ಬೆನ್ನಿಗಂಟಿದ ಬೇತಾಳ ಮಧುಮೇಹ. ಬರುವಾಗ ಸದ್ದಿಲ್ಲದೆ ಬರುವ ಈ ಖಾಯಿಲೆ ಎಂದಿಗೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದೊಂದೇ ನಮ್ಮ ಗುರಿಯಾಗಿದೆ. ಮನೆಯಲ್ಲಿರುವ ಕೆಲ ಪದಾರ್ಥಗಳೇ ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ.
ಮಧುಮೇಹ (Diabetes) ಬಂದ್ರೆ ಮುಗೀತು, ಅದು ನಿಮ್ಮನ್ನು ಎಂದಿಗೂ ಬಿಟ್ಟು ಹೋಗಲಾರದು. ಜೀವನ (Life) ಪರ್ಯಂತ ಅದ್ರ ಬಗ್ಗೆ ಕಾಳಜಿವಹಿಸಿ,ಮಾತ್ರೆ (Pill) ಸೇವನೆ ಮಾಡ್ತಾ ಬದುಕಬೇಕಾಗುತ್ತದೆ. ಮಧುಮೇಹ ಗಂಭೀರ ಸಮಸ್ಯೆಯಾಗಿದ್ದು, ಶಾಶ್ವತ ಚಿಕಿತ್ಸೆ ಇದಕ್ಕಿಲ್ಲ. ಆರೋಗ್ಯಕರ ಆಹಾರ ಮತ್ತು ಜೀವನಶೈಲಿ(lifestyle)ಯಿಂದ ಮಾತ್ರ ಇದನ್ನು ನಿಯಂತ್ರಿಸಬಹುದು. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಅನೇಕ ಗಂಭೀರ ಸಮಸ್ಯೆಗಳು ಕಾಡುತ್ತವೆ. ಮಧುಮೇಹಿಗಳು ಆಹಾರದ ಬಗ್ಗೆ ಹೆಚ್ಚು ಗಮನ ನೀಡಬೇಕು. ಸ್ವಲ್ಪ ಹೆಚ್ಚು-ಕಮ್ಮಿಯಾದ್ರೂ ಸಮಸ್ಯೆ ಸಾವಿನ ದವಡೆಗೆ ತಂದು ನಿಲ್ಲಿಸುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಹಲವು ಮಾರ್ಗಗಳಿವೆ. ಅವುಗಳಲ್ಲಿ ಒಂದು ಅರಿಶಿನ.
ಅರಿಶಿನ (Turmeric) ಆಹಾರಕ್ಕೆ ಕಲರ್ ನೀಡುವ ಜೊತೆಗೆ ರುಚಿಯನ್ನು ಹೆಚ್ಚಿಸುತ್ತದೆ. ಆಯುರ್ವೇದದಲ್ಲಿ ಅರಿಶಿನಕ್ಕೆ ಹೆಚ್ಚಿನ ಮಹತ್ವವಿದೆ. ಅರಿಶಿನವನ್ನು ಅನೇಕ ರೋಗಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಅರಿಶಿನವನ್ನು ನೂರಕ್ಕೂ ಹೆಚ್ಚು ರಾಸಾಯನಿಕ ಸಂಯುಕ್ತಗಳ ಅದ್ಭುತ ಮಸಾಲೆ ಎಂದು ಕರೆಯಲಾಗುತ್ತದೆ. ಅರಿಶಿನವು ಕರ್ಕ್ಯುಮಿನ್ ಎಂಬ ಸಕ್ರಿಯ ಸಂಯುಕ್ತವನ್ನು ಹೊಂದಿದೆ. ಇದು ಅನೇಕ ರೋಗಗಳನ್ನು ತಡೆಯುತ್ತದೆ.
ಅರಿಶಿನವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಎಂದು ಅನೇಕ ಅಧ್ಯಯನಗಳು ಹೇಳಿವೆ. ನೀವು ಮಧುಮೇಹ ರೋಗಿಗಳಾಗಿದ್ದರೆ, ಅರಿಶಿನವನ್ನು ಸರಿಯಾದ ವಿಧಾನದಲ್ಲಿ ಬಳಸಬೇಕು.
ಮಧುಮೇಹಿಗಳು ಅರಿಶಿನವನ್ನು ಹೀಗೆ ಬಳಸಬೇಕು?
