Bed Exercises : ವ್ಯಾಯಾಮಕ್ಕಾಗಿ ಏಳಲು ಸೋಮಾರಿತನವೇ? ಹಾಸಿಗೆಯಲ್ಲೇ ಮಾಡಿ ವರ್ಕೌಟ್!

By Suvarna News  |  First Published Jan 20, 2022, 12:48 PM IST

ನಾಳೆ ಬೆಳಿಗ್ಗೆ ಬೇಗ ಏಳ್ಬೇಕು, ಏನೇ ಆಗ್ಲಿ ವ್ಯಾಯಾಮ ಮಾಡ್ಲೇಬೇಕು ಅಂತಾ ಪ್ಲಾನ್ ಮಾಡಿರ್ತೇವೆ. ಆದ್ರೆ ಬೆಳಿಗ್ಗೆ ಗಂಟೆ 9 ಆದ್ರೂ ಆಲಸ್ಯ ಹೋಗಿರುವುದಿಲ್ಲ. ಇದ್ರಿಂದ ತೂಕ ಏರ್ತಿರುತ್ತದೆ. ನೀವೂ ಇವರಲ್ಲಿ ಒಬ್ಬರಾಗಿದ್ದರೆ ಸರಳ ಟಿಪ್ಸ್ ಇಲ್ಲಿದೆ.
 


ಚಳಿಗಾಲ(Winter)ದ ಚುಮು-ಚುಮು ಚಳಿ (Cold)ಯಲ್ಲಿ ಹೊದ್ದು ಮಲಗುವ ಮಜವೇ ಬೇರೆ. ಬಹುತೇಕರಿಗೆ ಚಳಿಗಾಲದಲ್ಲಿ ಬೆಳ್ಳಂಬೆಳಿಗ್ಗೆ ಏಳುವುದು ಕಷ್ಟಸಾಧ್ಯ. ಯಾಕಾದ್ರೂ ಬೆಳಗಾಗುತ್ತೋ ಎನ್ನುವವರಿದ್ದಾರೆ. ಸೂರ್ಯ ಮೇಲೆ ಬಂದ್ರೂ ಜನರು ಹಾಸಿಗೆ ಬಿಡುವುದಿಲ್ಲ. ಇದ್ರಿಂದ ದಿನಚರಿ ಏರುಪೇರಾಗುವ ಜೊತೆಗೆ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ. ಪ್ರತಿ ದಿನ ಬೆಳಿಗ್ಗೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬೇಸಿಗೆಯಲ್ಲಿ ಅನೇಕರು ನಿಯಮಿತವಾಗಿ ವರ್ಕೌಟ್ ಮಾಡ್ತಾರೆ. ಆದ್ರೆ ಚಳಿಗಾಲದಲ್ಲಿ ಸೋಮಾರಿಯಾಗ್ತಾರೆ. ಚಳಿಗಾಲ ಮುಗಿಲಿ,ಆಮೇಲೆ ನೋಡೋಣ ಎನ್ನುತ್ತಾರೆ. ನೀವೂ ಚಳಿಗಾಲದಲ್ಲಿ ವ್ಯಾಯಾಮ ಸ್ಕಿಪ್ ಮಾಡ್ತಿದ್ದರೆ ಇನ್ಮುಂದೆ ಹಾಸಿಗೆಯಲ್ಲಿಯೇ ಕುಳಿತು ಕೆಲ ವ್ಯಾಯಾಮ ಮಾಡಿ. ಕೆಲವೊಂದು ವರ್ಕೌಟ್ ನೀವು ಹಾಸಿಗೆಯಲ್ಲೇ ಮಾಡಬಹುದು. ಇದು ನಿಮ್ಮ ಆರೋಗ್ಯ ವೃದ್ಧಿಸುವ ಜೊತೆಗೆ ದಿನ ಫ್ರೆಶ್ ಆಗಿರಲು ನೆರವಾಗುತ್ತದೆ. 

