ಶಿಲ್ಪಾಶೆಟ್ಟಿಗರ್ಭ ಧರಿಸುವ ಆಸೆಗೆ ತಣ್ಣೀರೆರಚಿದ APLA; ಏನಿದು?

By Kannadaprabha NewsFirst Published May 28, 2020, 8:35 AM IST
Highlights

ಶಿಲ್ಪಾಶೆಟ್ಟಿಬಾಡಿಗೆ ಗರ್ಭದ ಮೂಲಕ ಎರಡನೇ ಮಗು ಪಡೆದಿದ್ದಾರೆ. ಆದರೆ ಸ್ವಯಂ ಗರ್ಭವತಿಯಾಗೋ ಅವರ ಕನಸು ಕಸಿದದ್ದು ಎಪಿಎಲ್‌ಎ ಅರ್ಥಾತ್‌ ಆಂಟಿ ಪೋಸ್ಫೋಲಿಪಿಡ್‌ ಆಂಟಿಬಾಡೀಸ್‌ ಎನ್ನುವ ವಿಚಿತ್ರ ಸಮಸ್ಯೆ. ಎರಡನೇ ಮಗುವಿನ ಆಸೆ ಹೊತ್ತ ಶಿಲ್ಪಾಗೆ ಪದೇ ಪದೇ ಗರ್ಭಪಾತವಾಗುವಂತೆ ಮಾಡಿದ ರೋಗವಿದು.

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಕೆಲವು ತಿಂಗಳ ಹಿಂದೆ ಬಾಡಿಗೆ ಗರ್ಭದ ಮೂಲಕ ಹೆಣ್ಣು ಮಗು ಪಡೆದರು. ತಾನ್ಯಾಕೆ ಅನಿವಾರ್ಯವಾಗಿ ಸರೊಗಸಿ ಪದ್ಧತಿಯಲ್ಲಿ ಮಗು ಪಡೆಯಬೇಕಾಯ್ತು, ತನ್ನ ಸಮಸ್ಯೆ ಏನಾಗಿತ್ತು ಅನ್ನೋದರ ಬಗ್ಗೆ ಅವರು ಇಂಗ್ಲಿಷ್‌ ದೈನಿಕಕ್ಕೆ ಸಂದರ್ಶನ ನೀಡಿದ್ದರು. ಅದರ ಸಾರ ಹೀಗಿದೆ.

ಪ್ರೆಗ್ನೆಂಸಿ ವೇಳೆ ಖ್ಯಾತ ನಟಿಗೆ ಡಿಸಾರ್ಡರ್; ಸತ್ಯ ಬಿಚ್ಚಿಟ್ಟ ಫಿಟ್ನೆಸ್ ಐಕಾನ್!

‘ನಾನು ಸಹೋದರಿಯ ಜೊತೆಗೆ ಬೆಳೆದವಳು. ನನಗೆ ನನ್ನ ಮಗ ಒಂಟಿಯಾಗಿ ಬೆಳೆಯೋದು ನನಗೆ ಇಷ್ಟವಿಲ್ಲ. ಅವನಿಗೊಬ್ಬ ತಂಗಿಯೋ ತಮ್ಮನೋ ಬೇಕೇ ಬೇಕು. ವಿವಾನ್‌ ಹುಟ್ಟಿದ ಕೆಲವು ವರ್ಷ ನಾವು ಎರಡನೇ ಮಗು ಬಗ್ಗೆ ಯೋಚಿಸಲಿಲ್ಲ. ಆದರೆ ಅವನು ಸ್ವಲ್ಪ ದೊಡ್ಡವನಾದ ಮೇಲೆ ಬಹಳ ಪ್ರಯತ್ನಿಸಿದೆವು. ನಾನು ಗರ್ಭ ಧರಿಸಿದ ಕೆಲವೇ ಸಮಯಕ್ಕೆ ಅಬಾರ್ಶನ್‌ ಆಗುತ್ತಿತ್ತು. ಈ ಬಗ್ಗೆ ಕೂಲಂಕುಶವಾಗಿ ಚೆಕ್‌ ಮಾಡಿದ ಮೇಲೆ ನನಗೆ ಎಪಿಎಲ್‌ಎ ಸಮಸ್ಯೆ ಇರೋದು ತಿಳಿದು ಬಂತು. ತಾಯಿಯಿಂದ ಮಗುವಿನ ದೇಹಕ್ಕೆ ಹೋಗುವ ರಕ್ತ ಹೆಪ್ಪುಗಟ್ಟುತ್ತಿತ್ತು. ಇದರಿಂದ ಭ್ರೂಣಕ್ಕೆ ರಕ್ತ ಸರಬರಾಜಾಗದೇ ಆ ಗರ್ಭ ವಿಫಲವಾಗುತ್ತಿತ್ತು.

