ಆರೋಗ್ಯ ಸುಧಾರಣೆ ಸೂತ್ರ; ಗೋಮಾತೆ ತಬ್ಬಿಕೊಳ್ಳಲು  ಗಂಟೆಗೆ 200 ಡಾಲರ್!

By Suvarna NewsFirst Published May 22, 2021, 9:27 PM IST
Highlights

* ಒತ್ತಡ ನಿವಾರಣೆ ಮತ್ತು ಆರೋಗ್ಯ ಸುಧಾರಣೆಗೆ ಗೋಮಾತೆಯನ್ನು  ತಬ್ಬಿಕೊಳ್ಳಿ
* ಸೋಶಿಯಲ್ ಮೀಡಿಯಾದಲ್ಲಿಯೂ ಹವಾ 
* ಕಾಂಗ್ರೆಸ್ ನಾಯಕ ಮಿಲಿಂದ್ ದಿರೋರಾ ಸುದ್ದಿ ಹಂಚಿಕೊಂಡಿದ್ದಾರೆ
*ಗೋವನ್ನು ತಬ್ಬಿಕೊಳ್ಳಲು ಅಮೆರಿಕದಲ್ಲಿ ಗಂಟೆಗೆ   200   ಡಾಲರ್ ನಿಗದಿ

ಬೆಂಗಳೂರು(ಮೇ 22)   ಭಾರತದಲ್ಲಿ ಗೋ ಮಾತೆಗೆ ಸದಾ ಪೂಜನೀಯ ಸ್ಥಾನ. ಕೊರೋನಾ ಚಿಕಿತ್ಸೆಗೂ ಸಂಬಂಧಿಸಿ ಗೋವಿನ ಸಗಣಿ ಬಳಸಿ ಎಂಬ ಮಾತುಗಳು ಬಂದಿದ್ದವು. ಹಳ್ಳಿಯಲ್ಲಿ  ಈಗಲೂ ಸಗಣಿ ಬಳಸಿ ಅಂಗಳ ಸಿದ್ಧಮಾಡುತ್ತಾರೆ. ಬೆರಣಿ ತಟ್ಟುತ್ತಾರೆ. ಕೀಟಾಣುಗಳ  ನಾಶ ಮಾಡುವ ಶಕ್ತಿ ಸಗಣಿಯಲ್ಲಿದೆ ಎನ್ನುವುದು ಸಾಬೀತಾದ ದಾಖಲೆಗಳಿವೆ

ಇದೆಲ್ಲದರ ನಡುವೆ ಹೊಸದೊಂದು ವಿಚಾರ  ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಒತ್ತಡ  ನಿವಾರಣೆ ಮತ್ತು ಆರೋಗ್ಯ ಸುಧಾರಣೆಗಾಗಿ ಗೋವನ್ನು ತಬ್ಬಿಕೊಳ್ಳಬೇಕಂತೆ. ಅಮೆರಿಕಾದಿಂದ ಈ ಸುದ್ದಿ ಹೊರಟಿದೆ.

ಕೊರೋನಾಕ್ಕೆ ಆಂಧ್ರದಲ್ಲಿ ಗಿಡಮೂಲಿಕೆ ಔಷಧಿ

ಕಾಂಗ್ರೆಸ್ ನಾಯಕ ಮಿಲಿಂದ್ ದಿರೋರಾ ಸೋಶಿಯಲ್ ಮೀಡಿಯಾ ಮುಖೇನ ಈ ವಿಚಾರ ಹಂಚಿಕೊಂಡಿದ್ದಾರೆ. ಸಾಕು ಪ್ರಾಣಿಗಳು ನಮ್ಮ ನೋವನ್ನು ಹಲವು ಸಂದರ್ಭದಲ್ಲಿ ನಿವಾರಿಸಿದ ಉದಾಹರಣೆಗಳು ಇವೆ. ಅವುಗಳೊಂದಿಗಿನ ಒಡನಾಟ ಒತ್ತಡ ಕಡಿಮೆ ಮಾಡುವುದು  ಸತ್ಯ.

ಗೋವನ್ನು ತಬ್ಬಿಕೊಳ್ಳಲು ಅಮೆರಿಕದಲ್ಲಿ ಗಂಟೆಗೆ   200   ಡಾಲರ್ ನಿಗದಿ ಮಾಡಲಾಗಿದೆ.  ಈ ವಿಚಾರಗಳು ಏನೇ ಇರಲಿ ನಮ್ಮ ಮುದ್ದಿನ ಸಾಕು ಪ್ರಾಣಿಗಳ ಜತೆ ಸಮಯ ಕಳೆದರೆ ಒತ್ತಡ ನಿವಾರಣೆಯಾಗುವುದೆಂತೂ ಸತ್ಯ. ಶತಮಾನಗಳಿಂದ  ಭಾರತೀಯರು ಪೂಜೆ ಮಾಡಿಕೊಂಡು ಬಂದಿರುವ ಗೋಮಾತೆಯನ್ನು ತಬ್ಬಿಕೊಂಡು ನಮ್ಮ ಸಂಕಟ ನಿವಾರಣೆ ಮಾಡಿಕೊಳ್ಳಬಹುದಾಗಿದೆ. 

At $200 an hour, cow hugging is a growing wellness trend in the United States.

Clearly, India was ahead of the curve — dharmic scriptures have venerated cows & cattle for over 3,000 years 🕉🐮pic.twitter.com/7xPKCGYUhf

— Milind Deora | मिलिंद देवरा ☮️ (@milinddeora)
click me!