ಹಾಸಿಗೆಯಲ್ಲಿ ವ್ಯಾಯಾಮ (Exercise)ಮಾಡಿದ್ರೆ ಏನು ಪ್ರಯೋಜನ? : ಬೆಳಿಗ್ಗೆ ಹಾಸಿಗೆಯಿಂದ ಏಳದೆ ಮಲಗಿಯೇ ಕೆಲವು ವ್ಯಾಯಾಮಗಳನ್ನು ಮಾಡಬಹುದು. ಈ ವ್ಯಾಯಾಮವು ನಿಮ್ಮ ತೊಡೆಗಳು ಮತ್ತು ಕಾಲುಗಳನ್ನು ಬಲಪಡಿಸುತ್ತದೆ.  ಇಷ್ಟೇ ಅಲ್ಲ, ಇದು ನಿಮ್ಮ ಸೊಂಟಕ್ಕೂ ಪ್ರಯೋಜನಕಾರಿ. 

Tap to resize

Latest Videos

ಮಲಗಿಯೇ ಮಾಡಬಹುದಾದ ಸೂಪರ್ ಎಫೆಕ್ಟಿವ್ ವ್ಯಾಯಾಮಗಳು 

ನಿಮ್ಮ ಪಾದಗಳಿಗೆ ವ್ಯಾಯಾಮ : ಮಲಗಿಯೇ ನಿಮ್ಮ ಪಾದಗಳ ವ್ಯಾಯಾಮ ಮಾಡಬಹುದು. ಪಾದಗಳಲ್ಲಿಯೂ ಕೊಬ್ಬಿರುತ್ತದೆ. ಅದನ್ನು ಕರಗಿಸುವುದು ಬಹಳ ಮುಖ್ಯ. ಬೆನ್ನಿನ ಮೇಲೆ ಮಲಗಿ,ಪಾದಗಳನ್ನು ಹಿಂದೆ,ಮುಂದೆ ಮಾಡಬೇಕು. 10 ಬಾರಿ ಹೀಗೆ ಮಾಡಿ ನಂತ್ರ ರಿಲ್ಯಾಕ್ಸ್ ಆಗಿ.

ಕಾಲು ಮತ್ತು ತೊಡೆಗಳಿಗೆ ವ್ಯಾಯಾಮ : ಬೆನ್ನಿನ ಮೇಲೆ ನೇರವಾಗಿ ಮಲಗಬೇಕು. ನಂತ್ರ ಒಂದು ಮೊಣಕಾಲನ್ನು ಬಗ್ಗಿಸಬೇಕು. ಪಾದಗಳು ಸೊಂಟದ ಪಕ್ಕದಲ್ಲಿರಬೇಕು. ಪ್ರತಿ ಕಾಲಿಗೆ 10-10ರಂತೆ ಈ ವ್ಯಾಯಾಮ ಮಾಡಬೇಕು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಇದನ್ನು ಹೆಚ್ಚಿಸಬಹುದು. ಇದು ನಿಮ್ಮ ಮೊಣಕಾಲು,ತೊಡೆಗಳಿಗೆ ಬಹಳ ಒಳ್ಳೆಯದು. 

ಸೊಂಟಕ್ಕೆ ವ್ಯಾಯಾಮ : ಈ ವ್ಯಾಯಾಮ ಮಾಡಲು ನಿಮ್ಮ ಭಂಗಿಯನ್ನು ನೀವು ಬದಲಿಸಬೇಕಾಗುತ್ತದೆ. ಟೇಬಲ್ ಭಂಗಿಯಲ್ಲಿ ನೀವು ಈ ವ್ಯಾಯಾಮ ಮಾಡಬೇಕು. ಮೊದಲು ಟೇಬಲ್ ಭಂಗಿಗೆ ಬರಬೇಕು. ನಂತರ ಒಂದು ಕಾಲನ್ನು ಮೇಲಕ್ಕೆತ್ತಬೇಕು. ನಂತ್ರ ಇನ್ನೊಂದು ಕಾಲನ್ನು ಮೇಲಕ್ಕೆತ್ತಬೇಕು. ಎಷ್ಟು ಹೊತ್ತು ನೀವು ಕಾಲನ್ನು ಮೇಲಕ್ಕೆತ್ತಿಟ್ಟುಕೊಳ್ಳಬಲ್ಲಿರಿ ಎಂಬುದು ನಿಮ್ಮ ಸಾಮರ್ಥ್ಯಕ್ಕೆ ಬಿಟ್ಟಿದ್ದು. 

