skin care : ಚಳಿಗಾಲ ಬರ್ತಿದ್ದಂತೆ ಪಾದ ಬಿರುಕು ಬಿಟ್ಟು ರಕ್ತ ಬರ್ತಿದ್ಯಾ? ಈ ಟ್ರಿಕ್ಸ್ ಟ್ರೈ ಮಾಡಿ

Published : Nov 23, 2026, 06:59 PM IST
skincare

ಸಾರಾಂಶ

ಚಳಿಗಾಲ ಶುರು ಆಗ್ತಿದ್ದಂತೆ ಹೊಸ ಹೊಸ ಸಮಸ್ಯೆ ಶುರುವಾಗುತ್ತೆ. ಮೈ- ಕೈ ಮಾತ್ರವಲ್ಲ ಹಿಮ್ಮಡಿ ಬಿರುಕು ಬಿಟ್ಟು ಯಮ ಹಿಂಸೆ ನೀಡುತ್ತೆ. ಮೃದುವಾದ ಚರ್ಮಕ್ಕೆ ಸುಲಭ ಟಿಪ್ಸ್‌ ಇಲ್ಲಿದೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ಹಲವರನ್ನು ಕಾಡುವ ಸಾಮಾನ್ಯ ಸಮಸ್ಯೆ ಅಂದ್ರೆ ಹಿಮ್ಮಡಿ ಬಿರುಕು ಬಿಡೋದು. ಅನೇಕ ಮಹಿಳೆಯರು ಈ ಸಮಸ್ಯೆಯನ್ನು ಎದುರಿಸ್ತಾರೆ. ಚಳಿ ಹೆಚ್ಚಾಗ್ತಿದ್ದಂತೆ ಬಿರುಕು ಬಿಟ್ಟ ಹಿಮ್ಮಡಿಯಿಂದ ರಕ್ತ ಬರೋದಿದೆ. ಉರಿ, ನೋವು ಸಹಿಸೋದು ಕಷ್ಟ. ನೀವು ಕೂಡ ಇಂತಹ ಸಮಸ್ಯೆಯಿಂದ ಬಳಲ್ತಿದ್ರೆ ಬಿರುಕು ಬಿಟ್ಟ ಹಿಮ್ಮಡಿಗಳನ್ನು ಗುಣಪಡಿಸಲು ಕೆಲ ಟಿಪ್ಸ್‌ ಫಾಲೋ ಮಾಡಿ.

ಸೆರಮೈಡ್ (Ceramide)

ನಿಮ್ಮ ಹಿಮ್ಮಡಿ ಬಿರುಕು ಬಿಟ್ಟಿದ್ದರೆ ನೀವು ಸೆರಮೈಡ್‌ ಕ್ರೀಂ ಬಳಸಿ. ಸೆರಮೈಡ್ ಕ್ರೀಮ್ ಚರ್ಮದ ನೈಸರ್ಗಿಕ ರಕ್ಷಣಾ ಪದರವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಚರ್ಮದ ರಕ್ಷಣಾ ಪದರ ದುರ್ಬಲವಾದಾಗ ತ್ವಚೆ ಹೆಚ್ಚು ಒಣಗಲು ಆರಂಭಿಸುತ್ತದೆ. ಇಂತಹ ಸಂದರ್ಭದಲ್ಲಿ ಸೆರಮೈಡ್ ಅಂಶವಿರುವ ಕ್ರೀಮ್ ಬಳಸುವುದರಿಂದ ಚರ್ಮಕ್ಕೆ ಅಗತ್ಯವಾದ ತೇವಾಂಶ ದೊರೆಯಬಹುದು.

