Health Tips : ಗರ್ಭಾವಸ್ಥೆಯಲ್ಲಿ ಬೇಕಾಬಿಟ್ಟಿ ಮಾತ್ರೆ ಸೇವನೆ ತಪ್ಪು

By Suvarna News  |  First Published Jun 8, 2022, 3:41 PM IST

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೂ ವಿಶೇಷ. ಆರೋಗ್ಯಕರ ಮಗು ಜನಿಸಲಿ ಎಂದು ಎಲ್ಲರೂ ಬಯಸ್ತಾರೆ. ಆದ್ರೆ ಗರ್ಭಾವಸ್ಥೆಯಲ್ಲಿ ಮಾಡುವ ತಪ್ಪು ಮಗುವಿನ ಮೇಲಾಗುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಎಚ್ಚರಿಕೆ ಹೆಜ್ಜೆ ಇಡ್ಬೇಕಾಗುತ್ತದೆ.
 


ಗರ್ಭ (Pregnancy) ಧರಿಸೋದು ಪ್ರತಿಯೊಬ್ಬ ಮಹಿಳೆ (Woman) ಯ ಜೀವನ (Life) ದ ಅತ್ಯಂತ ಸಂತೋಷ (Happy )ದ ಕ್ಷಣ. ಗರ್ಭ ಧರಿಸಿದ ನಂತ್ರ ಮಹಿಳೆಯ ದೇಹದಲ್ಲಿ ಸಾಕಷ್ಟು ಬದಲಾವಣೆಯಾಗ್ತದೆ. ಆ ಸಮಯದಲ್ಲಿ ದೇಹ ಹಾಗೂ ಮನಸ್ಸಿನ ಬೇಡಿಕೆ ಹೆಚ್ಚಿರುತ್ತದೆ. ರುಚಿ ರುಚಿ ಅಡುಗೆ ತಿನ್ನಬೇಕೆಂಬ ಬಯಕೆಯಾಗುತ್ತದೆ. ಗರ್ಭಾವಸ್ಥೆಯಲ್ಲೂ ಸುಂದರವಾಗಿ ಕಾಣ್ಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಗರ್ಭಿಣಿಯರು ಆಯ್ಕೆಗಳನ್ನು ಬದಿಗಿಟ್ಟು ತಮ್ಮ ಮತ್ತು ತಮ್ಮ ಮಗುವಿನ ಆರೈಕೆಯನ್ನು ಮಾಡಬೇಕು. ಬಹುತೇಕ ಮಹಿಳೆಯರಿಗೆ ಗರ್ಭಿಣಿಯಾದಾಗ ಏನು ಮಾಡ್ಬೇಕೆಂಬುದು ತಿಳಿದಿರುವುದಿಲ್ಲ. ಸ್ನೇಹಿತರು, ಕುಟುಂಬಸ್ಥರು, ಆಪ್ತರು ಅವರಿಗೆ ಸಲಹೆ ನೀಡಲು ಶುರು ಮಾಡ್ತಾರೆ. ಅವರೆಲ್ಲರ ಸಲಹೆ ಪಾಲಿಸಲು ಇವರು ಮುಂದಾಗ್ತಾರೆ. ಆಗ ಒಂದ್ಹೋಗಿ ಇನ್ನೊಂದಾಗುತ್ತದೆ. ಅರಿವಿಲ್ಲದೆ ಮಹಿಳೆಯರು ಗರ್ಭಾವಸ್ಥೆಯಲ್ಲಿ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ.  ಗರ್ಭಿಣಿಯರು ಏನು ಮಾಡ್ಬೇಕು ಹಾಗೆ ಏನು ಮಾಡ್ಬಾರದು ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.

ಗರ್ಭಿಣಿಯರು ಮಾಡ್ಬೇಡಿ ಈ ಕೆಲಸ : 