Yoga for Kidney Health: ಈ ಆಸನ ಮಾಡಿದ್ರೆ, ಮೂತ್ರಪಿಂಡಕ್ಕೊಳಿತು

ಬೊಜ್ಜು ಕರಗಿಸುವ ವ್ಯಾಯಾಮ : ಸೊಂಟದ ಭಾಗದಲ್ಲಿ ಕೊಬ್ಬು ಸಂಗ್ರಹವಾಗಿರುತ್ತದೆ. ಇದ್ರಿಂದ ಸೊಂಟದ ಸೌಂದರ್ಯ ಹಾಳಾಗುತ್ತದೆ. ಅಂಥವರು ಹಾಸಿಗೆ ಮೇಲೆ ಮಲಗಿಯೇ ಈ ವ್ಯಾಯಾಮ ಮಾಡಬಹುದು. ಬೆನ್ನಿನ ಮೇಲೆ ಮಲಗಿ, ನಿಮ್ಮ ಕಾಲುಗಳನ್ನು ಗೋಡೆಗೆ ಚಾಚಬೇಕು. ನಂತರ ಒಮ್ಮೆ ಎರಡೂ ಪಾದಗಳನ್ನು ಬಲಕ್ಕೆ ಹಾಗೂ ಇನ್ನೊಮ್ಮೆ ಎರಡೂ ಪಾದಗಳನ್ನು ಎಡಕ್ಕೆ ತಿರುಗಿಸಬೇಕು. ಇದು ಸೊಂಟಕ್ಕೆ ಬಲ ನೀಡುವ ಜೊತೆಗೆ ಕೊಬ್ಬನ್ನು ಕಡಿಮೆ ಮಾಡುತ್ತದೆ. 

ಹೊಟ್ಟೆಗಾಗಿ ವರ್ಕೌಟ್ : ಚಳಿಗಾಲದಲ್ಲಿ ಜಿಮ್ ಗೆ ಹೋಗಲು ಬೇಸರ ಎನ್ನುವವರು ಹೊಟ್ಟೆ ಬಂದಿದೆ ಎಂಬ ಬೇಸರದಲ್ಲಿರುತ್ತಾರೆ. ಅಂಥವರು ಹಾಸಿಗೆ ಮೇಲೆ ಮಲಗಿ ವ್ಯಾಯಾಮ ಮಾಡಿ. ಬೆನ್ನಿನ ಮೇಲೆ ಮೊದಲು ಮಲಗಬೇಕು. ನಂತ್ರ ಎರಡೂ ಕಾಲುಗಳನ್ನು 60 ಡಿಗ್ರಿ ಹಾಗೂ 90 ಡಿಗ್ರಿ ಎತ್ತಬೇಕು. ಮೊದಲು ಒಂದೊಂದೆ ಕಾಲಿಗೆ ಮಾಡಿ, ನಂತ್ರ ಎರಡೂ ಕಾಲುಗಳನ್ನು ಕೂಡ ಮಾಡಬಹುದು. 

Yoga for Health : ಮಾಡಿ ಕುರ್ಚಿ ಭಂಗಿ ಯೋಗ, ಹತ್ತಿರ ಬಾರದು ಈ ರೋಗ

ಭುಜಗಳಿಗೆ ವ್ಯಾಯಾಮ :  ಮೊದಲು ನೀವು ಬೆನ್ನಿನ ಮೇಲೆ ಮಲಗಬೇಕು. ನಂತ್ರ ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ನಂತರ ಅವುಗಳನ್ನು ಕೆಳಕ್ಕೆ ಇಳಿಸಿ. ಕೆಲ ಸಮಯ ಕೈ ಮೇಲೆತ್ತಿಕೊಂಡು ಇರಬಹುದು. ಈ ವ್ಯಾಯಾಮವು ತೋಳುಗಳಿಗೆ ಬಲ ನೀಡುತ್ತದೆ.  ಭುಜದ ನೋವನ್ನು ಕಡಿಮೆ ಮಾಡುತ್ತದೆ.

ಇದಲ್ಲದೆ ನೀವು ಹಾಸಿಗೆ ಮೇಲೆ ಕುಳಿತುಕೊಂಡು ಕತ್ತುಗಳನ್ನು ತಿರುಗಿಸುವುದು,ಕತ್ತುಗಳನ್ನು ಮೇಲೆ,ಕೆಳಗೆ ಮಾಡುವುದು ಸೇರಿದಂತೆ ಅನೇಕ ವ್ಯಾಯಾಮಗಳನ್ನು ಮಾಡಬಹುದು.

click me!