
ಚಳಿಗಾಲ ಶುರುವಾಗಿದೆ. ಬೆಳಗ್ಗೆ ಹಕ್ಕಿಗಳ ಕಲರವ ಕೇಳುವ ಬದಲು ಈಗ ಮಕ್ಕಳಿಂದ ಹಿರಿಯರವರೆಗೆ ಕೆಮ್ಮುವ ಸದ್ದು ಕೇಳುತ್ತಿದೆ. ಬೆಳಗ್ಗೆ ಉಸಿರಾಡೋಕೆ ಕಷ್ಟ ಅನ್ನುವಷ್ಟು ಮೂಗು ಕಟ್ಟುತ್ತಿದೆ. ಹಸುಗೂಸುಗಳಿಗೆ ನೆಗಡಿ, ಕಫ, ಮೂಗು ಕಟ್ಟುವುದು… ಅಬ್ಬಬ್ಬಾ ನೆನಸಿಕೊಂಡರೆ ಹೆತ್ತವರಿಗೆ ಭಯ. ಚಳಿಗಾಲದಲ್ಲಿ ದೊಡ್ಡವರದು ಒಂದು ಸಮಸ್ಯೆ ಆದರೆ ಇನ್ನು ಶಾಲೆಗೆ ಹೋಗುವ ಮಕ್ಕಳದು ಇನ್ನೊಂದು ಸಮಸ್ಯೆ. ನೆಗಡಿ ಬಂದಾಗಿನ ಮಕ್ಕಳ ಪಾಡು ಹೇಳತಿರದು.
ಸಾಮಾನ್ಯವಾಗಿ ನೆಗಡಿ ಬಂದ ತಕ್ಷಣ ಜನರು ಮೆಡಿಕಲ್ ಹೋಗಿ ಮಾತ್ರೆ ತೆಗೆದುಕೊಳ್ತಾರೆ. ಅದು ನೆಗಡಿನಾ, ಕೆಮ್ಮುನಾ ಅಥವಾ ಅಲರ್ಜಿಯಿಂದ ಬಂದಿದ್ದಾ?.. ಯಾವುದರ ಬಗ್ಗೆಯೂ ಯೋಚಿಸಲ್ಲ. ಕೆಮ್ಮು, ಕಫ ಬಂತೆಂದರೆ ಪಕ್ಕದ ಮೆಡಿಕಲ್‌ನಲ್ಲಿನ ಮಾತ್ರೆಗೆ ಮೊರೆ ಹೋಗುತ್ತಾರೆ. ಆಸ್ಪತ್ರೆಗೆ ಹೋದರೆ ಸಾವಿರಾರು ರೂಪಾಯಿ ಹಣ ತೆರಬೇಕು. ಹೀಗಾಗಿ ಚಳಿಗಾಲ ಮುಗಿಯುವವರೆಗೆ ಮಾತ್ರೆ ನುಂಗುತ್ತಲೇ ಇರುತ್ತಾರೆ! ಹೇಗೆಂದರೆ ನೆಗಡಿ ವಾಸಿಯಾಗುತ್ತಲೇ ಕೆಮ್ಮು ಶುರುವಾಗಿರುತ್ತದೆ, ಕೆಮ್ಮು ವಾಸಿಯಾಗುತ್ತಲೇ ನೆಗಡಿ ಶುರುವಾಗಿರುತ್ತದೆ. ಚಳಿಗಾಲ ಮುಗಿಯುವವರೆಗೆ ವೈದ್ಯರ ಸಂಪರ್ಕಿಸದೆ ಮಾತ್ರೆ ತೆಗೆದುಕೊಳ್ಳುತ್ತಲೇ ಇರುತ್ತಾರೆ. ಇದರಿಂದ ದೇಹಕ್ಕೆ ಎಷ್ಟು ಅಪಾಯಕಾರಿ?
ಹೀಗಾಗಿ ಚಳಿಗಾಲ ಮುಗಿಯುವವರೆಗೆ ಮಾತ್ರೆಗಳ ಗೊಡವೆ ಬೇಡ, ಸಾವಿರಾರು ರೂಪಾಯಿ ಚಿಕಿತ್ಸೆಯೂ ಬೇಡ. ಪ್ರತಿದಿನ ದಿನ ಚಹಾ ಬದಲು ಈ ಒಂದು ಅಮೃತ ಕುಡಿಯುವ ಅಭ್ಯಾಸ ಶುರು ಮಾಡಿದರೆ ಕೆಮ್ಮು ಬರೋದಿಲ್ಲ, ಕಫನೂ ಇರೋಲ್ಲ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತೆ.
