
ಕೂದಲು ಬೆಳ್ಳಗಾಗೋದು ಕೇವಲ ಭಾರತೀಯರ ಸಮಸ್ಯೆ ಅಲ್ಲ. ಅಮೆರಿಕಾ ಸೇರಿದಂತೆ ಅನೇಕ ದೇಶಗಳ ಯುವಕರು ಈ ಬಿಳಿ ಕೂದಲಿನ ಸಮಸ್ಯೆ ಎದುರಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಯುವಕರಿಗೆ ಬಿಳಿ ಕೂದಲು ಕಾಣಿಸಿಕೊಳ್ತಿದೆ. ಅಮೆರಿಕಾದಲ್ಲಿ ಮೂರನೇ ಒಂದು ಭಾಗದಷ್ಟು ಯುವಕರು ಬಿಳಿ ಕೂದಲು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲೂ ಈ ಸಮಸ್ಯೆ ತಪ್ಪಿಲ್ಲ. ಏಷ್ಯಾದ ಅನೇಕ ದೇಶಗಳಲ್ಲಿ ಬಿಳಿ ಕೂದಲು ದೊಡ್ಡ ತಲೆನೋವಾಗಿದ್ದು, ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಬೇಡಿಕೆ ಇಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬಿಳಿ ಕೂದಲನ್ನು ಮುಚ್ಚಿಡಲು ಸಾಕಷ್ಟು ಉತ್ಪನ್ನವಿದೆ. ಆದ್ರೆ ಅದ್ಯಾವುದೂ ಶಾಶ್ವತವಲ್ಲ. ಹಾಗೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಾರುಕಟ್ಟೆಯಲ್ಲಿ ಸಿಗುವ ಬಣ್ಣಗಳು ಕೂದಲಿನ ಆರೋಗ್ಯ ಹಾಳು ಮಾಡುತ್ತದೆ. ಜೊತೆಗೆ ಅಲರ್ಜಿ ಸಮಸ್ಯೆಯುಂಟು ಮಾಡುತ್ತದೆ. ಹಾಗಾಗಿ ಅನೇಕರು ಇದನ್ನು ಬಳಸ್ತಿಲ್ಲ. ಚಿಕ್ಕ ವಯಸ್ಸಿನಲ್ಲೇ ಕಾಡ್ತಿರುವ ಬಿಳಿಕೂದಲು ಮತ್ತೆ ಕಪ್ಪಾಗಬೇಕು, ಬೇಗ ಕೂದಲು ಬಿಳಿಯಾಗಬಾರದು ಎನ್ನುವ ಕಾರಣಕ್ಕೆ ಅಮೆರಿಕಾ ಜನರು ಮನೆ ಮದ್ದಿನ ಮೊರೆ ಹೋಗಿದ್ದಾರೆ. ದೊಡ್ಡಣ್ಣ ಅಮೆರಿಕಾದಲ್ಲಿ ಯಾವ ಸೌಲಭ್ಯಕ್ಕೆ ಕೊರತೆ ಇದೆ ಹೇಳಿ? ಆದ್ರೆ ಅವರು ಈಗ ಏಷ್ಯಾದ ದೇಶಗಳಲ್ಲಿ ಬಳಸುವ ಸಾಂಪ್ರದಾಯಿಕ ವೈದ್ಯಕೀಯ ವಿಧಾನವನ್ನು ಬಳಸುತ್ತಿದ್ದಾರೆ ಅಂದ್ರೆ ನೀವು ನಂಬ್ಲೇಬೇಕು. ಕೂದಲು ಬಿಳಿಯಾಗದಂತೆ ಅಮೆರಿಕಾ ಜನರು ಎಳ್ಳು ಹಾಗೂ ಬೆಲ್ಲದ ಮೊರೆ ಹೋಗಿದ್ದಾರೆ. ಈರುಳ್ಳಿ, ತೆಂಗಿನ ಎಣ್ಣೆ ಕೂಡ ಇಲ್ಲಿ ಸ್ಥಾನಪಡೆದಿದೆ.
