Himalayan Red Buransh:ಸಿಕ್ಕಿಯೇ ಬಿಟ್ಟಿತಾ ಕೊರೋನಾಗೆ ಲಸಿಕೆ?

By Suvarna News  |  First Published Jan 21, 2022, 4:58 PM IST

ಭಾರತೀಯ ತಂತ್ರಜ್ಙಾನ ಸಮಿತಿಯಿಂದ (Indian Institute of Technology) ಹಿಮಾಲಯದಲ್ಲಿ ಹೂ ಬಿಡುವ ಮರಗಳ ಸಹಾಯದಿಂದ ಲಿಸಿಕೆ ತಯಾರಿಸಬಹುದು ಹಾಗೂ ಚಿಕಿತ್ಸೆ ನೀಡಬಹುದು ಎಂಬ ವಿಷಯ ಹೊರಬಂದಿದೆ. ಅಕಸ್ಮಾತ್ ಅಂದುಕೊಂಡಂತೆಯೇ ಎಲ್ಲವೂ ನಡೆದರೆ, ಭಾರತ ಕೊರೋನಾಗೆ ಮತ್ತೊಂದು ಕಂಡು ಹಿಡಿಯುವಲ್ಲಿ ಯಶಸ್ವಿಯಾಗಬಹುದು!


ಕಣ್ಣಿಗೆ ಕಾಣಿಸದೇ ಇರುವ ಈ ವೈರಾಣು ಇಡೀ ಪ್ರಪಂಚವನ್ನೆ (World) ಕಂಗಾಲು ಮಾಡಿದೆ ಇಂತಹ ಸಂದರ್ಭದಲ್ಲಿ ಇದಕ್ಕೆ ಸೂಕ್ತ ಲಸಿಕೆ (Vaccination) ಸಿಕ್ಕದೆ ಎಂದು ಹೇಳಿದರೆ ಅದು ಸಂಜೀವಿನಿ ಎಂದೇ ಭಾವಿಸುತ್ತೀವಿ. ಹಿಮಾಲಯದಲ್ಲಿ ಸಿಕ್ಕುವ ಕೆಲವು ಹೂವಿನ ಮರಗಳಲ್ಲಿ ವೈರಸ್‌ಗೆ ಲಸಿಕೆ ಯಾಗುವ ಅಂಶಗಳಿವೆ ಎಂದು ವಿಜ್ಙಾನಿಗಳು ಸಂಶಯ ವ್ಯಕ್ತ ಪಡಿಸುತ್ತಿದ್ದಾರೆ. 

ಹಿಮಾಲಯದಲ್ಲಿ ಔಷದೀಯ ಸಸ್ಯಗಳು
ಹಿಮಾಲಯದ ದಟ್ಟ ಅರಣ್ಯಗಳಲ್ಲಿ ಔಷಧೀಯ (Medicinal) ಸಸ್ಯಗಳಿಗೇನೂ ಬರವಿಲ್ಲ. ಕೊನೆಯುಸಿರೆಳೆದ ಲಕ್ಷಣನನ್ನು ಬದುಕಿಸಲು ಸಂಜೀವಿನಿ ಪರ್ವತವನ್ನೇ ಹೊತ್ತು ತಂದ ಹನಮಂತನ ಕಥೆ ಎಲ್ಲರಿಗೂ ಗೊತ್ತಿರುವುದೇ. ಈ ಪರ್ವತದಲ್ಲಿ ಕಂಡ ಕೇಳರಿಯದ ಔಷಧೀಯ ಸಸ್ಯ ಸಂಕುಲಗಳಿವೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹಿಮಾಲಯದ ಔಷಧೀಯ ಸಸ್ಯಗಳ ಬಗ್ಗೆ ಇತಿಹಾಸ ಮಾತ್ರವಲ್ಲ, ಪೌರಾಣಿಕ ಕಥೆಗಳೂ ಹೇಳುತ್ತೇವೆ. ಅದಷ್ಟೇ ಅಲ್ಲದೆ ಹಲವಾರು ವಿಜ್ಙಾನಿಗಳೂ ಈ ಕುರಿತಾಗಿ ಸಂಶೋಧನೆಗಳನ್ನು ಮಾಡುತ್ತಲೇ ಇದ್ದಾರೆ. 