ಹಾಗಾದರೆ ಚಳಿಗಾಲದಲ್ಲಿ ಕುಡಿಯುವ ಆ ಅಮೃತ ಯಾವುದು ಎಂಬ ಪ್ರಶ್ನೆ ಮೂಡಿದೆಯಲ್ಲವೇ? ಹೌದು ನಾನು ಹೇಳಹೊರಟುವುದು ಗೋಲ್ಡನ್ ಮಿಲ್ಕ್ ಬಗ್ಗೆ. ಗೋಲ್ಡನ್ ಮಿಲ್ಕ್ ಚಳಿಗಾಲಕ್ಕೆ ಯಾಕೆ ಮುಖ್ಯ,
ಹೇಗೆ ತಯಾರಿಸುವುದು, ಇದು ಚಳಿಗಾಲದ ಕೆಮ್ಮು, ಕಫ, ನೆಗಡಿಗಳಿಗೆ ಹೇಗೆ ರಾಮಬಾಣವಾಗಿ ಕೆಲಸ ಮಾಡುತ್ತೆ ಅನ್ನೋ ಸಮಗ್ರ ಮಾಹಿತಿ ಇಲ್ಲಿದೆ.
ಗೋಲ್ಡನ್ ಮಿಲ್ಕ್ ಮಾಡುವುದು ತುಂಬಾ ಸುಲಭ, ಇದು ಚಹಾ ಮಾಡುವಷ್ಟೇ ಸಮಯ ಸಾಕು! ಆದರೆ ಅದರ ಪರಿಣಾಮ ಮಾತ್ರ ಅದ್ಭುತ. ಗೋಲ್ಡನ್ ಮಿಲ್ಕ್ ಮಾಡುವುದು ಹೇಗೆ ಎಂಬ ಬಗ್ಗೆ ಸ್ಟೆಪ್ ಬೈ ಸ್ಟೆಪ್ ಇಲ್ಲಿದೆ.
ಗಮನಿಸಿ, ಹಾಲು ಕುದಿಯುವಾ ಜೇನು ತುಪ್ಪ ಅಥವಾ ಬೆಲ್ಲ ಹಾಕಬಾರದು. ಹಾಲು ಉಗುರು ಬೆಚ್ಚಗೆ ಆದ ಬಳಿಕ ನಿಮಗೆ ಬೇಕಾದಷ್ಟು ಜೇನು ತುಪ್ಪ ಅಥವಾ ಸಾವಯವ ಬೆಲ್ಲ ಹಾಕಿ ಕಲಕಿ.
ಈಗ ಗೋಲ್ಡನ್ ಮಿಲ್ಕ್ ರೆಡಿಯಾಗಿರುತ್ತದೆ.
ಅರಿಶಿನದಲ್ಲಿ ಕರ್ಕ್ಯುಮಿನ್(Curcumin) ಎಂಬ ಅದ್ಭುತ ಔಷಧೀಯ ಗುಣವಿದೆ. ಇದು ದೇಹದಲ್ಲಿನ ಪ್ರಬಲವಾದ ಉರಿಯೂತ ನಿವಾರಕ (Anti-inflammatory) ಮತ್ತು ರೋಗನಿರೋಧಕ (Antioxidant) ಅಂಶವಾಗಿದೆ. ಆದರೆ ಇದು ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯು ಕರ್ಕ್ಯುಮಿನ್ ಅನ್ನು ನೇರವಾಗಿ ಹೀರಿಕೊಳ್ಳುವ ಸಾಮರ್ಥ್ಯ ತೀರಾ ಕಡಿಮೆ.
ಇಲ್ಲಿಯೇ ಕರಿಮೆಣಸಿನ ಮ್ಯಾಜಿಕ್ ಶುರುವಾಗುವುದು. ಹೇಗೆ ಅಂತೀರಾ?
ಹಾಲಿಗೆ ಅರಿಶಿನ ಜೊತೆಗೆ ಕರಿಮೆಣಸು ಹಾಕಿದಾಗ ಅದರಲ್ಲಿನ ಪೈಪರಿನ್ (Piperine) ಎಂಬ ಅಂಶವು ಕರ್ಕ್ಯುಮಿನ್ ಜೊತೆ ಸೇರಿಕೊಳ್ಳುತ್ತೆ. ಇದು ದೇಹದಲ್ಲಿ ಅರಿಶಿನದ ಹೀರಿಕೆಯ ಸಾಮರ್ಥ್ಯ ಬರೋಬ್ಬರಿ 20 ಪಟ್ಟು ಹೆಚ್ಚಾಗುತ್ತದೆ. ಪೈಪರಿನ್ ಜೀರ್ಣಾಂಗದಲ್ಲಿ ಕಿಣ್ವಗಳನ್ನು ಉತ್ತೇಜಿಸಿ, ಅರಿಶಿನದಲ್ಲಿರುವ ಪ್ರತಿಯೊಂದು ಪೋಷಕಾಂಶವೂ ರಕ್ತಕ್ಕೆ ಸೇರಲು ದಾರಿ ಮಾಡಿಕೊಡುತ್ತದೆ. ಇದರಿಂದಾಗಿ ನೆಗಡಿ ಕೆಮ್ಮು ಕಫ ಅಷ್ಟೇ ಅಲ್ಲದೆ ಕೀಲು ನೋವು, ಮೈ-ಕೈ ನೋವು ಬೇಗನೇ ಕಡಿಮೆಯಾಗುತ್ತದೆ.
ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಕಫ, ಮೂಗು ಕಟ್ಟುವುದು ತುಂಬಾ ಕಿರಿಕಿರಿ ಉಂಟು ಮಾಡುತ್ತೆ. ಹೀಗಾಗಿ ಗೋಲ್ಡನ್ ಮಿಲ್ಕ್ ಕುಡಿಯುವುದರಿಂದ ಆಂಟಿಬಯೋಟಿಕ್ ಆಗಿ ಕೆಲಸ ಮಾಡಿ ನೆಗಡಿ, ಕೆಫ, ಕೆಮ್ಮು ಬೇಗನೇ ವಾಸಿಯಾಗುತ್ತದೆ. ಅಲ್ಲದೆ ಪ್ರತಿ ದಿನ ಚಹ ಬದಲು ಗೋಲ್ಡನ್ ಮಿಲ್ಕ್ ಕುಡಿಯುವುದು ರೂಢಿಸಿಕೊಂಡರೆ ದೇಹದಲ್ಲಿನ ರೋಗ ನಿರೋಧಕ ಶ್ತಿ ಹೆಚ್ಚಾಗಿ ಚಳಿಗಾಲದಲ್ಲೂ ನೆಗಡಿ ಕೆಮ್ಮು ನಿಮ್ಮನ್ನು ಕಾಡುವುದಿಲ್ಲ.
ಚಳಿಗಾಲದಲ್ಲಿ Immunity Booster ಆಗಿ ಗೋಲ್ಡನ್ ಮಿಲ್ಕ್ ಕೆಲಸ ಮಾಡುತ್ತದೆ. ಹೀಗಾಗಿ ವೈರಲ್ ಮತ್ತು ಬ್ಯಾಕ್ಟೀರಿಯಾ ಸೋಂಕುಗಳು ಹರಡವುದು ತಪ್ಪುತ್ತದೆ. ರಾತ್ರಿ ಮಲಗುವ ಮುನ್ನ ಈ ಹಾಲು ಕುಡಿಯುವುದರಿಂದ ಬಿಳಿ ರಕ್ತಕಣಗಳ ಸಾಮರ್ಥ್ಯ ಹೆಚ್ಚಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಚಳಿಗಾಲದಲ್ಲಿ ವಿಪರೀತ ಥಂಡಿ. ತಂಪಿನ ವಾತಾವರಣದಿಂದಾಗಿ ವಯಸ್ಕರಿಗೆ ಅದರಲ್ಲೂ ಮನೆಯಲ್ಲಿನ ಹಿರಿಯರಿಗೆ ಕೀಲುಗಳು ಬಿಗಿಯಾಗಿ, ಹಳೆಯ ನೋವುಗಳು ಮತ್ತೆ ಮರುಕಳಿಸುತ್ತವೆ. ಇಂಥ ಸಮಸ್ಯೆ ಬಾರದಿರಲು ಗೋಲ್ಡನ್ ಮಿಲ್ಕ್ ಕುಡಿಯುವುದು ಉತ್ತಮ. ಇದರಲ್ಲಿನ ಕರ್ಕ್ಯುಮಿನ್‌ನ ಉರಿಯೂತ ನಿವಾರಕ ಗುಣ ಸ್ನಾಯು ಮತ್ತು ಕೀಲುಗಳಿಗೆ ಶಕ್ತಿ ನೀಡಿ ನೋವನ್ನು ಕಡಿಮೆ ಮಾಡುತ್ತದೆ.
ಕಣ್ಮುಚ್ಚಿದ್ರೆ ನಿದ್ದೆ ಆವರಿಸುತ್ತೆ: ಇಂದು ಬಹುತೇಕರಿಗೆ ನಿದ್ರಾಹೀನತೆಯೂ ದೊಡ್ಡ ಸಮಸ್ಯೆ. ಕೆಲವರು ನಿದ್ದೆ ಮಾತ್ರೆ ತೆಗೆದುಕೊಂಡೇ ಮಲಗುವಂತಹ ಪರಿಸ್ಥಿತಿ ಇದೆ. ಉತ್ತಮವಾಗಿ ನಿದ್ದೆ ಬೇಕೆಂದರೆ ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ಗೋಲ್ಡನ್ ಮಿಲ್ಕ್ ಕುಡಿಯಿರಿ. ಹಾಲಿನಲ್ಲಿರುವ ಟ್ರಿಪ್ಟೊಫಾನ್ (Tryptophan) ಮತ್ತು ಅರಿಶಿನದ ಶಾಂತಿಯುತ ಗುಣ ಒತ್ತಡವನ್ನು ಕಡಿಮೆ ಮಾಡಿ, ಚಳಿಗಾಲದ ರಾತ್ರಿಗಳಲ್ಲಿ ಗಾಢ ಮತ್ತು ನೆಮ್ಮದಿಯ ನಿದ್ರೆ ಬರುವಂತೆ ಮಾಡುತ್ತದೆ. ರಾತ್ರಿ ಮಲಗಲು ಅರ್ಧ ಗಂಟೆ ಮುಂಚೆ ಬಿಸಿಬಿಸಿಯಾದ ಹಾಲು ಕುಡಿಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.