
ಅನಾರೋಗ್ಯಕ್ಕೆ ಅನೇಕ ದಾರಿ ಅನ್ನೋ ಹಾಗೆ ಇತ್ತೀಚಿನ ಆಹಾರ ಕ್ರಮ, ಕಳಪೆ ಜೀವನಶೈಲಿ ಹಾಗೂ ಕೆಟ್ಟ ಅಭ್ಯಾಸಗಳಿಂದಾಗಿ ಇಂದು ಅನೇಕ ಖಾಯಿಲೆಗಳು ಮನುಷ್ಯರನ್ನು ಮುತ್ತಿಕೊಳ್ಳುತ್ತಿವೆ. ನಮ್ಮ ಆಹಾರ ಪದ್ಧತಿಯ ಜೊತೆಗೆ ಕಲುಷಿತ ವಾತಾವರಣವೂ ಇದಕ್ಕೆ ಕಾರಣವಾಗಿದೆ.
ನಮ್ಮ ಜೀವನಕ್ರಮದಿಂದ ಹಾಗೂ ವಾತಾವರಣದಿಂದ ರೋಗ (Disease) ರುಜಿನಗಳು ಹರಡುವುದು ಎಲ್ಲರಿಗೂ ತಿಳಿದಿದೆ. ಆದರೆ ರಕ್ತ (Blood) ದ ಗುಂಪಿಗೆ ಅನುಗುಣವಾಗಿಯೂ ರೋಗಗಳು ಆವರಿಸಿಕೊಳ್ಳುತ್ತವೆ ಎನ್ನುವುದು ನಿಮಗೆ ಗೊತ್ತಾ…? ನಮಗೆಲ್ಲ ತಿಳಿದಂತೆ ಒಬ್ಬೊಬ್ಬರು ಒಂದೊಂದು ರೀತಿಯ ರಕ್ತದ ಗುಂಪನ್ನು ಹೊಂದಿರುತ್ತಾರೆ. ಆಯಾ ರಕ್ತದ ಗುಂಪುಗಳ ಬೇರೆ ಬೇರೆ ಸ್ವಭಾವವನ್ನು ಕೂಡ ಹೊಂದಿರುತ್ತವೆ. ಇಂತಹ ರಕ್ತದ ಸ್ವಭಾವ (nature) ವೇ ಮನುಷ್ಯನ ದೇಹ ಪ್ರಕೃತಿಯ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿ ತನ್ನ ಬ್ಲಡ್ ಗ್ರುಪ್ ಕಾರಣದಿಂದಲೇ ಎಷ್ಟೋ ರೋಗಗಳಿಗೆ ಬಲಿಯಾಗುತ್ತಾನೆ. ಇಂದು ನಾವು ಯಾವ ಯಾವ ಬ್ಲಡ್ ಗ್ರುಪ್ ಹೊಂದಿರುವ ಜನರು ಯಾವ ರೀತಿಯ ಖಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎನ್ನುವುದನ್ನು ನೋಡೋಣ.
ಮುಟ್ಟಿನ ವೇಳೆ ದೇವಸ್ಥಾನಕ್ಕೆ ಏಕೆ ಹೋಗಬಾರದು? ಇದು ಸ್ತ್ರೀಕುಲಕ್ಕೆ ಅಪಮಾನವೇ?
ಹೃದಯಾಘಾತ ಮತ್ತು ಹೃದಯಕ್ಕೆ ಸಂಬಂಧಿಸಿದ ತೊಂದರೆ : ಎ, ಬಿ ಮತ್ತು ಎಬಿ ಬ್ಲಡ್ ಗ್ರುಪ್ ಹೊಂದಿರುವ ಜನರಲ್ಲಿ ಎಬಿಓ ಜೀನ್ ಇರುತ್ತದೆ. ಈ ರಕ್ತದ ಗುಂಪನ್ನು ಹೊಂದಿರುವ ಜನರು ಕಲುಷಿತ ವಾತಾವರಣಕ್ಕೆ ಹೋದಾಗ ಅಥವಾ ಅಲ್ಲಿ ವಾಸ ಮಾಡಿದಾಗ ಅವರಿಗೆ ಉಳಿದ ರಕ್ತ ಗುಂಪುನವರಿಗಿಂತ ಹೆಚ್ಚು ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಇರುತ್ತದೆ. ಈ ರಕ್ತದ ಗುಂಪು ಹೃದಯಾಘಾತ ಮತ್ತು ಹೃದಯಕ್ಕೆ ಸಂಬಂಧಪಟ್ಟ ಖಾಯಿಲೆಗಳಿಗೆ ಹೆಚ್ಚು ಒಳಗಾಗುತ್ತೆ. ಈ ರಕ್ತದ ಗುಂಪಿನ ಜನರಿಗೆ ಕೊರೊನರಿ ಆರ್ಟ್ರರಿ ಖಾಯಿಲೆಯ ಅಪಾಯವೂ ಹೆಚ್ಚಿರುತ್ತದೆ. ಇದು ಹೃದಯವನ್ನು ಗಟ್ಟಿಯಾಗಿಸಿ, ಅಪಧಮನಿಗಳನ್ನು ತೆಳುಗೊಳಿಸುತ್ತದೆ ಇದರಿಂದ ಹೃದಯಾಘಾತ ಹೆಚ್ಚು ಸಂಭವಿಸುತ್ತದೆ.