ಪದೇ ಪದೇ ಹೆಪ್ಪುಗಟ್ಟಿದ ರಕ್ತ ತಿಳಿಯಾಗಲು ಇಂಜೆಕ್ಷನ್‌ ತೆಗೆದುಕೊಂಡರೂ ಈ ಸಮಸ್ಯೆ ತಾತ್ಕಾಲಿಕವಾಗಿ ನಿವಾರಣೆಯಾಗುತ್ತಿತ್ತು. ಆಮೇಲೆ ಮತ್ತೆ ಹಿಂದಿನಂತಾಗುತ್ತಿತ್ತು. ಆದರೆ ನನಗೆ ಇನ್ನೊಂದು ಮಗು ಬೇಕೇ ಬೇಕಿತ್ತು. ಯಾರೋ ಮಗು ದತ್ತು ಪಡೆಯಿರಿ ಅಂದರು. ಹೆಸರು ರಿಜಿಸ್ಟರ್‌ ಮಾಡಿ ಸುಮಾರು ನಾಲಕ್ಕು ವರ್ಷ ಮಗುವೊಂದನ್ನು ದತ್ತು ಪಡೆಯಲು ಪ್ರಯತ್ನಿಸಿದೆ. ಏನೇನೋ ಸಮಸ್ಯೆಗಳಾಗಿ ಅದು ಸಾಧ್ಯವಾಗಲಿಲ್ಲ. ಕೊನೆಗೇ ಬಾಡಿಗೆ ಗರ್ಭದ ಮೂಲಕ ಮಗುವಿಗೆ ಪ್ರಯತ್ನಿಸಿದೆ. ಸಮಿಷಾ ನಮ್ಮ ಮನೆ ಮನಸ್ಸು ತುಂಬಿದಳು.’

ಎಪಿಎಲ್‌ಎ ಸಮಸ್ಯೆ ಬಗ್ಗೆ ಒಂದಿಷ್ಟು

- ನಮ್ಮ ದೇಹದ ಕಣಗಳನ್ನೇ ವೈರಿಕಣವೆಂದು ಭಾವಿಸಿ ಅದನ್ನು ಮುಗಿಸಿಬಿಡಲು ಪ್ರತಿರೋಧ ಶಕ್ತಿ ಸೃಷ್ಟಿಯಾಗುವ ವಿಚಿತ್ರ ರೋಗವಿದು.

- ಇದರಿಂದ ಪ್ಲೇಟ್‌ಲೆಟ್‌ಗಳು ತೀವ್ರವಾಗಿ ಕುಸಿಯುತ್ತವೆ.

ಶಿಲ್ಪಾ ಶೆಟ್ಟಿ ಎರಡನೇ ಮಗು ಫೋಟೋ ರಿವೀಲ್‌; ಏನದು ಕಾಯಿಲೆ?

- ಗರ್ಭಾವಸ್ಥೆಯಲ್ಲಿ ಈ ಸಮಸ್ಯೆ ಬಂದರೆ ಆ ಭ್ರೂಣದ ತಂದೆಯ ಕಣಗಳನ್ನೇ ತಾಯಿಯ ದೇಹದ ಕಣಗಳು ಅನ್ಯಕಣಗಳೆಂದು ಭಾವಿಸುತ್ತವೆ. ಆ ಕಣಗಳನ್ನು ನಿಷ್ಕಿ್ರಯಗೊಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತವೆ.

