
ತೆಹ್ರಿ(ಜೂ.08): ಭಾರತ ಬದಲಾಗುತ್ತಿದೆ ಎಂಬುದಕ್ಕೆ ಹಲವು ಸಂಗತಿಗಳು ಕಣ್ಣಿಗೆ ಕಾಣುತ್ತವೆ. ದೇಶದ ಕುಗ್ರಾಮವೊಂದರಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದರೆ ಅದು ಅತಿಶೋಕ್ತಿಯೇನಲ್ಲ.
ಹಳ್ಳಿ ಹಳ್ಳಿಗೂ ಆರೋಗ್ಯ ಸೇವೆ ಒದಗಿಸುವ ಬಹುದಿನಗಳ ಕನಸು ಇದೀಗ ನನಸಾಗುತ್ತಿದೆ. ಅದರಂತೆ ಡ್ರೋಣ್ನಲ್ಲಿ ರೋಗಿಗೆ ತುರ್ತು ರಕ್ತ ರವಾನಿಸುವ ಮೂಲಕ ದೇಶದ ವೈದ್ಯ ಲೋಕದಲ್ಲಿ ಅಚ್ಚರಿಯ ಘಟನೆ ನಡೆದಿದೆ.
ಹೌದು, ಉತ್ತರಾಖಂಡ್ನ ತೆಹ್ರಿ ಜಿಲ್ಲಾಸ್ಪತ್ರೆಯಿಂದ 36 ಕಿ.ಮೀ. ದೂರದ ಕುಗ್ರಾಮಕ್ಕೆ ಡ್ರೋಣ್ ಮೂಲಕ ರಕ್ತವನ್ನು ಕೊಂಡೊಯ್ದು ಹೊಸ ಇತಿಹಾಸ ಬರೆಯಲಾಗಿದೆ.
ಡ್ರೋಣ್ ಮೂಲಕ ರಕ್ತ ರವಾನೆ ದೇಶದ ವೈದ್ಯಲೋಕದಲ್ಲಿ ಕ್ರಾಂತಿಕಾರಕ ಬೆಳವಣಿಗೆ ಎನ್ನಲಾಗಿದ್ದು, ಇದರಿಂದ ಕುಗ್ರಾಮಕ್ಕೂ ತುರ್ತು ಆರೋಗ್ಯ ಸೇವೆ ಒದಗಿಸುವುದು ಸುಲಭ ಸಾಧ್ಯವಾಗಲಿದೆ ಎನ್ನುತ್ತಾರೆ ವೈದ್ಯರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.