ಮೆದುಳಿನ ಕಾರ್ಯ ಮತ್ತು ನೆನಪಿನ ಶಕ್ತಿಯ ಸಮಸ್ಯೆ : ಮೆದುಳು ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ವ್ಯಕ್ತಿ ಏನನ್ನಾದರೂ ಮಾಡಲು ಸಾಧ್ಯ. ಒಮ್ಮೆ ಆತನ ಮೆದುಳು ನಿಷ್ಕ್ರಿಯವಾಯಿತೆಂದರೆ ಆತ ಏನನ್ನೂ ಮಾಡಲಾರ. ಮೆದುಳು ಚೆನ್ನಾಗಿ ಕೆಲಸ ಮಾಡಿದಾಗ ನೆನಪಿನ ಶಕ್ತಿ ಕೂಡ ಚೆನ್ನಾಗಿರುತ್ತದೆ. ಮೆದಳಿನ ಸಂದೇಶದಿಂದಲೇ ದೇಹದ ಅನೇಕ ಭಾಗಗಳು ಕಾರ್ಯನಿರ್ವಹಿಸುತ್ತವೆ.
ಓ ರಕ್ತದ ಗುಂಪಿಗೆ ಹೋಲಿಸಿದರೆ ಎ, ಬಿ ಮತ್ತು ಎಬಿ ರಕ್ತದ ಗುಂಪಿನ ಜನರಿಗೆ ನೆನಪಿನ ಶಕ್ತಿಯ ಕೊರತೆ ಮತ್ತು ಮೆದುಳಿಗೆ ಸಂಬಂಧಪಟ್ಟ ತೊಂದರೆಗಳು ಹೆಚ್ಚಿರುತ್ತವೆ. ಎ, ಬಿ ಮತ್ತು ಎಬಿ ಬ್ಲಡ್ ಗ್ರುಪ್ ನವರಿಗೆ ಸ್ಟ್ರೋಕ್ ಅಪಾಯವೂ ಅಧಿಕವಾಗಿರುತ್ತದೆ.
ಗರ್ಭಿಣಿಯ ಕಾಡೋ ಸಮಸ್ಯೆ ಒಂದೆರಡಲ್ಲ, ಹೊಟ್ಟೆ ತುರಿಕೆಗೇನು ಕಾರಣ?
ಒತ್ತಡ (Stress) : ಕೆಲವರು ಚಿಕ್ಕ ಚಿಕ್ಕ ವಿಷಯಕ್ಕೂ ಹೆಚ್ಚು ಟೆನ್ಶನ್ ಮಾಡಿಕೊಳ್ಳುವದನ್ನು ನಾವು ನೋಡ್ತೇವೆ. ಹಾಗೆ ಒತ್ತಡ ಉಂಟಾಗಲು ಅವರ ರಕ್ತದ ಗುಂಪು ಕಾರಣವಾಗಿದೆ. ಎ ಮಾದರಿಯ ರಕ್ತದ ಗುಂಪನ್ನು ಹೊಂದಿದವರಲ್ಲಿ ಕಾರ್ಟಿಸೋಲ್ ಪ್ರಮಾಣ ಹೆಚ್ಚಿರುತ್ತದೆ. ಕಾರ್ಟಿಸೋಲ್ ಒತ್ತಡ ಉಂಟುಮಾಡುವ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಲೇ ಎ ಬ್ಲಡ್ ಗ್ರುಪ್ ಹೊಂದಿದವರಲ್ಲಿ ಹೆಚ್ಚಿನ ಒತ್ತಡ ಇರುತ್ತದೆ. ಅಂತಹ ಒತ್ತಡದಿಂದ ಹೊರಬರುವುದೂ ಅವರಿಗೆ ಕಷ್ಟವಾಗುತ್ತದೆ.
ಕ್ಯಾನ್ಸರ್ (Cancer) : ಹಿಂದಿನ ಕಾಲದಲ್ಲಿ ತೀರ ಅಪರೂಪವಾಗಿದ್ದ ಕ್ಯಾನ್ಸರ್ ಖಾಯಿಲೆ ಈಗ ಎಲ್ಲೆಂದರಲ್ಲಿ ಕಾಣುತ್ತಿದೆ. ಈ ಕುರಿತು ಸಂಶೋಧನೆ ನಡೆಸಿದ ಅನೇಕ ತಜ್ಞರು ಕೆಲವು ರಕ್ತದ ಮಾದರಿಯು ಕೂಡ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದಿದ್ದಾರೆ. ಉಳಿದ ರಕ್ತದ ಗುಂಪಿನವರಿಗಿಂತ ಎ ರಕ್ತದ ಗುಂಪಿನವರಿಗೆ ಹೊಟ್ಟೆಯ ಕ್ಯಾನ್ಸರ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಂತ ಎ ರಕ್ತ ಗುಂಪಿನವರಿಗೆ ಮಾತ್ರ ಕ್ಯಾನ್ಸರ್ ಆಗುತ್ತೆ ಎಂದೇನಿಲ್ಲ ಇದರ ಹೊರತಾಗಿ ಇನ್ನೂ ಅನೇಕ ಕಾರಣಗಳಿಂದ ಕ್ಯಾನ್ಸರ್ ಉಂಟಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.