ಚೀನಾ (China) ದಲ್ಲಿ ಜನರು ಕೂದಲು ಬಿಳಿಯಾಗಬಾರದು ಎನ್ನುವ ಕಾರಣಕ್ಕೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳ್ಳು – ಬೆಲ್ಲದ ಸೇವನೆ ಮಾಡ್ತಾರೆ. ಅಲ್ಲದೆ ಈರುಳ್ಳಿ ರಸ, ತೆಂಗಿನ ಎಣ್ಣೆ (Oil) ಯನ್ನು ತಲೆಗೆ ಹಚ್ಚಿಕೊಳ್ತಾರೆ. ಅಮೆರಿಕಾದ ಜನ ಕೂಡ ಈಗ ಇದನ್ನು ಪಾಲಿಸುತ್ತಿದ್ದಾರೆ. ಚೀನಾ ಜನ ಎಳ್ಳನ್ನು ಹೇ ಝಿ ಮಾ ಎಂದು ಕರೆಯುತ್ತಾರೆ. ಬೆಲ್ಲವನ್ನು ಕ್ವಿ ಎಂದು ಕರೆಯುತ್ತಾರೆ. ಬೆಲ್ಲ ಸೇವನೆ ಮಾಡುವುದ್ರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದ್ರಿಂದ ಕೂದಲು (Hair) ಶಕ್ತಿಯುತವಾಗುತ್ತದೆ ಎಂದು ಅಲ್ಲಿನವರು ನಂಬುತ್ತಾರೆ.
ಬೇಸಿಗೆ ಧಗೆ ಅಂತ ವಿಪರೀತ ಎಳ್ನೀರು ಕುಡೀಬೇಡಿ, ಹೀಗೂ ಆಗಬಹುದು
ಇನ್ನು ದಕ್ಷಿಣ ಏಷ್ಯಾ (South Asia) ದ ಆಯುರ್ವೇದ ಔಷಧದಲ್ಲಿ ಈರುಳ್ಳಿ ರಸವನ್ನು ಬಳಸಲಾಗುತ್ತದೆ. ಈರುಳ್ಳಿ ರಸದಲ್ಲಿ ಸಲ್ಫರ್ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಕೂದಲಿಗೆ ಶಕ್ತಿ ನೀಡುತ್ತದೆ. ನಿಮ್ಮ ಕೂದಲು ಬೆಳ್ಳಗಾಗದಂತೆ ರಕ್ಷಿಸುತ್ತದೆ. ಈ ಗುಟ್ಟನ್ನು ಅರಿತಿರುವ ಅಮೆರಿಕನ್ನರು ಈಗ ಇದೇ ವಿಧಾನವನ್ನು ಅನುಸರಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ತಾಮ್ರದ ಪಾತ್ರೆಗೆ ದ್ರವ ಕ್ಲೋರೊಫಿಲ್ ಹಾಕಿ ಸ್ವಲ್ಪ ಸಮಯ ಇಡಬೇಕು. ಆ ಮೇಲೆ ಅದನ್ನು ತಲೆಗೆ ಹಚ್ಚಿಕೊಳ್ಳಬೇಕು. ಹೀಗೆ ಮಾಡಿದ್ರೆ ಕೂದಲು ಕಪ್ಪಾಗುತ್ತದೆ ಎಂಬ ನಂಬಿಕೆ ಅಮೆರಿಕನ್ನರಿಗಿದೆ. 31 ವರ್ಷ ವಯಸ್ಸಿನ ಮಾಂಟ್ರಿಯಲ್ ಮೂಲದ ಪ್ರಸಿದ್ಧ ಗಾಯಕಿ ರೊಸಮಾರಿಯಾ ಲಾ ಕೂಡ ಇದನ್ನು ಬಳಸುತ್ತಾಳೆ. ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯವನ್ನು ಆಕೆ ಹಂಚಿಕೊಂಡಿದ್ದಾಳೆ.
ಬರೋಬ್ಬರಿ 18 ಕೆಜಿ ಇಳಿಸಿಕೊಂಡ ನೀತಾ ಅಂಬಾನಿ, 60ರ ಹರೆಯದಲ್ಲೂ ಯಾವ ಹಿರೋಯಿನ್‌ಗೂ ಕಮ್ಮಿ ಇಲ್ಲ!
ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಎಣ್ಣೆ ತೆಂಗಿನ ಎಣ್ಣೆ. ಇಲ್ಲಿನ ಜನರು ಆಹಾರಕ್ಕೆ ಮಾತ್ರವಲ್ಲದೆ ತಲೆ ಕೂದಲಿನ ರಕ್ಷಣೆಗೆ ತೆಂಗಿನ ಎಣ್ಣೆ ಬಳಸ್ತಾರೆ. ಈಗ ಇದೇ ವಿಧಾನವನ್ನು ಅಮೆರಿಕನ್ನರು ಪಾಲಿಸುತ್ತಿದ್ದಾರೆ. ತೆಂಗಿನ ಎಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡುವ ಕಾರಣ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ. ಇದ್ರಿಂದ ಕೂದಲ ಬೆಳವಣಿಗೆ ಹೆಚ್ಚಾಗುತ್ತದೆ. ದಪ್ಪ ಹಾಗೂ ಶಕ್ತಿಯುತ ಕೂದಲಿನ ಜೊತೆಗೆ ಬಿಳಿಯಾಗ್ತಿರುವ ಕೂದಲು ಮತ್ತೆ ಕಪ್ಪಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.