Tap to resize

Latest Videos

ಊಟ ಸ್ಕಿಪ್ ಮಾಡೋದು : ಗರ್ಭಾವಸ್ಥೆಯಲ್ಲಿ ವಾಕರಿಕೆ ಮತ್ತು ಹಸಿವಿನ ಕೊರತೆ ಸಹಜ. ಈ ಸಮಯದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ನೋಡಿದ್ರೆ ವಾಕರಿಕೆ ಮತ್ತು ವಾಂತಿ ಬರುತ್ತದೆ. ಇದೇ ಕಾರಣಕ್ಕೆ ಕೆಲವೊಮ್ಮೆ ಮಹಿಳೆಯರು ಒಂದು ಸಮಯದಲ್ಲಿ ಆಹಾರವನ್ನು ಸೇವಿಸುವುದಿಲ್ಲ. ವಿಶೇಷವಾಗಿ ಗರ್ಭಧಾರಣೆಯ ಮೊದಲ ಕೆಲವು ತಿಂಗಳುಗಳಲ್ಲಿ ಆಹಾರವನ್ನು ತ್ಯಜಿಸುವುದು ಸರಿಯಲ್ಲ. ಮಗುವಿನ ಪ್ರಮುಖ ಅಂಗಗಳ ಬೆಳವಣಿಗೆಗೆ ಈ ಸಮಯದಲ್ಲಾಗುತ್ತದೆ.  ಆದ್ದರಿಂದ ಈ ಸಮಯದಲ್ಲಿ ಗರ್ಭಿಣಿಯರು ತಮ್ಮ ಆಹಾರದಲ್ಲಿ ಕೆಲವು ಖನಿಜಗಳು ಮತ್ತು ಪೋಷಕಾಂಶಗಳನ್ನು ತೆಗೆದುಕೊಳ್ಳಬೇಕು.

ತೂಕದ ಬಗ್ಗೆ ಕಾಳಜಿ : ಗರ್ಭಿಣಿಯರ ಹಾರ್ಮೋನ್ ನಲ್ಲಿ ಏರುಪೇರಾಗುತ್ತದೆ. ಹಾಗೆಯೇ ಆಹಾರದಲ್ಲಿ ಮಿತಿ ಇರೋದಿಲ್ಲ. ಕೆಲವರು ಬಯಸಿದ್ದೆಲ್ಲ ಆಹಾರ ಸೇವನೆ ಮಾಡ್ತಾರೆ. ಮತ್ತೆ ಕೆಲವರು ಹೆಚ್ಚು ಪೌಷ್ಠಿಕಾಂಶವಿರುವ ಆಹಾರವನ್ನು ಹೆಚ್ಚೆಚ್ಚು ಸೇವನೆ ಮಾಡ್ತಾರೆ. ಇದ್ರಿಂದ ತೂಕ ಹೆಚ್ಚಾಗುತ್ತದೆ. ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಅನೇಕರು ಗರ್ಭಿಣಿಯಾಗ್ತಿದ್ದಂತೆ ತೂಕ ಹೆಚ್ಚಾಗಿದೆ ಎಂಬ ಕಾರಣಕ್ಕೆ ವ್ಯಾಯಾಮ ಶುರು ಮಾಡ್ತಾರೆ. ವೈದ್ಯರ ಸಲಹೆಯಿಲ್ಲದೆ ಯಾವುದೇ ವ್ಯಾಯಾಮ ಮಾಡುವುದು ಸೂಕ್ತವಲ್ಲ. ತೂಕ ಹೆಚ್ಚಾಗಿದೆ ಎಂಬ ಕಾರಣಕ್ಕೆ ಒತ್ತಡ ಮತ್ತು ಆತಂಕಪಡುವ ಅಗತ್ಯವೂ ಇಲ್ಲ. ಹೆರಿಗೆ ನಂತ್ರ ತೂಕ ಇಳಿಸಿಕೊಳ್ಳಲು ಅವಕಾಶವಿರುತ್ತದೆ. ಗರ್ಭಾವಸ್ಥೆಯಲ್ಲಿ ತಲೆಬಿಸಿ ಮಾಡಿಕೊಂಡ್ರೆ  ತಾಯಿ ಮತ್ತು ಮಗುವಿನ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ನಿಮ್ಮ ಮನಸ್ಸನ್ನು ಶಾಂತವಾಗಿರಿಸಿ. ವೈದ್ಯರ ಸಲಹೆ ಮೇರೆಗೆ ಯೋಗ ಮತ್ತು ಧ್ಯಾನ ಮಾಡಿ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ.

ಮಾನಸಿಕ ಸಮಸ್ಯೆ, ವಕ್ರ ಕುತ್ತಿಗೆ, ಆತ್ಮಹತ್ಯೆ ಯತ್ನ, ಈಗ ಭಾರತದ ಕಿರಿಯ ಸಿಇಒ!

