ಯೋಗ ಮಾಡುವಾಗ ದೇಹಕ್ಕೆ ಹೆಚ್ಚು ಒತ್ತಡ ಹಾಕ್ಬೇಡಿ - ಆಯುಷ್ಯ ಸಚಿವಾಲಯ ನೀಡಿದ ಎಚ್ಚರಿಕೆ

Published : Oct 26, 2026, 08:15 PM IST
Yoga Practice

ಸಾರಾಂಶ

ಯೋಗ ಬರೀ ದೇಹದ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ನಿಯಮಿತವಾಗಿ ಯೋಗ ಮಾಡುವುದರಿಂದ ದೇಹದ ನಮ್ಯತೆ ಹೆಚ್ಚುತ್ತದೆ, ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ. ಆದರೆ, ಯೋಗದ ಸಂಪೂರ್ಣ ಪ್ರಯೋಜನ ಪಡೆಯಲು ಸರಿಯಾದ ವಿಧಾನದಲ್ಲಿ ಮತ್ತು ನಮ್ಮ ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭ್ಯಾಸ ಮಾಡುವುದು ಮುಖ್ಯ.

ಯೋಗ ಶುರು ಮಾಡಿದ ಮೊದಲ ದಿನವೇ ಜನರು ತಮ್ಮ ಮೈ ಬಗ್ಗಬೇಕು, ಹೇಳಿದಂತೆ ಕೇಳ್ಬೇಕು, ಎಲ್ಲ ಆಸನಗಳನ್ನು ನಾವು ಮಾಡ್ಬೇಕು ಅಂತ ಆತುರ ಪಟ್ಟುಕೊಳ್ತಾರೆ. ದೇಹವನ್ನು ಬಗ್ಗಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಅಥವಾ ಕಷ್ಟಕರವಾದ ಆಸನಗಳನ್ನು ಮಾಡಬೇಕು ಎಂಬ ಉದ್ದೇಶದಿಂದ ದೇಹದ ಮೇಲೆ ಅಗತ್ಯಕ್ಕಿಂತ ಹೆಚ್ಚು ಒತ್ತಡ ಹಾಕುತ್ತಾರೆ. ಇದರಿಂದ ದೇಹದ ಅಂಗಾಂಗಕ್ಕೆ ಹಾನಿಯಾಗುವ ಅಪಾಯ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಆಯುಷ್ ಸಚಿವಾಲಯ ಯೋಗ ಮಾಡುವಾಗ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ.

ದೇಹದ ಮೇಲೆ ಹೆಚ್ಚು ಒತ್ತಡ

ಯೋಗ ಮಾಡುವಾಗ ನಮ್ಮ ದೇಹದ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಆಯುಷ್ ಸಚಿವಾಲಯ ಸಾಮಾಜಿಕ ಮಾಧ್ಯಮದ ಪೋಸ್ಟ್ನಲ್ಲಿ ತಿಳಿಸಿದೆ. ಆಸನಗಳನ್ನು ಮಾಡುವಾಗ ಆತುರಪಡಬಾರದು. ದೇಹವನ್ನು ಜೋರಾಗಿ ಎಳೆಯುವುದು ಅಥವಾ ಹಠಾತ್ತನೆ ಬಗ್ಗಿಸಲು ಪ್ರಯತ್ನಿಸುವುದನ್ನು ತಪ್ಪಿಸಬೇಕು. ಪ್ರತಿಯೊಬ್ಬರ ದೇಹವೂ ವಿಭಿನ್ನವಾಗಿರುತ್ತದೆ. ಕೆಲವರು ಸುಲಭವಾಗಿ ಮುಂದೆ ಬಾಗಬಹುದು. ಇನ್ನು ಕೆಲವರಿಗೆ ಅದೇ ಅಭ್ಯಾಸ ಮಾಡಲು ಹೆಚ್ಚಿನ ಸಮಯ ಬೇಕಾಗಬಹುದು.

ಹೀಗಾಗಿ, ಬೇರೆಯವರನ್ನು ನೋಡಿ ಕಷ್ಟಕರವಾದ ಆಸನಗಳನ್ನು ಮಾಡಲು ಪ್ರಯತ್ನಿಸಬಾರದು. ಆಸನ ಮಾಡುವಾಗ ದೇಹದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ ಅನ್ನಿಸಿದ್ರೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಅಭ್ಯಾಸ ಮಾಡಬೇಕು. ನಿಯಮಿತವಾಗಿ ನಿಧಾನವಾಗಿ ಯೋಗ ಮಾಡುವುದರಿಂದ ದೇಹದ ಸಾಮರ್ಥ್ಯ ಕ್ರಮೇಣ ಹೆಚ್ಚುತ್ತದೆ.