- ವೀರ್ಯದಿಂದ ರೂಪುಗೊಂಡ ಭ್ರೂಣಕ್ಕೆ ರಕ್ತ ಸರಬರಾಜಾಗದಂತೆ ತಡೆಯಲು ರಕ್ತ ಹೆಪ್ಪುಗಟ್ಟುವ ಹಾಗೆ ಮಾಡುತ್ತವೆ.

- ಇದರಿಂದ ಭ್ರೂಣಕ್ಕೆ ರಕ್ತ ಸರಬರಾಜಾಗದೇ ಅದು ಅಸುನೀಗುತ್ತದೆ.

- ಸ್ಟ್ರೇಸ್‌ ಹೆಚ್ಚಿರುವ ಲೈಫ್‌ಸ್ಟೈಲ್‌ ಈ ಸಮಸ್ಯೆಗೆ ಮುಖ್ಯಕಾರಣ.

- ಗರ್ಭಿಣಿಯರಲ್ಲಿ ಈ ಸಮಸ್ಯೆ ಬಂದರೆ ಚಿಕಿತ್ಸೆ ಇದೆಯಾದರೂ ಇದು ವಿಫಲವಾಗುವ ಸಾಧ್ಯತೆ ಹೆಚ್ಚಿದೆ.

- ಎಪಿಎಲ್‌ಎ ಸಮಸ್ಯೆ ಇರುವ ಗರ್ಭಿಣಿಯರನ್ನು ಹೈ ರಿಸ್ಕ್‌ ಕೇಸ್‌ಗಳೆಂದು ಭಾವಿಸಲಾಗುತ್ತೆ.

- ಈ ಸಮಸ್ಯೆ ಇದ್ದು ಚಿಕಿತ್ಸೆ ಪಡೆಯುತ್ತಾ ಗರ್ಭ ಕಾಯ್ದುಕೊಳ್ಳಲು ಯತ್ನಿಸಿದರೂ ಕೆಲವೊಮ್ಮೆ ಇದರಿಂದ ಮಗುವಿಗೆ ಹೃದಯ ಸಂಬಂಧಿ ಸಮಸ್ಯೆಗಳು ಬರುವ ಸಾಧ್ಯತೆ ಇದೆ.

ಇದಕ್ಕೆ ಚಿಕಿತ್ಸೆ ಇದೆಯಾ?

- ಆಗಾಗ ಹೆಪ್ಪುಗಟ್ಟುವ ರಕ್ತವನ್ನು ತಿಳಿಗೊಳಿಸಲು ಇಂಜೆಕ್ಷನ್‌ ನೀಡಲಾಗುತ್ತದೆ.

- ದಿನಕ್ಕೊಮ್ಮೆ ಗರ್ಭಿಣಿಗೆ ಈ ಇಂಜೆಕ್ಷನ್‌ ನೀಡಬೇಕಾಗುತ್ತದೆ.

- ಪದೇ ಪದೇ ಸ್ಕ್ರೀನಿಂಗ್‌ ಮಾಡುವುದು ಅನಿವಾರ್ಯ.

- ಇದು ಗಂಡಸರಿಗೂ ಬರಬಹುದು. ಗರ್ಭವತಿಯರಿಗೆ ಹೋಲಿಸಿದರೆ ಗಂಡಸರಿಗೆ ಇದರಿಂದಾಗುವ ರಿಸ್ಕ್‌ ಕಡಿಮೆ.

- ಹಾಗಂತ ಗಂಡಸರಿಗೂ ಇದು ಮಾರಕವಾಗುವ ರೋಗ ಎಂಬುದರಲ್ಲಿ ಎರಡು ಮಾತಿಲ್ಲ.

click me!