
ರಾತ್ರಿ ಹೊತ್ತು ಬಟ್ಟೆ ಒಗೆಯುವ ಅಭ್ಯಾಸವಿದೆಯೇ? ಎಚ್ಚರ.. ನೀವು 'ದರಿದ್ರ'ವನ್ನೇ ಮನೆಗೆ ಆಹ್ವಾನಿಸುತ್ತಿರಬಹುದು!
ಇಂದಿನ ರೇಸಿಂಗ್ ಜಗತ್ತಿನಲ್ಲಿ ನಮಗೆ ಹಗಲು ಹೊತ್ತು ಸಿಗೋದೇ ಅಪರೂಪ. ಬೆಳಿಗ್ಗೆ ಎದ್ದ ತಕ್ಷಣ ಆಫೀಸ್ ಟೆನ್ಷನ್, ಸಂಜೆ ಮನೆಗೆ ಬರುವಷ್ಟರಲ್ಲಿ ಸುಸ್ತೋ ಸುಸ್ತು. ಇಂತಹ ಬ್ಯುಸಿ ಲೈಫ್‌ನಲ್ಲಿ ಬಹುತೇಕರ ಮನೆಯಲ್ಲಿ 'ವಾಷಿಂಗ್ ಮೆಷಿನ್' ರಾತ್ರಿ ಹೊತ್ತೇ ಸದ್ದು ಮಾಡುತ್ತದೆ. ರಾತ್ರಿ ಬಟ್ಟೆ ತೊಳೆದು, ಹೊರಗೆ ಒಣಗಾಕಿ ಮಲಗುವುದು ಇಂದಿನ ಕಾಲದ ಫ್ಯಾಷನ್ ಆಗಿಬಿಟ್ಟಿದೆ. ಆದರೆ, ಈ ಒಂದು ಸಣ್ಣ ಅಭ್ಯಾಸ ನಿಮ್ಮ ಮನೆಯ ಸುಖ-ಶಾಂತಿ ಮತ್ತು ಆರೋಗ್ಯವನ್ನೇ ಬುಡಮೇಲು ಮಾಡಬಹುದು ಎಂಬ ಕಹಿ ಸತ್ಯ ನಿಮಗೆ ಗೊತ್ತಾ?
ಹಿರಿಯರು "ರಾತ್ರಿ ಹೊತ್ತು ಬಟ್ಟೆ ಒಗೆಯಬೇಡಿ" ಎಂದು ಹೇಳುತ್ತಿದ್ದ ಮಾತಿನ ಹಿಂದೆ ಕೇವಲ ಮೂಢನಂಬಿಕೆಯಲ್ಲ, ಬದಲಿಗೆ ಆಳವಾದ ಜ್ಯೋತಿಷ್ಯ, ವಾಸ್ತು ಮತ್ತು ವೈಜ್ಞಾನಿಕ ಕಾರಣಗಳಿವೆ. ಅವುಗಳೇನು ಎಂಬುದನ್ನು ತಿಳಿಯೋಣ ಬನ್ನಿ.
ಶಾಸ್ತ್ರದ ಪ್ರಕಾರ, ಸೂರ್ಯ ಮುಳುಗಿದ ನಂತರ ವಾತಾವರಣದಲ್ಲಿ ಪಾಸಿಟಿವ್ ಎನರ್ಜಿ ಕಡಿಮೆಯಾಗಿ ನೆಗೆಟಿವ್ ಎನರ್ಜಿ (ಋಣಾತ್ಮಕ ಶಕ್ತಿ) ಹೆಚ್ಚಾಗುತ್ತದೆ. ನಾವು ರಾತ್ರಿ ಬಟ್ಟೆ ಒಗೆದು ಮನೆಯ ಹೊರಗೆ ಒಣಗಾಕಿದಾಗ, ಆ ಒದ್ದೆ ಬಟ್ಟೆಗಳು ಗಾಳಿಯಲ್ಲಿರುವ ನೆಗೆಟಿವ್ ಎನರ್ಜಿಯನ್ನು ಹೀರಿಕೊಳ್ಳುತ್ತವೆ. ಮರುದಿನ ನಾವು ಅದೇ ಬಟ್ಟೆಗಳನ್ನು ಧರಿಸಿದಾಗ, ನಮ್ಮ ಮನಸ್ಸಿನಲ್ಲಿ ಅಕಾರಣ ಭಯ, ಟೆನ್ಷನ್ ಮತ್ತು ಡಿಪ್ರೆಶನ್ ಶುರುವಾಗುತ್ತದೆ. ಮಾಡುವ ಕೆಲಸಗಳಲ್ಲಿ ಪದೇ ಪದೇ ಅಡೆತಡೆಗಳು ಎದುರಾಗುತ್ತವೆ.
2. ಲಕ್ಷ್ಮಿ ದೇವಿಯ ಕೋಪ:
ಮನೆಯಲ್ಲಿ ದಾರಿದ್ರ್ಯ ಆವರಿಸಲು ರಾತ್ರಿ ಹೊತ್ತು ಬಟ್ಟೆ ಒಗೆಯುವುದು ಒಂದು ಪ್ರಮುಖ ಕಾರಣವಂತೆ. ಇದು ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಅನಗತ್ಯ ಖರ್ಚುಗಳು ಹೆಚ್ಚಾಗುವುದು, ಸಾಲದ ಸುಳಿ ಮತ್ತು ಮನೆಯ ಸದಸ್ಯರ ನಡುವೆ ಸಣ್ಣಪುಟ್ಟ ವಿಷಯಕ್ಕೂ ಜಗಳಗಳು ನಡೆಯುವ ಸಾಧ್ಯತೆ ಇರುತ್ತದೆ. ಲಕ್ಷ್ಮಿ ದೇವಿಯ ಕೃಪೆ ಬೇಕೆನ್ನುವವರು ರಾತ್ರಿಯ ಶುಭ್ರತೆಯನ್ನು ಕಾಪಾಡಿಕೊಳ್ಳಬೇಕು.
