
ದೆಹಲಿ ಹೈಕೋರ್ಟ್ (Delhi High Court) ತೀರ್ಪು ಎಲ್ಲರ ಮನಸ್ಸು ಗೆದ್ದಿದೆ. ಕೋರ್ಟ್, ಸೈನಿಕನ ಪತ್ನಿ ಆಸೆಯನ್ನು ಪೂರ್ಣಗೊಳಿಸಲು ಮುಂದಾಗಿದೆ. ದೀರ್ಘಕಾಲದವರೆಗೆ ಕೋಮಾದಲ್ಲಿರುವ ಭಾರತೀಯ ಸೇನಾ ಸೈನಿಕನ ಸ್ಪರ್ಮ್ ಹೊರತೆಗೆದು ಸಂರಕ್ಷಿಸಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರ್ ನೇತೃತ್ವದ ಪೀಠವು ತನ್ನ ತೀರ್ಪಿನಲ್ಲಿ, ಸೈನಿಕನು ತನ್ನ ಪತ್ನಿಯೊಂದಿಗೆ ಐವಿಎಫ್ ಚಿಕಿತ್ಸೆಗೆ ಒಳಗಾಗಲು ಈಗಾಗಲೇ ಒಪ್ಪಿಗೆ ನೀಡಿದ್ದಾರೆ. ಇದನ್ನು ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯ್ದೆ, 2021 ರ ಅಡಿಯಲ್ಲಿ ಮಾನ್ಯ ಒಪ್ಪಿಗೆ ಎಂದು ಪರಿಗಣಿಸಲಾಗುತ್ತದೆ ಎಂದಿದ್ದಾರೆ.
ಜುಲೈ 2025 ರಲ್ಲಿಸೈನಿಕ ಗಸ್ತಿನಲ್ಲಿದ್ದಾಗ ಮೇಲಿನಿಂದ ಕೆಳಗೆ ಬಿದ್ದಿದ್ದರು. ಅವರ ತಲೆಗೆ ತೀವ್ರವಾದ ಗಾಯವಾಗಿತ್ತು. ಮಿದುಳಿನಲ್ಲಾದ ಗಾಯದಿಂದ ಸೈನಿಕ ಕೋಮಾ ಸ್ಥಿತಿಯಲ್ಲಿದ್ದಾರೆ. ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. 2023 ರಲ್ಲಿ ಸೈನಿಕ ಹಾಗೂ ಅವರ ಪತ್ನಿ ಐವಿಎಫ್ ಗೆ ಒಪ್ಪಿಗೆ ನೀಡಿ ಚಿಕಿತ್ಸೆ ಶುರು ಮಾಡಿದ್ದರು. ಆದ್ರೆ ಸೈನಿಕನ ಆರೋಗ್ಯ ಹದಗೆಟ್ಟಿದ್ದರಿಂದ ಚಿಕಿತ್ಸೆ ನಿಲ್ಲಿಸಲಾಗಿದೆ. ಈಗ ಪತ್ನಿ ಕೋರ್ಟ್ ಮೆಟ್ಟಿಲೇರಿ ಒಪ್ಪಿಗೆ ಚಿಕಿತ್ಸೆ ಮುಂದುವರೆಸಲು ಒಪ್ಪಿಗೆ ಕೇಳಿದ್ದಾರೆ.
ನೀವು ಹೆಚ್ಚು ಚಹಾ ಕುಡಿಯುತ್ತೀರಾ? ಹಾಗಿದ್ರೆ ಈ ವಿಷಯಗಳನ್ನು
ಸೈನಿಕನ ಪತ್ನಿ ಅರ್ಜಿ ಪರಿಶೀಲನೆ ನಡೆಸಿದ ದೆಹಲಿ ಹೈಕೋರ್ಟ್, ತಾಯ್ತನ, ಘನತೆ ಮತ್ತು ಸಂತಾನೋತ್ಪತ್ತಿ ಸ್ವಾಯತ್ತತೆಯ ಸಾಂವಿಧಾನಿಕ ಹಕ್ಕನ್ನು ಎತ್ತಿ ಹಿಡಿದಿದೆ. ಅರ್ಜಿದಾರರು ಮತ್ತು ಅವರ ಪತಿ ಸ್ವಯಂಪ್ರೇರಣೆಯಿಂದ IVF ಕಾರ್ಯವಿಧಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. . ಪತಿ ಒಪ್ಪಿಗೆ ನೀಡಿಲ್ಲ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಹಾಗಾಗಿ ಐವಿಎಫ್ ಮುಂದುವರಿಸಲು ಅನುಮತಿ ನೀಡಬೇಕು ಎಂದು ಕೋರ್ಟ್ ಹೇಳಿದೆ.
ಬಿಸಿ ನೀರು Vs ತಣ್ಣೀರು: ಬಿಸಿಲು ಅಂತ ತಣ್ಣೀರು ಕುಡಿತೀರಾ? ಅದಕ್ಕೂ ಮುನ್ನ ಇದನ್ನ ತಿಳ್ಕೊಳ್ಳಿ
ಸೈನಿಕರಿಂದ ಈಗ ಒಪ್ಪಿಗೆಯ ಯಾವುದೇ ಅಧಿಕೃತ ಸೂಚನೆ ಇಲ್ಲದೆ ಹೋದ್ರೂ IVF ಕಾರ್ಯವಿಧಾನವನ್ನು ಶುರು ಮಾಡುವುದು ಸೂಕ್ತ, ಸಮಂಜಸ ಮತ್ತು ನ್ಯಾಯಯುತವಾಗಿರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹಾಗೆ ಮಾಡಲು ವಿಫಲವಾದರೆ ಸೈನಿಕ ನೀಡಿದ್ದ ಪೂರ್ವಾನುಮತಿ ವ್ಯರ್ಥವಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಸಂತಾನೋತ್ಪತ್ತಿ ಸ್ವಾಯತ್ತತೆಯ ಹಕ್ಕು ಮೂಲಭೂತ ಹಕ್ಕು ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರಿಗೆ ಮಕ್ಕಳಾಗುತ್ತವೆಯೇ ಎಂಬುದು ಮಾನವನ ಕೈಯಲ್ಲಿಲ್ಲ. ಒಬ್ಬ ವ್ಯಕ್ತಿಗೆ ಪೋಷಕರ ಭಾಗ್ಯ ಸಿಗುತ್ತದೆಯೇ ಎಂಬುದನ್ನು ವಿಧಿ ನಿರ್ಧರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಭಾಗವತ ಪುರಾಣವನ್ನು ಉಲ್ಲೇಖಿಸಿದ ಕೋರ್ಟ್, ಜೀವಿಯು ದೇವರ ಮೇಲ್ವಿಚಾರಣೆಯಲ್ಲಿ ದೇಹವನ್ನು ಪಡೆಯುತ್ತದೆ ಎಂದಿದೆ. ಐವಿಎಫ್ ಮೂಲಕ ಮಕ್ಕಳನ್ನು ಪಡೆಯಲು ಬಯಸಿದ್ದ ಸೈನಿಕ ಗಂಭೀರ ಸ್ಥಿತಿಯಲ್ಲಿದ್ದು. ಬದುಕಿ ಬರುವ ಸಾಧ್ಯತೆ ಅತಿ ಕಡಿಮೆ ಇದೆ. ಇಂಥ ಸಂದರ್ಭದಲ್ಲಿ ಪತ್ನಿ ಪರ ಕೋರ್ಟ್ ನೀಡಿದ ತೀರ್ಪು ಎಲ್ಲರ ಮೆಚ್ಚುಗೆ ಗಳಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.