ಸ್ವಯಂ ಔಷಧಿ : ಗರ್ಭಾವಸ್ಥೆಯಲ್ಲಿ ತಾಯಿಗೆ ಸ್ನಾಯು ನೋವು, ವಾಯು, ಜಠರಗರುಳಿನ ಸಮಸ್ಯೆಗಳಂತಹ ಅನೇಕ ಆರೋಗ್ಯ ಸಮಸ್ಯೆ ಕಾಡುತ್ತದೆ. ಅನೇಕ ಗರ್ಭಿಣಿಯರು ನೋವು ಕಾಡ್ತಿದ್ದಂತೆ ಸ್ವಯಂ ಔಷಧಿಗೆ ಮುಂದಾಗ್ತಾರೆ. ಸ್ವಯಂ ಮಾತ್ರೆ ಅಥವಾ ಔಷಧಿ ಸೇವನೆಯನ್ನು ಎಂದಿಗೂ ಮಾಡ್ಬಾರದು. ಇದು ಮಗುವಿನ ಆರೋಗ್ಯದ ಮೇಲೆ ದೊಡ್ಡ ಹೊಡೆತ ನೀಡುತ್ತದೆ. ಗರ್ಭಾವಸ್ಥೆಯಲ್ಲಿ ಕೆಲ ಮಾತ್ರೆಗಳನ್ನು ಸೇವನೆ ಮಾಡ್ಬಾರದು. ಹಾಗಾಗಿ ಯಾವುದೇ ಸಣ್ಣ ಸಮಸ್ಯೆ ಕಾಡಿದ್ರೂ ವೈದ್ಯರನ್ನು ಭೇಟಿಯಾಗುವುದು ಸೂಕ್ತ.   

ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡಿ : ಗರ್ಭಿಣಿ ಅಂದ್ರೆ ಸಂಪೂರ್ಣ ವಿಶ್ರಾಂತಿ ಎಂಬ ಕಲ್ಪನೆಯಲ್ಲಿ ಅನೇಕರಿದ್ದಾರೆ. ಒಂಭತ್ತು ತಿಂಗಳುಗಳ ಕಾಲ ಯಾವುದೇ ಕೆಲಸ ಮಾಡದೆ ರೆಸ್ಟ್ ಮಾಡುವವರಿದ್ದಾರೆ. ಇದು ಸಂಪೂರ್ಣ ತಪ್ಪು. ಗರ್ಭಾವಸ್ಥೆಯಲ್ಲೂ ಕೆಲಸ ಮಾಡಬೇಕು. ನಡೆದಾಡುವುದು ಹಾಗೂ  ಮನೆಯ ಸಣ್ಣಪುಟ್ಟ ಕೆಲಸಗಳನ್ನು ಗರ್ಭಿಣಿಯರು ಮಾಡ್ಬೇಕು.  

ಆತುರ ಬೇಡ : ಆರೋಗ್ಯಕರ ಗರ್ಭಧಾರಣೆಗೆ ಪ್ಲಾನ್ ಮಾಡ್ಬೇಕು. ಇದರರ್ಥ ವೈದ್ಯರು, ನರ್ಸ್ ಇತ್ಯಾದಿಗಳನ್ನು ಅವಸರದಲ್ಲಿ ಆಯ್ಕೆ ಮಾಡಬಾರದು. 

Vitamin B12 Deficiency: ತಲೆ, ಹೊಟ್ಟೆ ಸಮಸ್ಯೆಗೂ ಆಗುತ್ತೆ ಕಾರಣ

ಈ ವಿಷಯಗಳನ್ನು ನೆನಪಿನಲ್ಲಿಡಿ : ಮೇಲಿನ ವಿಷ್ಯಗಳಲ್ಲದೆ ಧೂಮಪಾನವನ್ನು ಗರ್ಭಿಣಿಯರು ಮಾಡ್ಬಾರದು. ಆಲ್ಕೋಹಾಲ್ ಸೇವನೆ ಹಾಗೂ ಕೆಫೀನ್ ಸೇವನೆ ಕೂಡ ಒಳ್ಳೆಯದಲ್ಲ. ಸಂಸ್ಕರಿಸಿದ ಮತ್ತು ಸಕ್ಕರೆ ಪದಾರ್ಥಗಳನ್ನು ತಿನ್ನಬೇಡಿ. ಸಾಕಷ್ಟು ನಿದ್ರೆ ಮಾಡಬೇಕು. 


 

click me!