Warm Up: ವ್ಯಾಯಾಮಕ್ಕೂ ಮುನ್ನ ಹೀಗಿರಲಿ ತಯಾರಿ, ಇಲ್ಲದಿದ್ದರೆ ಮಸಲ್ ಕ್ಯಾಚ್ ಗ್ಯಾರಂಟಿ

Suvarna News   | Asianet News
Published : Jan 28, 2022, 06:22 PM IST
Warm Up: ವ್ಯಾಯಾಮಕ್ಕೂ ಮುನ್ನ ಹೀಗಿರಲಿ ತಯಾರಿ, ಇಲ್ಲದಿದ್ದರೆ ಮಸಲ್ ಕ್ಯಾಚ್ ಗ್ಯಾರಂಟಿ

ಸಾರಾಂಶ

ದಿನವೂ ವ್ಯಾಯಾಮ ಮಾಡುವವರು ನೀವಾಗಿದ್ದರೆ ದೇಹವನ್ನು ಬೆಚ್ಚಗಾಗಿಸಿ, ಚಲನಶೀಲಗೊಳಿಸುವ ವಾರ್ಮ್ ಅಪ್ ಕ್ರಿಯೆಗಳನ್ನು ಮಾಡುವತ್ತ ಗಮನ ನೀಡಬೇಕು. ಇಲ್ಲವಾದರೆ, ಮಾಂಸಖಂಡಗಳಿಗೆ ಹಾನಿ ನಿಶ್ಚಿತ.  

ದಿನವೂ ವ್ಯಾಯಾಮ (Exercise) ಮಾಡುವವರಿಗೆ ಅದರ ಸುಖ ಗೊತ್ತು! ನಿಯಮಿತವಾಗಿ ಪ್ರತಿದಿನ ದೈಹಿಕ ಚಟುವಟಿಕೆ (Physical Activity) ಮಾಡುವವರು ಉಳಿದವರಿಗಿಂತ ಹೆಚ್ಚು ಕ್ರಿಯಾಶೀಲವಾಗಿ, ಉತ್ಸಾಹಿತರಾಗಿರುತ್ತಾರೆ ಎನ್ನುವುದು ನಿಮ್ಮ ಗಮನಕ್ಕೂ ಬಂದಿರಬಹುದು. ಆ ಅನುಭವವೂ ಇದ್ದಿರಬಹುದು. ವ್ಯಾಯಾಮ ಮಾಡಿದಾಗ ಅಡ್ರಿನಲೈನ್ (Adrinaline) ಎನ್ನುವ ಹಾರ್ಮೋನ್ (Harmone) ಬಿಡುಗಡೆಯಾಗುತ್ತದೆ. ಅದು ದೇಹಕ್ಕೆ ಉತ್ಸಾಹ (Energy) ತುಂಬಿ ಇನ್ನಷ್ಟು ಕ್ಲಿಷ್ಟಕರ ಚಟುವಟಿಕೆಗಳನ್ನು ಮಾಡಲು ಉತ್ತೇಜಿಸುತ್ತದೆ. ಹೊಸ ಹೊಸ ಸಾಧನೆಗಳನ್ನು ಮಾಡಲು ಪ್ರೇರೇಪಿಸುತ್ತದೆ. ಫಿಟ್ ನೆಸ್ ಟಾರ್ಗೆಟ್ (Fitness Target) ತಲುಪಲು ಕಾರಣವಾಗುತ್ತದೆ. 
ದಿನವೂ ವ್ಯಾಯಾಮ ಮಾಡುವುದು ದೇಹ (Body) ಹಾಗೂ ಮನಸ್ಸಿನ (Mind) ಆರೋಗ್ಯಕ್ಕೆ  ಅಗತ್ಯ. ಆದರೆ, ಕೆಲವರಿಗೆ ಸಮಯದ್ದೇ ಸಮಸ್ಯೆಯಾಗುತ್ತದೆ. ಪ್ರತಿದಿನ ಕನಿಷ್ಠ ಅರ್ಧ ಅಥವಾ ಮುಕ್ಕಾಲು ಗಂಟೆ ವ್ಯಾಯಾಮ ಮಾಡಲು ಸಮಯವೇ ಸಿಗುವುದಿಲ್ಲ. ಬೆಳಗ್ಗೆ (Morning) ಒಂದು ರೀತಿಯ ಗಡಿಬಿಡಿಯಾದರೆ, ಸಂಜೆ (Evening) ಇನ್ನೊಂದು ರೀತಿಯಲ್ಲಿ ಸಮಸ್ಯೆಯಾಗುತ್ತದೆ. ಹೀಗಾಗಿ, ಕೆಲವರು ಕೇವಲ ವ್ಯಾಯಾಮ ಮಾಡುವುದಕ್ಕೆ ಮಾತ್ರ ಗಮನ ನೀಡುತ್ತಾರೆಯೇ ಹೊರತು ವ್ಯಾಯಾಮಕ್ಕೂ ಮುನ್ನ ಮಾಡಬೇಕಾದ ವಾರ್ಮ ಅಪ್ (Warm up) ಚಟುವಟಿಕೆಗಳತ್ತ ಹೆಚ್ಚು ಲಕ್ಷ್ಯ ಕೊಡುವುದಿಲ್ಲ. ಸಮಯದ ಪರಿಮಿತಿ ಅವರಿಗೆ ತಡೆಯೊಡ್ಡುತ್ತದೆ. ಆದರೆ, ವ್ಯಾಯಾಮಕ್ಕೂ ಮುನ್ನ ದೇಹವನ್ನು ಸಜ್ಜಾಗಿಸುವ ಕ್ರಿಯೆಗಳನ್ನು ಮಾಡುವುದು ಅತ್ಯಂತ ಮುಖ್ಯ.