ಬರೀ ಅರಿಶಿನ ಸೇವನೆ ಮಾಡುವುದಕ್ಕಿಂತ ಅರಿಶಿನದ ಜೊತೆ ನೆಲ್ಲಿಕಾಯಿ ಮತ್ತು ಶುಂಠಿ ಸೇವನೆ ಮಾಡಿದ್ರೆ ಅನೇಕ ಪ್ರಯೋಜನಗಳಿವೆ. ಈ ಮೂರು ಪದಾರ್ಥಗಳನ್ನು ಒಟ್ಟಿಗೆ ಬೆರೆಸಿದಾಗ, ಆರೋಗ್ಯಕರ ಟಾನಿಕ್ ಸಿದ್ಧವಾಗುತ್ತದೆ. ಆಯುರ್ವೇದದಲ್ಲಿ, ಈ ಮೂರು ಪದಾರ್ಥ ಸೇವನೆಯು ಆರೋಗ್ಯಕ್ಕೆ ಅಸಂಖ್ಯಾತ ಪ್ರಯೋಜನಗಳನ್ನು ನೀಡುತ್ತದೆ ಎನ್ನಲಾಗಿದೆ.
CHOCOLATE BENEFITS: ಬಿಳಿ ಚಾಕೋಲೇಟ್ ತಿಂದ್ರೆ ಆರೋಗ್ಯಕ್ಕೆಷ್ಟು ಲಾಭವಿದೆ ಗೊತ್ತಾ ?
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಈ ಮಿಶ್ರಣ ಸಹಕಾರಿ : ಶುಂಠಿ ಮತ್ತು ನೆಲ್ಲಿಕಾಯಿ ರಸವನ್ನು ಅರಿಶಿನದೊಂದಿಗೆ ಬೆರೆಸಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಬಹುದು. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಸೇರಿದಂತೆ ಈ ಎಲ್ಲಾ ಮೂರು ಪದಾರ್ಥಗಳಲ್ಲಿ ವಿವಿಧ ಪೋಷಕಾಂಶಗಳು ಕಂಡುಬರುತ್ತವೆ. ಇದು ಸಕ್ಕರೆ ಹೆಚ್ಚಾಗುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲ, ಈ ಸಂಯೋಜನೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹ ಸಹಾಯ ಮಾಡುತ್ತದೆ.
ಗ್ಯಾಸ್ಟ್ರಿಕ್ ಸಮಸ್ಯೆಗೆ ಇದು ಮದ್ದು : ಹೊಟ್ಟೆ ಉಬ್ಬರ,ಅಜೀರ್ಣ, ಹೊಟ್ಟೆ ನೋವು ಮತ್ತು ವಾಕರಿಕೆ ಸೇರಿದಂತೆ ಹೊಟ್ಟೆಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಶುಂಠಿ ಮತ್ತು ಅರಿಶಿನದ ಉಪಯುಕ್ತವಾಗಿವೆ. ನಿರಂತರವಾಗಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನೀವು ಹೊಂದಿದ್ದರೆ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಮಿಶ್ರಣವನ್ನು ಸೇವಿಸಬೇಕು.
Kitchen Tips: ಅಡುಗೆಗೆ ಆವಕಾಡೊ ಎಣ್ಣೆ ಬಳಸಿ, ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ
ಶೀತ ಮತ್ತು ಕೆಮ್ಮಿಗೂ ನೀಡುತ್ತೆ ಪರಿಹಾರ : ಅರಿಶಿನ,ನೆಲ್ಲಿಕಾಯಿ ಹಾಗೂ ಶುಂಠಿ ಮಿಶ್ರಣವನ್ನು ಪ್ರತಿದಿನ ಬೆಳಿಗ್ಗೆ ಸೇವಿಸುವುದರಿಂದ ಶೀತ ಮತ್ತು ಕೆಮ್ಮು ಕೂಡ ಕಡಿಮೆಯಾಗುತ್ತದೆ. ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು ಶುಂಠಿ ಸಹಾಯ ಮಾಡುತ್ತದೆ. ನೆಲ್ಲಿಕಾಯಿ ಜೀವಸತ್ವಗಳ ಉಗ್ರಾಣವಾಗಿದೆ. ಇದು ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಅರಿಶಿನದಲ್ಲೂ ಶೀತ ತಡೆಯುವ ಶಕ್ತಿಯಿದೆ.
ದೈಹಿಕ ನೋವು ಮಂಗಮಾಯ : ಅರಿಶಿನ,ನೆಲ್ಲಿಕಾಯಿ ಹಾಗೂ ಶುಂಠಿ ಮಿಶ್ರಣವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ದೇಹದ ನೋವುಗಳಿಗೆ ಇದು ಒಳ್ಳೆಯ ಮದ್ದು. ಈ ಮಿಶ್ರಣವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಇಲ್ಲವಾದಲ್ಲಿ ಬೇರೆ ಸಮಸ್ಯೆಗಳಾಗುವ ಸಾಧ್ಯತೆಯಿರುತ್ತದೆ. ಪ್ರತಿದಿನ ಸೇವನೆ ಮಾಡುವ ಮುನ್ನ ವೈದ್ಯರ ಸಲಹೆ ಪಡೆದಲ್ಲಿ ಉತ್ತಮ.