ರೆಡಿಟ್‌ ಆದಂತೆ ಎಲ್ಲಾ ಹಣವನ್ನು (Money) ನೀರಿನಂತೆ ಖರ್ಚು ಮಾಡಿ ಬಿಡುತ್ತಾರೆ. ತಿಂಗಳ ಕೊನೆಯಲ್ಲಿ ಹಣವಿಲ್ಲದೆ ಒದ್ದಾಡುತ್ತಾರೆ. ಯಾವುದೇ ನಿರ್ದಿಷ್ಟ ಗುರಿಗಳನ್ನು ಹೊಂದಿಸದೆ ಹೆಚ್ಚಿನ ಆದಾಯವನ್ನು ಆಧರಿಸಿ ಹೂಡಿಕೆ ಮಾಡುತ್ತಾರೆ. ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಗರಿಷ್ಠಗೊಳಿಸಿ ಬಿಡುತ್ತಾರೆ. ಕೊನೆಯ ಕ್ಷಣದವರೆಗೂ ಆರ್ಥಿಕ ಯೋಜನೆಯನ್ನು ನಿರ್ಲಕ್ಷಿಸುತ್ತಾರೆ.

Inspiration Sudha Murthy: ಯಾರನ್ನೋ ಮೆಚ್ಚಿಸಲು ಬದಲಾಗಬೇಡಿ, ನೀವು ನೀವಾಗಿರಿ

ಸಾಮಾನ್ಯವಾಗಿ ಎಲ್ಲರೂ ಇಂಥಾ ಕೆಟ್ಟ ಅಭ್ಯಾಸ (Bad habit) ಹೊಂದಿರುತ್ತಾರೆ. ಮೊದಲು ಈ ಅಭ್ಯಾಸವನ್ನು ಬದಲಿಸಿಕೊಳ್ಳಿ. ಆರ್ಥಿಕ ಅಶಿಸ್ತು ಜೀವನದಲ್ಲಿ ಸಂಕಷ್ಟವನ್ನು ತರುವ ಸಾಧ್ಯತೆಯೇ ಹೆಚ್ಚು. ನಮ್ಮ ಹಣಕಾಸು ನಿರ್ವಹಣೆ ಮತ್ತು ನಮ್ಮ ಹೂಡಿಕೆಗಳನ್ನು ಯೋಜಿಸುವುದರ ಕುರಿತು ಇನ್ನಷ್ಟು ತಿಳಿದುಕೊಳ್ಳುವುದು ಈ ದಸರಾದಲ್ಲಿ ನಾವು ಮಾಡಬೇಕಾದ ಬದಲಾವಣೆಯಾಗಿದೆ.

ಆರೋಗ್ಯದ ಬಗ್ಗೆ ಕಾಳಜಿಯಿರಲಿ: ಅನೇಕರು ಲೈಫ್ ಎಂಜಾಯ್ ಮಾಡುವ ಭರದಲ್ಲಿ ಆರೋಗ್ಯದ (Health) ಬಗ್ಗೆ ಕಾಳಜಿ ವಹಿಸುವುದನ್ನು ಮರೆತು ಬಿಡುತ್ತಾರೆ. ಆರೋಗ್ಯ ಸಮಸ್ಯೆಗಳಿದ್ದರೂ ನಿರ್ಲಕ್ಷ್ಯ ವಹಿಸಿ ಬಿಡುತ್ತಾರೆ. ಕನಿಷ್ಠ ವೈದ್ಯರ ಬಳಿಗೂ ಹೋಗುವುದಿಲ್ಲ. ಈ ಅಭ್ಯಾಸವು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸರಿಯಾದ ಚಿಕಿತ್ಸೆಯ (Treatment) ಕೊರತೆಯಿಂದ ಮಾತ್ರ ನಾವು ನಮ್ಮ ಆರೋಗ್ಯವನ್ನು ಉಳಿಸಬಹುದು. ಹಾಗಾಗಿ ಅನಾರೋಗ್ಯವನ್ನು ನಿರ್ಲಕ್ಷಿಸುವ ಅಭ್ಯಾಸದಿಂದ ದೂರವಿರುವುದು ಉತ್ತಮ.