ಅಮೋನಿಯಂ ಲ್ಯಾಕ್ಟೇಟ್ (Ammonium Lactate)

ಬಿರುಕು ಬಿಟ್ಟ ಹಿಮ್ಮಡಿಗಳಲ್ಲಿ ಕೆಲವೊಮ್ಮೆ ದಪ್ಪ ಹಾಗೂ ಗಟ್ಟಿಯಾದ ಚರ್ಮದ ಪದರ ರೂಪುಗೊಳ್ಳುತ್ತದೆ. ಈ ಗಟ್ಟಿಯಾದ ಪದರವನ್ನು ಮೃದುವಾಗಿಸಲು ಅಮೋನಿಯಂ ಲ್ಯಾಕ್ಟೇಟ್ ಕ್ರೀಮ್ ಅಥವಾ ಲೋಷನ್ ಸಹಾಯ ಮಾಡುತ್ತದೆ. ಇದು ಸತ್ತ ಚರ್ಮದ ಕೋಶಗಳನ್ನು ನಿಧಾನವಾಗಿ ತೆಗೆದುಹಾಕಲು ನೆರವಾಗುತ್ತದೆ. ಇದರಿಂದ ಹಿಮ್ಮಡಿಯ ಗಟ್ಟಿಯಾದ ಚರ್ಮ ಮೃದುವಾಗಲು ಶುರುವಾಗುತ್ತದೆ.

ಯೂರಿಯಾ (Urea)

ಬಿರುಕು ಬಿಟ್ಟ ಹಿಮ್ಮಡಿಗಳ ಆರೈಕೆಗೆ ಚರ್ಮರೋಗ ತಜ್ಞರು ಯೂರಿಯಾ ಅಂಶವಿರುವ ಕ್ರೀಮ್ ಅಥವಾ ಲೋಷನ್ ಬಳಸುವಂತೆಯೂ ಸಲಹೆ ನೀಡುತ್ತಾರೆ. ಇದು ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುವುದರ ಜೊತೆಗೆ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ನೆರವಾಗುತ್ತದೆ.

ಈ ಎಚ್ಚರಿಕೆ ಇರಲಿ

ನಿಮ್ಮ ಹಿಮ್ಮಡಿಗಳು ಆಗಾಗ ಬಿರುಕು ಬಿಡುತ್ತಿದ್ದರೆ, ತಜ್ಞರ ಸಲಹೆ ಪಡೆದು ಸೆರಮೈಡ್ ಕ್ರೀಮ್, ಅಮೋನಿಯಂ ಲ್ಯಾಕ್ಟೇಟ್ ಲೋಷನ್ ಅಥವಾ ಯೂರಿಯಾ ಕ್ರೀಮ್ ಬಳಸಬಹುದು. ಈ ಮೂರು ಅಂಶಗಳು ಚರ್ಮಕ್ಕೆ ತೇವಾಂಶ ಒದಗಿಸುವುದರ ಜೊತೆಗೆ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ. ಇದರಿಂದ ಹಿಮ್ಮಡಿಗಳು ಮೃದುವಾಗಲು ನೆರವಾಗುತ್ತದೆ. ಆದ್ರೆ ಹಿಮ್ಮಡಿಗಳಲ್ಲಿ ಆಳವಾದ ಬಿರುಕುಗಳಿದ್ದು, ತೀವ್ರ ನೋವು ಕಾಣಿಸಿಕೊಂಡರೆ ಅಥವಾ ರಕ್ತ, ಕೀವು ಹೊರಬರುತ್ತಿದ್ದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು. ಅದರಲ್ಲೂ ಮಧುಮೇಹ ಇರುವವರು ಹಿಮ್ಮಡಿ ಬಿರುಕು ಬಿಡುವ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಳಿಗಾಲದಲ್ಲಿ ಬೆಲ್ಲ ನಿಮ್ಮ ಆಹಾರದಲ್ಲಿರಲಿ… ಯಾವ ರೋಗವೂ ಹತ್ತಿರ ಬರಲ್ಲ!
ಸಖತ್ತಾಗಿ ನಿದ್ದೆ ಬರಬೇಕಾ? ಬಾಳೆಹಣ್ಣು ಟೀ ಹೀಗೆ ಮಾಡಿ ಕುಡಿದು ಮಲಗಿ.. ಲೈಫಲ್ಲಿ ಸಿಗೋ ಮಜಾನೇ ಬೇರೆ!