ವಾರ್ಮ್ ಅಪ್ ಚಟುವಟಿಕೆಗಳನ್ನು ಮಾಡದೆ ಏಕಾಏಕಿ ವ್ಯಾಯಾಮ ಶುರು ಮಾಡುವ ಸಾಕಷ್ಟು ಜನ ಮಾಂಸಖಂಡಗಳಿಗೆ ಹಾನಿಯುಂಟುಮಾಡಿಕೊಳ್ಳುವುದು ಕಂಡುಬರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಇದು ಇನ್ನಷ್ಟು ಹೆಚ್ಚು. ಯಾವುದೇ ಕಾಲದಲ್ಲಾದರೂ ದೈಹಿಕ ಚಟುವಟಿಕೆಗೂ ಮುನ್ನ ದೇಹವನ್ನು ಬೆಚ್ಚಗಾಗಿಸುವ, ಮಾಂಸಖಂಡ(Muscles)ಗಳನ್ನು ಸಡಿಲಗೊಳಿಸುವ, ಕ್ರಿಯಾಶೀಲಗೊಳಿಸುವ ವಾರ್ಮ್ ಅಪ್ ಕ್ರಿಯೆಗಳನ್ನು ಮಾಡುವುದು ಅತ್ಯಗತ್ಯ.
ಇಂದಿನ ದಿನಗಳಲ್ಲಿ ಸಾಕಷ್ಟು ಜನ ಮನೆಯಲ್ಲೇ ಜಿಮ್ (Gym) ಇಟ್ಟುಕೊಳ್ಳುತ್ತಾರೆ. ಇಲ್ಲವಾದರೆ, ಟ್ರೆಡ್ ಮಿಲ್ (Treadmill) ಇಟ್ಟುಕೊಳ್ಳುವುದಂತೂ ಸಾಮಾನ್ಯ. ದಿನವೂ ಬೆಳಗ್ಗೆ ವಾರ್ಮ್ ಅಪ್ ಭಾಗವಾಗಿ ಟ್ರೆಡ್ ಮಿಲ್ ಮೇಲೆ ವಾಕ್ ಮಾಡಲು ಶುರು ಮಾಡುತ್ತಾರೆ. ಆದರೆ, ಇದು ವಾರ್ಮ್ ಅಪ್ ಕ್ರಿಯೆಯಲ್ಲ. ಅದರ ಬದಲು ದೇಹವನ್ನು ಚಲನಶೀಲಗೊಳಿಸುವ ಕೆಲವು ಸರಳ ಕ್ರಿಯೆಗಳನ್ನು ಮಾಡಬೇಕು. ಕೈಕಾಲುಗಳ ಚಲನೆ(Mobility Drills)ಯೊಂದಿಗೆ ಆರಂಭಿಸಬೇಕು. ಮಾಂಸಖಂಡಗಳನ್ನು ಹಗುರಗೊಳಿಸುವ ಡೈನಾಮಿಕ್ ಸ್ಟ್ರೆಚ್ ಗಳನ್ನು ಮಾಡಬೇಕು. ಇವು ಸರಳವಾಗಿರುತ್ತವೆ, ಹಾಗೆಯೇ ಪರಿಣಾಮಕಾರಿಯಾಗಿರುತ್ತವೆ. ಆದರೆ, ಟ್ರೆಡ್ ಮಿಲ್ ಮೇಲೆ ಜಾಗಿಂಗ್ ಮಾಡುವುದರ ಮೂಲಕ ವಾರ್ಮ ಅಪ್ ಕ್ರಿಯೆಯನ್ನು ಆರಂಭಿಸಬಹುದು. ಸ್ಕಿಪ್ಪಿಂಗ್(Skipping), ಜಂಪಿಂಗ್ ಜಾಕ್ಸ್(Jumping Jacks), ಪಕ್ಕಕ್ಕೆ ಬಾಗಿ ಮಾಡುವ ಚಟುವಟಿಕೆಗಳು, ಪರ್ವತವೇರುವಂತೆ (Mountain Climbing) ಮಾಡುವ ಚಟುವಟಿಕೆಗಳನ್ನು ಮಾಡುವುದು ಉತ್ತಮ. 

