ಬೊಜ್ಜಿನಿಂದ ನಾನಾ ಖಾಯಿಲೆ ಬರುತ್ತೆ ಎಂಬುದು ಗೊತ್ತು. ಹಾಗೆ ಹೃದಯ ಸಂಬಂಧಿ ಸಮಸ್ಯೆ, ಬಿಪಿ ಹೊಂದಿರುವವರು ಸ್ಥೂಲಕಾಯಕ್ಕೆ ಒಳಗಾದ್ರೆ ಅಪಾಯ ಅಧಿಕ ಎನ್ನುವುದನ್ನು ಅನೇಕ ಸ್ಟಡಿ ಹೇಳಿದೆ. ಆದ್ರೀಗ ಬರೀ ಈ ಖಾಯಿಲೆ ಮಾತ್ರವಲ್ಲ ಬೊಜ್ಜು ಹೆಚ್ಚಾದ್ರೆ ಬರುವ ಎಲ್ಲ ಖಾಯಿಲೆಯೂ ನಿಮ್ಮನ್ನು ಸಾವಿನಂಚಿಗೆ ಕರೆದೊಯ್ಯುತ್ತದೆ ಎಂದು ಹೊಸ ಅಧ್ಯಯನ ಹೇಳಿದೆ.
ಬೊಜ್ಜು ಸದ್ಯ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಜಾಗತಿಕ ಅಂದಾಜಿನ ಪ್ರಕಾರ ಸುಮಾರು 2.3 ಶತಕೋಟಿ ಮಕ್ಕಳು ಮತ್ತು ವಯಸ್ಕರು ಅಧಿಕ ತೂಕ ಮತ್ತು ಸ್ಥೂಲಕಾಯದಿಂದ ಬಳಲುತ್ತಿದ್ದಾರೆ. ಇದೇ ಪ್ರವೃತ್ತಿ ಮುಂದುವರೆದರೆ 2025 ರ ವೇಳೆಗೆ ಈ ಸಂಖ್ಯೆ 2.7 ಶತಕೋಟಿ ತಾಟುವ ಸಾಧ್ಯತೆಯಿದೆ. ಇನ್ನು ಭಾರತದ ವಿಷ್ಯಕ್ಕೆ ಬರೋದಾದ್ರೆ ಭಾರತ 2030 ರ ವೇಳೆಗೆ ಜಾಗತಿಕವಾಗಿ 10 ಮಕ್ಕಳಲ್ಲಿ ಒಬ್ಬರಂತೆ 27 ದಶಲಕ್ಷಕ್ಕೂ ಹೆಚ್ಚು ಸ್ಥೂಲಕಾಯದ ಮಕ್ಕಳನ್ನು ಹೊಂದಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ನಾಲ್ಕರಲ್ಲಿ ಒಬ್ಬರು ಈ ಬೊಜ್ಜಿನಿಂದ ಬಳಲುತ್ತಿದ್ದಾರೆ.
ಈ ಬೊಜ್ಜ (Obesity) ನ್ನು ಕರಗಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಒಮ್ಮೆ ಬಂದ್ರೆ ಅದ್ರ ಜೊತೆ ನಾನಾ ರೋಗ (Disease) ಕ್ಕೆ ನಮ್ಮ ದೇಹ ತುತ್ತಾಗುವಂತೆ ಮಾಡುತ್ತದೆ. ಬೊಜ್ಜಿನಿಂದ ಬರುವ ಖಾಯಿಲೆಗಳ ಸಂಖ್ಯೆ ಹೆಚ್ಚಿದೆ. ಬೊಜ್ಜು ತುಂಬಾ ಅಪಾಯಕಾರಿ ಎಂದು ಅನೇಕ ಅಧ್ಯಯನ (Study) ಗಳು ಹೇಳಿದ್ದವು. ಆದ್ರೆ ಈಗ ಹೊಸ ಅಧ್ಯಯನವೊಂದು ಆತಂಕಕಾರಿ ಸಂಗತಿಯನ್ನು ನಮ್ಮ ಮುಂದಿಟ್ಟಿದೆ. ವರದಿಯಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.