ಆರೋಗ್ಯಕರ ಆಹಾರ ಸೇವಿಸಿ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಆರೋಗ್ಯಕರ ಆಹಾರದ (Food) ಬದಲಿಗೆ ಜಂಕ್ ಫುಡ್ ತಿನ್ನಲು ಇಷ್ಟಪಡುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆಯೂ ಉಂಟಾಗುತ್ತಿದೆ. ಹಾಗಾಗಿ ಕೆಟ್ಟ ಆಹಾರದಿಂದ ದೂರವಿರುವ ಅಭ್ಯಾಸ ರೂಢಿಸಿಕೊಳ್ಳಿ. ಉತ್ತಮವಾಗಿ ತಿನ್ನಲು ನಾವು ಮಾಡಬಹುದಾದ ಪ್ರಾಥಮಿಕ ಬದಲಾವಣೆಯೆಂದರೆ ಆರೋಗ್ಯಕರ, ಸಾವಯವ ಆಹಾರಕ್ರಮವನ್ನು ಅನುಸರಿಸುವುದು. ಹಾಗಾಗಿ ಈ ದಸರಾ ದಿನದಂದು ಕೆಟ್ಟ ಜಂಕ್ ಫುಡ್ ನಿಂದ ದೂರವಿದ್ದು ಒಳ್ಳೆಯ ಆಹಾರ ಸೇವಿಸುವ ಪಣ ತೊಡೋಣ. ಮದ್ಯಪಾನ, ಧೂಮಪಾನವಿದ್ದು ಆರೋಗ್ಯಕರವಾಗಿರಲು ಯಾವಾಗಲೂ ದೈಹಿಕ ಚಟುವಟಿಕೆ (Exercise)ಯಲ್ಲಿ ತೊಡಗುವ ನಿರ್ಧಾರ ಮಾಡುವುದು ಒಳ್ಳೆಯದು. 

Life Lessons: ಎಲ್ರೂ ಮಾಡೋ ಮಿಸ್ಟೇಕ್..ನೀವು ಕೂಡಾ ಮಾಡಿರ್ಬೋದು ನೋಡಿ

ಜೀವನಶೈಲಿ ಉತ್ತಮವಾಗಿರಲಿ: ಮತ್ತೊಂದು ಪ್ರಮುಖ ವಿಷಯವೆಂದರೆ ಸರಿಯಾದ ಜೀವನಶೈಲಿ (Lifestyle)ಯನ್ನು ಆರಿಸುವುದು. ಜಾಬ್‌, ಸ್ಯಾಲರಿ, ಟ್ರಿಪ್, ಓಡಾಟವೆಂದು ನಾವೆಲ್ಲರೂ ಒತ್ತಡದ ಬದುಕನ್ನು ಜೀವಿಸುತ್ತಿದ್ದೇವೆ. ಹೆಚ್ಚು ಸಮರ್ಥನೀಯ ಜೀವನಶೈಲಿಯತ್ತ ಸಾಗುವುದು, ನಮ್ಮ ಪರಿಸರಕ್ಕೆ ಸಹಾಯ ಮಾಡುವ ನೈಸರ್ಗಿಕ ಮತ್ತು ಸಾವಯವ ಉತ್ಪನ್ನಗಳನ್ನು ಆರಿಸಿಕೊಳ್ಳುವುದು ನಾವು ಬೆಳೆಸಿಕೊಳ್ಳಬೇಕಾದ ಅಭ್ಯಾಸವಾಗಿದೆ. ಹೆಚ್ಚುವರಿಯಾಗಿ, ಈ ದಸರಾವು ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಆಯ್ಕೆ ಮಾಡಲು ಮತ್ತು ಸ್ಥಳೀಯ ಕುಶಲಕರ್ಮಿಗಳನ್ನು ಬೆಂಬಲಿಸಲು ಸಂಕಲ್ಪ ಮಾಡೋಣ.

click me!