ತೀವ್ರ ನೋವು ಕಾಣಿಸಿಕೊಂಡರೆ ತಕ್ಷಣ ಯೋಗ ನಿಲ್ಲಿಸಿ

ಯೋಗ ಮಾಡುವಾಗ ಸ್ವಲ್ಪ ಹಿಗ್ಗಿದ ಅನುಭವವಾಗುವುದು ಮತ್ತು ತೀವ್ರವಾದ ನೋವು ಕಾಣಿಸಿಕೊಳ್ಳುವುದು ಎರಡೂ ಬೇರೆ ಬೇರೆ. ಯಾವುದೇ ಆಸನ ಮಾಡುವಾಗ ಬೆನ್ನು, ಮೊಣಕಾಲು, ಭುಜ ಅಥವಾ ದೇಹದ ಇತರ ಭಾಗಗಳಲ್ಲಿ ತೀವ್ರ ನೋವು ಕಾಣಿಸಿಕೊಂಡರೆ ತಕ್ಷಣ ಅಭ್ಯಾಸ ನಿಲ್ಲಿಸಬೇಕು. ನೋವನ್ನು ನಿರ್ಲಕ್ಷಿಸಿ ಆಸನವನ್ನು ಪೂರ್ಣಗೊಳಿಸಲು ಪ್ರಯತ್ನಿಸಿದರೆ ಸ್ನಾಯುಗಳಿಗೆ ಹಾನಿಯಾಗಬಹುದು ಅಥವಾ ಗಾಯವಾಗಬಹುದು.

ವಿಶೇಷವಾಗಿ ಯೋಗವನ್ನು ಹೊಸದಾಗಿ ಆರಂಭಿಸುವವರು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಕಷ್ಟಕರವಾದ ಆಸನಗಳನ್ನು ಮಾಡಬಾರದು. ಅಗತ್ಯವಿದ್ದರೆ ಯೋಗ ತರಬೇತುದಾರರ ಸಹಾಯ ಪಡೆಯಬೇಕು. ಈಗಾಗಲೇ ಗಾಯವಾಗಿದ್ದರೆ ಅಥವಾ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ, ವೈದ್ಯರ ಸಲಹೆಯಂತೆ ಯೋಗಾಭ್ಯಾಸ ಮಾಡುವುದು ಉತ್ತಮ.

ಉಸಿರಾಟದ ಮೇಲೆ ಗಮನ

ಯೋಗ ಮಾಡುವಾಗ ಸಂಪೂರ್ಣ ಗಮನವನ್ನು ಅಭ್ಯಾಸದ ಮೇಲೆ ಕೇಂದ್ರೀಕರಿಸಬೇಕು ಎಂದು ಆಯುಷ್ ಸಚಿವಾಲಯ ಒತ್ತಿಹೇಳಿದೆ. ಆಸನ ಮಾಡುವಾಗ ಉಸಿರಾಟ, ದೇಹದ ಭಂಗಿ ಮತ್ತು ಯಾವುದೇ ರೀತಿಯ ಅಸ್ವಸ್ಥತೆ ಉಂಟಾಗುತ್ತಿದೆಯೇ ಎಂಬುದರ ಬಗ್ಗೆ ಗಮನಹರಿಸಬೇಕು. ಪ್ರತಿ ಆಸನವನ್ನು ನಿಧಾನವಾಗಿ ಮಾಡಬೇಕು. ಒಂದು ಆಸನದಿಂದ ಮತ್ತೊಂದು ಆಸನಕ್ಕೆ ಹೋಗುವಾಗ ಆತುರಪಡಬಾರದು. ಉಸಿರಾಡಲು ತೊಂದರೆಯಾದರೆ ಅಥವಾ ದೇಹದಲ್ಲಿ ಅಸ್ವಸ್ಥತೆ ಕಂಡುಬಂದರೆ ಅಭ್ಯಾಸವನ್ನು ನಿಲ್ಲಿಸಿ ವಿಶ್ರಾಂತಿ ಪಡೆಯಬೇಕು.

ಪ್ರತಿಯೊಂದು ಆಸನವನ್ನು ಬೇರೆಯವರಂತೆ ಅಥವಾ ಸಂಪೂರ್ಣವಾಗಿ ಪರಿಪೂರ್ಣವಾಗಿ ಮಾಡಲೇಬೇಕು ಎಂಬ ನಿಯಮವಿಲ್ಲ. ನಮ್ಮ ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಯಮಿತವಾಗಿ ಯೋಗಾಭ್ಯಾಸ ಮಾಡುವುದು ಮುಖ್ಯ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Black Coffee Benefits: ಬ್ಲ್ಯಾಕ್ ಕಾಫಿ ದಿನಾಲೂ ಕುಡಿದರೆ ಈ ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯಲ್ಲ!
Deepavali 2026: ದೀಪಾವಳಿ ಹಬ್ಬದಲ್ಲಿ ಸಿಹಿ ತಿಂದರೂ ಬ್ಲಡ್ ಶುಗರ್ ನಿಯಂತ್ರಣದಲ್ಲಿಡುವುದು ಹೇಗೆ? ಇಲ್ಲಿದೆ ಟಿಪ್ಸ್‌