ಛೀ..ಮಲದ ವಾಸನೆ ನೋಡೋ ಕೆಲ್ಸವಂತೆ..ತಿಂಗಳಿಗೆ ಭರ್ತಿ 1.5 ಲಕ್ಷ ರೂ. ಸಂಬಳ...!
ಅಧ್ಯಯನದ ವರದಿಯಲ್ಲಿ ಏನಿದೆ? : ಸ್ಥೂಲಕಾಯದಿಂದ ಹೃದಯ ರೋಗ, ಅಧಿಕ ರಕ್ತದೊತ್ತಡ ಸೇರಿದಂತೆ ಕೆಲ ಅಪಾಯಕಾರಿ ರೋಗ ನಮ್ಮನ್ನು ಕಾಡುತ್ತದೆ. ಇದು ಬಹಳ ಅಪಾಯಕಾರಿ ಎಂದು ನಾವು ತಿಳಿದಿದ್ದೇವೆ. ಆದ್ರೆ ಅಧ್ಯಯನದ ಪ್ರಕಾರ, ಸ್ಥೂಲಕಾಯ ನಮ್ಮನ್ನು ಸಾವಿನ ಹತ್ತಿರಕ್ಕೆ ಕರೆದುಕೊಂಡು ಹೋಗೋದ್ರಲ್ಲಿ ಮುಂದಿದೆ. ಯಾವುದೇ ಕಾಯಿಲೆಯಿಂದ ಸಾಯುವ ಅಪಾಯವನ್ನು ಶೇಕಡಾ 22ರಿಂದ ಶೇಕಡಾ 91 ಕ್ಕೆ ಹೆಚ್ಚಿಸುತ್ತದೆ. ಅಂದ್ರೆ ಸ್ಥೂಲಕಾಯತೆಯಿಂದ ಬಳಲುವ ವ್ಯಕ್ತಿಗೆ ರೋಗ ಕಾಣಿಸಿಕೊಳ್ಳುವುದಲ್ಲದೆ ಆತ ಬೇಗ ಸಾಯುವ ಅಪಾಯ ಹೆಚ್ಚು. ಈ ಅಧ್ಯಯನವನ್ನು ಪಾಪ್ಯುಲರ್ ಸ್ಟಡೀಸ್ ಜರ್ನಲ್‌ನಲ್ಲಿ ಪ್ರಕಟಿಸಿದೆ. ಬಾಡಿ ಮಾಸ್ ಇಂಡೆಕ್ಸ್ (BMI) ಹೊಂದಿರುವ ಜನರ ಮರಣ ಪ್ರಮಾಣ ಹೆಚ್ಚು. ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಹೊಂದಿರುವ ರೋಗಿಗಳು ಸ್ಥೂಲಕಾಯತೆಯಿಂದ ಬೇಗ ಸಾವನ್ನಪ್ಪುತ್ತಾರೆ ಎಂಬ ವರದಿಗೆ ಮೇಲಿನ ಅಧ್ಯಯನದ ವರದಿ ವಿರುದ್ಧವಾಗಿದೆ.
ಬಾಡಿ ಮಾಸ್ ಇಂಡೆಕ್ಸ್ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದು ಹೆಚ್ಚು ಅಧಿಕವಾಗಿಲ್ಲವೆಂದ್ರೆ ಸಾವಿನ ಅಪಾಯ ಹೆಚ್ಚಿರುವುದಿಲ್ಲ. ಹಾಗೆಯೇ ಬಾಡಿ ಮಾಸ್ ಇಂಡೆಕ್ಸ್, ದೇಹದ ತೂಕ ಹಾಗೂ ಎತ್ತರವನ್ನು ಅವಲಂಭಿಸಿರುತ್ತದೆ. ಅಧ್ಯಯನಕ್ಕಾಗಿ ಸಂಶೋಧಕರು 4468 ಸಾವು ಹಾಗೂ 17,784 ಜನರ ಡೇಟಾ ಪರಿಶೀಲನೆ ನಡೆಸಿದ್ದಾರೆ.