Latest Videos

undefined

ಇಂತಹದೇ ಸಂಶೋಧನೆಯ ಅಂಗವಾಗಿ ಕೆಲವು ಜೀವಶಾಸ್ತ್ರಜ್ಙರ (Biologist) ಗುಂಪೊಂದು ಅಳಿವಿನ ಅಂಚಿನಲ್ಲಿರುವ ಅಪರೂಪದ ಔಷಧೀಯ ಸಸ್ಯಗಳನ್ನು ಉಳಿಸಿಕೊಳ್ಳಲು ಸಂಶೋಧನೆಗಳನ್ನು ಮಾಡಿ ಆ ಸಸ್ಯಗಳ ಪೈಟೋಕೆಮಿಕಲ್‌ ಅಣುವನ್ನು ಶೇಖರಿಸಿ ಇಡುತ್ತಿದ್ದರು. ಪ್ರಾರಂಭದಲ್ಲಿ ಔಷಧೀಯ ಸಸ್ಯಗಳ ಗ್ರಂಥಾಲಯ ರಚಿಸಬೇಕು ಎಂಬ ಉದ್ಧೇಷ ಹೊಂದಿದ್ದರು. ಆದರೆ ಇದೇ ಸಂದರ್ಭದಲ್ಲಿ ಕೊರೋನಾ ವೇಗವಾಗಿ ಬೆಳೆಯಲು ಪ್ರಾರಂಭವಾದ ಕಾರಣ, ಇಡೀ ದೇಶವನ್ನೇ ಲಾಕ್ಡೌನ್‌ (Lockdown) ಮಾಡಲಾಯಿತು. ಈ ಸಂದರ್ಭದಲ್ಲಿ ಈ ಔಷಧೀಯ ಸಸ್ಯಗಳಿಂದ ಕೊರೋನಾಕ್ಕೆ ಚಿಕಿತ್ಸೆ ನೀಡಬಹುದೇ ಎಂಬುದರ ಬಗ್ಗೆ ಸಂಶೋಧನೆ ಪ್ರಾರಂಭ ಮಾಡಿದರು.
 
Jammu Kashmirದಲ್ಲಿ ಹಿಂದೆಂದೂ ಇಲ್ಲದಷ್ಟು ಚಳಿ ಚಳಿ.. ತಾಪಮಾನ ಎಷ್ಟು ಗೊತ್ತಾ?

ಐಐಟಿ ಸಂಶೋಧನೆ
ಐಐಟಿ ಮಂಡಿ (IIT Mandi) ತಂಡವು ಕಂಪ್ಯೂಟೇಷನಲ್‌ ಸಿಮ್ಯಲೇಶನ್‌ ಎಂಬ ಪರೀಕ್ಷೆಯ ಮೂಲಕ ಹಲವಾರು ಸಸ್ಯಗಳ ಪೈಟೋಕೆಮಿಕಲ್‌ (Phytochemical) ಅಣುವನ್ನು ಸ್ಕ್ಯಾನ್‌ ಮಾಡುತ್ತಾರೆ ಹೀಗೆ ಮಾಡಿದಾಗ ಯಾವ ಸಸ್ಯವು ಈ ಸಂಶೋಧನೆಗೆ ಅಂದರೆ ಕೊರೋನಾಕ್ಕೆ ಚಿಕಿತ್ಸೆ ನೀಡುವ ಔಷಧೀಯ ಅಂಶವನ್ನು ನೀಡುತ್ತದೆ ಎಂದು ಪರೀಕ್ಷಿಸಿದರು. ಹಲವಾರು ಹೂವಿನ ಮರಗಳನ್ನು ಪರೀಕ್ಷಿಸಿ ಕೊನೆಗೆ  ಅದರಲ್ಲಿ 20 ಸಸ್ಯದ ಅಣುವನ್ನು ಶಾರ್ಟ್‌ಲಿಸ್ಟ್‌ ಮಾಡಲಾಯಿತು. ಆದರೆ ಈ ಸಸ್ಯಗಳೂ ಕೂಡ ಕೊರೋನಾ ಲಸಿಕೆಗೆ ಬೇಕಾಗುವ ಅಂಶಗಳು ಕಂಡು ಬರದೆ ವಿಫಲವಾದವು.