ಒಡತಿಯೊಂದಿಗೆ ವ್ಯಾಯಾಮ ಮಾಡುತ್ತೆ ಈ ಶ್ವಾನ

ಒಂದೊಮ್ಮೆ ದೇಹ ಬೆಚ್ಚಗಾಗಿಸುವ ವಾರ್ಮ್ ಅಪ್ ಚಟುವಟಿಕೆಗಳನ್ನು ಮಾಡದಿದ್ದರೆ  ಹಲವು ಅಪಾಯಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಹೀಗಾಗಿ, ವಾರ್ಮ್ ಅಪ್ ಏಕೆ ಅವಶ್ಯಕ ಎಂದು ತಿಳಿದುಕೊಳ್ಳಿ.  
•    ವಾರ್ಮ್ ಅಪ್ ಕ್ರಿಯೆ ಮಾಡುವುದರಿಂದ ಮುಂದಿನ ವ್ಯಾಯಾಮಗಳನ್ನು ಮಾಡಲು ದೇಹ ಸಜ್ಜಾಗುತ್ತದೆ. 
•    ಮಾಂಸಖಂಡಗಳು ಸಡಿಲವಾಗಿ, ರಕ್ತಸಂಚಾರ (Blood Circulation) ಸುಗಮವಾಗುತ್ತದೆ. ಮಂಡಿಗಳಲ್ಲಿ ಬಿರುಸು ಕಡಿಮೆಯಾಗುತ್ತದೆ. ಹಾಗೂ ಅಚಾನಕ್ ಚಲನೆಗೆ ಅವುಗಳನ್ನು ಸಿದ್ಧವಾಗಿಸುತ್ತದೆ. 
•    ವಾರ್ಮ್ ಅಪ್ ಕ್ರಿಯೆಯನ್ನು ಚೆನ್ನಾಗಿ ಮಾಡುವುದರಿಂದ ಮಂಡಿಗಳ ಚಲನೆಗೆ ಅನುಕೂಲವಾಗುತ್ತದೆ. 
•    ವಾರ್ಮ್ ಅಪ್ ಬಳಿಕ ಕ್ಲಿಷ್ಟಕರ ಆಸನಗಳನ್ನು ಮಾಡಿದಾಗ ಮಾಂಸಖಂಡಗಳಿಗೆ ಹಾನಿಯಾಗುವುದಿಲ್ಲ. ಮಾಂಸಖಂಡಗಳು ಹಿಡಿದುಕೊಳ್ಳುವುದಿಲ್ಲ. ಅವುಗಳಿಗೆ ಗಾಯ(Injury)ವಾಗುವುದಿಲ್ಲ. ಮಾಂಸಖಂಡಗಳು ಗಾಯಗೊಂಡರೆ ತಿಂಗಳಾನುಗಟ್ಟಲೆ ಅತೀವ ನೋವನ್ನು ಅನುಭವಿಸಬೇಕಾಗುತ್ತದೆ. 

ಕಾಂತಿಯು ತ್ವಜೆಗೆ ಯೋಗ
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?
ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..