ಖಾರ, ಅಂಟುಂಡೆ ಬಾಣಂತಿಗೆ ಮದ್ದು, ಈ ಅಂಟುಂಡೆ ಮಾಡೋದು ಹೇಗೆ?
ಭಾರತದಲ್ಲಿ ಅಧಿಕ ತೂಕ ಅಥವಾ ಬೊಜ್ಜಿನ ಪರಿಣಾಮವಾಗಿ 2.8 ಮಿಲಿಯನ್ ಸಾವುಗಳು ವರದಿಯಾಗಿವೆ. ಬಾಡಿ ಮಾಸ್ ಇಂಡೆಕ್ಸ್ ಬಗ್ಗೆ ನಡೆಸಿದ ಅಧ್ಯಯನ ಹೆಚ್ಚು ಪ್ರಭಾವಶಾಲಿಯಾಗಿದೆ ಎನ್ನಲಾಗ್ತಿದೆ.
ಕಡಿಮೆ ಬಿಎಂಐ (BMI) (18.5-22.5) ಹೊಂದಿರುವ ಜನರ ಮರಣದ ಅಪಾಯ ಬಹಳ ಕಡಿಮೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಅಧ್ಯಯನದಲ್ಲಿ ಕಡಿಮೆ ತೂಕ ಹೊಂದಿರುವವರ ಮರಣದಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಕಂಡುಹಿಡಿಯಲಾಗಿದೆ. ಇದು ಹಿಂದಿನ ಸಂಶೋಧನೆಗೆ ವಿರುದ್ಧವಾಗಿ.
ಬೊಜ್ಜಿನಿಂದ ತಪ್ಪಿಸಿಕೊಳ್ಳೋದು ಹೇಗೆ? : ನಮ್ಮ ಜೀವನ ಶೈಲಿ ಇಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಬೊಜ್ಜು ಬರದಂತೆ ನಮ್ಮ ದೇಹವನ್ನು ನಾವು ರಕ್ಷಿಸಿಕೊಳ್ಳಬೇಕಿದೆ. ಆರೋಗ್ಯಕರ ಆಹಾರಗಳಾದ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಮಾಡ್ಬೇಕು. ಅನಾರೋಗ್ಯಕರ ಆಹಾರಗಳನ್ನು ಸೀಮಿತಗೊಳಿಸಬೇಕು. ಸಂಸ್ಕರಿಸಿದ ಆಹಾರ, ಸಿಹಿತಿಂಡಿಗಳು, ಕೆಂಪು ಮಾಂಸ, ಸಕ್ಕರೆಯುಕ್ತ ಪಾನಿಯಗಳ ಸೇವನೆಯಿಂದ ದೂರವಿರಬೇಕು. ಫಾಸ್ಟ್ ಫುಡ್ ಸೇವನೆಯನ್ನು ನಿಲ್ಲಿಸಬೇಕು. ಹಾಗೆಯೇ ದೈಹಿಕ ವ್ಯಾಯಾಮಕ್ಕೆ ಹೆಚ್ಚು ಮಹತ್ವ ನೀಡ್ಬೇಕು. ಟಿವಿ, ಮೊಬೈಕ್, ಕಂಪ್ಯೂಟರ್ ಮುಂದೆ ಇಡೀ ದಿನ ಕುಳಿತು ಕೆಲಸ ಮಾಡುವ ಬದಲು ದೇಹ ಬೆವರಿಳಿಯುವ ಕೆಲಸ ಮಾಡ್ಬೇಕು.