ಹಿಮಾಲಯದ ಕೆಂಪು ಬುರಾನ್ಶ್‌ (Himalayan Red Buransh)
 ಹೀಮಾಲಯ ಪ್ರದೇಶದಲ್ಲಿ ಸ್ಥಳೀಯವಾಗಿ ಕಂಡು ಬರುವ ಈ ಬುರಾನ್ಶ್‌ ಎಂಬ ಹೂವು ಸಂಶೋಧಕರು ಹುಡುಕುತ್ತಿದ್ದ ಔಷಧೀಯ ಗುಣವನ್ನು ಹೊಂದಿದೆಯಂತೆ. ಇದನ್ನು ಇನ್ನೂ ಹೆಚ್ಚಿನ ಪರೀಕ್ಷೆಗೆ ಒಳಪಡಿಸುವ ಸಲುವಾಗಿ ಲ್ಯಾಬ್‌ನಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ವಿಜ್ಙಾನಿಗಳು ಈ ಹೂವಿನ ಸಾರದ ಮೇಲೆ ಬಿಸಿ ನೀರನ್ನು ಹಾಕುವ ಮೂಲಕ ವೀಕ್ಷಕರಿಗೆ ಪ್ರದರ್ಶನ ನೀಡಿದ್ದರು. ಈ ಸಂಶೋಧನೆಗೆ ಡಾ. ಸುಜಾತ ಸುನಿಲ್‌ ಮತ್ತು ಡಾ. ರಂಜನ್‌ ನಂದ ಇವರು ಕೊಡುಗೆ ನೀಡುತ್ತಿದ್ದಾರೆ. ಈ ಬುರಾನ್ಶ್‌ ಹೂವಿನ ಸಾರವನ್ನು (Extract) ಪ್ರಯೋಗಕ್ಕೆ ಒಳಪಡಿಸಿ 48 ಗಂಟೆಗಳ ಕಾಲ ಕಾವು ನೀಡಲಾಯಿತು ಆಗ ವೈರಲ್‌‌ನ ಗುಣಾಕಾರವು (Multiplication) ಪ್ರಭಾವಿತವಾಗಿರುವುದು ಕಂಡು ಬಂದಿದೆ. ಇದು ಕೊರೋನಾಕ್ಕೆ ಪ್ರತಿರೋಧ ತೋರಿಸುವಲ್ಲಿ ಯಶಸ್ಸು ಕಾಣುತ್ತದೆ ಎಂಬುದು ವಿಜ್ಙಾನಿಗಳ ಅಭಿಪ್ರಾಯ.

Winter and Orange: ಚಳಿಗಾಲದ ಕಿತ್ತಳೆ ತಿಂದ್ರೆ ಸಮಸ್ಯೆಗಳೆಲ್ಲಾ ದೂರ

ಇನ್ನು ಕೆಲವೇ ದಿನಗಳಲ್ಲಿ ಈ ಕುರಿತಾಗಿ ಮಾಡಿತ್ತಿರುವ ಹೆಚ್ಚಿನ ಸಂಶೋಧನೆಯ ಫಲಿತಾಂಶ ಹೊರ ಬರುವ ಸಾದ್ಯತೆ ಇದೆ. ಹಾಗೇನಾದರೂ ಈ ಹೂವಿನಲ್ಲಿ ಕೊರೋನಾಕ್ಕೆ ಸಂಪೂರ್ಣ ವಿದಾಯ ಹೇಳುವ ಅವಕಾಶ ಸಿಕ್ಕಿದರೆ. ಇಡೀ ಪ್ರಪಂಚವೇ ನಿಟ್ಟುಸಿರು ಬಿಡಬಹುದು. ವಿಶ್ವವನ್ನೇ ನಲುಗಿಸಿದ ವೈರಸ್‌ಗೆ ಭಾರತವೇ ಔಷಧಿ ಕಂಡು ಹಿಡಿವಂತಾಗಲಿ.

 

click me!