3. ವೈಜ್ಞಾನಿಕವಾಗಿ ಇದು ಅಪಾಯಕಾರಿ:
ವಿಜ್ಞಾನದ ಪ್ರಕಾರ, ಸೂರ್ಯನ ಬಿಸಿಲಿನಲ್ಲಿರುವ ಯುವಿ (UV) ಕಿರಣಗಳು ಬಟ್ಟೆಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಕ್ರಿಮಿಕೀಟಗಳನ್ನು ಸಾಯಿಸುವ ನೈಸರ್ಗಿಕ ಶಕ್ತಿ ಹೊಂದಿವೆ. ಆದರೆ ರಾತ್ರಿ ಬಟ್ಟೆ ಒಣಗಾಕಿದಾಗ ಸೂರ್ಯನ ಕಿರಣಗಳ ಬದಲು ಚಳಿಯ ಇಬ್ಬನಿ (Dew) ಬಟ್ಟೆಯ ಮೇಲೆ ಬೀಳುತ್ತದೆ. ಇದರಿಂದ ಬಟ್ಟೆಯಲ್ಲಿ ತೇವಾಂಶ ಹಾಗೆಯೇ ಉಳಿದು ಫಂಗಸ್ ಮತ್ತು ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತವೆ. ಇಂತಹ ಬಟ್ಟೆಗಳನ್ನು ಧರಿಸುವುದರಿಂದ ಚರ್ಮದ ಅಲರ್ಜಿ, ತುರಿಕೆ ಮತ್ತು ರಾಶಸ್ ಉಂಟಾಗಬಹುದು.
4. ಮಕ್ಕಳು ಮತ್ತು ವಯಸ್ಸಾದವರಿಗೆ ಡೇಂಜರ್:
ಮಕ್ಕಳು ಮತ್ತು ವಯಸ್ಸಾದವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ರಾತ್ರಿ ಹೊತ್ತು ಹೊರಗೆ ಒಣಗಿದ ಬಟ್ಟೆಗಳಲ್ಲಿರುವ ಸೂಕ್ಷ್ಮಜೀವಿಗಳು ಇವರ ಮೇಲೆ ಬೇಗನೆ ಅಟ್ಯಾಕ್ ಮಾಡುತ್ತವೆ. ಇದರಿಂದ ಮಕ್ಕಳಿಗೆ ಪದೇ ಪದೇ ಶೀತ, ಕೆಮ್ಮು ಮತ್ತು ಜ್ವರದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಒಂದು ವೇಳೆ ನಿಮಗೆ ರಾತ್ರಿ ಹೊತ್ತು ಬಟ್ಟೆ ಒಗೆಯುವುದು ಅನಿವಾರ್ಯವಾದರೆ, ಅಪ್ಪಿತಪ್ಪಿಯೂ ಬಟ್ಟೆಯನ್ನು ಮನೆಯ ಹೊರಗೆ ಕತ್ತಲಲ್ಲಿ ಒಣಗಿಸಲು ಹಾಕಬೇಡಿ. ಬದಲಿಗೆ ಮನೆಯೊಳಗೆ ಫ್ಯಾನ್ ಗಾಳಿಯಲ್ಲಿ ಒಣಗಿಸಿ. ಇದರಿಂದ ವಾಸ್ತು ದೋಷ ಮತ್ತು ಸ್ಕಿನ್ ಅಲರ್ಜಿ ಎರಡನ್ನೂ ಸ್ವಲ್ಪ ಮಟ್ಟಿಗೆ ತಡೆಯಬಹುದು. ಅಲ್ಲದೆ, ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ತೊಳೆದ ತಕ್ಷಣ ಅದನ್ನು ಹೊರತೆಗೆಯಿರಿ. ಒದ್ದೆ ಬಟ್ಟೆಯನ್ನು ರಾತ್ರಿಯಿಡೀ ಮೆಷಿನ್‌ನಲ್ಲೇ ಬಿಡುವುದು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.
ನೆನಪಿಡಿ, ಹಗಲು ಹೊತ್ತಿನ ಬಿಸಿಲಿನಲ್ಲಿ ಬಟ್ಟೆ ಒಣಗಿಸುವುದು ಕೇವಲ ಸ್ವಚ್ಛತೆಯಲ್ಲ, ಅದು ನಿಮ್ಮ ಕುಟುಂಬದ ಆರೋಗ್ಯ ಮತ್ತು ಐಶ್ವರ್ಯದ ಗುಟ್ಟು ಕೂಡ ಹೌದು! ಇನ್ಮುಂದೆ, ಎಲ್ಲಾವನ್ನೂ ಮೂಢನಂಬಿಕೆ ಪಟ್ಟಿಗೆ ಸೇರಿಸುವ ಅಭ್ಯಾಸವನ್ನು ಬಿಟ್ಟುಬಿಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.